ಸಂಕಗಿರಿಯನೇರಿ ಬನ್ನಿ

Team Udayavani, Jun 30, 2019, 5:00 AM IST

Sankagiri_Hill_Fort_wall11

ಸಂಕಗಿರಿ ಎಂಬುದು ತಮಿಳ್ನಾಡಿನ ಈರೋಡಿ ನಿಂದ 22 ಕಿ. ಮೀ. ಹಾಗೂ ಸೇಲಂನಿಂದ 38 ಕಿ. ಮೀ. ದೂರದಲ್ಲಿರುವ ಒಂದು ಬೆಟ್ಟ. ತಮಿಳುನಾಡಿನ ಎತ್ತರದ ಬೆಟ್ಟಗಳಲ್ಲಿ ಇದು ಒಂದು. ದೂರದಿಂದ ವೀಕ್ಷಿಸುವಾಗ ಶಂಖಾಕೃತಿಯಲ್ಲಿರುವಂತೆ ಕಾಣುವುದರಿಂದ ಸಂಕಗಿರಿ ಎಂಬ ಅನ್ವರ್ಥನಾಮ ಹೊಂದಿದೆ. ಈ ಗಿರಿಯ ಮೇಲಿರುವ ಕೋಟೆಯು ಐತಿಹಾಸಿಕವಾಗಿ ಪ್ರಮುಖ ತಾಣವಾಗಿದ್ದು ಭಾರತದ ಪುರಾತತ್ವ ಇಲಾಖೆಯ ವಶದಲ್ಲಿದೆ. ಬೆಟ್ಟದ ತಪ್ಪಲಲ್ಲಿ ಸಂಕರಿ ಎಂಬ ಪುಟ್ಟ ಊರಿದೆ.

ಸಂಕಗಿರಿ ಕೋಟೆಯ ನಿರ್ಮಾಣ ಮೊತ್ತ ಮೊದಲಿಗೆ 15ನೇ ಶತಮಾನದಲ್ಲಿ ವಿಜಯನಗರ ಅರಸರ ಕಾಲದಲ್ಲಿ ಆಯಿತು. 17ನೆಯ ಶತಮಾನದ ಕೊನೆಯ ಭಾಗದಲ್ಲಿ ಸ್ಥಳೀಯ ರಾಜ ಅಳಗಿರಿ ಮರಾಠ ಹಾಗೂ ಬಿಜಾಪುರ ಸುಲ್ತಾನರ ಜಂಟಿ ದಾಳಿಯಲ್ಲಿ ಸೋತು ಹೋದ, ಮರಾಠ ರಾಜ ವೆಂಕೋಜಿ ಬಿಜಾಪುರ ಸುಲ್ತಾನನಿಂದ ಬೇರ್ಪಟ್ಟು ತಂಜಾವೂರಿನ ಮೇಲೆ ಅಧಿಪತ್ಯ ಹೊಂದಿದ. ಈ ಸಮಯದಲ್ಲಿ ಸ್ಥಳೀಯ ಚೆ‌ಟ್ಟಿಯಾರ್‌ ಜನಾಂಗದವರು ಆಕ್ರಮಣಕಾರರ ವಿರುದ್ಧ ದಂಗೆ ಎದ್ದರು. ಚೆಟ್ಟಿಯಾರ್‌ ಜನಾಂಗದ ಗಂಡಸರೆಲ್ಲರನ್ನೂ ವಧಿಸುವ ಆದೇಶ ಮರಾಠರಿಂದ ಬಂತು. ವಂಶ ನಾಶವಾಗದಿರಲೆಂದು ತಂಜಾವೂರಿನ ಚೆಟ್ಟಿಯಾರ್‌ ಹಿರಿಯರು 500 ಮಕ್ಕಳನ್ನು ಗುಪ್ತವಾಗಿ ಸಂಕಗಿರಿಯಲ್ಲಿ ಬಚ್ಚಿಟ್ಟರು. ಅಲ್ಲಿ ಶಿವ ಹಾಗೂ ಅಂಗಯರ್‌ ನಾಯಕಿಯ ದೇಗುಲಗಳನ್ನು ಕಟ್ಟಿಸಿದರು. ಸಂಕಗಿರಿ ಊರಿನಲ್ಲಿರುವ ದೇವಸ್ಥಾನ ಕಾಲಕ್ರಮೇಣ ಶಿಥಿಲವಾಗಿತ್ತು. ಇದನ್ನು ಸ್ಥಳೀಯರು ಪುನರುಜ್ಜೀವನಗೊಳಿಸಿದ್ದಾರೆ.

ಟಿಪ್ಪು ಸುಲ್ತಾನನ ಕಾಲದಲ್ಲಿ ಇದು ಸೇನೆಯ ಅಡಗುದಾಣವಾಗಿತ್ತು. ಈ ಬೆಟ್ಟದ ಒಂದು ಭಾಗವನ್ನು ಹತ್ತಲು ಅಸಾಧ್ಯವಾಗಿರುವುದರಿಂದ ಇದು ಸೇನೆಯ ಅಡಗುದಾಣಕ್ಕೆ ಪ್ರಶಸ್ತವಾಗಿತ್ತು. ಬ್ರಿಟಿಷರ ಕಾಲದಲ್ಲಿ ಇದು ಕೊಂಗುನಾಡಿನಿಂದ ಸಂಗ್ರಹಿಸಿದ ತೆರಿಗೆಯನ್ನು ಶೇಖರಿಸಿಡುವ ಸ್ಥಳವಾಗಿತ್ತು ಹಾಗೂ ಸೇನೆಯ ನೆಲೆಯಾಗಿತ್ತು. ತಮಿಳುನಾಡಿನ ಬ್ರಿಟಿಷರ ವಿರುದ್ಧ ಹೋರಾಡಿದ ಧೀರ ಚಿನ್ನಮಲೈಯನ್ನು ಬ್ರಿಟಿಷರು ಗಲ್ಲಿಗೇರಿಸಿದ್ದು ಈ ಕೋಟೆಯ ಒಳಗೆಯೇ.

ಕೋಟೆಯ ವೈಭವ
ಒಟ್ಟು ಹದಿನಾಲ್ಕು ಸುತ್ತುಗಳಿರುವ ಈ ಕೋಟೆಯ ಕೊನೆಯ ಮೂರು ಭಾಗಗಳು ಬ್ರಿಟಿಷರ ಕಾಲದಲ್ಲಿ ನಿರ್ಮಿತವಾದವು. ಕೋಟೆಯ ವ್ಯಾಪ್ತಿ ಬೆಟ್ಟದ ಒಂದು ಬದಿ ಮಾತ್ರ. ಬೆಟ್ಟದ ಇನ್ನೊಂದು ಬದಿಯನ್ನು ಹತ್ತಲು ಅಸಾಧ್ಯವಾಗಿರುವುದರಿಂದ ನೈಸರ್ಗಿಕ ರಕ್ಷಣೆ ದೊರೆತಿತ್ತು.

ಮುಖ್ಯದ್ವಾರ ದಾಟಿ ಒಳ ಸರಿದಾಗ ಕಾಣುವ ಕೋಟೆಯ ಗೋಡೆಗಳು ಸದೃಢವಾಗಿವೆ. ಮೇಲ್ಮಟ್ಟದ ಗೋಡೆಗಳೂ ಕಣ್ಣಿಗೆ ಗೋಚರಿಸುವಂತೆ ಸುಸ್ಥಿತಿಯಲ್ಲಿವೆ. ನೆಲಮಟ್ಟದಲ್ಲಿ ನೀರು ಆರಿರುವ ಪುಷ್ಕರಿಣಿ, ಪುಟ್ಟಗುಡಿ ಹಾಗೂ ಮುರಿದ ನಂದಿ, ಕಲಾತ್ಮಕ ಕೆತ್ತನೆಗಳುಳ್ಳ ಕಂಬಗಳನ್ನು ಹೊಂದಿದ ಸುಂದರವಾದ ಮಂಟಪಗಳು ಕಾಣಸಿಗುತ್ತವೆ. ಎರಡನೆಯ ದ್ವಾರವನ್ನು ದಾಟಿ ಒಳಹೋದರೆ ಕೋಟೆ ಮಾರಿಯಮ್ಮ, ವರದರಾಜ ಪೆರುಮಾಳ್‌ ದೇವಸ್ಥಾನಗಳಿವೆ.

ಅಲ್ಲಿ ಸಿಕ್ಕಿದ ಸ್ಥಳೀಯರನ್ನು ವಿಚಾರಿಸಿದಾಗ, ‘ಮಟಮಟ ಮಧ್ಯಾಹ್ನ ಚಾರಣಕ್ಕೆ ಸೂಕ್ತವಾದ ಸಮಯವಲ್ಲ ಹಾಗೂ ಭದ್ರತೆಯ ದೃಷ್ಟಿಯಿಂದ ದೊಡ್ಡ ಗುಂಪುಗಳಲ್ಲಿ ಮೇಲೆ ಸಾಗಿ ವೀಕ್ಷಿಸುವುದು ಒಳಿತು’ ಎಂದರು. ಐತಿಹಾಸಿಕವಾಗಿ ಮುಖ್ಯವಾದ ಈ ಜಾಗವನ್ನು ಸರಿಯಾಗಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಪುರಾತತ್ವ ಇಲಾಖೆಯ ಪ್ರಯತ್ನಗಳು ನಡೆದೇ ಇಲ್ಲವೆನಿಸುತ್ತದೆ. ಶಿಥಿಲವಾಗುವ ಮೊದಲೇ ಅದನ್ನು ಉಳಿಸಿಕೊಂಡು ಪ್ರವಾಸೀ ತಾಣವಾಗಿ ಮಾಡಬಹುದು.

ಮಾರ್ಗಸೂಚಿ
ಬೆಂಗಳೂರಿನಿಂದ 240 ಕಿ.ಮೀ. ದೂರದಲ್ಲಿರುವ ಈ ಜಾಗಕ್ಕೆ ಸುತ್ತಮುತ್ತಲಿನ ಪ್ರದೇಶಗಳಿಂದ ಬಸ್ಸುಗಳ ಸೌಕರ್ಯವಿದ್ದರೂ ಸ್ವಂತ ವಾಹನದಲ್ಲಿ ಹೋಗುವುದು ಒಳಿತು. ಸೇಲಂ-ಕೊಯಮುತ್ತೂರಿನ ನಡುವಿನ ಹೆದ್ದಾರಿ 544ರಲ್ಲಿ ಪ್ರಯಾಣಿಸಿ ಸೇಲಂನಿಂದ ಸುಮಾರು 30 ಕಿ.ಮೀ. ದೂರದಲ್ಲಿ ಸೇಲಂ-ಸಂಕಗಿರಿ ರಸ್ತೆಯನ್ನು ಹಿಡಿಯಬೇಕು. ರಸ್ತೆಗಳು ಚೆನ್ನಾಗಿವೆ.

-ಉಮಾಮಹೇಶ್ವರಿ ಎನ್‌.

ಟಾಪ್ ನ್ಯೂಸ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-koo

Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.