ಇಒ ವಿರುದ್ಧ ಪ್ರತಿಭಟನೆ, ವರ್ಗಾವಣೆಗೆ ಬಿಗಿ ಪಟ್ಟು
Team Udayavani, Jun 30, 2019, 3:00 AM IST
ಕೆ.ಆರ್.ನಗರ: ತಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರ ಪ್ರಶ್ನೆ ಉತ್ತರಿಸದ್ದಕ್ಕೆ ಹಾಗೂ ಸಭೆಯಿಂದ ಹೊರ ನಡೆದಿದ್ದಕ್ಕೆ ತಾಪಂ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಮೋಹನ್ ವಿರುದ್ಧ ಸದಸ್ಯರು ಪ್ರತಿಭಟನೆ ನಡೆಸಿದರು. ಜೊತೆಗೆ ಈ ಅಧಿಕಾರಿಯನ್ನು ವರ್ಗಾವಣೆ ಮಾಡಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿದರು.
ತಾಪಂ ಸಭಾಂಗಣದಲ್ಲಿ ಮಲ್ಲಿಕಾ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಭಿವೃದ್ಧಿ ವಿಚಾರದ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಸದಸ್ಯ ಚಂದ್ರಶೇಖರ್ ಏರಿದ ಧ್ವನಿಯಲ್ಲಿ ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಇಒ ಲಕ್ಷ್ಮೀಮೋಹನ್,”ನೀವು ಜೋರಾಗಿ ಮಾತನಾಡಿ ಹದ್ದುಮೀರಿ ನಡೆದುಕೊಂಡು ಗೂಂಡಾ ವರ್ತನೆ ತೋರಿಸುತ್ತಿದ್ದೀರಿ’ ಎಂದು ಹರಿಹಾಯ್ದರು. ಇದರಿಂದ ಸಿಡಿಮಿಡಿಗೊಂಡ ಸದಸ್ಯ ನಾನು ಯಾವ ರೀತಿ ಗೂಂಡಾ ವರ್ತನೆ ತೋರಿಸಿದ್ದೇನೆ ಎಂದು ಸಾಬೀತು ಮಾಡಬೇಕೆಂದು ಪಟ್ಟು ಹಿಡಿದರು.
ಈ ಮದ್ಯೆ ಚಂದ್ರಶೇಖರ್ ಅವರಿಗೆ ಬೆಂಬಲ ಸೂಚಿಸಿದ ಸದಸ್ಯರಾದ ಶ್ರೀನಿವಾಸಪ್ರಸಾದ್, ಎಚ್.ಟಿ.ಮಂಜುನಾಥ್, ಕುಮಾರ್, ಸುನೀತಾ ಮತ್ತಿತರರ ಸದಸ್ಯರ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ. ತಾಪಂ ಇಒ ಲಕ್ಷ್ಮೀ ಮೋಹನ್ ಸಭೆಯಲ್ಲಿ ಕ್ಷಮೆ ಯಾಚಿಸಬೇಕು ಎಂದರು.
ಸದಸ್ಯರು ನಿಯಮ ಮೀರಿ ವರ್ತಿಸುತ್ತಿದ್ದು, ಪೊಲೀಸರನ್ನು ಕರೆಸಿ ಅವರ ಭದ್ರತೆಯಲ್ಲಿ ಸಭೆ ನಡೆಸುವುದಾಗಿ ಇಒ ಹೇಳಿದಾಗ, ಕೆಂಡ ಮಂಡಲರಾದ ಸದಸ್ಯ ಶ್ರೀನಿವಾಸಪ್ರಸಾದ್ ಸದಸ್ಯರ ಹಕ್ಕುಗಳಿಗೆ ಚ್ಯುತಿ ತರುತ್ತಿರುವ ನೀವು ಕ್ಷಮೆ ಕೇಳಲೇಬೇಕು. ಇಲ್ಲವಾದರೆ ಯಾರನ್ನು ಕರೆಸುತ್ತೀರೊ ಕರೆಯಿಸಿ ನೋಡಿಯೇ ಬಿಡೋಣ ಎಂದು ಸವಾಲು ಹಾಕಿದರು.
ಅಧ್ಯಕ್ಷೆ ಮಲ್ಲಿಕಾ ಮಾತನಾಡಿ, ನಾನು ಕಾರ್ಯನಿರ್ವಹಣಾಧಿಕಾರಿಗಳನ್ನು ಅಭಿವೃದ್ಧಿ ವಿಚಾರ ಮತ್ತು ಕಚೇರಿಗೆ ಸರಿಯಾಗಿ ಹಾಜರಾಗದೆ ಇರುವ ಬಗ್ಗೆ ಕೇಳಿದರೆ ನನ್ನನ್ನು ಪ್ರಶ್ನಿಸಿದ ಮೊದಲ ಮಹಿಳೆ ನೀವೇ ಎಂದು ಕೇವಲವಾಗಿ ಮಾತನಾಡುತ್ತಾರೆ. ಚುನಾಯಿತ ಸದಸ್ಯರ ಬಗ್ಗೆ ಗೌರವವಿಲ್ಲದ ಇವರ ಅವಶ್ಯಕತೆ ನಮಗಿಲ್ಲ. ಆದ್ದರಿಂದ ಅವರ ವಿರುದ್ಧ ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒಗೆ ದೂರು ಕೊಡೋಣ ಎಂದರು.
ಕ್ಷಮೆಗೆ ಆಗ್ರಹ: ಈ ವೇಳೆ ಮಧ್ಯ ಪ್ರವೇಶಿಸಿದ ಸದಸ್ಯೆಯರಾದ ಸುನೀತಾ, ಮಮತಾ ಮತ್ತು ಶೋಭಾ ಅವರು, ಲಕ್ಷ್ಮಿಮೋಹನ್ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡುವುದು ನಂತರದ ವಿಚಾರ. ಈಗ ಅವರು ಸದಸ್ಯ ಚಂದ್ರಶೇಖರ್ ಸೇರಿದಂತೆ ಸಭೆಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದಾಗ ಇದಕ್ಕೆ ಬೆಂಬಲ ಸೂಚಿಸಿದ ಶ್ರೀನಿವಾಸಪ್ರಸಾದ್ ಕ್ಷಮೆ ಕೇಳದಿದ್ದರೆ ದಿಗ್ಬಂಧನ ಹಾಕುವುದಾಗಿ ಎಚ್ಚರಿಕೆ ನೀಡಿದರು.
ವಾದ ವಿವಾದಗಳು ನಡೆಯುತ್ತಿದ್ದಾಗ ಸಭೆಯಿಂದ ಏಕಾ ಏಕಿ ಹೊರ ನಡೆದ ತಾಪಂ ಕಾರ್ಯನಿರ್ವಹಣಾಧಿಕಾರಿ ಅಧ್ಯಕ್ಷೆ ಸೇರಿದಂತೆ ಸದಸ್ಯರು ಕರೆದರೂ ಕಿವಿಗೊಡದೆ ಸಭಾಂಗಣದಿಂದ ಹೊರ ಬಂದು ಕಾರು ಹತ್ತಿ ಹೊರಟೇ ಹೋದರು.
ಪ್ರತಿಭಟನೆ: ಅಧ್ಯಕ್ಷರು ಮತ್ತು ಸಭೆಯ ಅನುಮತಿ ಪಡೆಯದೆ ಕಾರ್ಯನಿರ್ವಹಣಾಧಿಕಾರಿ ಹೊರ ಹೋಗಿದ್ದರಿಂದ ಆಕ್ರೋಶಗೊಂಡ ಅಧ್ಯಕ್ಷೆ, ಉಪಾಧ್ಯಕ್ಷೆ ಮತ್ತು ಎಲ್ಲಾ ಸದಸ್ಯರು ತಾಲೂಕು ಪಂಚಾಯ್ತಿ ಕಚೇರಿಯ ಮುಂದೆ ವಿರುದ್ಧ ಪ್ರತಿಭಟನೆ ನಡೆಸಿ ಮಹಿಳೆಯರಿಗೆ ಅಗೌರವ ತೋರಿ ಸದಸ್ಯರ ಹಕ್ಕುಗಳಿಗೆ ಚ್ಯುತಿ ತರುತ್ತಿರುವ ಲಕ್ಷ್ಮೀಮೋಹನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರ ಜತೆಗೆ ಬೇರೆಡೆಗೆ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.
ದೂರು: ತಾಪಂ ಸದಸ್ಯರಾದ ಎಚ್.ಟಿ.ಮಂಜುನಾಥ್, ಶ್ರೀನಿವಾಸಪ್ರಸಾದ್, ಕುಮಾರ್, ಕೆ.ಎಲ್.ಲೋಕೇಶ್, ಬಿ.ಎಂ.ಮಹದೇವ್ ಮಾತನಾಡಿ, ಕಾರ್ಯನಿರ್ವಹಣಾಧಿಕಾರಿಯ ದುರ್ವರ್ತನೆ ಮತ್ತು ಕರ್ತವ್ಯ ಲೋಪದ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರು, ಕ್ಷೇತ್ರದ ಶಾಸಕರೂ ಆದ ರೇಷ್ಮೆ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹಾಗೂ ಸಂಬಂಧಿತ ಎಲ್ಲಾ ಮೇಲಧಿಕಾರಿಗಳಿಗೂ ಲಿಖೀತ ದೂರು ನೀಡುವುದಾಗಿ ತಿಳಿಸಿದರು.
ಪ್ರತಿಭಟನೆ ವೇಳೆ ಅಧ್ಯಕ್ಷೆ ಮಲ್ಲಿಕಾ ಮತ್ತು ಸದಸ್ಯ ಎಚ್.ಟಿ.ಮಂಜುನಾಥ್ ಘಟನೆಯ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಒಗೆ ಘಟನೆಯ ಬಗ್ಗೆ ದೂರವಾಣಿಯಲ್ಲಿ ಮಾಹಿತಿ ನೀಡಿದರು.
ಉಪಾಧ್ಯಕ್ಷೆ ಸಾಕಮ್ಮಸಣ್ಣಪ್ಪ, ಸದಸ್ಯರಾದ ಜಯರಾಮೇಗೌಡ, ಜಿ.ಎಸ್.ಮಂಜುನಾಥ್, ವೀಣಾ, ಶೋಭಾ, ಸಿದ್ದಮ್ಮ, ರತ್ನಮ್ಮ, ಪುಟ್ಟಗೌರಮ್ಮ, ನಾಗರಾಜು, ನೀಲಮಣಿ, ಲಲಿತಾ, ಕೆ.ಪಿ.ಯೋಗೇಶ್ ಇತರರಿದ್ದರು.
ತಾಲೂಕಿನ ಅಭಿವೃದ್ಧಿಗೆ ಚುನಾಯಿತ ಸದಸ್ಯರೊಡನೆ ಕೆಲಸ ಮಾಡದೆ ನಿರಂತರವಾಗಿ ಸಬೂಬು ಹೇಳಿಕೊಂಡು ಕಾಲ ಕಳೆಯುತ್ತಿರುವ ಇಂತಹ ಅಧಿಕಾರಿಯಿಂದ ಜನರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ. ಆದ್ದರಿಂದ ಕೂಡಲೇ ಕೆ.ಆರ್.ನಗರ ತಾಲೂಕು ಪಂಚಾಯ್ತಿಗೆ ಬೇರೆ ಕಾರ್ಯನಿರ್ವಹಣಾಧಿಕಾರಿಗಳನ್ನು ನೇಮಕ ಮಾಡಬೇಕು.
-ಮಲ್ಲಿಕಾ, ತಾಪಂ ಅಧ್ಯಕ್ಷೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru: ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಭಕ್ತರಿಗೆ 2 ಲಕ್ಷ ಲಡ್ಡು ವಿತರಣೆ
Mysuru: ಕೆಆರ್‌ಎಸ್ ರಸ್ತೆಗೆ “ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ನಿಶ್ಚಿತ: ಲಕ್ಷ್ಮಣ್
Sandalwood: ಪ್ರತಿಭೆ ಪ್ರದರ್ಶಿಸಲು ಕಲಾವಿದರಿಗೆ ಸೂಕ್ತ ವೇದಿಕೆ ಅಗತ್ಯ: ನಟ ಡಾಲಿ ಧನಂಜಯ
Hunsur: ಹುತಾತ್ಮ ಧಿವಿನ್ ಅಂತಿಮ ದರ್ಶನ ಪಡೆದ ಗ್ರಾಮಸ್ಥರು
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.