ಆರೋಗ್ಯದ ಬಗ್ಗೆ ಕಾಳಜಿ ವಹಿಸಿ: ರಮೇಶ್
Team Udayavani, Jun 30, 2019, 3:00 AM IST
ಹೊಳೆನರಸೀಪುರ: ಎಲ್ಲಾ ಭಾಗ್ಯಕ್ಕಿಂತ ಆರೋಗ್ಯ ಭಾಗ್ಯವೇ ಮೇಲು. ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ತಾಲೂಕಿನ ದೊಡ್ಡಕುಂಚೆಯ ನವೋದಯ ಪ್ರೌಢಶಾಲೆಯ ಹಿರಿಯ ಶಿಕ್ಷಕ ಎಸ್.ರಮೇಶ್ ತಿಳಿಸಿದರು.
ದೊಡ್ಡಕುಂಚೆ ಸಮುದಾಯ ಆರೋಗ್ಯಕೇಂದ್ರ, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಹಾಗೂ ಶಾಲೆಯ ಸಂಯುಕ್ತಾಶ್ರಯದಲ್ಲಿ, ಶಾಲೆಯ ಸಭಾಂಗಣದಲ್ಲಿ ನಡೆದ ಮಲೇರಿಯಾ ವಿರೋಧಿ ಮಾಸಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಸಮಾರಂಭದಲ್ಲಿ ವಿವಿಧ ಬಗೆಯ ಜ್ವರಗಳು ಹಾಗೂ ಅವುಗಳ ನಿಯಂತ್ರಣ ಕುರಿತ ಆರೋಗ್ಯ ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಂಕ್ರಾಮಿಕ ರೋಗಗಳ ಅರಿವು ಮೂಡಿಸಿ: ಪ್ರಮುಖವಾಗಿ ಸಾಂಕ್ರಾಮಿಕ ರೋಗಗಳ ಬಗ್ಗೆ ಗ್ರಾಮಾಂತರ ಸಮುದಾಯದ ಶಾಲಾ ಮಕ್ಕಳಲ್ಲಿ ಅರಿವು ಮೂಡಿಸುವುದರಿಂದ ಮಕ್ಕಳು ತಮ್ಮ ಪೋಷಕರಿಗೆ, ನೆರೆಹೊರೆಯವರಿಗೆ ಹಾಗೂ ಬಂಧುಗಳಿಗೆ ಹಾಗೂ ಸಮುದಾಯಕ್ಕೆ ಮಾಹಿತಿ ನೀಡುವುದರಿಂದ ಸರ್ಕಾರದ ಕಾರ್ಯಕ್ರಮಗಳು ಸಫಲತೆಯನ್ನುಕಾಣಲಿದೆ ಎಂದರು.
ಸ್ವಚ್ಛತೆ ಕಾಪಾಡಿ: ಸೊಳ್ಳೆಗಳ ಉಗಮ ಸ್ಥಾನಗಳಾದ ನೀರು ಶೇಖರಣೆ ಮಾಡುವ, ಸಿಮೆಂಟ್ ತೊಟ್ಟಿ, ಬ್ಯಾರಲ್, ಚಿಪ್ಪು, ಒಡೆದ ಮಡಕೆ, ಪ್ಲಾಸ್ಟಿಕ್ ಇನ್ನಾವುದೇತ್ಯಾಜ್ಯ ವಸ್ತುಗಳಲ್ಲಿ ತಿಳಿ ನೀರು ನಿಲ್ಲದಂತೆ ನೋಡಿಕೊಂಡು ಅವುಗಳನ್ನು ವಿಲೇವಾರಿ ಮಾಡುವ ಮೂಲಕ ಮುಂಜಾಗ್ರತಾ ಕ್ರಮವಹಿಸಿ ಎಂದು ತಿಳಿಸುತ್ತಾ ಶಾಲೆಯ ಮಕ್ಕಳ ಮೂಲಕ ಹೆಚ್ಚಿನ ಮಾಹಿತಿ ಸಮುದಾಯಕ್ಕೆತಲುಪಿದಾಗ ಸಮುದಾಯಆರೋಗ್ಯಕರವಾಗಿರುತ್ತದೆ. ಸಮುದಾಯಆರೋಗ್ಯಕರವಾಗಿದ್ದರೆ ಇಲಾಖೆಗಳ ಉದ್ದೇಶ ಈಡೇರುತ್ತದೆ ಎಂದರು.
ಮಲೇರಿಯಾ ಮಾಸಾಚರಣೆ: ತಾಲೂಕು ಆರೋಗ್ಯಾಧಿಕಾರಿ ಕಚೇರಿಯ ಹಿರಿಯಆರೋಗ್ಯ ಸಹಾಯಕ ಎಂ.ಎಸ್.ಅನಂತರಾಮು ಮಾತನಾಡಿ, ಜೂನ್ ತಿಂಗಳಲ್ಲಿ ಮಲೇರಿಯ ಮಲೇರಿಯಾ ಮಾಸಾಚರಣೆ ಮಾಡುವಉದ್ದೇಶದ ಬಗ್ಗೆ ಮಾತನಾಡಿ, ಕೀಟ ಚಿಕ್ಕದಾದರೂ ಅದು ಕೊಡುವ ಕಾಟ ವಿಪರೀತ. ಮಲೇರಿಯಾ, ಡೆಂಘೀ, ಚಿಕೂನ್ ಗುನ್ಯಾ, ಫೈಲೇರಿಯಾ ಹಾಗೂ ಇನ್ನಿತರೆ ರೋಗಗಳ ನಿಯಂತ್ರಣ ಮಾಡಬೇಕಾಗಿದ್ದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ.ಈ ಬಗ್ಗೆ ಜಾಗƒತಿ ಮೂಡಿಸುವ ಸಲುವಾಗಿ ತಮ್ಮ ಶಾಲೆಯಲ್ಲಿಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸುತ್ತಾ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಮುಂಜಾಗ್ರತೆ ವಹಿಸಿ: ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ಮೇಲ್ವಿಚಾರಕ ಕೆ.ವಿನಯ್ ಮಾತನಾಡಿ, ಡೆಂಘೀ ಪ್ರಕರಣಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲದಿರುವುದರಿಂದ ಮುಂಜಾಗ್ರತೆ ಅನುಸರಿಸದಿದ್ದರೆ ಸಾವು ಸಂಭವಿಸಬಹುದು. ಆದ್ದರಿಂದ ವಿವಿಧಜಾತಿಯ ಸೊಳ್ಳೆಗಳು ರೋಗಗಳನ್ನು ಹರಡುವುದರಿಂದ ತಮ್ಮ ಪಠ್ಯ ಪುಸ್ತಕದಲ್ಲಿ ಬರುವ ರೋಗಗಳ ಜೀವನಚರಿತ್ರೆಯ ಬಗ್ಗೆ ತಿಳಿದುಕೊಂಡು ನಮ್ಮ ಪರಿಸರದ ಬಗ್ಗೆ ಕಾಳಜಿವಹಿಸಿ ವೈಯಕ್ತಿಕ ಸ್ವಚ್ಛತೆ ಬಗ್ಗೆ ಗಮನಹರಿಸಬೇಕೆಂದರು.
ಮಂಗನ ಕಾಯಿಲೆ ಬಗ್ಗೆ ಮಾಹಿತಿ: ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿ ಕಚೇರಿಯ ಸಾಂಕ್ರಾಮಿಕ ರೋಗಗಳ ವಿಭಾಗದ ಲಕ್ಷ್ಮಣಗೌಡ ಮಂಗನ ಕಾಯಿಲೆ ಮಾಹಿತಿ ನೀಡಿ, 1957 ರಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕ್ಯಾಸನೂರು ಕಾಡಿನಲ್ಲಿ ಪತ್ತೆಯಾದ್ದರಿಂದ ಈ ರೋಗಕ್ಕೆ ಕ್ಯಾಸನೂರು ಕಾಡಿನ ಕಾಯಿಲೆ ಅಥವಾ ಮಂಗನ ಕಾಯಿಲೆ ಎಂದು ಕರೆಯಲಾಗುತ್ತದೆ.
ಸೋಂಕಿತ ಉಣ್ಣೆಗಳು ಮಂಗವನ್ನು ಆಶ್ರಯಿಸಿದ್ದಲ್ಲಿ ಮಂಗಗಳು ರೋಗಕ್ಕೆಗುರಿಯಾಗಿ ಮಂಗಗಳು ಸತ್ತನಂತರ ಅವುಗಳ ದೇಹದಿಂದ ಬೇರ್ಪಟ್ಟು ಎಲೆಗಳ ಅಡಿಯಲ್ಲಿ ಸೇರಿಕೊಳ್ಳುವ ಈ ವೈರಾಣು ಹೊಂದಿದ ಉಣ್ಣೆಗಳು ಆ ಪ್ರದೇಶದತ್ತ ಸುಳಿಯುವ ಜಾನುವಾರಗಳು ಹಾಗೂ ಸಾರ್ವಜನಿಕರಿಗೆ ಆಶ್ರಯಿಸಿ ರೋಗಹರಡುತ್ತದೆ ಎಂದರು.
ಪ್ರಾಣಿ, ಪಕ್ಷಿಗಳು ಅದರಲ್ಲೂ ಬಾವಲಿಗಳು ಕಚ್ಚಿತಿಂದಂತಹ ಹಣ್ಣುಗಳನ್ನು ತಿನ್ನುವುದರಿಂದ ನಿಫಾ ವೈರಸ್ ಕಾಯಿಲೆ ಬರುವುದರಿಂದ ಮುಂಜಾಗ್ರತೆ ವಹಿಸಿ ಎಂದರು. ಹಳೆಕೋಟೆ ಹಿರಿಯ ಆರೋಗ್ಯ ಸಹಾಯಕ ಆರ್.ಬಿ.ಪುಟ್ಟೇಗೌಡ ಕುಷ್ಠರೋಗದ ಬಗ್ಗೆ ಮಾಹಿತಿ ನೀಡಿದರು. ಕ್ಷಯ, ಎಚ್‌ಐವಿ, ಅಂಧತ್ವ, ಜಂತುಹುಳು, ಹೀಗೆ ಅನೇಕ ರೋಗಗಳ ಬಗ್ಗೆ ಮಾಹಿತಿಗಳನ್ನು ಶಾಲಾ ಮಕ್ಕಳಿಗೆ ಆರೋಗ್ಯ ಇಲಾಖೆ ಅರಿವು ಮೂಡಿಸುತ್ತಿದೆ ಎಂದರು.
ಶಾಲೆಯ ಶಿಕ್ಷಕ ಮಂಜಪ್ಪ ಮಾತಾಡಿ ಭಾರತದಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.ಪರಿಸರ ಮಾಲಿನ್ಯವೂಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.ಇವೆರಡರ ಜೊತೆ ಆಶ್ಚರ್ಯಪಡುವಂತಹ ಕಂಡು ಕೇಳರಿಯದ ಕೆಲವು ಖಾಯಿಲೆಗಳು ಸಂಭವಿಸುತ್ತಿವೆ ಎಂದು ತಿಳಿಸಿ, ಈ ಬಗ್ಗೆ ವಿದ್ಯಾರ್ಥಿಗಳು ಸಮುದಾಯದ ಜನರು ಎಚ್ಚೆತ್ತುಕೊಳ್ಳುವಂತೆ ಮಾಡಬೇಕಿದೆ ಎಂದರು.
ಶಿಕ್ಷಕ ಕೃಷ್ಣೇಗೌಡ, ಎಸ್.ಸಿ. ಸತ್ತೀಗೌಡ, ಸಿ.ಬಿ.ಪುಟ್ಟರಾಜು, ಎಚ್.ಎಸ್.ಲಕ್ಷ್ಮೀಶ, ಶಿಕ್ಷಕಿಯರಾದ ರೇಖಾ, ಅನುಸೂಯ, ಬಿ.ರಾಧ ಹಿರಿಯ ಆರೋಗ್ಯ ಸಹಾಯಕಿ ಪ್ರೇಮಲತಾ, ಆರೋಗ್ಯ ಸಹಾಯಕರಾದ ರಾಜು, ಸ್ವಾಮಿ, ಸೋಮುಶೇಖರ್, ಜೆ.ಟಿ.ಸ್ವಾಮಿ, ಶ್ರುತಿ, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.