ಯೇಸು ಕ್ರಿಸ್ತರ ತಿರು ಹೃದಯದ ಪ್ರತಿಮೆ ಪ್ರತಿಷ್ಠೆ; ಬೆಥನಿ ಹೆರಿಟೇಜ್ ಪಾರ್ಕ್ ಉದ್ಘಾಟನೆ
Team Udayavani, Jun 30, 2019, 5:10 AM IST
ಮಂಗಳೂರು : ಬೆಂದೂರ್ ಬೆಥನಿ ಕಾನ್ವೆಂಟಿನ ಆವರಣದಲ್ಲಿ ‘ಬೆಥನಿ ಹೆರಿಟೇಜ್ ಪಾರ್ಕ್’ ಉದ್ಘಾಟನೆ ಶುಕ್ರವಾರ ನಡೆಯಿತು.
ಮಂಗಳೂರು ಧರ್ಮಪ್ರಾಂತದ ವಿಕಾರ್ ಜನರಲ್ ವಂ| ಮೊನ್ಸಿ| ಮಾಕ್ಸಿಮ್ ನೊರೊನ್ಹಾ ಅವರು ಯೇಸು ಕ್ರಿಸ್ತರ ತಿರು ಹೃದಯದ ಪ್ರತಿಮೆಯನ್ನು ಪ್ರತಿಷ್ಠಾಪಿಸಿದರು.
ಬೆಥನಿ ಸಂಸ್ಥೆಯ ಮಹಾಮಾತೆ ಭ| ರೋಸ್ ಸೆಲಿನ್ ಬೆಥನಿ ಹೆರಿಟೇಜ್ ಪಾರ್ಕ್ ಮತ್ತು ಅದರಲ್ಲಿರುವ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಭಿತ್ತರಿಸುವ ವಿವಿಧ ರೂಪರೇಖೆಗಳನ್ನು ಉದ್ಘಾಟಿಸಿದರು. ಗೆತ್ಸೆಮನಿ ತೋಪಿ ನಲ್ಲಿ ಯೇಸು ಅನುಭವಿಸಿದ ಮರಣ ಯಾತನೆಯ ಧ್ಯಾನವನ್ನು ಬಿಂಬಿಸುವ ಯೇಸುವಿನ ಪ್ರತಿಮೆಯನ್ನು ಅನಾವರಣ ಗೊಳಿಸಲಾಯಿತು.
ಪ್ರದರ್ಶನ, ಉದ್ಘಾಟನೆ
ಬೆಂದೂರು ಧರ್ಮ ಕೇಂದ್ರದ ಸಂತ ಸೆಬಾಸ್ಟಿಯನ್ ಚರ್ಚಿನ ಧರ್ಮಗುರು ವಂ| ವಿನ್ಸೆಂಟ್ ಮೊಂತೆರೊ ಕಾಲ್ವರಿ ಗುಡ್ಡದ ಮೇಲೆ ಶಿಲುಬೆ ಮರಣವನ್ನಪ್ಪಿದ ಯೇಸು ಕ್ರಿಸ್ತರ ಶಿಲುಬೆಯನ್ನು ಪ್ರದರ್ಶಿಸಿದರು. ಮಾಜಿ ಮಹಾಮಾತೆ ಭ| ವಿಲ್ಬರ್ಟ ಬೆಥನಿ ಹೆರಿಟೇಜ್ ಪಾರ್ಕ್‌ನ ಮಧ್ಯೆ ಶೋಭಿಸುವ ಸಂತ ಜೋಸೆಫರ ಪ್ರತಿಮೆಗೆ ನಮನ ಸಲ್ಲಿಸಿದರು. ಕಾರ್ಪೊರೇಟರ್ ಸಬಿತಾ ಮಿಸ್ಕಿತ್ ‘ದೇವರ ಸೇವಕ’ ಆರ್‌ಎಫ್‌ಸಿ ಮಸ್ಕರೇನ್ಹಸರ ಪ್ರತಿಮೆಯನ್ನು ಅನಾವರಣಗೊಳಿಸಿದರು.
ಕೇರಳದ ಶಿವಾನಂದ, ಟೆರೆಕೊಟ್ಟಾ ಆರ್ಟ್ ನ ಶೈಲಿಯಲ್ಲಿ ಕೆತ್ತಿದ ಯೇಸು ಮತ್ತು ಅವರ ಶಿಷ್ಯರ ವಿಗ್ರಹಗಳನ್ನು ಮಹಾಮಾತೆಯ ಸಲಹದಾರಿಣಿ ಭ| ಶಾಂತಿಪ್ರಿಯಾ ಪ್ರದರ್ಶಿಸಿದರು. ಭ| ಮಾರಿಯೆಟ್, ಮರಣ ಹೊಂದಿದ ಬೆಥನಿ ಭಗಿನಿಯರ ಸ್ಮಾರಕವನ್ನು ಅನಾವರಣಗೊಳಿಸಿದರು. ಮಂಗಳೂರು ಪ್ರಾಂತದ ಭ| ಸಿಸಿಲಿಯಾ ಮೆಂಡೊನ್ಸಾ ಅವರು ಪಾಲಕ ದೇವದೂತನ ಪ್ರತಿ ಮೆಯನ್ನು ಪ್ರದರ್ಶಿಸಿದರು. ಗಿಡ ಮೂಲಿಕೆಗಳ ತೋಟದ ಭಾಗವನ್ನು ಸೈಂಟ್ ಆ್ಯಗ್ನೆಸ್ ಕಾನ್ವೆಂಟಿನ ಸುಪೀರಿಯರ್ ಭ| ಮರಿಯ ರೂಪಾ ಉದ್ಘಾಟಿಸಿದರು. ಬೆಂದೂರು ಚರ್ಚ್‌ನ ಉಪಾ ಧ್ಯಕ್ಷ ಸ್ಟೀವನ್ ಪಿಂಟೊ, ಕಾರ್ಯ ದರ್ಶಿ ಮೇವಿಸ್ ರೊಡ್ರಿಗಸ್, ಭ| ವರ್ಜೀನಿಯಾ, ಪಾರ್ಕ್ ಚಿಲುಮೆ ಮತ್ತು ಮೀನು ಕೊಳವನ್ನು ಉದ್ಘಾಟಿಸಿದರು.
ಯೇಸುವಿನ ವಿಗ್ರಹ ಅನಾವರಣ
ಮಕ್ಕಳೊಂದಿಗಿರುವ ಯೇಸುವಿನ ವಿಗ್ರಹಗಳನ್ನು ಮಕ್ಕಳು ಅನಾವರಣ ಗೊಳಿಸಿದರು. ವಾರ್ಡ್‌ನ ಮುಖ್ಯಸ್ಥ ಸೈಮನ್ ಪಿಂಟೊ, ಪವಿತ್ರ ಕುಟುಂಬದ ಪ್ರತಿಮೆಯನ್ನು ಪ್ರದರ್ಶಿಸಿದರು. ಮಾಹಾಮಾತೆಯ ಸಲಹೆದಾರರಾದ ಭ| ಲಿಲಿಟಾ, ಸಂಸೆuಯ ಪ್ರೋಕ್ಯುರೇಟರ್ ಭ| ಕ್ರಿಸ್ಟಿನ್ ಹೊಸ ಗೇಟುಗಳ ಉದ್ಘಾಟನೆ ನೆರವೇರಿಸಿದರು.
ಗೌರವಾರ್ಪಣೆ
ಇಡೀ ಹೆರಿಟೇಜ್ ಪಾರ್ಕ್‌ನ ಕಲಾತ್ಮಕ ರಚನೆಗೆ ಕಾರಣರಾದ ಭ| ಲಿಲ್ಲಿಸ್, ಆರ್ಕಿಟೆಕ್ಟ್ ಮತ್ತು ಎಂಜಿನಿಯರ್‌ಗಳಾದ ನೊಯೆಲ್ ಪಿಂಟೋ ಮತ್ತು ಆಶ್ವಿತ್ ರಸ್ಕಿನಾ, ಸೈಮನ್ ಆ್ಯಂಡ್ ಕೊ ಉದ್ದಿಮೆಯ ಮಾಲಕರನ್ನು ಗೌರವಿಸಲಾಯಿತು. ಬೆಥನಿ ಕಾನ್ವೆಂಟಿನ ಸುಪೀರಿಯರ್ ಭ| ಅನಿತಾ ಶಾಂತಿ, ಭ| ಕ್ಲೆಯೋಫಾ ಗಣ್ಯರಿಗೆ ಗಿಡಗಳನ್ನು ವಿತರಿಸಿದರು. ಮಾಧ್ಯಮ ಸಲಹೆಗಾರ ಇ. ಫೆರ್ನಾಂಡಿಸ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಭ| ಹಿಲೆರೀಟಾ ನಿರೂಪಿಸಿದರು.
ಮೊನ್ಸಿ ರೇಮಂಡ್ ಮ್ಯೂಸಿಯಂ, ಸಂಸ್ಥೆಯ ಮೂಲ ಮನೆಯಾದ ಮದರ್ ಹೌಸ್‌ನಲ್ಲಿರುವ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರ, ಪ್ರಸ್ತುತ ಜೀರ್ಣೋದ್ಧಾರಗೊಂಡ ಸಂಸ್ಥೆಯ ಸಾuಪಕ ಆರ್.ಎಫ್.ಸಿ. ಮಸ್ಕರೇನ್ಹಸ್ ಕಟ್ಟಿಸಿದ, ಧಾರ್ಮಿಕ ಪೇಯಿrಂಗ್ಸ್ ಒಳಗೊಂಡ ಚಾಪೆಲ್ ಮತ್ತು ನೆಲಮಾಳಿಗೆ (ಟನೆಲ್) ಪಾರ್ಕಿನ ವಿಶೇಷ ಆಕರ್ಷಣೆಗಳಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.