ಗ್ಲಾಂಝಾ ಗ್ಲಾಮರ್ ಜೋರು
ಮಾರುಕಟ್ಟೆಯಲ್ಲಿ ಸಹೋದರರ ಸವಾಲ್
Team Udayavani, Jul 1, 2019, 5:00 AM IST
-ಆಟೋಮ್ಯಾಟಿಕ್ ಎ.ಸಿ-
ತನ್ನಷ್ಟಕ್ಕೆ ತಾನೇ ಕಾರಿನೊಳಗಿನ ತಾಪಮಾನವನ್ನು ಗ್ರಹಿಸಿ ಸವಾರರಿಗೆ ಹಿತವೆನಿಸುವ ತಾಪಮಾನಕ್ಕೆ ಹೊಂದಿಕೆಯಾಗುತ್ತದೆ. ಬೇಕೆಂದರೆ ಈ ವ್ಯವಸ್ಥೆಯನ್ನು ಆಫ್ ಕೂಡಾ ಮಾಡಬಹುದು.
-ಆರ್ಮ್ ರೆಸ್ಟ್-
ಲಾಂಗ್ ಡ್ರೈವ್ ಹೋಗುವಾಗ ಡ್ರೈವರ್‌ಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಆರ್ಮ್ ರೆಸ್ಟ್ ಸೌಲಭ್ಯವಿದೆ. ಕೈಗಳನ್ನು ಅದರ ಮೇಲಿರಿಸುವುದರಿಂದ ಡ್ರೈವಿಂಗ್‌ಗೆ ಹೆಚ್ಚಿನ ಶ್ರಮ ಉಂಟಾಗದು.
-ಆಟೋ ಹೆಡ್‌ಲ್ಯಾಂಪ್ಸ್-
ಹೊರಗಡೆ ಕತ್ತಲಾವರಿಸುತ್ತಿದ್ದಂತೆ ಕಾರಿನ ಹೆಡ್‌ಲೈಟ್‌ಗಳು ತಮ್ಮಷ್ಟಕ್ಕೆ ಆನ್ ಆಗುತ್ತವೆ. ಅಲ್ಲದೆ ಬೆಳಕಿನ ತೀವ್ರತೆಯೂ ಹೊರಗಿನ ಬೆಳಕಿಗೆ ತಕ್ಕಂತೆ ನಿಗದಿಯಾಗಿರುತ್ತದೆ.
-ಫೋಲೆxಬಲ್ ಸೀಟು-
ಹೆಚ್ಚಿನ ಸಾಮಾನು ಸರಂಜಾಮುಗಳನ್ನು ತುಂಬಿಸಲು ಅನುವಾಗುವಂತೆ ಹಿಂಬದಿಯ ಸೀಟುಗಳನ್ನು ಮಡಚಬಹುದು.
-ಏರ್ ಬ್ಯಾಗ್-
ಗ್ಲಾಂಝಾದಲ್ಲಿ ಎರಡು ಏರ್‌ಬ್ಯಾಗ್‌ಗಳನ್ನು ಒದಗಿಸಲಾಗಿದೆ
ಟೊಯೋಟಾ ಮತ್ತು ಸುಝುಕಿ ಒಪ್ಪಂದದ ಪ್ರಕಾರ, ಜಂಟಿಯಾಗಿ ವಾಹನಗಳ ಅಭಿವೃದ್ಧಿ, ಮಾರುಕಟ್ಟೆ ಪಾರಮ್ಯವನ್ನು ಕಾಯ್ದುಕೊಳ್ಳುವುದಕ್ಕಾಗಿ ಭಾರತದಲ್ಲಿ ಟೋಯೋಟಾ ಗ್ಲಾಂಝಾ ಎಂಬ ಹ್ಯಾಚ್‌ಬ್ಯಾಕ್ ಕಾರನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಹೇಳಿಕೇಳಿ ಇದು ಮಾರುತಿ ಬೆಲೆನೋದ ಸಹೋದರ!
ಈ ಮೊದಲು ರೆನೋ ಮತ್ತು ನಿಸ್ಸಾನ್ ಕಂಪೆನಿಗಳು ಇದೇ ರೀತಿಯ ಒಪ್ಪಂದ ಮಾಡಿಕೊಂಡಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು. ಈ ರೀತಿ ಹಲವು ವಾಹನ ತಯಾರಿಕಾ ಸಂಸ್ಥೆಗಳು, ಎಂಜಿನ್‌ಅನ್ನು ಜಂಟಿಯಾಗಿ ಅಭಿವೃದ್ಧಿಗೊಳಿಸುತ್ತವೆ.
ವಿನ್ಯಾಸ ಮತ್ತು ಇತರೆ ಸವಲತ್ತುಗಳನ್ನಷ್ಟೆ ಸ್ವಂತವಾಗಿ ಅಭಿವೃದ್ಧಿಪಡಿಸುತ್ತವೆ. ಇದರ ಉಪಯೋಗವೆಂದರೆ, ಎಂಜಿನ್ ತಯಾರಿಕೆಗೆ ತಗುಲುವ ಖರ್ಚು ವೆಚ್ಚಗಳನ್ನು ತಗ್ಗಿಸುವುದು. ಅಲ್ಲದೆ, ಸಂಸ್ಥೆಯ ಸಂಪನ್ಮೂಲಗಳನ್ನು ಹೆಚ್ಚು ವಾಹನ ಮಾರಾಟ ಮಾಡುವುದರತ್ತ ಬಳಸಿಕೊಳ್ಳಬಹುದು. ಈಗ ಇದೇ ಉದ್ದೇಶದಡಿ ಒಂದಾಗಿರುವ ಟೊಯೋಟಾ ಮತ್ತು ಸುಝುಕಿ ಸಂಸ್ಥೆಗಳು ತಮ್ಮ ಎರಡೂ ಸಂಸ್ಥೆಯ ಹೆಸರಿನಡಿ ಗರಿಷ್ಠ ಸಂಖ್ಯೆಯಲ್ಲಿ ಗ್ಲಾಂಝಾ ಮಾರಾಟ ಮಾಡುವ ಗುರಿಯನ್ನು ಹಾಕಿಕೊಂಡಿದೆ.
ವಿನ್ಯಾಸದಲ್ಲಿ ಸಾಮ್ಯತೆ
ವಿನ್ಯಾಸದಲ್ಲಿ ಬಹುತೇಕ ಸುಝುಕಿ ಬೆಲೆನೋವನ್ನು ಹೋಲುವ ಗ್ಲಾಂಝಾ ಕಾರು, ಎಂಜಿನ್ ಅನ್ನು ಕೂಡ ಮಾರುತಿಯಿಂದ ಎರವಲು ಪಡೆದಿದೆ. ಮುಂಭಾಗದ ಹೆಡ್‌ಲೈಟ್, ಹಿಂಭಾಗದ ಬ್ರೇಕ್‌ಲೈಟ್, ಅಲಾಯ್ ವೀಲ್‌ಗಳು, ಮಿರರ್, ಇತ್ಯಾದಿಗಳನ್ನು ಗಮನಿಸಿದರೆ ಎರಡೂ ಕಾರುಗಳ ನಡುವೆ ಹೆಚ್ಚಿನ ವ್ಯತ್ಯಾಸ ಕಾಣದು. ಆದರೆ ಫ್ರಂಟ್‌ಗ್ರಿಲ್‌ನಲ್ಲಿ ಸ್ವಲ್ಪಮಟ್ಟಿಗಿನ ವ್ಯತ್ಯಾಸವನ್ನು ಗಮನಿಸಬಹುದು. ಅಂದಹಾಗೆ ಬೆಲೆನೋ ಮತ್ತು ಗ್ಲಾಂಝಾ ಒಂದೇ ಪ್ಲಾಂಟ್‌ನಲ್ಲಿ ತಯಾರಾಗುತ್ತಿವೆ. ಆದರೆ ಸುಝುಕಿ ಮತ್ತು ಟೊಯೋಟಾದ ಬ್ಯಾಡ್ಜ್ಗಳು ಮಾತ್ರ ಬೇರೆ ಬೇರೆಯಾಗಿವೆ.
ಎರಡೂ ಕಾರಿನ ಒಳಗಿನ ವಿನ್ಯಾಸದಲ್ಲಿಯೂ ಹೆಚ್ಚೇನೂ ವ್ಯತ್ಯಾಸ ಕಾಣುವುದಿಲ್ಲ. ಬೆಲೆನೋ ಸೀಟಿಗಿಂತ ಗ್ಲಾಂಝಾ ಸೀಟು ತುಸು ಬೇರೆಯಾಗಿದೆ. ಅದು ಬಿಟ್ಟರೆ ಡ್ಯಾಶ್‌ಬೋರ್ಡ್ ವಿನ್ಯಾಸ, ಸ್ಟೀರಿಂಗ್ ಎಲ್ಲವೂ ಬೆಲೆನೋದಲ್ಲಿ ಇರುವಂತೆಯೇ ಇದೆ. ಹಾಡು, ಬ್ಲೂಟೂತ್ ಕನೆಕ್ಟಿವಿಟಿ ಮುಂತಾದ ಸವಲತ್ತುಗಳನ್ನು ಒದಗಿಸುವ ಇನ್ಫೋಎಂಟರ್‌ಟೈನ್‌ಮೆಂಟ್ ವ್ಯವಸ್ಥೆಯೂ ಯಥಾವತ್ತು ಬೆಲೆನೋ ರೀತಿಯೇ ಇದೆ. ಇದರಲ್ಲಿ ಆಂಡ್ರಾಯ್ಡ ಮತ್ತು ಆ್ಯಪಲ್ ಎರಡೂ ಉತ್ಪನ್ನಗಳಿಗೆ ಕನೆಕ್ಟಿವಿಟಿ ನೀಡಲಾಗಿದೆ. ಆದರೆ ಕ್ಯಾಬಿನ್ ಮತ್ತು ಬೂಟ್‌ನ ಬಾಗಿಲುಗಳು ಗ್ಲಾಂಝಾದಲ್ಲಿ ತುಸು ಭಾರ ಎನಿಸುವಂತಿದೆ ಎನ್ನುವುದು ಅದನ್ನು ಪರೀಕ್ಷಿಸಿರುವ ಅಟೋಮೊಬೈಲ್ ಪಂಡಿತರ ಅಭಿಪ್ರಾಯ. ಇದೆ. ಡೋರ್ ಹಾಕುವ ವೇಳೆ ಈ ಫೀಲ್ ನೀಡುತ್ತದೆ. ಲೆಗ್‌ರೂಂ, ಕ್ಯಾಬಿನ್ ಕೊಂಚ ಭಿನ್ನವಾಗಿದೆ.
ಎರಡರಲ್ಲಿ ಯಾವುದು ಬೆಸ್ಟ್?
ಎರಡೂ ಕಾರು ಹೆಚ್ಚಾ ಕಡಿಮೆ ಒಂದೇ ರೀತಿ ಇರುವುದರಿಂದ ಆಯ್ಕೆ ವಿಚಾರದಲ್ಲಿ ಗ್ರಾಹಕನಿಗೆ ಗೊಂದಲ ಮೂಡುವುದು ಸಹಜ. ಆದರೆ ಚಿಕ್ಕಪುಟ್ಟ ಸಂಗತಿಗಳನ್ನೂ ಗಮನಿಸುವ ಗ್ರಾಹಕನಿಗೆ ಅವೆರಡರ ಮಧ್ಯೆ ತನಗೆ ಬೇಕಾದುದನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಿದೆ. ಅಚ್ಚರಿಯ ವಿಚಾರವೆಂದರೆ ಎರಡೂ ಕಾರುಗಳು ಒಂದೇ ರೀತಿಯ ಸಾಮ್ಯತೆ ಹೊಂದಿದ್ದರೂ ಬೆಲೆ ವಿಚಾರದಲ್ಲಿ ಅಜಗಜಾಂತರ. ಟೊಯೋಟಾ ಸಂಸ್ಥೆ ಗ್ಲಾಂಝಾಗೆ ಬೆಲೆನೋಗಿಂತ 73 ಸಾವಿರ ರು. ಕಡಿಮೆ ಮೊತ್ತವನ್ನು ನಿಗದಿಪಡಿಸಿದೆ. ಅಲ್ಲದೇ ಪೆಟ್ರೋಲ್‌ನಲ್ಲಿ 90 ಎಚ್‌ಪಿ ಎಂಜಿನ್ ಆಯ್ಕೆಯೂ ಇದೆ. ಈ ಆಯ್ಕೆ ಡೀಸೆಲ್‌ನಲ್ಲಿ ಲಭ್ಯವಿಲ್ಲ. ಇನ್ನು ಬೆಲೆನೋಗೆ ಮಾರುತಿಯ ಅತ್ಯಧಿಕ ಸರ್ವೀಸ್ ನೆಟ್‌ವರ್ಕ್‌ಗಳು ಶ್ರೀರಕ್ಷೆಯಾಗಿವೆ. ಗ್ರಾಹಕರಿಗೆ ತಮ್ಮ ಅಗತ್ಯಗಳ ಬಗ್ಗೆ ಸ್ಪಷ್ಟತೆ ಇದ್ದಲ್ಲಿ ಎರಡರಲ್ಲಿ ತಮಗೆ ಬೇಕಾದುದನ್ನು ಖರೀದಿಸುವುದು ಇನ್ನೂ ಸುಲಭ.
ತಾಂತ್ರಿಕ ಮಾಹಿತಿ
1197 ಸಿಸಿ ಪೆಟ್ರೋಲ್ ಬಿಎಸ್64 ಸಿಲಿಂಡರ್ ಎಂಜಿನ್
89.7 ಎಚ್‌ಪಿ / 82.7 ಎಚ್‌ಪಿ ಎಂಜಿನ್
113 ಎನ್‌ಎಂಟಾರ್ಕ್
5 ಗಿಯರ್‌ಆಟೋಮ್ಯಾಟಿಕ್, ಮ್ಯಾನುವಲ್
2520 ಎಂಎಂ ವೀಲ್‌ಬೇಸ್
37 ಲೀಟರ್ ಇಂಧನ ಟ್ಯಾಂಕ್
– ಈಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ
Udupi: ಬಿಎಸ್ಸೆನ್ನೆಲ್ ಟವರ್ ನಿರ್ವಹಣೆ ಹೊಣೆ ಪಂಚಾಯತ್ ಹೆಗಲಿಗೆ
Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್ & ಕ್ಲಬ್ ಹೊರಗೆ ಬಾಂ*ಬ್ ಸ್ಪೋ*ಟ
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.