ಹೊಸ ನಿರ್ದೇಶಕರ ಕಥೆಗಳತ್ತ ಪ್ರಿಯಾಮಣಿ ಚಿತ್ತ
Team Udayavani, Jul 1, 2019, 3:05 AM IST
ನಟಿ ಪ್ರಿಯಾಮಣಿ ಮದುವೆ ಬಳಿಕ ಒಪ್ಪಿಕೊಂಡ ಮೊದಲ ಸಿನಿಮಾ “ನನ್ನ ಪ್ರಕಾರ’. ಆ ನಂತರ “ಡಾಕ್ಟರ್ 56′. ಈ ಎರಡೂ ಚಿತ್ರಗಳ ನಿರ್ದೇಶಕರು ಕೂಡಾ ಹೊಸಬರು. ಹಾಗಾದರೆ, ಮದುವೆ ಬಳಿಕ ಪ್ರಿಯಾಮಣಿ, ಹೊಸ ನಿರ್ದೇಶಕರ ಕಥೆಗಳಿಗೆ ಮೊದಲ ಆದ್ಯತೆ ನೀಡುತ್ತಿದ್ದಾರಾ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಈ ಪ್ರಶ್ನೆಗೆ ಹೌದು ಎಂಬ ಉತ್ತರ ಜೊತೆ ಕಥೆ, ಪಾತ್ರವಷ್ಟೇ ಮುಖ್ಯ ಎಂಬ ಉತ್ತರವೂ ಬರುತ್ತದೆ.
“ನಾನು ಮೊದಲಿನಿಂದಲೂ ನೋಡಿಕೊಂಡು ಬಂದಿರೋದು ಕಥೆ ಹಾಗೂ ನನ್ನ ಪಾತ್ರವನ್ನು. ಆ ವಿಚಾರದಲ್ಲಿ ಹೊಸಬರು ಹಳಬರು ಎಂದಿಲ್ಲ. ನನಗೆ ಕಥೆ ಹಾಗೂ ಪಾತ್ರ ಇಷ್ಟವಾದರೆ ಖಂಡಿತಾ ಒಪ್ಪುತ್ತೇನೆ. ಇವತ್ತು ಬರುತ್ತಿರುವ ಹೊಸಬರು ಒಂದಷ್ಟು ಭಿನ್ನವಾಗಿ ಯೋಚನೆ ಮಾಡುತ್ತಿರುವುದು ನಿಜ. ಅದೇ ಕಾರಣದಿಂದ ನಾನು “ನನ್ನ ಪ್ರಕಾರ’ ಹಾಗೂ “ಡಾಕ್ಟರ್ 56′ ಚಿತ್ರಗಳನ್ನು ಒಪ್ಪಿಕೊಂಡಿದ್ದು’ ಎನ್ನುವುದು ಪ್ರಿಯಾಮಣಿ ಮಾತು.
ಪ್ರಿಯಾಮಣಿ ನಟಿಸಿರುವ “ನನ್ನ ಪ್ರಕಾರ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಈ ಚಿತ್ರದಲ್ಲಿ ಪ್ರಿಯಾಮಣಿ ಅಮೃತಾ ಎಂಬ ಡಾಕ್ಟರ್ ಪಾತ್ರ ಮಾಡಿದ್ದಾರೆ. ಇವರಿಗೆ ಜೋಡಿಯಾಗಿ ಕಿಶೋರ್ ನಟಿಸಿದ್ದಾರೆ. ಪ್ರಿಯಾಮಣಿ ಈ ಚಿತ್ರ ಒಪ್ಪಿಕೊಳ್ಳಲು ಕೂಡ ಕಥೆ ಹಾಗೂ ಪಾತ್ರ ಕಾರಣವಂತೆ. “ನಿಮ್ಮನ್ನು ಭೇಟಿಯಾಗಿ ಕಥೆ ಹೇಳಬೇಕೆಂದು ನಿರ್ದೇಶಕರು ಮನೆಗೆ ಬಂದರು.
ಕಥೆ ಕೇಳಿದ ಕೂಡಲೇ ಇದರಲ್ಲಿ ಹೊಸತನವಿದೆ ಎನಿಸಿತು. ಜೊತೆಗೆ ನಾನು ಈ ಮೊದಲು ಯಾವ ಚಿತ್ರದಲ್ಲೂ ಡಾಕ್ಟರ್ ಆಗಿ ನಟಿಸಿಲ್ಲ. ಹಾಗಾಗಿ ನಟಿಸಿದೆ. ಚಿತ್ರದಲ್ಲಿ ಸಾಕಷ್ಟು ಟ್ವಿಸ್ಟ್‌ಗಳಿವೆ. ಕಥೆ ಕೇಳುವಾಗಲೇ ನನಗೆ ಒಂದಷ್ಟು ಸಂದೇಹ ಬಂದು, ನಿರ್ದೇಶಕರಲ್ಲಿ ಕೇಳುತ್ತಾ ಹೋದೆ. ಅದಕ್ಕೆ ಸಮರ್ಪಕ ಉತ್ತರ ಅವರಲ್ಲಿತ್ತು’ ಎಂದು “ನನ್ನ ಪ್ರಕಾರ’ ಸಿನಿಮಾ ಬಗ್ಗೆ ಹೇಳುತ್ತಾರೆ ಪ್ರಿಯಾಮಣಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.