ಉಜಿರೆ: ವಿದ್ಯುತ್ ಸ್ಪರ್ಶಿಸಿ ಯುವ ಉದ್ಯಮಿ ಸಾವು
Team Udayavani, Jul 1, 2019, 11:03 AM IST
ಬೆಳ್ತಂಗಡಿ: ಕಾರು ತೊಳೆಯುವ ಸಂದರ್ಭದಲ್ಲಿ ಸ್ಪ್ರ ಗನ್ನಿಂದ ವಿದ್ಯುತ್ ಪ್ರವಹಿಸಿದ ಪರಿಣಾಮ ಯುವ ಉದ್ಯಮಿ ದಾರುಣವಾಗಿ ಮೃತಪಟ್ಟಿದ್ದಾರೆ.
ಉಜಿರೆ ಕುಂಟಿನಿ ಸಮೀಪದ ಗೋಣಿ ವ್ಯಾಪಾರಿ ಇಬ್ರಾಹಿಂ ಅವರ ಪುತ್ರ ಅಲ್ತಾಫ್ ವಾಫೀರ್ (28) ಮೃತಪಟ್ಟವರು.
ಅವರು ರವಿವಾರ ಸಂಜೆ 6.30ರ ಸುಮಾರಿಗೆ ಕಾರು ತೊಳೆಯಲು ಸ್ಪ್ರೆಗನ್ ಬಳಸಿದ್ದರು. ಬಳಿಕ ಪ್ಲಗ್ ತೆಗೆಯುವ ಸಂದರ್ಭದಲ್ಲಿ ವಿದ್ಯುತ್ ಅಘಾತವಾಗಿದ್ದು, ಸ್ಥಳದಲ್ಲಿದ್ದ ಅಣ್ಣನನ್ನು ಕೂಗಿ ಸ್ವಿಚ್ ತೆಗೆಯುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.
ಆದರೆ ನೀರಿನ ತೇವಾಂಶಕ್ಕೆ ವಿದ್ಯುತ್ ಒಮ್ಮೆಲೆ ಪ್ರವಹಿಸಿದ್ದರಿಂದ ಗಂಭೀರ ಸ್ಥಿತಿಗೆ ತಲುಪಿದ್ದರು. ತತ್ಕ್ಷಣ ಅವರನ್ನು ಬೆನಕ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿಗೆ ತಲುಪುವ ಮೊದಲೇ ಅವರು ಮೃತಪಟ್ಟಿದ್ದರು. ಬಳಿಕ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ರವಾನಿಸಲಾಯಿತು. ಗೋಣಿ ಚೀಲ ತಯಾರಿಯ ವ್ಯಾಪಾರ ಹೊಂದಿದ್ದ ಇವರು ಯುವ ಉದ್ಯಮಿ ಯಾಗಿ, ಉಜಿರೆ ಅಲ್ ಅಮೀನ್ ಯಂಗ್ಮೆನ್ಸ್ ಅಧ್ಯಕ್ಷರಾಗಿ ಗುರುತಿಸಿಕೊಂಡಿದ್ದರು.
ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ… ಚಾಂಪಿಯನ್ ಅಗಿದ್ದು, ಉತ್ತಮ ಕ್ರೀಡಾ ಪಟುವಾಗಿದ್ದರು. ಹೊಸ ಮನೆ ನಿರ್ಮಾಣ ಹಂತದಲ್ಲಿದ್ದು, ಮೂರು ತಿಂಗಳ ಹಿಂದೆ ವಿವಾಹವಾಗಿದ್ದರು. ಇವರು ಪತ್ನಿ, ತಂದೆ, ತಾಯಿ, ಇಬ್ಬರು ಅಣ್ಣಂದಿರು ಹಾಗೂ ಐವರು ಅಕ್ಕಂದಿರನ್ನು ಅಗಲಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Arrested: ಹೊಯ್ಸಳ ಪೊಲೀಸ್ ಮೇಲೆ ಹಲ್ಲೆ; ಬಂಧನ
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.