ಆಶಾವಾದಿಯ ಕನಸು ಆಕಾಶದೆತ್ತರಕ್ಕೆ…
Team Udayavani, Jul 2, 2019, 5:00 AM IST
ಕುವೆಂಪು ವಿ.ವಿಯಲ್ಲಿ ಬಡವಿದ್ಯಾರ್ಥಿಗಳ ಅನುಕೂಲಕ್ಕಾಗಿ “ಗಳಿಕೆ ಮತ್ತು ಕಲಿಕೆ’ ಎಂಬ ನೀತಿಯನ್ನು ಜಾರಿ ಮಾಡಿತ್ತು. ಅಂದರೆ, ವಿದ್ಯಾರ್ಥಿಗಳು ಕಲಿಯುವುದರೊಂದಿಗೆ, ದಿನದಲ್ಲಿ ಒಂದು ಗಂಟೆ ವಿ.ವಿಯ ಕೆಲ ವಿಭಾಗಗಳಲ್ಲಿ ಕೆಲಸ ನಿರ್ವಹಿಸಬೇಕಿತ್ತು.
ಇದಕ್ಕಾಗಿ ಗಂಟೆಗೆ 20ರೂ ನೀಡಲಾಗುತ್ತಿತ್ತು. ಪ್ರತೀ ವಿಭಾಗದಿಂದ ಆರ್ಥಿಕವಾಗಿ ಹಿಂದುಳಿದ ಇಬ್ಬರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿತ್ತು. ಅದೃಷ್ಟವೆಂಬಂತೆ , ನಾನು ಕೂಡ ಆಯ್ಕೆ ಆದೆ. ಹೀಗೆ ಕಾರ್ಯ ನಿರ್ವಹಿಸುವಾಗ ಕ್ಲರ್ಕ್ ಒಬ್ಬರು ಪರಿಚಯವಾದರು. ಅವರದು ತುಂಬಾ ಮುಗಟಛಿ ವ್ಯಕ್ತಿತ್ವ, ಸರಳ ಜೀವಿ. ಮಾತನಾಡುವಾಗ, ತಮ್ಮ ಮಗಳ ಬಗ್ಗೆ ಹೇಳಿಕೊಂಡರು. “ನಾನೊಬ್ಬ ಸಾಮಾನ್ಯ ವ್ಯಕ್ತಿ. ನನಗೆ ಇಬ್ಬರು ಹೆಣ್ಣು ಮಕ್ಕಳು. ಅದರಲ್ಲಿ ಮೊದಲನೆ ಮಗಳು ಐದನೇ ತರಗತಿಯಲ್ಲಿದ್ದಾಳೆ. ತುಂಬಾ ಚೆನ್ನಾಗಿ ಓದುತ್ತಿದ್ದಾಳೆ. ನನಗೆ ಗಂಡು ಮಕ್ಕಳು ಇಲ್ಲ ಎಂಬ ಕೊರಗಾಗಲಿ, ಬೇಸರವಾಗಲಿ ಇಲ್ಲ.
ಏಕೆಂದರೆ ನನ್ನ ಮಗಳನ್ನು ಯಾವ ಗಂಡು ಮಗುವಿಗೂ ಕಮ್ಮಿ ಇಲ್ಲ ಎನ್ನುವಂತೆ ಬೆಳೆಸುತ್ತಿದ್ದೇನೆ. ದೇಶದ ಮಹಾನ್ ನಾಯಕ ಮತ್ತು ನಾಯಕಿಯರ ಸಾಲಿನಲ್ಲಿ ನನ್ನ ಮಗಳ ಹೆಸರಿರಬೇಕು. ಅಂತಹ ಸಾಧನೆ ಮಾಡಿ ಅಪಾರವಾದ ಜನ ಮನ್ನಣೆ ಗಳಿಸಬೇಕು. ಅದರಿಂದ ಬಂದ ಹಣದಲ್ಲಿ ಬಡತನದಿಂದ ನಲುಗುತ್ತಿರುವ ದೀನ ದಲಿತರ ಕಲ್ಯಾಣಕ್ಕಾಗಿ ವಿನಿಯೋಗಿಸಬೇಕು ಅನ್ನೋದು ನನ್ನ ಗುರಿ’ಎನ್ನುತ್ತಾ
ಭಾವುಕರಾದರು.
ಆ ತಂದೆಗೆ. ತನ್ನ ಮಗಳ ಸಾಧನೆಯ ಕನಸನ್ನು ಕಂಡರೂ, ಕೊನೆಗೆ ಬಯಸಿದ್ದು, ಈ ದೇಶದ ಬಡವರ ಹಿತವನ್ನು. ಏಕೆಂದರೆ, ಒಬ್ಬ ಬಡವನ ಕಷ್ಟ, ಇನ್ನೊಬ್ಬ ಬಡವನಿಗೆ ತಾನೆ ಗೊತ್ತಾಗುವುದು?
– ನೇತ್ರಾವತಿ, ಎಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.