ದೂರದರ್ಶಿತ್ವವಿಲ್ಲದ ಕೃತ್ಯಗಳ ದೂರಗಾಮಿ ದುಷ್ಪರಿಣಾಮಗಳು


Team Udayavani, Jul 2, 2019, 5:00 AM IST

18

ಮಳೆ ಕ್ಲಪ್ತ ಕಾಲದಲ್ಲಿ ಬರದಿದ್ದರೆ ಗಂಭೀರ ಪ್ರಾಕೃತಿಕ ಅಸಮತೋಲನ ಮತ್ತು ಆ ಮೂಲಕ ಬಹಳಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಮಳೆ ವ್ಯತ್ಯಯಕ್ಕೆ ನಿಜವಾದ ಕಾರಣಗಳನ್ನು ಅರಿತು ಅದಕ್ಕೆ ಪರಿಹಾರೋಪಾಯಗಳನ್ನು ಅಳವಡಿಸುವ ಬದಲು ಪೂಜೆ, ಹವನ, ಕಪ್ಪೆಗಳ ಮದುವೆ ಇನ್ನೂ ಏನೇನೋ ಮಾಡುವುದು ಎಷ್ಟರಮಟ್ಟಿಗೆ ಸರಿ?

ಮನುಜನಾಗಿ ಹುಟ್ಟಿದ ಪ್ರತಿಯೊಬ್ಬನಲ್ಲೂ ಆಶೆ ಇರುವುದು ಸಹಜ. ಆದರೆ ಅದು ದೂರಗಾಮಿ ದುಷ್ಪರಿಣಾಮ ಬೀರುವ ದುರಾಸೆಯಾದರೆ ಅದರ ಪರಿಣಾಮ ಒಬ್ಬಿಬ್ಬರ ಮೇಲೆ ಮಾತ್ರವಲ್ಲ; ಸಮಸ್ತ ಸಮಾಜದ ಮೇಲೆ ಆಗುತ್ತದೆ.

ಅನಾದಿಕಾಲದಿಂದಲೂ ಪುರುಷ ಪ್ರಧಾನ ಸಮಾಜದ ವ್ಯವಸ್ಥೆಯಲ್ಲಿ ಹೆಣ್ಣು ಶಿಶುವಿನ ಬಗ್ಗೆ ವಿಭಿನ್ನ ದೃಷ್ಟಿಕೋನವಿದೆ. ಹೆಣ್ಣು ಮಕ್ಕಳೆಂದರೆ ಹೆತ್ತವರಿಗೆ ಭಾರ, ಹೆಣ್ಣು ಮಕ್ಕಳನ್ನು ಸಾಕುವುದು, ಮದುವೆಗೆ ಮಾಡುವ ವೆಚ್ಚ ಇವೆಲ್ಲದರ ಕುರಿತಾದ ತಪ್ಪು ಕಲ್ಪನೆಗಳಿಂದ ಹೆಣ್ಣು ಮಗುವೆಂದು ತಿಳಿದರೆ ಗರ್ಭಪಾತ ಮಾಡಿಸುವ, ಅಥವಾ ಹುಟ್ಟಿದ ಮಗುವನ್ನು ಅಮಾನವೀಯವಾಗಿ ಕೊಲ್ಲುವ ಪ್ರಕರಣಗಳು ನಡೆಯುತ್ತಿವೆ. ಇತ್ತೀಚೆಗಂತೂ ಆಧುನಿಕ ತಂತ್ರಜ್ಞಾನ ಗರ್ಭಾವಸ್ಥೆಯಲ್ಲಿ ಹುಟ್ಟುವ ಮಗು ಹೆಣ್ಣೋ ಗಂಡೋ ಎಂಬುದನ್ನು ತಿಳಿಯುವಷ್ಟು ಮುಂದುವರಿದಿದ್ದು, ಕಾನೂನು ಏನೇ ಇರಲಿ, ಹೆಣ್ಣೆಂದು ತಿಳಿದಾಗ ಗುಟ್ಟಾಗಿ ಗರ್ಭಪಾತ ಮಾಡಿಸುವ ದುಷ್ಟ ಪರಂಪರೆಯಿದೆ. ಇದರ ಪರಿಣಾಮವನ್ನು ಈಗಿನ ಯುವ ಜನಾಂಗ ಅನುಭವಿಸುತ್ತಿದೆ. ಮಗು ಹುಟ್ಟುವಾಗ ಗಂಡೇ ಆಗಲಿ ಎಂದು ಹಾರೈಸುವ ಹೆತ್ತವರು ಮಗನಿಗೆ ಮದುವೆ ಮಾಡುವಾಗ ವಯಸ್ಸು ಮೀರುತ್ತಿದ್ದರೂ ಹುಡುಗಿ ಸಿಗದೆ ಪರದಾಡುವಂತಾಗಿದೆ. ಪರೋಕ್ಷವಾಗಿ ಅತ್ಯಾಚಾರದಂತಹ ಅಪರಾಧಗಳು ಹೆಚ್ಚಲು ಕಾರಣವಾಗಿದೆ. ಮಾತ್ರವಲ್ಲ ಮದುವೆಯಾದರೂ ನಡು ವಯಸ್ಸು ಮೀರುವ ಕಾರಣ ಮಕ್ಕಳಾಗದಿರುವ ಅಥವಾ ತೀರಾ ವಿಳಂಬವಾಗಿ ಮಕ್ಕಳಾಗುವ ಪ್ರಕರಣಗಳೂ ಹೆಚ್ಚಾಗುತ್ತಿವೆ. ಜೊತೆಗೆ ಕೌಟುಂಬಿಕ, ಆರ್ಥಿಕ, ಔದ್ಯೋಗಿಕ ಕಾರಣಕ್ಕೆ ಮಕ್ಕಳು ತಡವಾಗುವುದೂ ಮತ್ತೂಂದು ಕಾರಣ.

ಇದು ಒಂದು ಮುಖವಾದರೆ ಇನ್ನೊಂದು ರೀತಿಯಲ್ಲಿ ಇಂತಹ ಅಸಮತೋಲನ ಒಂದು ಧರ್ಮಕ್ಕೆ ಸೀಮಿತವಾಗಿ ಜನಸಂಖ್ಯಾ ಹೆಚ್ಚಳಕ್ಕೂ ಇನ್ನೊಂದು ಧರ್ಮದಲ್ಲಿ ಯುವ ಜನಾಂಗದ ಕೊರತೆಗೂ ಕಾರಣವಾಗಿದೆ. ಒಂದು ಧರ್ಮದಲ್ಲಿ ಮದುವೆ ವಯಸ್ಸು, ಮಕ್ಕಳ ಸಂಖ್ಯೆಯ ಮೇಲೆ ಯಾವುದೇ ಮಿತಿಯಿಲ್ಲದಿರುವುದು, ಇನ್ನೊಂದು ಧರ್ಮದಲ್ಲಿ ವಿವಾಹವೇ ವಿಳಂಬ, ಇದರಿಂದಾಗಿ ಸೀಮಿತ ಸಂಖ್ಯೆಯ ಮಕ್ಕಳು. ಹೀಗಾಗಿ ಸಮಾನ ವಯಸ್ಕರಲ್ಲಿ ಒಂದು ಧರ್ಮದವರು ಅಪ್ಪನಾಗುವಾಗ ಇನ್ನೊಬ್ಬ ತಾತನಾಗುವ ವಿಚಿತ್ರ ಸ್ಥಿತಿಯೂ ಇದೆ. ಈ ಅಂತರ ಪೀಳಿಗೆಯಿಂದ ಪೀಳಿಗೆಗೆ ಮುಂದುವರಿಯುತ್ತಾ ಈಗಾಗಲೇ ಅಗಾಧ ಅಸಮತೋಲನಕ್ಕೂ ಕಾರಣವಾಗಿದೆ.

ವೃಕ್ಷಗಳ ಸಂಹಾರ, ಹೆಚ್ಚುತ್ತಿರುವ ಉಷ್ಣತೆ, ಪಶ್ಚಿಮ ಕರಾವಳಿ ಜಿಲ್ಲೆಗಳು ಪರಶುರಾಮ ಸೃಷ್ಟಿ, ಎಂದಿಗೂ ಬರಗಾಲವಿಲ್ಲ ಎಂಬ ನಂಬಿಕೆ ಹುಸಿ ಮಾಡುವಂತೆ ವರ್ಷದ ಎಂಟು ತಿಂಗಳು ಮಳೆಯಿಲ್ಲದ ಸ್ಥಿತಿ. ರಸ್ತೆ ಅಗಲೀಕರಣ, ಕಾಂಕ್ರೀಟ್ ಕಟ್ಟಡಗಳ ನಿರ್ಮಾಣದ ನೆಪದಲ್ಲಿ ಅಪಾರ ಸಂಖ್ಯೆಯಲ್ಲಿ ಮರಗಳನ್ನು ಕತ್ತರಿಸುವಿಕೆ, ಪರ್ಯಾಯವಾಗಿ ಗಿಡ ಮರಗಳನ್ನು ನೆಡುವುದರತ್ತ ನಿರಾಸಕ್ತಿ; ಇವು ಇಂದಿನ ಗಂಭೀರ ಪ್ರಾಕೃತಿಕ ಅಸಮತೋಲನಕ್ಕೆ ಕಾರಣವಾಗಿವೆ. ಈ ಸಾಲಿಗೆ ಸೇರ್ಪಡೆಯಾದ ಇನ್ನೊಂದು ಪ್ರಮಾದ ಮೋಡ ಬಿತ್ತನೆ. ಅರಣ್ಯ ನಾಶದಿಂದ ಕಡಿಮೆಯಾದ ಮಳೆಯನ್ನು ತಜ್ಞರು ಎಷ್ಟೇ ಆಕ್ಷೇಪಿಸಿದರೂ ಕೃತಕ ವಿಧಾನದಿಂದ ಮಳೆ ತರಿಸುವ ಪ್ರಯತ್ನ ಪರಿಸ್ಥಿತಿಯನ್ನು ಇನ್ನೂ ಹದಗೆಡಿಸುತ್ತಿದೆ. ಇದೆಲ್ಲವೂ ಒಂದೆಡೆಯಾದರೆ ಆಧುನಿಕ ಮಾದರಿಯ ಕೈಗಾರಿಕೆಗಳು, ಕಲ್ಲಿದ್ದಲು, ಅಣುಶಕ್ತಿ ಆಧಾರಿತ ವಿದ್ಯುತ್‌ ಸ್ಥಾವರಗಳಿಗೆ ಅಪಾರ ಪ್ರಮಾಣದ ನೀರಿನ ಅಗತ್ಯವಿದ್ದು ಪರ್ಯಾಯ ಮೂಲಗಳ ವ್ಯವಸ್ಥೆಯಿಲ್ಲದೆ ದೊಡ್ಡ ಪ್ರಮಾಣದಲ್ಲಿ ನೀರನ್ನು ಉಪಯೋಗಿಸಿ ನದಿ ಪಾತ್ರದಲ್ಲಿ, ನೀರಿನ ಅಭಾವ ತಲೆದೋರುವುದು ಸಾಮಾನ್ಯವಾಗಿದೆ. ನೀರಿನ ಅಭಾವದ ಜತೆಗೆ ಏರುತ್ತಿರುವ ತಾಪಮಾನ, ಮಾತ್ರವಲ್ಲದೆ ಬೃಹತ್‌ ಕಾರ್ಖಾನೆಗಳ ಸ್ಥಾಪನೆಯ ಸಂದರ್ಭದಲ್ಲಿ ತ್ಯಾಜ್ಯ ವಿಸರ್ಜನೆಗೂ ಸಮರ್ಪಕ ವ್ಯವಸ್ಥೆ ಇಲ್ಲದಿರುವುದು, ಅನಂತರ ನಿರಂತರ ಸಮಸ್ಯೆ ಇವೆಲ್ಲವೂ ಮನುಷ್ಯನ ಜೀವನವನ್ನು ದಿನದಿಂದ ದಿನಕ್ಕೆ ಅಸಹನೀಯ ಸ್ಥಿತಿಗೆ ದೂಡುತ್ತಿವೆ. ಲಿಂಗಾನುಪಾತ ಮತ್ತು ಪ್ರಾಕೃತಿಕ ಅಸಮತೋಲನ ಮೇಲ್ನೋಟಕ್ಕೆ ಕಾಣುವ, ಮಾನವನ ಸ್ವಯಂಕೃತ ಅಪರಾಧಗಳು. ಆದರೆ ಮೇಲ್ನೋಟಕ್ಕೆ ಕಾಣದಿದ್ದರೂ ಪರೋಕ್ಷವಾಗಿ ಗಂಭೀರ ಪರಿಣಾಮ ಬೀರುವ ಬಹಳಷ್ಟು ವಿಚಾರಗಳಿವೆ.

ಒಂದು ಕಾಲದಲ್ಲಿ ಮಳೆಗಾಲ ಬರುವ ಮೊದಲೇ ಕಪ್ಪೆಗಳ ವಟರ್‌ ವಟರ್‌ ಇಳೆ ತಂಪಾಗಲಿರುವುದರ ಮುನ್ಸೂಚನೆಯಾಗಿರುತ್ತಿತ್ತು. ಆದರೆ ಮನುಷ್ಯನ ದುರಾಸೆ ಕಪ್ಪೆಗಳನ್ನೂ ಬಿಡಲಿಲ್ಲ. ವಿದೇಶಗಳಲ್ಲಿ ಕಪ್ಪೆ ಮಾಂಸಕ್ಕೆ ಇರುವ ಬೇಡಿಕೆ ಕಪ್ಪೆಗಳ ಸಾಮೂಹಿಕ ಸಂಹಾರಕ್ಕೆ ಕಾರಣವಾಯಿತು. ಇಂದು ಸೊಳ್ಳೆಯೇ ಮುಂತಾದ ರೋಗ ಹರಡುವ ಕೀಟ,ಕ್ರಿಮಿಗಳು ಹೆಚ್ಚಲು ಪ್ರಮುಖ ಕಾರಣಗಳಲ್ಲಿ ಕಪ್ಪೆಗಳ ಸಂತತಿ ವಿನಾಶದಂಚಿಗೆ ತಲುಪಿರುವುದೂ ಒಂದಾಗಿದೆ. ಇನ್ನಾದರೂ ಕಪ್ಪೆ ಸಂತತಿ ಉಳಿಸಿ, ಬೆಳೆಸಲು ಜಾಗೃತಿ ಮೂಡಿಸುವ ಕೆಲಸವಾಗಬೇಕು

ಎಷ್ಟೇ ಕಠಿಣ ಕಾನೂನು ತಂದರೂ ಮುಂದಾಗುವ ದುಷ್ಪರಿಣಾಮಗಳ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದೆ ಅವೈಜ್ಞಾನಿಕ ರೀತಿಯಲ್ಲಿ ಕೊಳವೆ ಬಾವಿ ತೋಡುವುದರಿಂದ ಅಂತರ್ಜಲ ಮಟ್ಟ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ.

ಮಳೆ ಕ್ಲಪ್ತ ಕಾಲದಲ್ಲಿ ಬರದಿದ್ದರೆ ಗಂಭೀರ ಪ್ರಾಕೃತಿಕ ಅಸಮತೋಲನ ಮತ್ತು ಆ ಮೂಲಕ ಬಹಳಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಮಳೆ ವ್ಯತ್ಯಯಕ್ಕೆ ನಿಜವಾದ ಕಾರಣಗಳನ್ನು ಅರಿತು ಅದಕ್ಕೆ ಪರಿಹಾರೋಪಾಯಗಳನ್ನು ಅಳವಡಿಸುವ ಬದಲು ಪೂಜೆ, ಹವನ, ಕಪ್ಪೆಗಳ ಮದುವೆ ಇನ್ನೂ ಏನೇನೋ ಮಾಡುವುದು ಎಷ್ಟರಮಟ್ಟಿಗೆ ಸರಿ? ಈ ನಡುವೆ ಮನುಷ್ಯ ಎಷ್ಟು ಸ್ವಾರ್ಥಿ ಆಗುತ್ತಾನೆಂದರೆ, ತಮ್ಮ ಮನೆಯಲ್ಲಿ ಯಾವುದೋ ಸಮಾರಂಭವಿದ್ದು ಅದು ಮುಗಿಯುವ ತನಕ ಮಳೆ ಬರದಿರಲಿ ಎಂದು ಹರಕೆ ಹೊರುವ ಮೂರ್ಖರೂ ಇದ್ದಾರೆ ಈ ಕಾಲದಲ್ಲಿ? ವಾಸ್ತವ ಸ್ಥಿತಿಯನ್ನು ಅರಿತು ಕ್ರಿಯಾತ್ಮಕವಾದ್ದನ್ನೇ ಮಾಡುವ ಮನೋಭಾವ ನಮ್ಮದಾಗಬೇಕು.

ನಮ್ಮ ಮನೆಯ ಕಸವೊಮ್ಮೆ ತೊಲಗಿದರೆ ಸಾಕೆಂಬ ಧೋರಣೆ. ಎಗ್ಗಿಲ್ಲದೇ ಪ್ಲಾಸ್ಟಿಕ್‌ ಉಪಯೋಗ, ಕಸವನ್ನು ಹೆದ್ದಾರಿಯಲ್ಲಿ, ಹೊಳೆಗೆ, ನದಿಗೆ ಎಸೆಯುವ ಪ್ರವೃತ್ತಿ, ಇದರಿಂದ ನೀರಿನ ಹರಿವಿಗೆ ತಡೆ, ದಾರಿಯಲ್ಲಿ ಎಸೆದ ಕಸವನ್ನು ಪ್ರಾಣಿಗಳು ತಿಂದು ಸಾವಿಗೀಡಾಗುವುದು, ತೈಲದ ಜಿಡ್ಡನ್ನು ಕಡಲಿಗೆ ಸುರಿದು ಮತ್ಸ್ಯ ಸಂತತಿ ನಾಶ ಮಾಡುವುದು ಇವೆಲ್ಲವೂ ಮಾನವನ ದುರಾಸೆಯಿಂದ ಸಾಮಾಜಿಕ ಸ್ವಾಸ್ಥ್ಯದ ಮೇಲಾಗುವ ಪರೋಕ್ಷ ದುಷ್ಪರಿಣಾಮಗಳು.

ಮಳೆ ನೀರು ಹರಿದು ಹೋಗಲು ನಿರ್ಮಿಸುವ ಚರಂಡಿಯಲ್ಲಿ ನಾಲ್ಕು ಸುತ್ತಲೂ ಕಾಂಕ್ರೀಟ್ ರಚನೆ ಮಾಡುವ ಪದ್ಧತಿ ಬಹಳಷ್ಟು ಕಡೆ ಇದೆ. ಜತೆಗೆ ಈ ಚರಂಡಿಗೆ ಅಲ್ಲಲ್ಲಿ ಸೇರುವ ಕಸಕಡ್ಡಿ, ಪ್ಲಾಸ್ಟಿಕ್‌ ತ್ಯಾಜ್ಯ, ನೀರಿಂಗಲು ಒಂದಿಷ್ಟೂ ಅವಕಾಶ ಕೊಡದ ಕಾರಣ, ಅತ್ತ ನೀರು ಹರಿದೂ ಹೋಗದೆ, ಇತ್ತ ಭೂಮಿಗೂ ಇಂಗದೆ ಒಟ್ಟಾರೆ ವ್ಯವಸ್ಥೆ ಹದಗೆಡುವ ವಾತಾವರಣ ನಿರ್ಮಾಣವಾಗುತ್ತದೆ.

ಹಿಂದಿನ ಕಾಲದಲ್ಲಿ ಉಪಯೋಗಿಸುವ ಸಾವಯವ ಗೊಬ್ಬರಗಳ ಸ್ಥಾನದಲ್ಲಿ ಬೆಳೆಗಳನ್ನು ಆವರಿಸುವ ಕೀಟಗಳ ಬಾಧೆಯನ್ನು ನಿವಾರಿಸಲು ಬಳಸುವ ಕೀಟನಾಶಕ, ಇಳುವರಿ ಹೆಚ್ಚಿಸಲು ಬಳಸುವ ರಾಸಾಯನಿಕ ಗೊಬ್ಬರಗಳು, ಮೇಲ್ನೋಟಕ್ಕೆ ಪರಿಣಾಮಕಾರಿಯೆಂದು ಕಂಡು ಬಂದರೂ ಅವುಗಳು ಆರೋಗ್ಯಕರ ಫ‌ಸಲನ್ನಂತೂ ನೀಡುವುದಿಲ್ಲ. ಬದಲಾಗಿ ಎಂಡೋಸಲ್ಫಾನ್‌ ನಂತಹ ಜನಜೀವನವನ್ನು ಭಯಾನಕ ಸ್ಥಿತಿಗೆ ತಳ್ಳಿದ ಉದಾಹರಣೆ ನಮ್ಮ ಕಣ್ಣೆದುರೇ ಇದೆ. ಹಣ್ಣುಹಂಪಲುಗಳನ್ನು ತ್ವರಿತವಾಗಿ ಮಾಗುವಂತೆ ಮಾಡುವುದಕ್ಕೂ ರಾಸಾಯನಿಕಗಳನ್ನು ಉಪಯೋಗಿಸುವ ಮನುಷ್ಯನ ಸ್ವಾರ್ಥ ಒಟ್ಟಾರೆ ಮನುಕುಲದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಕಿಂಚಿತ್ತೂ ತಲೆ ಕೆಡಿಸಿಕೊಳ್ಳುವುದಿಲ್ಲ. ಇದಕ್ಕಿಂತ ಹೆಚ್ಚಿನ ದೌರ್ಬಾಗ್ಯ ಬೇಕೇ?

ಒಟ್ಟಿನಲ್ಲಿ ನಾವು ಬದಲಾಗಬೇಕು, ದೇಶವಲ್ಲ. ಒಮ್ಮೆ ನಾವು ಬದಲಾದಾಗ ದೇಶವು ತನ್ನಿಂದ ತಾನೇ ಬದಲಾಗುತ್ತದೆ. ಒಬ್ಬ ನಾಯಕನಿಂದ ಮಾತ್ರ ದೇಶವನ್ನು ಬದಲಾಯಿಸಲು ಸಾಧ್ಯವಿಲ್ಲ. ನಾನು ಮತ್ತು ನಾವು ಬದಲಾಗುವ ಮೂಲಕ ನಮ್ಮ ರಾಷ್ಟ್ರವನ್ನು ಬದಲಾಯಿಸಲು ಸಾಧ್ಯ. ನಮ್ಮ ಮಕ್ಕಳು ಸ್ವಚ್ಛ ಮತ್ತು ಸುರಕ್ಷಿತ ವಾತಾವರಣದಲ್ಲಿ ಬದುಕಬೇಕೆಂದಿದ್ದರೆ ಅದಕ್ಕೆ ನಾವೇ ಅಡಿಪಾಯ ಹಾಕಿಕೊಡಬೇಕು. ಆಗ ಮಾತ್ರ ನಾವೂ ಉಳಿಯಬಹುದು, ದೇಶವೂ ಉಳಿಯಬಹುದು.

ಮೋಹನದಾಸ ಕಿಣಿ, ಕಾಪು

ಟಾಪ್ ನ್ಯೂಸ್

Supreme Court

Sambhal ಮಸೀದಿ ಸಮೀಕ್ಷೆ ವಿರುದ್ಧ ಸುಪ್ರೀಂಗೆ ಮೊರೆ

1-tttttt

ICC ಇಂದು ಸಭೆ: ಚಾಂಪಿಯನ್ಸ್‌  ಟ್ರೋಫಿ; ಹೈಬ್ರಿಡ್‌ ಮಾದರಿಗೆ ಮತದಾನ?

1-reet

Maharashtra; ಚುನಾವಣೆ ಸೋಲಿನ ಬೆನ್ನಲ್ಲೇ ಮಹಾವಿಕಾಸ ಅಘಾಡಿಯಲ್ಲಿ ಬಿರುಕು?

1-aaa

Bangladesh ಹಿಂಸಾಚಾರ: ಕೋಲ್ಕತಾ ಹಿಂದೂ ಸಂಘಟನೆಗಳ ಭಾರೀ ಪ್ರತಿಭಟನೆ

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರವಿದ್ದಾಗ ಈ ರಾಜ್ಯಪಾಲರುಗಳು‎ ತುಂಬಾ ಆತಂತ್ರ ಸ್ಥಿತಿ

ಮುಡಾ: ಸಿದ್ದು ವಿರುದ್ಧ ರಾಜ್ಯಪಾಲರ prosecution ಅನುಮತಿ ಸಿಎಂ ಸ್ಥಾನಕ್ಕೆ ಮುಳುವಾಗಬಹುದೇ?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Supreme Court

Sambhal ಮಸೀದಿ ಸಮೀಕ್ಷೆ ವಿರುದ್ಧ ಸುಪ್ರೀಂಗೆ ಮೊರೆ

1-tttttt

ICC ಇಂದು ಸಭೆ: ಚಾಂಪಿಯನ್ಸ್‌  ಟ್ರೋಫಿ; ಹೈಬ್ರಿಡ್‌ ಮಾದರಿಗೆ ಮತದಾನ?

1-reet

Maharashtra; ಚುನಾವಣೆ ಸೋಲಿನ ಬೆನ್ನಲ್ಲೇ ಮಹಾವಿಕಾಸ ಅಘಾಡಿಯಲ್ಲಿ ಬಿರುಕು?

Court-1

Puttur: ಮಹಿಳೆಗೆ ಬೈಕ್‌ ಢಿಕ್ಕಿ; ಸವಾರನಿಗೆ ಶಿಕ್ಷೆ

1-SL

Test; ದಕ್ಷಿಣ ಆಫ್ರಿಕಾ ಎದುರು ನಿಕೃಷ್ಟ ಮೊತ್ತಕ್ಕೆ ಶ್ರೀಲಂಕಾ ಆಲೌಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.