ಕೋಟೇಶ್ವರ: ಬಗೆಹರಿಯದ ತ್ಯಾಜ್ಯ ವಿಲೇವಾರಿ ಸಮಸ್ಯೆ
ಕಗ್ಗಂಟಾದ ಸಮಸ್ಯೆಯಿಂದ ಸಾಂಕ್ರಾಮಿಕ ರೋಗ ಭೀತಿ
Team Udayavani, Jul 2, 2019, 5:50 AM IST
ಕೋಟೇಶ್ವರ: ಸ್ವಚ್ಛ ಗ್ರಾಮ ಪರಿಕಲ್ಪನೆಯನ್ನು ಸಾಕಾರಗೊಳಿಸುವುದರ ಮೂಲಕ ಸ್ವಸ್ಥ ಸಮಾಜ ನಿರ್ಮಾಣದ ಹೊಣೆ ಹೊತ್ತಿರುವ ಕೋಟೇಶ್ವರ ಗ್ರಾ.ಪಂ.ಗೆ ನಗರದಲ್ಲಿ ನಿರಂತರ ಎಸೆಯಲಾಗುತ್ತಿರುವ ಮೂಟೆ ಮೂಟೆ ತ್ಯಾಜ್ಯ ವಿಲೇವಾರಿ ಕಾರ್ಯ ಸವಾಲಾಗಿದೆ.
ಅನೇಕ ಉಪ ಗ್ರಾಮಗಳನ್ನು ಹೊಂದಿರುವ ದೊಡ್ಡ ಗ್ರಾಮ ಪಂಚಾಯತ್ ಆಗಿರುವ ಕೋಟೇಶ್ವರ ಗ್ರಾ.ಪಂ.ಗೆ ಸದ್ಯ ತ್ಯಾಜ್ಯ ವಿಲೇವಾರಿ ಮಾಡುವುದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಳ್ಳುವುದಕ್ಕೆ ಸರಕಾರಿ ಜಾಗದ ಕೊರತೆ ಎದುರಾಗಿದೆ.
ಈ ಸಮಸ್ಯೆಯನ್ನು ನಿಭಾಯಿಸುವಲ್ಲಿ ಸಹಕರಿಸುವಂತೆ ಕುಂದಾಪುರ ಪುರಸಭೆಗೆ ಕೋರಲಾಗಿದ್ದರೂ ಅಲ್ಲಿಂದ ಸಕಾರಾತ್ಮಕ ಉತ್ತರ ಬಾರದಿರುವುದು ಸಮಸ್ಯೆ ಬಿಗಡಾಯಿಸುವಂತೆ ಮಾಡಿದೆ.
ಸಾಂಕ್ರಾಮಿಕ ರೋಗ ಭೀತಿ
ಮಳೆಗಾಲ ಆರಂಭದಲ್ಲಿ ಇಲ್ಲಿನ ಸರ್ವೀಸ್ ರಸ್ತೆ ಸಹಿತ ರಾ.ಹೆದ್ದಾರಿಯ ಹಿಂದು ರುದ್ರ ಭೂಮಿಗೆ ಸಾಗುವ ಪಕ್ಕದಲ್ಲಿ ಎಸೆಯಲಾಗಿರುವ ಮೂಟೆ ಮೂಟೆ ತ್ಯಾಜ್ಯಗಳು ಮಳೆ ನೀರಿನಿಂದಾಗಿ ಅಲ್ಲೇ ಕೊಳೆತು ಡೆಂಗ್ಯೂ, ಮಲೇರಿಯಾ, ಟೈಫಾೖಡ್ ಇನ್ನಿತರ ಸಾಂಕ್ರಾಮಿಕ ರೋಗ ಹರಡಿಸುವ ಸೊಳ್ಳೆಗಳ ಉಗಮಸ್ಥಾನವಾಗಿ ಬದಲಾಗುತ್ತಿದೆ. ಬಸ್ಸಿಗಾಗಿ ಅಲ್ಲೇ ಪಕ್ಕದಲ್ಲಿ ಕಾಯುವ ಪ್ರಯಾಣಿಕರಿಗೆ ಹಬ್ಬಿರುವ ದುರ್ನಾತ ಹಾಗೂ ಕೊಳಚೆಯಿಂದಾಗಿ ಭಯದ ವಾತವರಣದಲ್ಲಿ ಸಾಗಬೇಕಾಗಿದೆ.
ವಿಲೇವಾರಿ ಮಾಡಿದರೂ ಮತ್ತೆ ಪ್ರತ್ಯಕ್ಷ
ಕ್ಲೀನ್ ಕುಂದಾಪುರ ಸಂಘಟನೆ ಸಹಿತ ಗ್ರಾ.ಪಂ. ಅನೇಕ ಬಾರಿ ತ್ಯಾಜ್ಯ ವಿಲೇವಾರಿಗೊಳಿಸಿದ್ದರೂ ಆಹಾರ ಪದಾರ್ಥ ಸಹಿತ ಇನ್ನಿತರ ವಸ್ತುಗಳ ಮೂಟೆ ಅದೇ ಜಾಗದಲ್ಲಿ ಮತ್ತೆ ಪ್ರತ್ಯಕ್ಷ ವಾಗುತ್ತಿರುವುದು ಶುಚಿತ್ವಕ್ಕೆ ಮಹತ್ವ ನೀಡುತ್ತಿರುವವರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಇದೆ.
ಆರೋಗ್ಯ ಇಲಾಖೆ ಜಾಗ್ರತೆ ವಹಿಸಲಿ
ಎದುರಾದ ತ್ಯಾಜ್ಯ ವಿಲೇವಾರಿ ಸಮಸ್ಯೆಯಿಂದಾಗಿ ಸಾಂಕ್ರಾಮಿಕ ರೋಗ ಭೀತಿ ಇರುವ ಇಲ್ಲಿನ ಪ್ರದೇಶಗಳಲ್ಲಿ ರೋಗ ನಿರೋಧಕ ಔಷಧವನ್ನು ಸಿಂಪಡಿಸುವುದರೊಡನೆ ಸ್ವಚ್ಛತೆಯ ಬಗ್ಗೆ ಜಾಗ್ರತಿ ಮೂಡಿಸಲು ಬ್ಯಾನರ್ ಹಾಗೂ ಕಾರ್ಯಾಗಾರಗಳನ್ನು ನಡೆಸುವುದು ಸೂಕ್ತ.
ಇಲ್ಲದಿದ್ದಲ್ಲಿ ಈ ಹಿಂದೆ ಇದೇ ಪ್ರದೇಶದಲ್ಲಿ ಉತ್ತರ ಕನ್ನಡ ಮಂದಿಗೆ ಎದುರಾದ ಮಲೇರಿಯಾ ಹಾಗೂ ಟೈಫಾೖಡ್ ಜ್ವರ ಬಾಧೆ ಮತ್ತೆ ಉಲ್ಬಣಿಸಿವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಆದ್ದರಿಂದ ಆರೋಗ್ಯ ಇಲಾಖೆ ಈ ಬಗ್ಗೆ ಮುಂಜಾಗ್ರತೆ ವಹಿಸಬೇಕಾಗಿದೆ ಎಂಬುದು ಗ್ರಾಮಸ್ಥರ ಅಭಿಪ್ರಾಯ.
-ಶಾಂತ,
ಅಧ್ಯಕ್ಷರು ಕೋಟೇಶ್ವರ ಗ್ರಾ.ಪಂ
-ತೇಜಪ್ಪ ಕುಲಾಲ್,
ಪಿ.ಡಿ.ಒ. ಕೋಟೇಶ್ವರ ಗ್ರಾ.ಪಂ.
-ಡಾ| ಸುಧಾಕರ ನಂಬಿಯಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.