ಜರುವತ್ತು ರಸ್ತೆ ಬದಿ ತ್ಯಾಜ್ಯ ರಾಶಿ; ರೋಗ ಭೀತಿ
ತ್ಯಾಜ್ಯ ಎಸೆಯುವವರ ವಿರುದ್ಧ ಪಂಚಾಯತ್‌ಗಳಿಂದ ಕಠಿನ ಕ್ರಮದ ಎಚ್ಚರಿಕೆ
Team Udayavani, Jul 2, 2019, 5:27 AM IST
ಹೆಬ್ರಿ: ಕಾರ್ಕಳದಿಂದ ಹೆಬ್ರಿ ಮಾರ್ಗದ ಜರುವತ್ತು ಬಳಿ ಎಲ್ಲೆಂದರಲ್ಲಿ ತ್ಯಾಜ್ಯಗಳನ್ನು ಎಸೆಯ ಲಾಗಿದ್ದು, ಮಳೆಗಾಲದಲ್ಲಿ ಇವುಗಳು ಕೊಳೆತು ಸಾಂಕ್ರಾಮಿಕ ರೋಗಭೀತಿ ಕಾಡಿದೆ.
ಹೆಬ್ರಿ ಗ್ರಾ.ಪಂ. ವ್ಯಾಪ್ತಿಯ ಜರುವತ್ತು ಹೊಳೆಗೆ ಕೋಳಿ ತ್ಯಾಜ್ಯವನ್ನು ತಂದು ಹಾಕಲಾಗುತ್ತಿದ್ದು ನೀರು ಕಲುಷಿತಗೊಳ್ಳುತ್ತಿದೆ. ಮುದ್ರಾಡಿ ಗ್ರಾ.ಪಂ. ವ್ಯಾಪ್ತಿಯ ಹಿಂದೂ ರುದ್ರಭೂಮಿ ಸಮೀಪ ಎಸೆದ ಕಸದ ರಾಶಿಯಲ್ಲಿ ಕೊಳೆತ ತ್ಯಾಜ್ಯಗಳು, ಪ್ಲಾಸ್ಟಿಕ್, ಬಾಟಲಿಗಳಿದ್ದು, ಇವುಗಳನ್ನು ತಿಂದು ಹಸುಗಳು ಸಾವನ್ನಪ್ಪಿದ ಘಟನೆಗಳಿವೆ.
ಮಳೆಗಾಲವಾದ್ದರಿಂದ ತ್ಯಾಜ್ಯಗಳು ಸೊಳ್ಳೆ ಉತ್ಪಾದನಾ ಕೇಂದ್ರಗಳಾಗಿದ್ದು, ಪರಿಸರದಲ್ಲಿ ದುರ್ನಾತ, ಸೊಳ್ಳೆ ಕಾಟ ಹೆಚ್ಚಿದೆ. ಜತೆಗೆ ರೋಗಭೀತಿಯೂ ಕಾಣಿಸಿಕೊಂಡಿದೆ. ತ್ಯಾಜ್ಯಗಳು ನೀರಿಗೂ ಸೇರಿ ಕಲುಷಿತಗೊಳ್ಳುತ್ತಿದೆ.
ಜರುವತ್ತು ಸೇತುವೆ ಮುಂದೆ ಎಡಭಾಗದಲ್ಲಿ ಸ್ವಚ್ಛತೆ ಕಾಪಾಡಿ ಎಂಬ ನಾಮ ಫಲಕವನ್ನು ಹಾಕಲಾಗಿದ್ದರೂ ಅದರ ಬುಡದಲ್ಲೇ ಕಸದ ರಾಶಿ ಇದೆ. ಇಲ್ಲಿ ದುರ್ನಾತ ಹಬ್ಬಿದ್ದು ಕೂಡಲೇ ಆಡಳಿತ ತ್ಯಾಜ್ಯ ವಿಲೇವಾರಿ ಮಾಡುವಂತೆ, ತಪ್ಪಿದಲ್ಲಿ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಹೇಳಿದ್ದಾರೆ. ಸ್ವಚ್ಛತೆ ಬಗ್ಗೆ ಸಾಕಷ್ಟು ಆಂದೋಲನಗಳಾಗುತ್ತಿದ್ದರೂ ಕಸ ಹಾಕುವುದು ಎಗ್ಗಿಲ್ಲದೆ ನಡೆದಿರುವುದು ಬೇಸರದ ಸಂಗತಿ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಪೈ.
-ಎಚ್.ಕೆ. ಸುಧಾಕರ್, ಅಧ್ಯಕ್ಷರು, ಹೆಬ್ರಿ ಗ್ರಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.