ಹದಗೆಟ್ಟ ಕರಿಯಕಲ್ಲು -ಸೂರಾಲು ಸಂಪರ್ಕ ರಸ್ತೆ
Team Udayavani, Jul 2, 2019, 5:38 AM IST
ಕಾರ್ಕಳ: ಮಿಯ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸೂರಾಲು ರಸ್ತೆ ತೀರಾ ಹದಗೆಟ್ಟು ಸಂಚಾರಕ್ಕೆ ದುಸ್ತರವಾಗಿದೆ. ಕರಿಯಕಲ್ಲುವಿನಿಂದ ಸೂರಾಲು ಸಂಪರ್ಕಿಸುವ ಸುಮಾರು 3 ಕಿ.ಮೀ. ಜಿ.ಪಂ. ರಸ್ತೆ ಹೊಂಡಗುಂಡಿಗಳಿಂದ ತುಂಬಿದೆ.
ಸೂರಾಲು ಗುಂಡಾಜೆ ಶಾಲೆ, ಅಂಗನವಾಡಿ ಕೇಂದ್ರ ಸಂಪರ್ಕಿಸಲು ಇದೇ ಮಾರ್ಗವನ್ನು ಅಲವಂಬಿಸಬೇಕಿದೆ. ಮಿಯ್ನಾರು ಹಾಗೂ ಸಾಣೂರು ಗ್ರಾಮದ ಸುಮಾರು 250 ಮನೆಗಳು ಈ ಭಾಗದಲ್ಲಿದ್ದು, ರಸ್ತೆ ಹದಗೆಟ್ಟ ಕಾರಣ ಸಂಚಾರಕ್ಕೆ ತ್ರಾಸಪಡುವಂತಾಗಿದೆ. ಗೇರುಬೀಜ ಕಾರ್ಖಾನೆ, ವಾಟರ್ ಪಾರ್ಕ್ ಇದೇ ಪರಿಸರದಲ್ಲಿರುವ ಕಾರಣ ನಿತ್ಯ ನೂರಾರು ಮಂದಿ ಕಾರ್ಮಿಕರು, ಪ್ರವಾಸಿಗರು ಈ ರಸ್ತೆಯ ಮೂಲಕವೇ ಸಾಗುತ್ತಾರೆ.
ಮನವಿಗೆ ಸ್ಪಂದನೆಯಿಲ್ಲ
ರಸ್ತೆ ಅಭಿವೃದ್ಧಿಪಡಿಸುವಂತೆ ಸ್ಥಳೀಯರು ಗ್ರಾಮ ಪಂಚಾಯತ್, ಶಾಸಕರು, ಸಚಿವರಿಗೆ ಮನವಿ ನೀಡಿದ್ದಾರೆ. ಆದರೂ ರಸ್ತೆ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆಗೊಂಡಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.
ರಸ್ತೆ ಮೇಲ್ದರ್ಜೆಗೆ ?
ಕರಿಯಕಲ್ಲು -ಸೂರಾಲು ರಸ್ತೆಯನ್ನು ಲೋಕೋಪಯೋಗಿ ರಸ್ತೆಯನ್ನಾಗಿ ಮೇಲ್ದೆರ್ಜೆಗೇರಿಸುವ ನಿಟ್ಟಿನಲ್ಲಿ ಒಂದೂವರೆ ವರ್ಷಗಳ ಹಿಂದೆ ಪಿಡಬ್ಲ್ಯುಡಿ ಕೇಂದ್ರ ಕಚೇರಿಗೆ ಪ್ರಸ್ತಾವನೆ ಕಳಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಸೋಮಶೇಖರ್ ಹೇಳಿದ್ದಾರೆ.
ಸೂರಾಲುವಿನಿಂದ ಇದೇ ರಸ್ತೆಯಲ್ಲಿ ಮುಂದೆ ಸಾಗಿದಲ್ಲಿ ಇರ್ವತ್ತೂರು ಸಂಪರ್ಕಿಸುತ್ತದೆ. ಕೇವಲ 5 ಕಿ.ಮೀ. ಸಾಗಿದರೆ ಇರ್ವತ್ತೂರು ತಲುಪುವುದಾದರೂ ಈಗಿರುವ ರಸ್ತೆ ಸಂಚಾರಕ್ಕೆ ಯೋಗ್ಯವಾಗಿಲ್ಲ. ಈ ರಸ್ತೆಯನ್ನು ಅಭಿವೃದ್ಧಿಗೊಳಿಸಬೇಕು ಎನ್ನುವ ಬೇಡಿಕೆಯೂ ಸಾರ್ವಜನಿಕರದ್ದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.