ಜಮೀನು ದಾಖಲೆಗಳಿಗಾಗಿ ಮಾಜಿ ಯೋಧನ ಧರಣಿ
Team Udayavani, Jul 2, 2019, 2:02 PM IST
ದಾವಣಗೆರೆ: ಜಮೀನು ಸಾಗುವಳಿಪತ್ರ ಹಾಗೂ ಅಗತ್ಯ ದಾಖಲೆ ನೀಡಬೇಕು ಎಂದು ಒತ್ತಾಯಿಸಿ ಕೇಂದ್ರ ಅರೆ ಸೇನಾಪಡೆ ಮಾಜಿ ಯೋಧ, ಜಗಳೂರು ತಾಲೂಕು ಭರಮಸಮುದ್ರದ ಬಿ.ಎನ್. ಪ್ರಹ್ಲಾದರೆಡ್ಡಿ ಸೋಮವಾರ ಡಿಸಿ ಕಚೇರಿ ಮುಂಭಾಗ ಧರಣಿ ನಡೆಸಿದರು.
1990 ರಿಂದ 2011ರವರೆಗೆ ಕೇಂದ್ರ ಅರೆ ಸೇನಾಪಡೆಯಲ್ಲಿ ಸೇವೆ ಸಲ್ಲಿಸಿರುವ ತಮಗೆ ಭರಮ ಸಮುದ್ರ ಗ್ರಾಮದ ಸರ್ವೇ ನಂಬರ್ 24ರ ಸರ್ಕಾರಿ ಸೇಂದಿವನದಲ್ಲಿ 4 ಎಕರೆ 5 ಗುಂಟೆ ಜಮೀನು ಸರ್ವೇ ಮಾಡಿ ಕೊಡಲಾಗಿದೆ. ಆದರೆ, ಯಾವುದೇ ದಾಖಲೆ ನೀಡಿಲ್ಲ ಎಂದು ಪ್ರಹ್ಲಾದರೆಡ್ಡಿ ದೂರಿದರು.
1990ರಿಂದ ಕೇಂದ್ರ ಅರೆ ಸೇನಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗಲೇ ಜಮೀನಿಗೆ ಅರ್ಜಿ ಸಲ್ಲಿಸುತ್ತಾ ಬಂದಿದ್ದು, 2011ರಲ್ಲಿ ಸ್ವಯಂ ನಿವೃತ್ತಿ ಪಡೆದ ನಂತರ ಸಾಕಷ್ಟು ಪ್ರಯತ್ನದ ನಂತರ ಗ್ರಾಮದ ಸರ್ವೇ ನಂ. 24ರ ಸರ್ಕಾರಿ ಸೇಂದಿವನದಲ್ಲಿ 4 ಎಕರೆ 5 ಗುಂಟೆ ಜಮೀನು ಕೊಡಲಾಗಿದೆ. ಆದರೆ, ಸಾಗುವಳಿ ಪತ್ರ ಇತರೆ ಅಗತ್ಯ ದಾಖಲೆ ಮಾತ್ರ ಈವರೆಗೆ ನೀಡಿಲ್ಲ ಎಂದರು.
2019ರ ನ್ಯಾಯಾಲಯದ ಆದೇಶದ ಪ್ರಕಾರ ಸೈನಿಕರಿಗೆ ರಾಜ್ಯದ ಯಾವುದೇ ಭಾಗದಲ್ಲೇ ಆಗಲಿ 6 ತಿಂಗಳಲ್ಲೇ ಜಮೀನು, ನಿವೇಶನ ನೀಡಬೇಕು. ನನಗೆ ಜಮೀನು ನೀಡಲು ಸಮಸ್ಯೆ ಇಲ್ಲ. ನಮ್ಮ ಊರಿನ ಪಕ್ಕದಲ್ಲೇ ಕೇಳಿದ್ದೇನೆ. ಸರ್ವೇ ಮಾಡಿಕೊಟ್ಟರೂ ದಾಖಲೆ ಕೊಡುತ್ತಿಲ್ಲ ಯಾಕೆ ಎಂಬುದೇ ಅರ್ಥವಾಗುತ್ತಿಲ್ಲ. ನಾನೊಬ್ಬ ಸೈನಿಕ. ಕಾನೂನು ಉಲ್ಲಂಘಿಸಿ, ಜಮೀನಿನಲ್ಲಿ ಉಳುಮೆ ಮಾಡುವುದಿಲ್ಲ. ಜಮೀನು ಪಡೆಯುವುದು ನನ್ನ ಹಕ್ಕು. ನಮ್ಮ ಹೋ ರಾಟ ಮಾಡುತ್ತೇನೆ ಎಂದು ತಿಳಿಸಿದರು.
ಸಾಗುವಳಿ ಪತ್ರ, ಇತರೆ ಅಗತ್ಯ ದಾಖಲೆ ಕುರಿತಂತೆ ರಾಷ್ಟ್ರಪತಿಗಳು, ಪ್ರಧಾನಮಂತ್ರಿ, ರಕ್ಷಣಾ ಸಚಿವರು, ಮುಖ್ಯಮಂತ್ರಿ, ಜಿಲ್ಲಾಧಿಕಾರಿ ಒಳಗೊಂಡಂತೆ ಎಲ್ಲರ ಗಮನಕ್ಕೆ ತರಲಾಗಿದೆ. ಕೊಡುತ್ತೇವೆ… ಎಂದೇ ಹೇಳಲಾಗುತ್ತದೆ. ಆದರೆ, 16 ವರ್ಷದಿಂದ ಕೊಟ್ಟಿಲ್ಲ. ಹಾಗಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟ ನಡೆಸುತ್ತಿದ್ದೇನೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Waqf Protest: ರೇಣುಕಾಚಾರ್ಯ, ಗಾಯಿತ್ರಿ ಸಿದ್ದೇಶ್ವರ ಸೇರಿ ಹಲವರು ಪೊಲೀಸ್ ವಶಕ್ಕೆ
Waqf Property: “ವಕ್ಫ್ ಆಸ್ತಿ ಕಬಳಿಕೆ ವಿರುದ್ಧ ಸಿಎಂ ಸಿಬಿಐ, ಎಸ್‌ಐಟಿ ತನಿಖೆ ಮಾಡಿಸಲಿ”
Waqf issue: ವಕ್ಫ್ ಬೋರ್ಡ್ ರದ್ದತಿಗೆ ಪತ್ರ ಚಳವಳಿ ನಡೆಸಬೇಕು: ಎಂ.ಪಿ.ರೇಣುಕಾಚಾರ್ಯ ಆಗ್ರಹ
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.