ಕೆರ್ವಾಶೆ: ಅಭಿವೃದ್ಧಿಗೊಳ್ಳದ ಬಂಗ್ಲೆಗುಡ್ಡೆ -ಶೆಟ್ಟಿಬೆಟ್ಟು ರಸ್ತೆ
Team Udayavani, Jul 3, 2019, 5:07 AM IST
ಅಜೆಕಾರು: ಕೆರ್ವಾಶೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲೊಂದಾದ ಬಂಗ್ಲೆಗುಡ್ಡೆ ಶೆಟ್ಟಿಬೆಟ್ಟು ರಸ್ತೆ ಹೊಂಡ ಗುಂಡಿಗಳಿಂದ ಆವೃತವಾಗಿ ಸಂಚಾರ ನಡೆಸುವುದೇ ಅಸಾಧ್ಯವಾಗಿದೆ.
ದೊಡ್ಡ ಹೊಂಡಗಳು
ಸುಮಾರು 3 ಕಿ.ಮೀ ಯಷ್ಟು ಉದ್ದವಿರುವ ಈ ರಸ್ತೆಯ ಒಂದು ಕಿ.ಮೀ ಭಾಗಕ್ಕೆ ಸುಮಾರು 6 ವರ್ಷಗಳ ಹಿಂದೆ ಡಾಮರು ಹಾಕಲಾಗಿತ್ತು, ಉಳಿದ 2 ಕಿ.ಮೀ ರಸ್ತೆ ಮಣ್ಣಿನ ರಸ್ತೆಯಾಗಿಯೇ ಉಳಿದಿದ್ದು ಈ ವರೆಗೆ ಅಭಿವೃದ್ಧಿ ಕಂಡಿಲ್ಲ. ಡಾಮರು ಹಾಕಿದ ರಸ್ತೆಯ ಭಾಗವು ಸಹ ಸಂಪೂರ್ಣ ಹದಗೆಟ್ಟಿದ್ದು, ರಸ್ತೆ ಉದ್ದಕ್ಕೂ ಬೃಹತ್ ಹೊಂಡಗಳು ನಿರ್ಮಾಣವಾಗಿ ಜಲ್ಲಿ ಕಲ್ಲಿನ ರಾಶಿ ರಸ್ತೆಯಲ್ಲಿಯೇ ಇದೆ. ಅಭಿವೃದ್ಧಿ ಕಾಣದ 2 ಕಿ.ಮೀ ರಸ್ತೆಯಲ್ಲಿ ಬೃಹತ್ ಹೊಂಡಗಳ ಜತೆಗೆ, ರಸ್ತೆ ಮಧ್ಯದಲ್ಲಿಯೇ ಮಳೆ ನೀರು ಹರಿದು ತೋಡಿನಂತಾಗಿದೆ.
ನಿವಾಸಿಗಳಿಗೆ ಸಮಸ್ಯೆ
ಈ ಭಾಗದಲ್ಲಿ ಸುಮಾರು 200ರಷ್ಟು ಮನೆಗಳಿದ್ದು, ಈ ರಸ್ತೆ ಮೂಲಕವೇ ನಿತ್ಯ ಸಂಚಾರ ನಡೆಸಬೇಕಾಗಿದೆ. ರಸ್ತೆಯಲ್ಲಿ ಯಾವುದೇ ವಾಹನ ಸಂಚರಿಸುವುದು ದುಸ್ತರವಾಗಿದ್ದು, ಸ್ಥಳೀಯರು ಕೆರ್ವಾಶೆ ಪೇಟೆ ಹಾಗೂ ಇತರ ಕಡೆಗಳಿಗೆ ಸಂಚರಿಸಬೇಕಾದರೆ ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿ ಇದೆ. ಈ ಭಾಗದಲ್ಲಿ ಬರುವ ಹುರಿಕುಂಬ್ರಿ ಸೇರಿದಂತೆ ಬಹುತೇಕ ಭಾಗಗಳ ಜನತೆ ಕೃಷಿಯನ್ನೇ ಅವಲಂಬಿಸಿದ್ದು, ಬೆಳೆದ ಬೆಳೆ ಮಾರುಕಟ್ಟೆಗೆ ಸಾಗಾಟ ಮಾಡಲು ರಸ್ತೆ ಸೂಕ್ತವಾಗಿಲ್ಲದೆ ಪರದಾಡಬೇಕಾಗಿದೆ.
ಸಂಪರ್ಕ ರಸ್ತೆ
ಈ ರಸ್ತೆಯು ಕೊಲ್ಲೂರು ಹೆಬ್ರಿಯಾಗಿ ಬರುವ ಪ್ರಯಾಣಿಕರಿಗೆ ಧರ್ಮಸ್ಥಳ, ಶೃಂಗೇರಿ, ಕುದುರೆಮುಖ ಪ್ರದೇಶಗಳಿಗೆ ಸಂಚರಿಸಲು ಹತ್ತಿರದ ಕೂಡು ರಸ್ತೆಯಾಗಿದ್ದು, ರಸ್ತೆ ನಿರ್ಮಾಣವಾದಲ್ಲಿ ಬಂಗ್ಲೆಗುಡ್ಡೆ ಶೆಟ್ಟಿಬೆಟ್ಟು ಪ್ರದೇಶವು ಅಭಿವೃದ್ಧಿಗೊಳ್ಳಲಿದೆ.
ರಸ್ತೆಯಲ್ಲಿ ಹರಿಯುವ ಮಳೆ ನೀರು
ಮಣ್ಣಿನ ರಸ್ತೆಯ ಇಕ್ಕೆಲಗಳನ್ನೂ ನೀರು ಹರಿಯಲು ಸೂಕ್ತ ವ್ಯವಸ್ಥೆಯಿಲ್ಲ. ಇದರಿಂದ ನೀರು ರಸ್ತೆಯಲ್ಲೇ ಹರಿದು ಸಮಸ್ಯೆಯಾಗಿದೆ. ಜತೆಗೆ ರಸ್ತೆಯಲ್ಲಿರುವ ಹೊಂಡ ಬೃಹದಾಕಾರವಾಗುತ್ತಿದೆ.
ತುಂಬಿ ಹೋದ ಗಿಡ ಗಂಟಿಗಳು
ರಸ್ತೆ ಉದ್ದಕ್ಕೂ ಬೃಹತ್ ಗಾತ್ರದ ಮರಗಳ ಕೊಂಬೆಗಳು ಚಾಚಿದ್ದು, ಗಿಡಗಂಟಿ ತುಂಬಿದೆ. ಹಲವು ವರ್ಷಗಳಿಂದ ರಸ್ತೆ ನಿರ್ವಹಣೆ ಆಗುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ದಶಕಗಳಿಂದ ಮನವಿ ಮಾಡುತ್ತಾ ಬಂದಿದ್ದರೂ ರಸ್ತೆಯನ್ನು ಅಭಿವೃದ್ಧಿಪಡಿಸದೇ ಇರುವುದು ಸ್ಥಳೀಯರಲ್ಲಿ ನಿರಾಸೆ ಮೂಡಿಸಿದೆ.
ರಸ್ತೆ ಕಾಮಗಾರಿ ನಡೆಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.