ಕುಸಿದ ಬಾವಿ: ಪುನರ್‌ರಚನೆಗೆ ಜಿಲ್ಲಾಧಿಕಾರಿಗಳಿಗೆ ಮನವಿ
Team Udayavani, Jul 3, 2019, 5:07 AM IST
ಹೆಬ್ರಿ: ಸುಮಾರು 150 ವರ್ಷಗಳಿಂದ ಜನರಿಗೆ ನೀರಿನ ಸಂಪನ್ಮೂಲವೆನಿಸಿದ್ದ ಹಿರಿಯಡಕ ಮಧ್ಯ ಪೇಟೆಯಲ್ಲಿರುವ ಬಾವಿ ಕಳೆದ 4 ದಿನಗಳ ಹಿಂದೆ ಆವರಣ ಗೋಡೆ ಸಹಿತ ಸಂಪೂರ್ಣ ಕುಸಿದಿದ್ದು ಗ್ರಾಮಸ್ಥರ ವಿನಂತಿ ಮೇರೆಗೆ ಮಳೆಗಾಲದ ಅನಂತರ ಬಾವಿಯ ಪುನರ್‌ರಚನೆ ಮಾಡುವಂತೆ ಉಡುಪಿ ಜಿಲ್ಲಾಧಿಕಾರಿ ಅವರಿಗೆ ಜಿ.ಪಂ. ಸದಸ್ಯೆ ಚಂದ್ರಿಕಾ ಕೇಲ್ಕರ್ ಜು. 1ರಂದು ಮನವಿ ಸಲ್ಲಿಸಿದ್ದಾರೆ.
ಈ ಬಾರಿ ತೀರ ಜಲಕ್ಷಾಮವಿದ್ದು ಎಲ್ಲೆಡೆ ನೀರು ಬತ್ತಿ ಹೋಗಿದ್ದರೂ ಈ ಬಾವಿ ಬತ್ತಿರಲಿಲ್ಲ. ಆಸುಪಾಸಿನ ಸುಮಾರು 20ಕ್ಕೂ ಹೆಚ್ಚು ಅಂಗಡಿ, ಹೊಟೇಲ್ ಹಾಗೂ ಸುತ್ತಮುತ್ತಲಿನ ಸುಮಾರು 20 ಮನೆಗಳು ಈ ಬಾವಿಯ ನೀರಿಗೆ ಅವಲಂಬಿತರಾಗಿದ್ದರು. ಬಾವಿ ಕುಸಿದಿರುವುದರಿಂದ ಗಂಭೀರವಾದ ನೀರಿನ ಸಮಸ್ಯೆ ಉಂಟಾಗಲಿದ್ದು, ಜನತೆ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಅಂತರ್ಜಲ ಮಟ್ಟ ವ್ಯಾಪಕವಾಗಿ ಕುಸಿಯುತ್ತಿರುವ ಸನ್ನಿವೇಶದಲ್ಲಿ ಮುಚ್ಚಿದ ಬಾವಿಯನ್ನು ತುರ್ತಾಗಿ ಪುನಾರಚನೆ ಮಾಡಿದಲ್ಲಿ ಜನರಿಗೆ ಪ್ರಯೋಜನವಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭ ತಾ.ಪಂ. ಸದಸ್ಯೆ ಸಂಧ್ಯಾ ಶೆಟ್ಟಿ, ಗ್ರಾ.ಪಂ. ಸದಸ್ಯ ವಿನೋದ್ ಕುಮಾರ್, ಕೊಡಿಬೆಟ್ಟು ಶಿವರಾಮ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.