ಮಳೆಗಾಲದಲ್ಲೇ ಸಚ್ಚೇರಿಪೇಟೆಯ ಬಾವಿಗಳಲ್ಲಿ ಹನಿ ನೀರಿಲ್ಲ !
Team Udayavani, Jul 3, 2019, 5:21 AM IST
ಬೆಳ್ಮಣ್: ಮಳೆಗಾಲ ಆರಂಭವಾಗಿ ತಿಂಗಳು ಕಳೆದರೂ ಮುಂಡ್ಕೂರು ಗ್ರಾಮ ಪಂಚಾಯತ್‌ನ ಸಚ್ಚೇರಿಪೇಟೆಯ ನೂರಕ್ಕೂ ಮಿಕ್ಕಿ ಬಾವಿಗಳಲ್ಲಿ ನೀರ ಸೆಲೆ ಕಾಣಿಸಿಲ್ಲ. ನೀರಿನ ಕೊರತೆಗೆ ಈಗ ವೈಜ್ಞಾನಿಕ ಕಾರಣಗಳನ್ನೂ ಹುಡುಕಲಾಗುತ್ತಿದೆ.
ಸಚ್ಚೇರಿಪೇಟೆಯ ಕಜೆ ಮಾರಿಗುಡಿ ಲೇನ್‌ನಿಂದ ರೈಸ್ ಮಿಲ್ ವರೆಗಿನ ನೂರಕ್ಕೂ ಹೆಚ್ಚು ಮನೆಗಳ ಬಾವಿಗಳಲ್ಲಿ ನೀರಿಲ್ಲದೆ ಜನ ಕಂಗಾಲಾಗಿದ್ದಾರೆ. ಇವುಗಳನ್ನು ನಿಷ್ಪ್ರಯೋಜಕ ಬಾವಿಗಳೆಂದು ಗುರುತಿಸಲಾಗಿದೆ.
ಕಾರಣ ನಿಗೂಢ
ಪ್ರತೀ ವರ್ಷ ಈ ಬಾವಿಗಳಲ್ಲಿ ಡಿಸೆಂಬರ್ ತಿಂಗಳಲ್ಲಿಯೇ ನೀರು ಬತ್ತಿ ಹೋಗುತ್ತಿದ್ದು ಈ ಬಾರಿಯೂ ಅದೇ ಪರಿಸ್ಥಿತಿ ಉಂಟಾಗಿತ್ತು. ಆದರೆ ಒಂದು ತಿಂಗಳ ಹಿಂದೆ ಒಂದಿಷ್ಟು ಮಳೆಯಾಗಿದ್ದರೂ ಈ ಭಾಗದ ಬಾವಿಗಳಲ್ಲಿ ಅಂತರ್ಜಲ ಒರತೆ ಕಾಣಿಸಿಲ್ಲ. ಸ್ಥಳೀಯರಾದ ವಸಂತಿ ಪೂಜಾರಿಯವರು ಹೇಳುವಂತೆ ಬಾವಿಯಲ್ಲಿ ನೀರು ನಿಲ್ಲಬೇಕಾದರೆ ಪಕ್ಕದ ಶಾಂಭವೀ ನದಿಯಲ್ಲಿ ಒಂದೆರಡು ಭಾರೀ ನೆರೆಯಾಗಬೇಕು. ಆದರೆ ಈ ಬಾರಿ ನದಿಯೂ ತುಂಬಿಲ್ಲ, ನೆರೆಯೂ ಆಗಿಲ್ಲ. ಹಿಂದೆ ಯಾವತ್ತೂ ಮಳೆಗಾಲದಲ್ಲಿ ಬಾವಿಗಳಲ್ಲಿ ನೀರು ತಳ ಕಂಡಿದ್ದಿಲ್ಲ ಎನ್ನುತ್ತಾರೆ.
ಬೋರ್‌ವೆಲ್ಗಳ ಹೆಚ್ಚಳ
ಅಲ್ಲಲ್ಲಿ ಬೋರ್‌ವೆಲ್ಗಳ ಕೊರೆತದಿಂದ ಭೂಮಿಯಲ್ಲಿ ನೀರಿನ ಸೆಲೆ ಕಡಿಮೆಯಾಗಿ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರಬಹುದೆಂದು ನಂಬಲಾಗಿದೆ. ಮುಂದೆ ಬೋರ್‌ವೆಲ್ಗಳಿಗೆ ಪರವಾನಿಗೆ ನೀಡಬಾರದೆಂದು ಈ ಭಾಗದ ಜನ ಒತ್ತಾಯಿಸಿದ್ದಾರೆ.
ಗ್ರಾ.ಪಂ. ನೆರವು
ಬಾವಿಗಳು ಬತ್ತಿದ್ದರೂ, ಗ್ರಾ.ಪಂ.ನ ಸ್ವಜಲಧಾರಾ ಯೋಜನೆಯ ನೀರು ಜನರಿಗೆ ಪ್ರಯೋಜನಕಾರಿಯಾಗಿದೆ. ಹಿಂದೆ ಬೇಸಗೆಯಲ್ಲಿ ಮಾತ್ರ ಗ್ರಾ.ಪಂ. ನೀರು ಬಳಕೆಯಾಗುತ್ತಿದ್ದು, ಈಗ ವರ್ಷದ ಎಲ್ಲ ದಿನಗಳಲ್ಲಿ ಇದೇ ನೀರು ಬಳಕೆಯಾಗುತ್ತಿದೆ. ತುಸು ಮಳೆ ಸುರಿಯುತ್ತಿದ್ದರೂ ನೀರಿಲ್ಲದೆ ಜನ ಕೊಡ ಹಿಡಿದು ಪಂಚಾಯತ್ ನೀರಿಗೆ ಕಾಯುವಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.