ಕಾರ್ಕಳದಲ್ಲಿ ಗ್ರಾಹಕರಿಗೆ ದುಪ್ಪಟ್ಟು ವಿದ್ಯುತ್ ಬಿಲ್!
Team Udayavani, Jul 3, 2019, 5:39 AM IST
ಕಾರ್ಕಳ: ಕಾರ್ಕಳ ತಾಲೂಕಿನಲ್ಲಿ ವಿದ್ಯುತ್ ಗ್ರಾಹಕರಿಗೆ ಮೇ ತಿಂಗಳಲ್ಲಿ ವಿದ್ಯುತ್ ಬಿಲ್ ದುಪ್ಪಟ್ಟಾಗಿ ಬಂದಿದೆ. ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಇಂತಹ ಸಮಸ್ಯೆ ಹೆಚ್ಚಾಗಿ ಬೆಳಕಿಗೆ ಬಂದಿದೆ.
ಸಾಮಾನ್ಯವಾಗಿ 1 ಸಾವಿರ ರೂ. ಬಿಲ್ ಪಡೆಯುತ್ತಿದ್ದವರಿಗೆ ಈ ಬಾರಿ 2 ಸಾವಿರ ರೂ. ಬಿಲ್ ನೀಡಲಾಗಿದೆ. ಈ ಕುರಿತು ಕಾರ್ಕಳ ಮೆಸ್ಕಾಂ ಕಚೇರಿಯನ್ನು ಸಂಪರ್ಕಿಸಿದರೆ ಹೆಚ್ಚು ಯುನಿಟ್ ಬಳಕೆಯಾದ ಕಾರಣ ಬಿಲ್ ಜಾಸ್ತಿ ಬಂದಿದೆ ಎಂದು ಸಮಜಾಯಿಷಿ ನೀಡಿದ್ದಾರೆ. ಇನ್ನು, ಬಿಲ್ ದುಪ್ಪಟ್ಟು ಬರುತ್ತಿರುವ ಬಗ್ಗೆ ಈ ಮೊದಲೇ ಜಿ.ಪಂ. ಸಭೆಯಲ್ಲಿ ಚರ್ಚೆಯಾಗಿದ್ದು, ಮೆಸ್ಕಾಂ ಅಧಿಕಾರಿಗಳು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು.
ಮೀಟರ್ ಬದಲಾವಣೆ
ಕಾರ್ಕಳದಲ್ಲಿ ಕೆಟ್ಟು ಹೋದ ವಿದ್ಯುತ್ ಮೀಟರ್‌ಗಳನ್ನು ಈ ಬಾರಿ ಬದಲಾವಣೆ ಮಾಡಲಾಗಿದ್ದು , ಇದರಿಂದಾಗಿ ವಿದ್ಯುತ್ ಬಿಲ್ನಲ್ಲಿ ವ್ಯತ್ಯಯವಾಗಿದೆ. ಹೊಸ ಮೀಟರ್ ಅಳವಡಿಕೆ ಸಂದರ್ಭ ಸಿಸ್ಟಂನಲ್ಲಿ ಎಂಟ್ರಿ ಮಾಡದಿರುವುದರಿಂದ ಬಿಲ್ ದುಪ್ಪಟ್ಟಾಗಿ ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ. ಬಾಡಿಕೆ ಮನೆಯಲ್ಲಿರುವವರಿಗೆ ಮನೆ ಬಾಡಿಗೆಗಿಂತ ಹೆಚ್ಚಿನ ಮೊತ್ತ ವಿದ್ಯುತ್ ಬಿಲ್ ಬಂದಿದೆ.
ಪ್ರತಿ ತಿಂಗಳು 10 ಸಾವಿರ ಆಸುಪಾಸು ವಿದ್ಯುತ್ ಬಿಲ್ ಬರುತ್ತಿತ್ತು. ಈ ಸಲ 15, 400 ರೂ. ಬಿಲ್ ಬಂದಿದೆ. ಈ ಕುರಿತು ವಿಚಾರಿಸುವಾಗ ಅಷ್ಟೊಂದು ಪ್ರಮಾಣದಲ್ಲಿ ಯುನಿಟ್ ಬಳಕೆಯಾಗಿದೆ ಎಂದು ಮೆಸ್ಕಾಂನವರು ಹೇಳುತ್ತಾರೆ. ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಭೀತಿಯಲ್ಲಿ ಬಿಲ್ ಪಾವತಿ ಮಾಡಿದ್ದೇನೆ ಎಂದು ಹೊಟೇಲ್ ಮಾಲಕರೋರ್ವರು ಅಸಹಾಯಕತೆ ವ್ಯಕ್ತಪಡಿಸಿದರು.
ಮನೆಗೆ ವಿದ್ಯುತ್ ಬಿಲ್ 500 ರೂ. ಮೀರುತ್ತಿರಲಿಲ್ಲ. ಈ ಬಾರಿ 3,322 ರೂ. ಬಿಲ್ ಬಂದಿದೆ ಎನ್ನುತ್ತಾರೆ ಪೆರ್ವಾಜೆ ನಿವಾಸಿ ವಿಶ್ವಾನಂದ ನಾಯಕ್, ಕುಂಟಲ್ಪಾಡಿಯ ಅಶ್ವತ್ಥ್ ಅವರಿಗೆ 6,000 ಸಾವಿರ ಬಿಲ್ ಬಂದಿದೆ. ಈ ಹಿಂದೆ ಅವರಿಗೆ 500ರಿಂದ 600 ರೂ. ಬಿಲ್ ಬರುತ್ತಿತ್ತು ಎನ್ನುತ್ತಾರೆ.
ಕ್ರಮಕೈಗೊಳ್ಳಲಾಗುವುದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.