ಹಸ್ತಾಂತರ ತಪ್ಪಿಸಲು ಡ್ರಾಮಾ
ದಾವೂದ್ ಬಂಟನ ಗಡಿಪಾರು ತಪ್ಪಿಸಲು ಪಾಕ್ ಕುತಂತ್ರ
Team Udayavani, Jul 3, 2019, 5:00 AM IST
ಲಂಡನ್: ಕಳೆದ ವರ್ಷ ಅಮೆರಿಕದ ತನಿಖಾ ಸಂಸ್ಥೆ ಎಫ್ಬಿಐನಿಂದ ಬಂಧಿತನಾಗಿರುವ ಜಬೀರ್ ಮೋಟಿವಾಲಾ (52)ನನ್ನು ಇಂಗ್ಲೆಂಡ್‌ನಿಂದ ಅಮೆರಿಕಕ್ಕೆ ಗಡಿಪಾರು ಮಾಡುವ ಪ್ರಕ್ರಿಯೆಗೆ ಪಾಕಿಸ್ತಾನ ಅಡ್ಡಿಪಡಿಸುತ್ತಿದೆ.
ನೇರವಾಗಿಯೇ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಜ್ಞೆ ಸ್ವೀಕರಿಸುವ ಈತನನ್ನು 2018ರ ಆಗಸ್ಟ್‌ನಲ್ಲಿ ಬಂಧಿಸಲಾಗಿತ್ತು.
ಲಂಡನ್‌ನಲ್ಲಿ ಸೋಮವಾರದಿಂದ ಮೂರು ದಿನಗಳ ಕಾಲ ಆತನನ್ನು ಅಮೆರಿಕಕ್ಕೆ ಗಡಿಪಾರು ಮಾಡುವ ಬಗ್ಗೆ ವಿಚಾರಣೆ ಶುರುವಾಗಿದೆ. ಒಂದು ವೇಳೆ, ಆತ ಅಮೆರಿಕಕ್ಕೆ ತೆರಳುವಂತಾದರೆ ದಾವೂದ್ ಮತ್ತು ಪಾಕ್ ಗುಪ್ತಚರ ಸಂಸ್ಥೆ ಐಎಸ್‌ಐ ನಡುವಿನ ನಂಟು, ಅವರ ಕರಾಳ ಕೆಲಸಗಳ ಸಮಗ್ರ ಮಾಹಿತಿ ಅನಾವರಣಗೊಳ್ಳಲಿದೆ.
ಈ ಕಾರಣಕ್ಕಾಗಿ ಮೋಟಿವಾಲನಿಗೆ ಗಂಭೀರವಾದ ಖನ್ನತೆ ಕಾಯಿಲೆ ಇದೆ ಎಂಬ ವಾದವನ್ನು ಆತನ ವಕೀಲರು ನ್ಯಾಯಾಲಯದ ಮುಂದಿಟ್ಟಿದ್ದಾರೆ. ಲಂಡನ್‌ನಲ್ಲಿರುವ ಪಾಕಿಸ್ತಾನದ ಹೈಕಮಿಷನ್ ಕೂಡ ಗಡಿಪಾರು ಪ್ರಕ್ರಿಯೆ ನಡೆಯದಂತೆ ಮಾಡುವ ಪ್ರಯತ್ನದಲ್ಲಿದೆ.
ಸದ್ಯ ಆತ ಲಂಡನ್‌ನ ವಾಂಡ್ಸ್‌ವರ್ತ್ ಕಾರಾಗೃಹದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13,400 ಕೋಟಿ ರೂ. ವಂಚಿಸಿದ ನೀರವ್ ಮೋದಿ ಜತೆಗೆ ಇದ್ದಾನೆ.
ಅಕ್ರಮ ಹಣ ವರ್ಗಾವಣೆ, ಹೆರಾಯಿನ್ ಮತ್ತು ಇತರ ಮಾದಕ ವಸ್ತುಗಳ ಸಾಗಣೆಗೆ ಸಂಚು, ವಸೂಲಿ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಎಫ್ಬಿಐ ತನಿಖೆಯಲ್ಲಿ ಕಂಡುಕೊಂಡಿದೆ.
ಹೀಗಾಗಿ, ಆತನನ್ನು ಗಡಿಪಾರು ಮಾಡಬೇಕು ಎಂದು ತನಿಖಾ ಸಂಸ್ಥೆ ಕೋರ್ಟ್‌ಗೆ ಮನವಿ ಮಾಡಿಕೊಂಡಿದೆ. ಇಂಗ್ಲೆಂಡ್‌ನ ಖ್ಯಾತ ವಕೀಲ ಜಾನ್ ಹಾರ್ಡಿ ಆತನ ಪರವಾಗಿ ವಾದಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia 200 ಕ್ಷಿಪಣಿ, ಡ್ರೋನ್‌ಗಳಿಂದ ದಾಳಿ: ಕತ್ತಲೆಯಲ್ಲಿ ಉಕ್ರೇನ್‌ನ 10 ಲಕ್ಷ ಮನೆ!
America:ಭಾರತೀಯ ಮೂಲದ ವೈದ್ಯರಿಗೆ 17 ಕೋಟಿ ರೂ. ದಂಡ
Bangladesh; ಚಿನ್ಮಯಿ ಕೃಷ್ಣದಾಸ್‌ಗೂ ನಮಗೂ ಸಂಬಂಧವಿಲ್ಲ: ಇಸ್ಕಾನ್ ಸ್ಪಷ್ಟನೆ
Bangladesh:ಇಸ್ಕಾನ್ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್,ಸರ್ಕಾರಕ್ಕೆ ಮುಖಭಂಗ
Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್ ರುವಾಂಡದಿಂದ ಭಾರತಕ್ಕೆ ಗಡಿಪಾರು!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Maharashtra: ದಿಢೀರನೆ ಊರಿಗೆ ತೆರಳಿದ ಶಿಂಧೆ; ಮತ್ತೆ ಮುಂದುವರಿದ ʼಮಹಾ ಸಿಎಂʼ ಕಗ್ಗಂಟು
Bengaluru: ಶಾಲೆ ಮುಖ್ಯಸ್ಥನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ
Bengaluru: ಬೈಕ್ ಡಿಕ್ಕಿ: ರಾತ್ರಿಯಿಡೀ ರಸೇಲಿ ನರಳಿ ವ್ಯಕ್ತಿ ಸಾವು
Bengaluru: ಪಾದಚಾರಿ ಮಾರ್ಗದಲ್ಲಿ ಕಾರು ಚಾಲನೆ: ಕೇಸ್ ದಾಖಲು
Champions Trophy: ಮೋದಿ ಪಾಕ್ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.