ಚಕ್ಕರ್ ಎಂಪಿಗಳಿಗೆ ಮೋದಿ ಕ್ಲಾಸ್
ನಿಮ್ಮ ರ್ಯಾಲಿಗೆ ಅಮಿತ್ ಶಾ ಕೊನೇ ಗಳಿಗೆಯಲ್ಲಿ ಕೈಕೊಟ್ಟರೆ ಹೇಗೆ?
Team Udayavani, Jul 3, 2019, 6:00 AM IST
ನವದೆಹಲಿ: ‘ನಿಮ್ಮ ನೇತೃತ್ವದಲ್ಲಿ ನಡೆಯುವ ಬಿಜೆಪಿ ರ್ಯಾಲಿಗೆ ಅಮಿತ್ ಶಾ ಬಂದು ಮಾತನಾಡಬೇಕಾಗಿದ್ದವರು ಕೊನೇ ಕ್ಷಣದಲ್ಲಿ ಬರದೇ ಇದ್ದರೆ ಹೇಗಾಗುತ್ತದೆ? ಲೋಕಸಭೆಯಲ್ಲಿ ನೀವು ಸಂಸತ್ ಸದಸ್ಯರಾಗಿ ಬಾರದೇ ಇದ್ದರೆ ನನಗೆ ಮುಜುಗರವಾಗುವುದಿಲ್ಲವೇ?’
-ಹೀಗೆಂದು ಬಿಜೆಪಿಯ ಲೋಕಸಭೆ ಸದಸ್ಯರಿಗೆ ತೀಕ್ಷ್ಣ ಪ್ರಶ್ನೆ ಹಾಕಿದ್ದು ಪ್ರಧಾನಿ ನರೇಂದ್ರ ಮೋದಿ. ನವದೆಹಲಿಯಲ್ಲಿ ಮಂಗಳವಾರ ನಡೆದ ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲಿ ಈ ಅಂಶವನ್ನು ಅವರು ಪ್ರಸ್ತಾಪಿಸಿದ್ದಾರೆ.
ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್ ತ್ರಿವಳಿ ತಲಾಖ್ ವಿಧೇಯಕ ಮಂಡನೆ ವೇಳೆ ಮತ್ತು ಬಜೆಟ್ ಅಧಿವೇಶನದ ಆರಂಭದ ಕೆಲ ದಿನಗಳಲ್ಲಿ ಹಲವು ಬಿಜೆಪಿ ಸಂಸದರು ಸದನದಲ್ಲಿ ಹಾಜರಿರದೇ ಇದ್ದದ್ದು ಪ್ರಧಾನಿಯವರಿಗೆ ಮುಜುಗರ ಉಂಟು ಮಾಡಿತ್ತು. ಹೀಗಾಗಿ, ಮಂಗಳವಾರ ಸಭೆಯಲ್ಲಿ ಈ ಕುರಿತು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಅಶಿಸ್ತು ತೋರದಂತೆ ನಾಯಕರಿಗೆ ಸೂಚಿಸಿದ್ದಲ್ಲದೆ, ಕಲಾಪಕ್ಕೆ ಹಾಜರಿರಬೇಕಾದ ಪ್ರಾಮುಖ್ಯತೆ ಬಗ್ಗೆ ಬೊಟ್ಟು ಮಾಡಿ ತೋರಿಸಿದ್ದಾರೆ.
ಪ್ರಧಾನಿ ಮಾತನಾಡುವುದಕ್ಕೆ ಮೊದಲು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಸಂಸತ್ ಸದಸ್ಯರು ಪ್ರಮುಖ ಕಲಾಪಗಳ ಮಂಡನೆ, ಚರ್ಚೆ ವೇಳೆ ಹಾಜರಿರಬೇಕಾದ ಪ್ರಾಮುಖ್ಯತೆ ಬಗ್ಗೆ ವಿವರಿಸಿದ್ದರು. ನಂತರ ಮಾತನಾಡಿದ ಪ್ರಧಾನಿ ಮೋದಿ, ಸಂಸತ್ ಸದಸ್ಯರಾದವರು ಜನರ ಆಶೋತ್ತರಗಳನ್ನು ಬಿಂಬಿಸಬೇಕು ಎಂದಿದ್ದಾರೆ.
ಜತೆಗೆ ಕಲಾಪಕ್ಕೆ ಗೈರಾಗುವುದನ್ನು ಸಹಿಸುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ‘ನಿಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಆಗಮಿಸಬೇಕಾಗಿದ್ದ ಅಮಿತ್ ಶಾ ಕೊನೆಯ ಕ್ಷಣದಲ್ಲಿ ಬಾರದೇ ಇದ್ದರೆ ಹೇಗಾಗುತ್ತದೆ? ಎಂದು ಕಠಿಣವಾಗಿಯೇ ಪ್ರಶ್ನೆ ಮಾಡಿದ್ದಾರೆ ಪ್ರಧಾನಿ. ಸಭೆಯಲ್ಲಿ ಹಾಜರಿದ್ದ ಸಂಸದರತ್ತ ನೋಡಿ ಪ್ರಶ್ನೆಯನ್ನು ಮತ್ತೂಮ್ಮೆ ಕೇಳಿದರು ‘ಹೇಳಿ ಹೇಗಾಗುತ್ತದೆ? ನಿಮ್ಮಲ್ಲೇ ಎಂಥ ಅನುಭವವಾಗುತ್ತದೆ? ಎಂದು ಪ್ರಶ್ನೆ ಮಾಡಿದರು.
ಪ್ರಧಾನಿಯವರು ಮತ್ತೂಮ್ಮೆ ಪ್ರಶ್ನೆ ಕೇಳಿದಾಗ ‘ಬೇಸರವಾಗುತ್ತದೆ’ ಎಂದು ಸಭೆಯಲ್ಲಿ ಇದ್ದ ಸಂಸದರೊಬ್ಬರು ಹೇಳಿದರು. ಅದನ್ನು ಕ್ಷಣ ಮಾತ್ರದಲ್ಲಿ ತಿಳಿದ ನರೇಂದ್ರ ಮೋದಿ ‘ನಿಮ್ಮ ವರ್ತನೆಯಿಂದಲೂ ನನಗೆ ಅದೇ ಭಾವನೆ ಉಂಟಾಗುತ್ತದೆ’ ಎಂದರು.
‘ಎರಡು ಲಕ್ಷ ಮತಗಳಿಂದ ನೀವು ಗೆದ್ದಿದ್ದೀರಿ ಎಂದು ನೀವು ಸಂತೋಷಪಟ್ಟುಕೊಳ್ಳಬಹುದು. ಆದರೆ ನಿಮ್ಮ ಅತ್ಯಂತ ಆಪ್ತ ಸ್ನೇಹಿತನೇ ನಿಮಗೆ ಮತ ಹಾಕಿಲ್ಲ ಎಂದು ಗೊತ್ತಾದರೆ ಬೇಸರವಾಗುತ್ತದೆ ಅಲ್ಲವೇ? ನಮ್ಮ ಪಕ್ಷದ ಸಂಸದರಲ್ಲಿ ಹಲವರು ಕಲಾಪಗಳಲ್ಲಿ ಭಾಗವಹಿಸುತ್ತಿಲ್ಲ ಎಂದು ಗೊತ್ತಾದ ಬಳಿಕ ನನಗೆ ನೀವು ಅನುಭವಿಸುವ ರೀತಿಯಲ್ಲಿ ನನಗೂ ಆಗಿದೆ’ ಎಂದರು.
6ರಂದು ಚಾಲನೆ: ಬಿಜೆಪಿಯ ಸದಸ್ಯತ್ವ ಅಭಿಯಾನಕ್ಕೆ ಜು.6ರಂದು ಪ್ರಧಾನಿ ನರೇಂದ್ರ ಮೋದಿ ವಾರಾಣಸಿಯಲ್ಲಿ ಚಾಲನೆ ನೀಡಲಿದ್ದಾರೆ. ಪ್ರತಿ ಬೂತ್ ಮಟ್ಟದಲ್ಲಿ ಐದು ಗಿಡಗಳನ್ನು ನೆಡುವಂತೆಯೂ ಸಲಹೆ ನೀಡಿದ್ದಾರೆ ಪ್ರಧಾನಿ. ದೇಶಾದ್ಯಂತ ಈ ಪ್ರಕ್ರಿಯೆ ನಡೆಯಬೇಕು ಎಂದು ಅವರು ಹೇಳಿದ್ದಾರೆ.
ಯಾರ ಪುತ್ರನ ರಕ್ಷಣೆಯೂ ಇಲ್ಲ
ಜನಪ್ರತಿನಿಧಿಗಳಿಗೆ ದುರಹಂಕಾರ ಸಲ್ಲದು ಎಂದು ಹೇಳಿದ ಪ್ರಧಾನಿ, ಬಿಜೆಪಿಯ ಹಿರಿಯ ನಾಯಕ ಕೈಲಾಶ್ ವಿಜಯವರ್ಗೀಯ ಪುತ್ರ-ಶಾಸಕ ಆಕಾಶ್ ವಿಜಯ ವರ್ಗೀಯ ಮಧ್ಯಪ್ರದೇಶದಲ್ಲಿ ಸರ್ಕಾರಿ ಅಧಿಕಾರಿಗೆ ಬ್ಯಾಟ್‌ನಲ್ಲಿ ಥಳಿಸಿದ್ದನ್ನು ಪರೋಕ್ಷವಾಗಿ ಪ್ರಸ್ತಾಪಿಸಿದರು. ‘ಯಾರ ಪುತ್ರನೇ ಆಗಲಿ, ಅನುಚಿತ ವರ್ತನೆ ಸಹಿಸಲು ಸಾಧ್ಯವೇ ಇಲ್ಲ. ಅಂಥವರಿಗೆ ಬೆಂಬಲ ನೀಡುವವರನ್ನೂ ಪಕ್ಷದಿಂದ ವಜಾ ಮಾಡಬೇಕು ಎಂದು ಕಟುವಾಗಿಯೇ ಹೇಳಿದ್ದಾರೆ. ಸಂಸದರಾಗಿ ಜನರ ಆಶೋತ್ತರಗಳನ್ನು ಈಡೇರಿಸುವುದು ನಿಮ್ಮ ಕೆಲಸ’ ಎಂದು ಎಚ್ಚರಿಕೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.
Mumbai ದೋಣಿ ದುರಂತ: ಮತ್ತೂಂದು ಮೃತದೇಹ ಪತ್ತೆ
Coconut Oil Controversy: 20 ವರ್ಷಗಳ ಕೊಬ್ಬರಿ ಎಣ್ಣೆ ವಿವಾದಕ್ಕೆ ಸುಪ್ರೀಂ ಬ್ರೇಕ್
Tragedy: ಬೆಳ್ಳಂಬೆಳಗ್ಗೆ ಭೀಕರ ಅಪಘಾತ… ಗ್ಯಾಸ್ ಟ್ಯಾಂಕರ್ ಸೇರಿ ಹಲವು ವಾಹನ ಬೆಂಕಿಗಾಹುತಿ
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.
Mumbai ದೋಣಿ ದುರಂತ: ಮತ್ತೂಂದು ಮೃತದೇಹ ಪತ್ತೆ
ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್ ಆಫ್ ಕಾಲ್ ಸ್ಟೇಟಸ್ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ
Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ
Coconut Oil Controversy: 20 ವರ್ಷಗಳ ಕೊಬ್ಬರಿ ಎಣ್ಣೆ ವಿವಾದಕ್ಕೆ ಸುಪ್ರೀಂ ಬ್ರೇಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.