ರೋಹಿತ್‌ ಅಬ್ಬರ; ಭಾರತ ಸೆಮಿ ಫೈನಲಿಗೆ

ಬಾಂಗ್ಲಾದೇಶಕ್ಕೆ 28 ರನ್‌ ಸೋಲು

Team Udayavani, Jul 3, 2019, 5:52 AM IST

india

ಬರ್ಮಿಂಗ್‌ಹ್ಯಾಮ್‌: ಆರಂಭಿಕ ರೋಹಿತ್‌ ಶರ್ಮ ಅವರ ಅಮೋಘ ಶತಕ ದಿಂದಾಗಿ ಭಾರತ ತಂಡವು ಮಂಗಳವಾರದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 28 ರನ್ನುಗಳಿಂದ ಸೋಲಿಸಿ ಸೆಮಿಫೈನಲ್ ಹಂತಕ್ಕೇರಿತು.

ರೋಹಿತ್‌ ಅವರ ದಾಖಲೆ ಸಮಬಲದ ಶತಕ, ಕೆಎಲ್ ರಾಹುಲ್ ಮತ್ತು ರಿಷಬ್‌ ಪಂತ್‌ ಅವರ ಸಮಯೋಚಿತ ಆಟದಿಂದಾಗಿ ಭಾರತ 9 ವಿಕೆಟಿಗೆ 314 ರನ್ನುಗಳ ಬೃಹತ್‌ ಮೊತ್ತ ಪೇರಿಸಿತು. ಇದಕ್ಕುತ್ತರವಾಗಿ ಬಾಂಗ್ಲಾದೇಶದ ಬಹುತೇಕ ಎಲ್ಲ ಆಟಗಾರರು ಭರ್ಜರಿಯಾಗಿ ಆಟವಾಡಿದರೂ 48 ಓವರ್‌ಗಳಲ್ಲಿ 286 ರನ್ನಿಗೆ ಆಲೌಟಾಗಿ ಸೋಲನ್ನು ಒಪ್ಪಿಕೊಂಡಿತು.

ಈ ಗೆಲುವಿನಿಂದ ಭಾರತ ಒಟ್ಟು 13 ಅಂಕ ಸಂಪಾದಿಸಿ ಎರಡನೇ ತಂಡವಾಗಿ ಸೆಮಿಫೈನಲ್ ತಲುಪಿತು. ಭಾರತ ಶನಿವಾರ ನಡೆಯುವ ತನ್ನ ಅಂತಿಮ ಲೀಗ್‌ ಪಂದ್ಯದಲ್ಲಿ ಶ್ರೀಲಂಕಾವನ್ನು ಎದುರಿಸಲಿದೆ.

ಅಗ್ರಕ್ರಮಾಂಕದ ಆಟಗಾರರು ಬ್ಯಾಟಿಂಗ್‌ನಲ್ಲಿ ಗಮನಾರ್ಹ ನಿರ್ವಹಣೆ ನೀಡಿದರು. ಆದರೆ ಕೊನೆ ಹಂತದಲ್ಲಿ ಭಾರತದ ಬ್ಯಾಟಿಂಗ್‌ ವೈಫ‌ಲ್ಯ ಈ ಪಂದ್ಯದಲ್ಲೂ ಮುಂದುವರಿದಿದೆ. 4 ವಿಕೆಟಿಗೆ 251 ರನ್‌ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಭಾರತ ಆಬಳಿಕ ಹಠಾತ್‌ ಕುಸಿತ ಕಂಡ ಕಾರಣ ನಿರೀಕ್ಷಿತ ಮೊತ್ತ ತಲುಪಲು ವಿಫ‌ಲವಾಯಿತು. ಕೊನೆಯ 10 ಓವರ್‌ಗಳಲ್ಲಿ ಭಾರತ ಕೇವಲ 63 ರನ್‌ ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ 330ರಿಂದ 340ರ ನಿರೀಕ್ಷೆಯಲ್ಲಿದ್ದ ಭಾರತದ ಮೊತ್ತ 314ಕ್ಕೆ ಇಳಿಯಿತು. ಧೋನಿ ಕ್ರೀಸ್‌ನಲ್ಲಿ ಇದ್ದರೂ ಯಾವುದೇ ಮ್ಯಾಜಿಕ್‌ ನಡೆಯಲಿಲ್ಲ. ಮತ್ತೂಮ್ಮೆ ಬ್ಯಾಟಿಂಗ್‌ನಲ್ಲಿ ಒದ್ದಾಡಿದ ಧೋನಿ 33 ಎಸೆತಗಳಿಂದ 35 ರನ್‌ ಗಳಿಸಿದರು.

ರೋಹಿತ್‌ ಪ್ರಚಂಡ ಫಾರ್ಮ್

ಬಾಂಗ್ಲಾ ವಿರುದ್ಧ ರೋಹಿತ್‌ ಅವರ ಪ್ರಚಂಡ ಆಟ ಇಲ್ಲಿಯೂ ಮುಂದುವರಿದಿದೆ. 2015ರ ವಿಶ್ವಕಪ್‌ನಲ್ಲಿ ಬಾಂಗ್ಲಾ ವಿರುದ್ಧವೇ ತನ್ನ ಮೊದಲ ಶತಕ ಬಾರಿಸಿದ್ದ ರೋಹಿತ್‌ 2017ರ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಬಾಂಗ್ಲಾ ವಿರುದ್ಧ ಇನ್ನೊಂದು ಶತಕ ಬಾರಿಸಿದ್ದರು. ಬಾಂಗ್ಲಾ ದಾಳಿಯನ್ನು ಪುಡಿಗಟ್ಟಿದ ಅವರು 7 ಬೌಂಡರಿ ಮತ್ತು 5 ಸಿಕ್ಸರ್‌ ನೆರವಿನಿಂದ ಶತಕ ಪೂರ್ತಿಗೊಳಿಸಿದರಲ್ಲದೇ ಒಂದೇ ವಿಶ್ವಕಪ್‌ನಲ್ಲಿ ನಾಲ್ಕು ಶತಕ ಬಾರಿಸಿದ ಕುಮಾರ ಸಂಗಕ್ಕರ ಅವರ ದಾಖಲೆಯನ್ನು ಸಮಗಟ್ಟಿದರು. ಅವರು ಈ ಹಿಂದಿನ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ (122 ಅಜೇಯ), ಪಾಕಿಸ್ಥಾನ (140) ಮತ್ತು ಇಂಗ್ಲೆಂಡ್‌ (102) ವಿರುದ್ಧ ಶತಕ ಬಾರಿಸಿದ್ದರು. ಇದು ರೋಹಿತ್‌ ಅವರ ಏಕದಿನ ಕ್ರಿಕೆಟ್‌ನಲ್ಲಿ 26ನೇ ಶತಕ ಕೂಡ ಹೌದು.

9 ರನ್‌ ಗಳಿಸಿದ ವೇಳೆ ಜೀವದಾನ ಪಡೆದ ರೋಹಿತ್‌ ಮತ್ತೆ ಬಿರುಸಿನ ಆಟವಾಡಿ ತಂಡದ ಬೃಹತ್‌ ಮೊತ್ತಕ್ಕೆ ಮುನ್ನುಡಿ ಇಟ್ಟರು. ಆರಂಭಿಕ ಕರ್ನಾಟಕದ ಕೆ.ಎಲ್. ರಾಹುಲ್ ಜತೆ ಮೊದಲ ವಿಕೆಟಿಗೆ 180 ರನ್ನುಗಳ ಜತೆಯಾಟ ನಡೆಸಿದ ರೋಹಿತ್‌ ಮೊದಲಿಗರಾಗಿ ಔಟಾದರು. ಅವರು ಈ ವಿಶ್ವಕಪ್‌ನಲ್ಲಿ ಗರಿಷ್ಠ ರನ್‌ ಗಳಿಸಿದವರಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ರೋಹಿತ್‌ 544 ರನ್‌ ಗಳಿಸಿದ್ದರೆ ಡೇವಿಡ್‌ ವಾರ್ನರ್‌ 516 ರನ್‌ ಗಳಿಸಿದ್ದಾರೆ. ವಿಶ್ವಕಪ್‌ನಲ್ಲಿ 500 ರನ್‌ ತಲುಪಿದ ಭಾರತದ ಎರಡನೇ ಆಟಗಾರರೆಂಬ ಗೌರವಕ್ಕೆ ರೋಹಿತ್‌ ಪಾತ್ರರಾಗಿದ್ದಾರೆ. ಸಚಿನ್‌ ತೆಂಡುಲ್ಕರ್‌ ಮೊದಲ ಆಟಗಾರ. ಅವರು 1996 ಮತ್ತು 2003ರ ವಿಶ್ವಕಪ್‌ನಲ್ಲಿ 500 ಪ್ಲಸ್‌ ರನ್‌ ಪೇರಿಸಿದ್ದರು.

ದಿನೇಶ್‌ ಕಾರ್ತಿಕ್‌ ಕೊನೆಗೂ ವಿಶ್ವಕಪ್‌ಗೆ ಪದಾರ್ಪಣೆಗೈದಿದ್ದಾರೆ. ಕೇದಾರ್‌ ಜಾಧವ್‌ ಜಾಗಕ್ಕೆ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.

34ರ ಹರೆಯದ ದಿನೇಶ್‌ ಕಾರ್ತಿಕ್‌ 15 ವರ್ಷಗಳ ಬಳಿಕ ವಿಶ್ವಕಪ್‌ನಲ್ಲಿ ಆಡುವ ಬಳಗಕ್ಕೆ ಆಯ್ಕೆಯಾಗಿದ್ದಾರೆ. ಅವರು 2004ರಲ್ಲಿ ಏಕದಿನ ಕ್ರಿಕೆಟಿಗೆ ಪದಾರ್ಪಣೆಗೈದಿದ್ದರು. ಕಾರ್ತಿಕ್‌ 2007ರ ಭಾರತೀಯ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಭಾರತ ಬಣ ಹಂತದಲ್ಲಿಯೇ ಹೊರಬಿದ್ದ ಕಾರಣ ಅವರು ಯಾವುದೇ ಪಂದ್ಯವನ್ನಾಡಿರಲಿಲ್ಲ. 2011 ಮತ್ತು 2015ರ ವಿಶ್ವಕಪ್‌ಗೆ ಅವರನ್ನು ತಂಡಕ್ಕೆ ಆಯ್ಕೆ ಮಾಡಿರಲಿಲ್ಲ. ಕೊನೆಗೂ 2019ರ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಕಾರ್ತಿಕ್‌ ಅವರ ಸೇರ್ಪಡೆಯಿಂದ ಭಾರತ ವಿಶ್ವಕಪ್‌ ಪಂದ್ಯವೊಂದರಲ್ಲಿ ಇದೇ ಮೊದಲ ಬಾರಿಗೆ ಮೂವರು ತಜ್ಞ ಕೀಪರ್‌ಗಳೊಂದಿಗೆ (ಕಾರ್ತಿಕ್‌, ಧೋನಿ ಮತ್ತು ಪಂತ್‌) ಆಡುತ್ತಿದೆ.

3 ದ್ವಿಶತಕ ಬಾರಿಸಿರುವ ರೋಹಿತ್‌
ಏಕದಿನ ಕ್ರಿಕೆಟ್‌ನಲ್ಲಿ ಶತಕ ಬಾರಿಸುವುದೇ ಅಮೂಲ್ಯವೆನಿಸಿಕೊಂಡಿರುವ ಕಾಲದಲ್ಲಿ ರೋಹಿತ್‌ ಶರ್ಮ 3 ಬಾರಿ ದ್ವಿಶತಕ ಬಾರಿಸಿದ್ದಾರೆ! ಇದು ವಿಶ್ವದ ಯಾವುದೇ ಕ್ರಿಕೆಟಿಗ ಮಾಡದ ಸಾಧನೆ. ವಿಶ್ವದಲ್ಲಿ ಒಟ್ಟಾರೆ ದಾಖಲಾಗಿರುವುದೇ 7 ದ್ವಿಶತಕ, ಆ ಪೈಕಿ ರೋಹಿತ್‌ ಒಬ್ಬರೇ 3 ದ್ವಿಶತಕ ಚಚ್ಚಿದ್ದಾರೆ! ಆಸ್ಟ್ರೇಲಿಯ ವಿರುದ್ಧ 209, ಶ್ರೀಲಂಕಾ ವಿರುದ್ಧ 264, ಇನ್ನೊಮ್ಮೆ ಶ್ರೀಲಂಕಾ ವಿರುದ್ಧವೇ
208 ರನ್‌ ಬಾರಿಸಿದ್ದಾರೆ.

ರೋಹಿತ್‌ ದಾಖಲೆಗಳು
26 ಶತಕ: ಬಾಂಗ್ಲಾ ವಿರುದ್ಧ ಶತಕ ಬಾರಿಸಿದ ರೋಹಿತ್‌ ಏಕದಿನದಲ್ಲಿ ಅವರ 26ನೇ ಶತಕ ಪೂರ್ತಿಗೊಳಿಸಿದರು. ಗರಿಷ್ಠ ಶತಕಧಾರಿಗಳ ಪಟ್ಟಿಯಲ್ಲಿ ರೋಹಿತ್‌ಗೆ ಈಗ ವಿಶ್ವದಲ್ಲಿ 6ನೇ ಸ್ಥಾನ, ಭಾರತ ಮಟ್ಟಿಗೆ 3ನೇ ಸ್ಥಾನ. ಈ ವಿಶ್ವಕಪ್‌ಗ್ಳಲ್ಲಿ ರೋಹಿತ್‌ ನಾಲ್ಕು ಶತಕ ಬಾರಿಸಿದ್ದಾರೆ. ಅವರು ಒಟ್ಟಾರೆ ವಿಶ್ವಕಪ್‌ನಲ್ಲಿ ಐದು ಶತಕ ಸಿಡಿಸಿದ್ದಾರೆ. ಸದ್ಯ ಅವರು ವಿಶ್ವಕಪ್‌ಗ್ಳಲ್ಲಿ ಗರಿಷ್ಠ ಶತಕಧಾರಿಗಳ ಪಟ್ಟಿಯಲ್ಲಿ ಜಂಟಿ 2ನೇ ಸ್ಥಾನದಲ್ಲಿದ್ದಾರೆ. 6 ಶತಕ ಗಳಿಸಿದ ಸಚಿನ್‌ ತೆಂಡುಲ್ಕರ್‌ ಅಗ್ರಸ್ಥಾನದಲ್ಲಿದ್ದಾರೆ.

544 ರನ್‌: ಪ್ರಸ್ತುತ ವಿಶ್ವಕಪ್‌ನಲ್ಲಿ ಗರಿಷ್ಠ ರನ್‌ ಗಳಿಸಿದವರ ಪಟ್ಟಿಯಲ್ಲಿ ರೋಹಿತ್‌ ಶರ್ಮ ಈಗ ಅಗ್ರಸ್ಥಾನಕ್ಕೇರಿದ್ದಾರೆ. ಅವರ ರನ್‌ ಗಳಿಕೆ 544 ರನ್‌.

ಸ್ಕೋರ್‌ ಪಟ್ಟಿ

ಭಾರತ
ಕೆ. ಎಲ್‌. ರಾಹುಲ್‌ ಸಿ ರಹಿಂ ಬಿ ರುಬೆಲ್‌ 77
ರೋಹಿತ್‌ ಶರ್ಮ ಸಿ ಲಿಟ್ಟನ್‌ ಬಿ ಸರ್ಕಾರ್‌ 104
ವಿರಾಟ್‌ ಕೊಹ್ಲಿ ಸಿ ರುಬೆಲ್‌ ಬಿ ಮುಸ್ತಫಿಜರ್‌ 26
ರಿಷಭ್‌ ಪಂತ್‌ ಸಿ ಹೊಸೈನ್‌ ಬಿ ಶಕಿಬ್‌ 48
ಹಾರ್ದಿಕ್‌ ಪಾಂಡ್ಯ ಸಿ ಸರ್ಕಾರ್‌ ಬಿ ಮುಸ್ತಫಿಜರ್‌ 0
ಎಂ. ಎಸ್‌. ಧೋನಿ ಸಿ ಶಕಿಬ್‌ ಬಿ ಮುಸ್ತಫಿಜರ್‌ 35
ದಿನೇಶ್‌ ಕಾರ್ತಿಕ್‌ ಸಿ ಹೊಸೈನ್‌ ಬಿ ಮುಸ್ತಫಿಜರ್‌ 8
ಭುವನೇಶ್ವರ್‌ ಕುಮಾರ್‌ ರನೌಟ್‌ 2
ಮೊಹಮ್ಮದ್‌ ಶಮಿ ಬಿ ಮುಸ್ತಫಿಜರ್‌ 1
ಜಸ್‌ಪ್ರೀತ್‌ ಬುಮ್ರಾ ಔಟಾಗದೆ 0
ಇತರ 13
ಒಟ್ಟು (50 ಓವರ್‌ಗಳಲ್ಲಿ 9 ವಿಕೆಟಿಗೆ) 314
ವಿಕೆಟ್‌ ಪತನ: 1-180, 2-195, 3-237, 4-237, 5-277, 6-298, 7-311, 8-314, 9-314.

ಬೌಲಿಂಗ್‌:
ಮುಶ್ರಫೆ ಮೊರ್ತಜ 5-0-36-0
ಮೊಹಮ್ಮದ್‌ ಸೈಫ‌ುದ್ದಿನ್‌ 7-0-59-0
ಮುಸ್ತಫಿಜರ್‌ ರೆಹಮಾನ್‌ 10-1-59-5
ಶಕಿಬ್‌ ಅಲ್‌ ಹಸನ್‌ 10-0-41-1
ಮೊಸದ್ದೆಕ್‌ ಹೊಸೈನ್‌ 4-0-32-0
ರುಬೆಲ್‌ ಹೊಸೈನ್‌ 8-0-48-1
ಸೌಮ್ಯ ಸರ್ಕಾರ್‌ 6-0-33-1

ಬಾಂಗ್ಲಾದೇಶ
ತಮೀಮ್‌ ಇಕ್ಬಾಲ್‌ ಬಿ ಶಮಿ 22
ಸೌಮ್ಯ ಸರ್ಕಾರ್‌ ಸಿ ಕೊಹ್ಲಿ ಬಿ ಪಾಂಡ್ಯ 33
ಶಕಿಬ್‌ ಅಲ್‌ ಹಸನ್‌ ಸಿ ಕಾರ್ತಿಕ್‌ ಬಿ ಪಾಂಡ್ಯ 66
ಮುಶ್ಫಿಕರ್‌ ರಹಿಂ ಸಿ ಶಮಿ ಬಿ ಚಹಲ್‌ 24
ಲಿಟ್ಟನ್‌ ದಾಸ್‌ ಸಿ ಕಾರ್ತಿಕ್‌ ಬಿ ಪಾಂಡ್ಯ 22
ಮೊಸದ್ದೆಕ್‌ ಹೊಸೈನ್‌ ಬಿ ಬುಮ್ರಾ 3
ಶಬ್ಬಿರ್‌ ರೆಹಮ್ಮನ್‌ ಬಿ ಬುಮ್ರಾ 36
ಮೊಹಮ್ಮದ್‌ ಸೈಫ‌ುದ್ದಿನ್‌ ಔಟಾಗದೆ 51
ಮಶ್ರಫೆ ಮೊರ್ತಜ ಸಿ ಧೋನಿ ಬಿ ಕುಮಾರ್‌ 8
ರುಬೆಲ್‌ ಹೊಸೈನ್‌ ಬಿ ಬುಮ್ರಾ 9
ಮುಸ್ತಫಿಜರ್‌ ಬಿ ಬುಮ್ರಾ 0
ಇತರ 12
ಒಟ್ಟು ( 48 ಓವರ್‌ಗಳಲ್ಲಿ ಆಲೌಟ್‌) 286
ವಿಕೆಟ್‌ ಪತನ: 1-39, 2-74, 3-121, 4-162, 5-173, 6-179, 7-245, 8-257, 9-286.
ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌ 9-0-51-1
ಜಸ್‌ಫ್ರೀತ್‌ ಬುಮ್ರಾ 10-1-55-4
ಮೊಹಮ್ಮದ್‌ ಶಮಿ 9-0-68-1
ಯಜುವೇಂದ್ರ ಚಹಲ್‌ 10-0-50-1
ಹಾರ್ದಿಕ್‌ ಪಾಂಡ್ಯ 10-0-60-3

ಟಾಪ್ ನ್ಯೂಸ್

Dr.Veerendra Heggade: ಡಾ.ಡಿ.ವೀರೇಂದ್ರ ಹಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Dr.Veerendra Heggade: ಡಾ.ಡಿ.ವೀರೇಂದ್ರ ಹಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Sambhal Case Follow Up:ಹೊರಗಿನವರಿಗೆ ಸಂಭಾಲ್‌ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ

Sambhal Case Follow Up:ಹೊರಗಿನವರಿಗೆ ಸಂಭಾಲ್‌ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ

Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್‌ ಫಿಕ್ಸ್

Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್‌ ಫಿಕ್ಸ್

BGT 2024: team India won the test in Perth

BGT 2024: ಪರ್ತ್‌ ನಲ್ಲಿ ಪಲ್ಟಿ ಹೊಡೆದ ಆಸೀಸ್:‌ ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ

IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್

IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್

ಕಡಬ, ಬೆಳ್ತಂಗಡಿ ಸೇರಿದಂತೆ ಅಕ್ರಮ ಮದ್ಯಮಾರಾಟದ ವಿರುದ್ದ ವಿಶೇಷ ಕಾರ್ಯಾಚರಣೆ: ಪ್ರಕರಣ ದಾಖಲು

ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ

IPL Mega Auction: Here’s what all 10 teams look like after the first day of the auction

IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BGT 2024: team India won the test in Perth

BGT 2024: ಪರ್ತ್‌ ನಲ್ಲಿ ಪಲ್ಟಿ ಹೊಡೆದ ಆಸೀಸ್:‌ ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ

IPL Mega Auction: Here’s what all 10 teams look like after the first day of the auction

IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ

IPL Mega Auction: Here’s what RCB’s team looks like after the first day of the auction

IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್‌ ಸಿಬಿ ತಂಡ ಹೀಗಿದೆ ನೋಡಿ

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Dr.Veerendra Heggade: ಡಾ.ಡಿ.ವೀರೇಂದ್ರ ಹಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Dr.Veerendra Heggade: ಡಾ.ಡಿ.ವೀರೇಂದ್ರ ಹಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Sambhal Case Follow Up:ಹೊರಗಿನವರಿಗೆ ಸಂಭಾಲ್‌ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ

Sambhal Case Follow Up:ಹೊರಗಿನವರಿಗೆ ಸಂಭಾಲ್‌ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ

Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್‌ ಫಿಕ್ಸ್

Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್‌ ಫಿಕ್ಸ್

BGT 2024: team India won the test in Perth

BGT 2024: ಪರ್ತ್‌ ನಲ್ಲಿ ಪಲ್ಟಿ ಹೊಡೆದ ಆಸೀಸ್:‌ ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ

IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್

IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.