ಬಜಕೂಡ್ಲು: ಜಲಸಂರಕ್ಷಣಾ ಅಭಿಯಾನ ಆರಂಭ

Team Udayavani, Jul 4, 2019, 5:32 AM IST

bajakoodlu

ಪೆರ್ಲ: ಕುಡಿಯುವ ನೀರಿಗಾಗಿ ಜನತೆ ಪಡುತ್ತಿರುವ ಪರದಾಟ ಭವಿಷ್ಯದಲ್ಲಿ ಕಡಿಮೆ ಮಾಡುವ ನಿಟ್ಟಿನಲ್ಲಿ ಜಲಸಂರಕ್ಷಣೆ-ಜನಜಾಗೃತಿ ಕಾರ್ಯಕ್ರಮದಲ್ಲಿ ಜನರನ್ನು ಒಟ್ಟು ಸೇರಿಸುವ ನಿಟ್ಟಿನಲ್ಲಿ ಪೆರ್ಲ ಸನಿಹದ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ಆರ್ಟ್ಸ್ ಮತ್ತು ನ್ಪೋರ್ಟ್ಸ್ ಕ್ಲಬ್‌ ಈ ಒಂದು ಜಲ ಅಭಿಯಾನ ಆರಂಭಿಸಿದೆ.

ಮಳೆನೀರು ಸಂರಕ್ಷಣೆ, ನೀರಿಂಗಿಸುವಿಕೆ, ಹೆಚ್ಚು ಸಸಿ ಗಳನ್ನು ನೆಡಲು ಜನರನ್ನು ಪ್ರಚೋದಿಸುವುದು ಇವೇ ಮುಂತಾದ ಕಾರ್ಯಗಳನ್ನು ಆಂದೋಲನದಲ್ಲಿ ಅಳವಡಿಸಿ ಕೊಳ್ಳಲಾಗಿದೆ. ಎಣ್ಮಕಜೆ ಪಂಚಾಯತ್‌ ವ್ಯಾಪ್ತಿಯಲ್ಲಿ ಹೆಚ್ಚು ಜಲಸಮೃದ್ಧಿಗೆ ಹೆಸರಾಗಿರುವ ಪಡ್ರೆ ಬಯಲು ಮತ್ತು ಬಜಕೂಡ್ಲು ಬಯಲಿನಲ್ಲಿ ಈ ಬಾರಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿ ಕಾಡಿರುವುದು ಇಲ್ಲಿನ ಜನರನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿದೆ. ಈಗಾಗಲೇ ಪಡ್ರೆ ಪ್ರದೇಶದಲ್ಲಿ ಜಲತಜ್ಞ, ಅಂಕಣಕಾರ ಶ್ರೀಪಡ್ರೆ ಅವರ ಮಾರ್ಗದರ್ಶನದಲ್ಲಿ ನೂರಾರು ಮಂದಿ ಯುವಕರು ಜಲಸಂರಕ್ಷಣೆ ಬಗ್ಗೆ ಜನರನ್ನು ಜಾಗೃತಿಗೊಳಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಬನ್ನಿ ನೀರಿಂಗಿಸೋಣ, ಭವಿಷ್ಯದ ಜೀವನ ಸುಂದರವಾಗಿಸೋಣ’

ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ಆರ್ಟ್ಸ್ ಮತ್ತು ನ್ಪೋರ್ಟ್ಸ್ ಕ್ಲಬ್‌ ವತಿಯಿಂದ ರವಿವಾರ ಈ ರೀತಿಯ ಅಭಿ ಯಾನ ಆರಂಭಿಸಲಾಗಿದೆ. ಕ್ಲಬ್‌ ಅಧ್ಯಕ್ಷ ದಾಮೋದರ್‌ ಬಜಕೂಡ್ಲು ಅವರ ನೇತೃತ್ವ ದಲ್ಲಿ ‘ಬನ್ನಿ ನೀರಿಂಗಿಸೋಣ, ಭವಿಷ್ಯದ ಜೀವನ ಸುಂದರವಾಗಿಸೋಣ’ ಎಂಬ ಘೋಷಣೆಯೊಂದಿಗೆ ಮನೆ ಮನೆಗೆ ತೆರಳಿ ಜಲಸಂರಕ್ಷಣಾ ಕಾರ್ಯದಲ್ಲಿ ಕೈಜೋಡಿಸುವಂತೆ ಮನವಿ ಮಾಡಿಕೊಳ್ಳಲಾಗುತ್ತಿದೆ. ವರ್ಷ ಪೂರ್ತಿ ಹರಿಯುತ್ತಿದ್ದ ಬಜಕೂಡ್ಲು ತೋಡು ಕಳೆದ ಕೆಲವು ವರ್ಷಗಳಿಂದ ಫೆಬ್ರವರಿ ತಿಂಗಳಲ್ಲೇ ಬತ್ತಿ ಬರಡಾಗುತ್ತಿರುವ ಬಗ್ಗೆ ಚಿಂತನೆ ನಡೆಸುವಂತೆ ಹಾಗೂ ಮನೆ ವಠಾರದಲ್ಲಿ ಬೀಳುವ ಮಳೆನೀರನ್ನು ಭೂಮಿಗೆ ಇಂಗಿಸುವ ಬಗ್ಗೆ ಜನರಿಗೆ ಮಾಹಿತಿ ನೀಡಲಾಯಿತು.

ಕ್ಲಬ್ಬಿನ ಯೋಜನೆ : ಜಲ ಸಂರಕ್ಷಣಾ ಕಾರ್ಯದಲ್ಲಿ ಊರಿನ ಜನರನ್ನು ತೊಡಗಿಸಿಕೊಳ್ಳಲು ಕ್ಲಬ್‌ ಅಭಿಯಾನ ಹಮ್ಮಿಕೊಂಡಿದೆ. ಮಳೆ ನೀರನ್ನು ಆಯಾ ಪ್ರದೇಶದಲ್ಲಿ ಭೂಮಿಗೆ ಇಂಗುವಂತೆ ಮಾಡಲು ಇಂಗುಗುಂಡಿಗಳ ನಿರ್ಮಾಣ, ಪಾಳುಬಾವಿ, ಉಪಯೋಗಶೂನ್ಯ ಕೊಳವೆಬಾವಿಗಳಿಗೆ ಜಲ ಮರುಪೂರಣ, ವ್ಯಾಪಕ ಸಸಿ ನೆಡುವಿಕೆ ಜತೆಗೆ ತಜ್ಞರಿಂದ ಮಾಹಿತಿ ವಿನಿಮಯ ಕಾರ್ಯಕ್ರಮ ಹಮ್ಮಿಕೊಳ್ಳಲು ಕ್ಲಬ್‌ ಯೋಜನೆಯಿರಿಸಿಕೊಂಡಿದೆ.

ಜಲಸಂರಕ್ಷಣಾ ಜಾಗೃತಿ ಕಾರ್ಯದಲ್ಲಿ ಕೈ ಜೋಡಿಸುವಂತೆ ನಾಗರಿಕರಲ್ಲಿ ಕ್ಲಬ್‌ ಸದಸ್ಯರು ಮನವಿ ಮಾಡಿಕೊಂಡರು.

ಟಾಪ್ ನ್ಯೂಸ್

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Ullala–Encroch

Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!

Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನವೆಂಬರ್‌ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ

ನವೆಂಬರ್‌ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ

12-

Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ

7-dharmasthala

Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Ullala–Encroch

Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.