ವಿಶ್ವವಿದ್ಯಾನಿಲಯಗಳು ಜ್ಞಾನದ ಕೇಂದ್ರಗಳಾಗಲಿ’
ಮುಕ್ಕ ಶ್ರೀನಿವಾಸ ಕಾಲೇಜಿನಲ್ಲಿ ಉಪನ್ಯಾಸ
Team Udayavani, Jul 4, 2019, 5:22 AM IST
ಸುರತ್ಕಲ್: ಶಿಕ್ಷಣ ನೀಡುವ ವಿಶ್ವವಿದ್ಯಾಲಯಗಳು ಜ್ಞಾನವೃದ್ಧಿಸುವ ಕೇಂದ್ರಗಳಾಗಬೇಕು. ವಿದ್ಯಾರ್ಥಿಗಳನ್ನು ಹಣ ಮಾಡುವ ವ್ಯಕ್ತಿಗಳನ್ನಾಗಿ ರೂಪಿಸದೆ ಪ್ರತಿಯೊಬ್ಬರಲ್ಲಿಯೂ ಜ್ಞಾನಭರಿತ ಕೌಶಲದ ಜತೆ ಸ್ವಂತ ಉದ್ದಿಮೆ ಸ್ಥಾಪಿಸುವ ನಾಯಕತ್ವ ಗುಣ ಬೆಳೆಸಬೇಕು. ಆ ಮೂಲಕ ನೂರಾರು ಮಂದಿಗೆ ಆಸರೆಯಾಗುವ ಸಾಮಾಜಿಕ ಜವಾಬ್ದಾರಿಯುತ ಪ್ರಜೆಗಳನ್ನು ದೇಶಕ್ಕೆ ನೀಡಬೇಕು ಎಂದು ನಾಗಾಲ್ಯಾಂಡ್- ಮಣಿಪುರ ರಾಜ್ಯಪಾಲ ಪಿ.ಬಿ. ಆಚಾರ್ಯ ಹೇಳಿದರು.
ಮುಕ್ಕದಲ್ಲಿರುವ ಶ್ರೀನಿವಾಸ ಕಾಲೇಜಿನಲ್ಲಿ ‘ಭಾರತದಲ್ಲಿ ಉನ್ನತ ಶಿಕ್ಷಣದಲ್ಲಿರುವ ಸವಾಲುಗಳುಮತ್ತು ರಾಷ್ಟ್ರೀಯ ಶಿಕ್ಷಣ ನೀತಿಯ ಪಾತ್ರ’ ಕುರಿತು ಬುಧವಾರ ಅವರು ಉಪನ್ಯಾಸ ನೀಡಿದರು.
ಶಿಕ್ಷಣಕ್ಕೆ ನಿರ್ದಿಷ್ಟ ಗುರಿ ಹಾಗೂ ಸಾಧನೆಯ ಯೋಜನೆಯಿರಬೇಕು. ದೇಶಕ್ಕೆ ಗೌರವ ಕೊಡುವ ಶಿಕ್ಷಣಕೆ ಹಳ್ಳಿವರೆಗಿನ ಜೀವನ ಮಟ್ಟವನ್ನು ಸುಧಾರಿ ಸುವ ಶಕ್ತಿಯನ್ನು ನೀಡಬೇಕು. ಇಂದು ವಿದ್ಯಾಲಯಗಳಿಂದ ಡಿಗ್ರಿ ಪಡೆದವರು ಹೊರಬರುತ್ತಾರೆ. ಆದರೆ ಸಾಮಾಜಿಕ ಜವಾಬ್ದಾರಿಯ ಕೊಡುಗೆಯ ಬಗ್ಗೆ ತಿಳಿದಿರುವುದಿಲ್ಲ ಎಂದರು.
ದೇಶದಲ್ಲಿರುವ ಹಣವಂತರು ಇನ್ನಷ್ಟು ಬರಲಿ ಎಂದು ಕಾಯುತ್ತಿದ್ದರೆ ಬಿಲ್ಗೇಟ್ಸ್‌ನಂತಹ ಮೇರು ವ್ಯಕ್ತಿಗಳು ತಮ್ಮ ಸಂಪತ್ತನ್ನು ಜ್ಞಾನವೃದ್ಧಿಗೆ ದಾನ ಮಾಡುತ್ತಿದ್ದಾರೆ. ಇಂತಹ ಉತ್ತಮ ಸಂಖ್ಯೆ ದೇಶದಲ್ಲಿಯೂ ವೃದ್ಧಿಯಾಗಲಿ ಎಂದರು.
ಭಾರತದ ಚಿಕ್ಕ ಗಡಿಭಾಗದ ರಾಜ್ಯಗಳು ಮುಂದುವರಿಯುವ ಶಕ್ತಿಯನ್ನು ಪಡೆದುಕೊಂಡಿವೆ. ನಮ್ಮ ಜಿಲ್ಲೆಯ ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಅಲ್ಲಿನ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಇದು ಶಿಕ್ಷಣದಿಂದ ಆಗುತ್ತಿರುವ ಬದಲಾವಣೆ. ಆಂಗ್ಲ ಭಾಷೆಯೊಂದಿಗೆ ನಮ್ಮ ಮಾತೃಭಾಷೆಯನ್ನೂ ಪ್ರೀತಿಸಿ ಅದರ ಗೌರವವನ್ನೂ ಹೆಚ್ಚಿಸಬೇಕು ಎಂದರು.
ಸುಮಾರು 13 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಅನುಕೂಲ ಕಲ್ಪಿಸಿರುವ ಶ್ರೀನಿವಾಸ ಸಮೂಹ ಶಿಕ್ಷಣ ಸಂಸ್ಥೆಯನ್ನು ಶ್ಲಾಘಿಸಿದರು.
ವಿಶ್ವ ವಿದ್ಯಾಲಯದ ಚಾನ್ಸಲರ್ ಸಿಎ ಎ. ರಾಘವೇಂದ್ರ ರಾವ್ ಅಧ್ಯಕ್ಷತೆ ವಹಿಸಿದ್ದರು. ಚಾನ್ಸಲರ್ ಡಾ| ಎ. ಶ್ರೀನಿವಾಸ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ರಿಜಿಸ್ಟ್ರಾರ್ ಡಾ| ಅನಿಲ್ ಕುಮಾರ್, ಡಾ| ಅಜಯ್ ಕೆ.ಜಿ., ಡಾ| ಶ್ರೀನಿವಾಸ್ ಮಯ್ಯ, ಸಂಸ್ಥೆಯ ಉನ್ನತ ಅಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.
ವೈಸ್ ಚಾನ್ಸೆಲರ್ ಡಾ| ಪಿ.ಎಸ್. ಐತಾಳ್ ಸ್ವಾಗತಿಸಿದರು. ಶಾಹಿಸ್ತಾಬಾನು ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.