‘ರಾಜ್ಯ ಹೆದ್ದಾರಿಯಲ್ಲಿ ತ್ಯಾಜ್ಯ ಸುರಿದರೆ, ಕಠಿನ ಕ್ರಮ’
ಕಿಲ್ಪಾಡಿ ಗ್ರಾ. ಪಂ. ಗ್ರಾಮಸಭೆ
Team Udayavani, Jul 4, 2019, 5:36 AM IST
ಮೂಲ್ಕಿ: ಕಿಲ್ಪಾಡಿ ಗ್ರಾ.ಪಂ. ವ್ಯಾಪ್ತಿಯ ರಾಜ್ಯ ಹೆದ್ದಾರಿಯಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುವವರ ವಿರುದ್ಧ ಕಠಿನ ಕ್ರಮ ಜರಗಿಸಲಾಗುವುದು. ಅಂತಹವರು ಕಂಡರೆ ಸ್ಥಳೀಯಾಡಳಿತಕ್ಕೆ ಸಾರ್ವಜನಿಕರು ಮಾಹಿತಿ ಕೊಟ್ಟು ಸಹಕರಿಸಬೇಕು ಎಂದು ಜಿ.ಪಂ. ಸದಸ್ಯ ವಿನೋದ್ ಬೊಳ್ಳೂರು ಹೇಳಿದರು.
ಕಿಲ್ಪಾಡಿಯ ಮೆಡಲಿನ್ ಶಾಲಾ ಸಭಾ ಭವನದಲ್ಲಿ ಜರಗಿದ ಕಿಲ್ಪಾಡಿ ಗ್ರಾ. ಪಂ.ನ ವರ್ಷದ ಪ್ರಥಮ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು.
ಪಂಚಾಯತ್ ಅಧ್ಯಕ್ಷ ಶ್ರೀಕಾಂತ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಅಕ್ಷರ ದಾಸೋಹ ಅಧಿಕಾರಿ ರಾಜೇಶ್ ನೋಡಲ್ ಅಧಿಕಾರಿಯಾಗಿದ್ದರು.
ತಾಯಿ ಕಾರ್ಡ್ ಕಡ್ಡಾಯ
ಇನ್ನು ಮುಂದೆ ಹೆತ್ತ ಮಗುವಿನ ಜನನ ದಾಖಲೆ ಬೇಕಾದರೆ ಸರಕಾರದ ತಾಯಿ ಕಾರ್ಡು ಕಡ್ಡಾಯ ಬೇಕು ಎಂಬ ಕಾನೂನು ಇರುವುದರಿಂದ ಆದಷ್ಟು ತಾಯಂದಿರು ಈ ವ್ಯವಸ್ಥೆಗೆ ನೋಂದಣಿಗೆೆ ಮುಂದಾಗುವಂತೆ ಆರೋಗ್ಯ ಇಲಾಖೆಯ ಸುಮಾ ಸಭೆಯಲ್ಲಿ ಪ್ರಕಟಿಸಿದರು.
ತಾ.ಪಂ. ಸದಸ್ಯ ಶರತ್ ಕುಬೆವೂರು, ಪಂಚಾಯತ್ ಸದಸ್ಯರಾದ ಗೋಪಿನಾಥ ಪಡಂಗ, ಅಬ್ದುಲ್ ಶರೀಫ್, ದಮಯಂತಿ, ಸುನೀತಾ ಆಚಾರ್, ಸಾವಿತ್ರಿ, ಶಾಂತಾ ಮೊದಲಾದವರು ಚರ್ಚೆಯಲ್ಲಿ ಭಾಗವಹಿಸಿದ್ದರು.
ಪಿಡಿಒ ಹರಿಶ್ಚಂದ್ರ ಸಭೆಯ ನಡವಳಿಕೆಯ ನಿರ್ಣಯಗಳನ್ನು ದಾಖಲಿಸಿಕೊಂಡರು. ಕಾರ್ಯದರ್ಶಿ ರಮೇಶ್ ಬಂಗೇರ ವಾರ್ಡ್ ಸಭೆ ಮತ್ತು ಕಚೇರಿ ನಡವಳಿಕೆಯ ವರದಿ ಮಂಡಿಸಿದರು. ಕಂದಾಯ ಅಧಿಕಾರಿ ಮಂಜುನಾಥ್, ಕೃಷಿ ಅಧಿಕಾರಿ ಬಶೀರ್, ಪಂಚಾಯತ್‌ರಾಜ್ ಎಂಜಿನಿಯರ್ ಪ್ರಶಾಂತ್ ಆಳ್ವ, ಸಮಾಜ ಕಲ್ಯಾಣ ಇಲಾ ಖೆಯ ಶುಭಾ ನಾಯಕ್, ಅಂಗನವಾಡಿ ಇಲಾಖೆಯ ನಾಗರತ್ನಾ, ಜಾನುವಾರು ಅಧಿಕಾರಿ ಸಂಪತ್‌ಕುಮಾರ್, ಮೆಸ್ಕಾಂ ಎಂಜಿನಿಯರ್ ವಿವೇಕನಂದ ಶೆಣೈ, ಆರೋಗ್ಯ ಇಲಾಖೆ ಸಹಾಯಕಿ ಸುಮಾ, ಪೊಲೀಸ್ ಇಲಾಖೆ ಮಹೇಶ್ ಎಚ್.ಕೆ., ಇಲಾಖೆಯ ಯೋಜನೆ ಮತ್ತು ಸರಕಾರದ ಸವಲತ್ತುಗಳ ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kinnigoli: ದ್ವಿಚಕ್ರ ವಾಹನಗಳ ಢಿಕ್ಕಿ; ಸವಾರ ಮೃತ್ಯು
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.