ಇಂಗ್ಲೆಂಡಿಗೆ ಸಿಕ್ಕಿತು ಸೆಮಿ ಟಿಕೆಟ್
Team Udayavani, Jul 4, 2019, 5:05 AM IST
ಚೆಸ್ಟರ್ ಲೀ ಸ್ಟ್ರೀಟ್: ಆತಿಥೇಯ ಇಂಗ್ಲೆಂಡ್ ವಿಶ್ವಕಪ್ ಸೆಮಿಫೈನಲ್‌ಗೆ ಲಗ್ಗೆ ಇರಿಸಿದೆ. ಬುಧವಾರದ “ಕ್ವಾರ್ಟರ್ ಫೈನಲ್’ ಮಹತ್ವ ಪಡೆದ ಪಂದ್ಯದಲ್ಲಿ ಅದು ನ್ಯೂಜಿಲ್ಯಾಂಡನ್ನು 119 ರನ್ನುಗಳ ಭಾರೀ ಅಂತರದಿಂದ ಮಣಿಸಿ ನಾಕೌಟ್ ಪ್ರವೇಶಿಸಿತು.
ಆರಂಭಕಾರ ಜಾನಿ ಬೇರ್‌ಸ್ಟೊ ಬಾರಿಸಿದ ಸತತ ಶತಕ ಪರಾಕ್ರಮದಿಂದ ಇಂಗ್ಲೆಂಡ್ 8 ವಿಕೆಟಿಗೆ 305 ರನ್ ಮಾಡಿ ಸವಾಲೊಡ್ಡಿದರೆ, ನ್ಯೂಜಿಲ್ಯಾಂಡ್ 45 ಓವರ್‌ಗಳಲ್ಲಿ 186ಕ್ಕೆ ಆಲೌಟ್ ಆಯಿತು.
ಇಂಗ್ಲೆಂಡ್ ಒಟ್ಟು 12 ಅಂಕಗಳೊಂದಿಗೆ ತನ್ನ ಲೀಗ್ ಅಭಿಯಾನ ಮುಗಿಸಿತು. ಸದ್ಯ ಮಾರ್ಗನ್ ಪಡೆ 3ನೇ ಸ್ಥಾನದಲ್ಲಿದೆ. ನ್ಯೂಜಿಲ್ಯಾಂಡ್ ಸೋತರೂ 11 ಅಂಕ ಹೊಂದಿರುವುದರಿಂದ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಪಾಕಿಸ್ಥಾನ ಶುಕ್ರವಾರದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಭಾರೀ ಅಂತರದಿಂದ ಮಣಿಸಿ ರನ್‌ರೇಟ್ ಹೆಚ್ಚಿಸಿಕೊಂಡರಷ್ಟೇ ಕಿವೀಸ್ ಆಟ ಕೊನೆಗೊಳ್ಳುತ್ತದೆ. ಆಗ ಇತ್ತಂಡಗಳ ಅಂಕವೂ 11ರಲ್ಲಿ ನಿಲ್ಲುತ್ತದೆ.
ಬೇರ್‌ಸ್ಟೊ ಸತತ ಶತಕ
ಭಾರತದೆದುರು 111 ರನ್ ಬಾರಿಸಿದ್ದ ಬೇರ್‌ಸ್ಟೊ ಬುಧವಾರ ಇಲ್ಲಿನ “ರಿವರ್‌ಸೈಡ್ ಗ್ರೌಂಡ್’ನಲ್ಲಿ ನ್ಯೂಜಿಲ್ಯಾಂಡನ್ನೂ ಕಾಡಿದರು. ಇದರೊಂದಿಗೆ ವಿಶ್ವಕಪ್ ಕೂಟವೊಂದರಲ್ಲಿ ಸತತ 2 ಶತಕ ಬಾರಿಸಿದ ಇಂಗ್ಲೆಂಡಿನ ಮೊದಲ ಕ್ರಿಕೆಟಿಗನೆಂಬ ಹೆಗ್ಗಳಿಕೆಗೆ ಪಾತ್ರರಾದರು.
32ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡ ಜಾನಿ ಬೇರ್‌ಸ್ಟೊ ಜಬರ್ದಸ್ತ್ ಬ್ಯಾಟಿಂಗ್ ಮೂಲಕ ವಿಲಿಯಮ್ಸನ್ ಪಡೆಗೆ ಸವಾಲಾಗಿ ಪರಿಣಮಿಸಿದರು. ಸಿಡಿಸಿದ್ದು 15 ಬೌಂಡರಿ ಮತ್ತು ಒಂದು ಸಿಕ್ಸರ್.
ಮತ್ತೂಬ್ಬ ಆರಂಭಕಾರ ಜಾಸನ್ ರಾಯ್ ಅವರ ಆಟವೂ ಬೊಂಬಾಟ್ ಆಗಿತ್ತು. ರಾಯ್ ಕೊಡುಗೆ 60 ರನ್. 61 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಸೇರಿತ್ತು. ರಾಯ್-ಬೇರ್‌ಸ್ಟೊ ಬಿರುಸಿನ ಆಟವಾಡಿ 18.4 ಓವರ್‌ಗಳಲ್ಲಿ 123 ರನ್ ಪೇರಿಸಿದರು.
ಇವರಿಬ್ಬರನ್ನು ಹೊರತುಪಡಿಸಿದರೆ ಇಂಗ್ಲೆಂಡ್ ಸರದಿಯಲ್ಲಿ 42 ರನ್ ಮಾಡಿದ ನಾಯಕ ಇಯಾನ್ ಮಾರ್ಗನ್ ಅವರದೇ ಹೆಚ್ಚಿನ ಗಳಿಕೆ (40 ಎಸೆತ, 5 ಬೌಂಡರಿ).
30ನೇ ಓವರ್ ಬಳಿಕ ಬ್ರೇಕ್
30ನೇ ಓವರ್ ವೇಳೆ ಇಂಗ್ಲೆಂಡ್ ಒಂದೇ ವಿಕೆಟಿಗೆ 194 ರನ್ ಪೇರಿಸಿ ಬೃಹತ್ ಮೊತ್ತದ ಸೂಚನೆ ನೀಡಿತ್ತು. ಆದರೆ ಇಲ್ಲಿಂದ ಮುಂದೆ ನ್ಯೂಜಿಲ್ಯಾಂಡ್ ಬೌಲರ್‌ಗಳು ಮೇಲುಗೈ ಸಾಧಿಸಿದರು. ಪಿಚ್ ಕೂಡ ತಿರುವು ಪಡೆಯಲಾರಂಭಿಸಿತು. 24 ರನ್ ಮಾಡಿದ ರೂಟ್ ವಿಕೆಟನ್ನು ಬೌಲ್ಟ್ ಹಾರಿಸುವುದರೊಂದಿಗೆ ಇಂಗ್ಲೆಂಡ್ ರನ್ ಗತಿಯಲ್ಲಿ ಇಳಿಕೆಯಾಯಿತು. ನ್ಯೂಜಿಲ್ಯಾಂಡ್ ಪರ ಟ್ರೆಂಟ್ ಬೌಲ್ಟ್, ಮ್ಯಾಟ್ ಹೆನ್ರಿ ಮತ್ತು ಜೇಮ್ಸ್ ನೀಶಮ್ ತಲಾ 2 ವಿಕೆಟ್ ಉರುಳಿಸಿದರು. ಈ ಕೂಟದಲ್ಲಿ ಮೊದಲ ಸಲ ಆಡಲಿಳಿದ ಟಿಮ್ ಸೌಥಿ 9 ಓವರ್‌ಗಳಲ್ಲಿ 70 ರನ್ ನೀಡಿ ದುಬಾರಿಯಾದರು.
ಸ್ಕೋರ್ ಪಟ್ಟಿ
ಇಂಗ್ಲೆಂಡ್
ಜಾಸನ್ ರಾಯ್ ಸಿ ಸ್ಯಾಂಟ್ನರ್ ಬಿ ನೀಶಮ್ 60
ಜಾನಿ ಬೇರ್‌ಸ್ಟೊ ಬಿ ಹೆನ್ರಿ 106
ಜೋ ರೂಟ್ ಸಿ ಲ್ಯಾಥಮ್ ಬಿ ಬೌಲ್ಟ್ 24
ಜಾಸ್ ಬಟ್ಲರ್ ಸಿ ವಿಲಿಯಮ್ಸನ್ ಬಿ ಬೌಲ್ಟ್ 11
ಇಯಾನ್ ಮಾರ್ಗನ್ ಸಿ ಸ್ಯಾಂಟ್ನರ್ ಬಿ ಹೆನ್ರಿ 42
ಬೆನ್ ಸ್ಟೋಕ್ಸ್ ಸಿ ಹೆನ್ರಿ ಬಿ ಸ್ಯಾಂಟ್ನರ್ 11
ಕ್ರಿಸ್ ವೋಕ್ಸ್ ಸಿ ವಿಲಿಯಮ್ಸನ್ ಬಿ ನೀಶಮ್ 4
ಲಿಯಮ್ ಪ್ಲಂಕೆಟ್ ಔಟಾಗದೆ 15
ಆದಿಲ್ ರಶೀದ್ ಬಿ ಸೌಥಿ 16
ಜೋಫÅ ಆರ್ಚರ್ ಔಟಾಗದೆ 1
ಇತರ 15
ಒಟ್ಟು (50 ಓವರ್‌ಗಳಲ್ಲಿ 8 ವಿಕೆಟಿಗೆ) 305
ವಿಕೆಟ್ ಪತನ: 1-123, 2-194, 3-206, 4-214, 5-248, 6-259, 7-272, 8-301.
ಬೌಲಿಂಗ್:ಮಿಚೆಲ್ ಸ್ಯಾಂಟ್ನರ್ 10-0-65-1
ಟ್ರೆಂಟ್ ಬೌಲ್ಟ್ 10-0-56-2
ಟಿಮ್ ಸೌಥಿ 9-0-70-1
ಮ್ಯಾಟ್ ಹೆನ್ರಿ 10-0-54-2
ಗ್ರ್ಯಾಂಡ್‌ಹೋಮ್ 1-0-11-0
ಜೇಮ್ಸ್ ನೀಶಮ್ 10-1-41-2
ನ್ಯೂಜಿಲ್ಯಾಂಡ್
ಮಾರ್ಟಿನ್ ಗಪ್ಟಿಲ್ ಸಿ ಬಟ್ಲರ್ ಬಿ ಆರ್ಚರ್ 8
ಹೆನ್ರಿ ನಿಕೋಲ್ಸ್ ಎಲ್‌ಬಿಡಬ್ಲ್ಯು ವೋಕ್ಸ್ 0
ಕೇನ್ ವಿಲಿಯಮ್ಸನ್ ರನೌಟ್ 27
ರಾಸ್ ಟೇಲರ್ ರನೌಟ್ 28
ಟಾಮ್ ಲ್ಯಾಥಂ ಸಿ ಬಟ್ಲರ್ ಬಿ ಪ್ಲಂಕೆಟ್ 57
ಜೇಮ್ಸ್ ನೀಶಮ್ ಬಿ ವುಡ್ 19
ಸಿ. ಗ್ರ್ಯಾಂಡ್‌ಹೋಮ್ ಸಿ ರೂಟ್ ಬಿ ಸ್ಟೋಕ್ಸ್ 3
ಮಿಚೆಲ್ ಸ್ಯಾಂಟ್ನರ್ ಎಲ್‌ಬಿಡಬ್ಲ್ಯು ವುಡ್ 12
ಟಿಮ್ ಸೌಥಿ ಔಟಾಗದೆ 7
ಮ್ಯಾಟ್ ಹೆನ್ರಿ ಬಿ ವುಡ್ 7
ಟ್ರೆಂಟ್ ಬೌಲ್ಟ್ ಸ್ಟಂಪ್ಡ್ ಬಟ್ಲರ್ ಬಿ ರಶೀದ್ 4
ಇತರ 14
ಒಟ್ಟು (45 ಓವರ್‌ಗಳಲ್ಲಿ ಆಲೌಟ್) 186
ವಿಕೆಟ್ ಪತನ: 1-2, 2-14, 3-61, 4-69, 5-123, 6-128, 7-164, 8-166, 9-181.
ಬೌಲಿಂಗ್:ಕ್ರಿಸ್ ವೋಕ್ಸ್ 8-0-44-1
ಜೋಫÅ ಆರ್ಚರ್ 7-1-17-1
ಲಿಯಮ್ ಪ್ಲಂಕೆಟ್ 8-0-28-1
ಮಾರ್ಕ್ ವುಡ್ 9-0-34-3
ಜೋ ರೂಟ್ 3-0-15-0
ಆದಿಲ್ ರಶೀದ್ 5-0-30-1
ಬೆನ್ ಸ್ಟೋಕ್ಸ್ 5-0-10-1
ಪಂದ್ಯಶ್ರೇಷ್ಠ: ಜಾನಿ ಬೇರ್‌ಸ್ಟೊ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.