ಮುಂಬಯಿಯಲ್ಲಿ ಮಳೆ: ವಿಮಾನ ಸೇವೆ ವ್ಯತ್ಯಯ
Team Udayavani, Jul 4, 2019, 5:50 AM IST
ಮಂಗಳೂರು: ಮುಂಬಯಿಯಲ್ಲಿ ಭಾರೀ ಮಳೆಯ ಕಾರಣದಿಂದ ಮಂಗಳೂರಿಗೆ ಆಗಮನ-ನಿರ್ಗಮನದ ವಿಮಾನ ಸೇವೆಯಲ್ಲಿಯೂ ವ್ಯತ್ಯಯವಾಗಿದೆ.
ಮುಂಬಯಿಯಿಂದ ಆಗಮಿಸುವ ಇಂಡಿಗೋ ವಿಮಾನ ಬುಧವಾರ ರದ್ದುಗೊಂಡಿದ್ದು, ಮಧ್ಯಾಹ್ನ ಬರಬೇಕಿದ್ದ ಏರ್‌ಇಂಡಿಯಾ ವಿಮಾನ ಸಂಜೆ ವೇಳೆಗೆ ಮಂಗಳೂರಿಗೆ ಆಗಮಿಸಿದೆ. ಸಂಜೆಯ ಇಂಡಿಗೋ ವಿಮಾನ ಕೂಡ ತಡವಾಗಿ ಆಗಮಿಸಿದೆ.
ವಿಮಾನ ರದ್ದು: ಪೇಜಾವರ ಶ್ರೀ ಬೆಂಗಳೂರಿಗೆ
ಉಡುಪಿ: ಮುಂಬಯಿಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವುದಕ್ಕಾಗಿ ತೆರಳಿದ್ದ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಶ್ರೀಪಾದರು ಮಂಗಳೂರು ವಿಮಾನ ರದ್ದಾದ ಕಾರಣ ಮುಂಬಯಿಯಿಂದ ಬೆಂಗಳೂರಿಗೆ ತೆರಳಿದ್ದು ಬುಧವಾರ ರಾತ್ರಿ ರೈಲಿನಲ್ಲಿ ಉಡುಪಿ ಕಡೆಗೆ ಪ್ರಯಾಣ ಬೆಳೆಸಲಿದ್ದಾರೆ.
ಮಂಗಳವಾರ ಸಾಂತಾಕ್ರೂಜ್‌ಗೆಂದು ರೈಲಿನಲ್ಲಿ ತೆರಳಿದ್ದಾಗ ಭಾರೀ ಮಳೆಯ ಪರಿಣಾಮ ಬೊರಿವಿಲಿಯಲ್ಲಿಯೇ ರೈಲು ನಿಲುಗಡೆಯಾಯಿತು. ಅನಂತರ ಟ್ಯಾಕ್ಸಿಯಲ್ಲಿ ಡೊಂಬಿವಿಲಿ ವರೆಗೆ ತೆರಳಲು ಮುಂದಾದಾಗ ಕೆಲವು ಟ್ಯಾಕ್ಸಿ ಯವರು ನಿರಾಕರಿಸಿದರು. ಗುಲ್ಬರ್ಗ ಮೂಲದ ಟ್ಯಾಕ್ಸಿ ಚಾಲಕ ಶರ್ಪುದ್ದೀನ್ ಮಲೀಕ್ ಶ್ರೀಗಳನ್ನು ಡೊಂಬಿವಿಲಿ ವರೆಗೆ ಕರೆದೊಯ್ದರು. ಅನಂತರ ಮಠದ ವಾಹನದ ಮೂಲಕ ಶ್ರೀಗಳು ಮಠಕ್ಕೆ ತೆರಳಿದರು. ಬುಧವಾರ ಬೆಳಗ್ಗೆ 9.15ಕ್ಕೆ ಮಂಗಳೂರಿಗೆ ನಿಗದಿಯಾಗಿದ್ದ ವಿಮಾನ ರದ್ದಾಯಿತು. 1.15ಕ್ಕೆ ಬೆಂಗಳೂರು ಕಡೆಗೆ ಹೋಗುವ ವಿಮಾನ ನಿಗದಿಯಾಯಿತು. ಅದು ಕೂಡ ವಿಳಂಬವಾಗಿ 3 ಗಂಟೆಗೆ ಹಾರಾಟ ನಡೆಸಿತು. ಶ್ರೀಗಳು ಸಂಜೆ ಬೆಂಗಳೂರು ತಲುಪಿದರು.
ಕೆಲವು ನಗರಗಳಲ್ಲಿ ಕೆಲವು ಪ್ರದೇಶಗಳಿಗೆ ಕೆಲವು ಮಂದಿ ಟ್ಯಾಕ್ಸಿ ಚಾಲಕರು ಬರುವುದಿಲ್ಲ. ಹಿಂದೆಯೂ ಅಂತಹ ಅನುಭವವಾಗಿದೆ. ಬೊರಿವಿಲಿ ಯಲ್ಲಿ ಮಳೆಯೂ ಇತ್ತು. ಕೆಲವು ಟ್ಯಾಕ್ಸಿಗಳನ್ನು ವಿಚಾರಿಸುತ್ತಿದ್ದಾಗ ಒಂದು ಟ್ಯಾಕ್ಸಿಯವರು (ಶಫುರ್ದ್ದೀನ್) ಬರಲು ಒಪ್ಪಿದರು ಎಂದು ಪೇಜಾವರ ಶ್ರೀಗಳ ಆಪ್ತಸಹಾಯಕರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.