ಮೋಹನಚಂದ್ರಗೆ ಸಿಜಿಕೆ ರಂಗ ಪುರಸ್ಕಾರ
Team Udayavani, Jul 5, 2019, 5:00 AM IST
ಸಿಜಿಕೆ ಬೀದಿ ರಂಗ ದಿನದ ನೆನಪಿನಲ್ಲಿ ಪ್ರತೀ ಜಿಲ್ಲೆಯಲ್ಲಿ ನೀಡುವ ರಂಗ ಪುರಸ್ಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ರಂಗಕರ್ಮಿ ಮೋಹನಚಂದ್ರ ಯು. ಇವರು ಆಯ್ಕೆಯಾಗಿದ್ದಾರೆ.
ಮೋಹನಚಂದ್ರ ಯು. ಕರ್ನಾಟಕದ ನಾಟಕ ಕ್ಷೇತ್ರದಲ್ಲಿ ನಾಲ್ಕು ದಶಕಗಳಿಂದ ನಿರಂತರವಾಗಿ ದುಡಿಯುತ್ತಿರುವ ರಂಗಕರ್ಮಿ, ಪ್ರೊಸೀನಿಯಮ್ ಹಾಗೂ ಬೀದಿನಾಟಕದಲ್ಲಿ ಸತತವಾಗಿ ಕೆಲಸ ಮಾಡುತ್ತಿರುವ ಪ್ರತಿಭಾವಂತ ನಿರ್ದೇಶಕ. ತೃತೀಯ ರಂಗಭೂಮಿಯ ಜನಕ ಬಾದಲ್ ಸರ್ಕಾರ್ ಜೊತೆ ನಿಕಟವಾಗಿ ಕೆಲಸ ಮಾಡಿರುವ ಇವರು ಕರ್ನಾಟಕದ ಉದ್ದಗಲದಲ್ಲಿ ಸಂಚರಿಸಿ ಬೀದಿ ನಾಟಕ ತಂಡಗಳನ್ನು ಕಟ್ಟಿ ಪರಿಣಾಮಕಾರಿ ನಾಟಕಗಳನ್ನು ಮಾಡಿಸಿದವರು. “ಸಮುದಾಯ’ದಲ್ಲಿ ಕೆಲಸ ಮಾಡಿರುವ ಇವರು ಸಾಕಷ್ಟು ರಾಜ್ಯಮಟ್ಟದ ಜಾಥಾಗಳನ್ನು ಯಶಸ್ವಿಯಾಗಿ ನಿರ್ವಹಿಸಿ¨ªಾರೆ. “ನೀನಾಸಂ’ನಲ್ಲಿ ನಾಟಕ ಪದವಿಯನ್ನು ಪಡೆದು ಜನಜಾಗೃತಿಗಾಗಿ ನಾಟಕ ಮಾಧ್ಯಮವನ್ನು ವಿವಿಧ ರೀತಿಯಲ್ಲಿ ಬಳಸಿ ಕೆಲವು ಹೊಸ ಪ್ರಕಾರಗಳನ್ನು ಯಶಸ್ವಿಯಾಗಿ ಹುಟ್ಟುಹಾಕಿದ್ದಾರೆ. ತೀಕ್ಷ್ಣವಾದ ವಿಚಾರಧಾರೆ, ನಿಷ್ಠುರವಾದ ಮಾತು, ಖಚಿತವಾದ ನಿಲುವಿನ, ಗಂಭೀರ ವ್ಯಕ್ತಿತ್ವದ ಇವರು ನಿರ್ದೇಶಿಸಿದ ಪ್ರಮುಖ ನಾಟಕಗಳು “ತಾಯಿ’, “ಕತ್ತಲೆ ದಾರಿ ದೂರ’, “ಗ್ರಾಮಚಾವಡಿ’, “ಬಸ್ತಿ’, “ನೆಮ್ಮದಿ ಅಪಾಮೆಂಟ್’, “ಜ್ಯೂಲಿಯಸ್ ಸೀಝರ್’, “ದಂಗೆಯ ಮುಂಚಿನ ದಿನಗಳು’ ಹಾಗೂ “ಸಂಪಿಗೆ ನಗರ ಪೋಲೀಸ್ ಸ್ಟೇಶನ್’.
ಕರ್ನಾಟಕ ಬೀದಿ ನಾಟಕ ಅಕಾಡೆಮಿಯ ಈ ಪುರಸ್ಕಾರವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾದುವ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಮೆಂಟ್ ಇದರ ನಾಟಕ ತಂಡವಾದ ಪಾದುವ ರಂಗ ಅಧ್ಯಯನ ಕೇಂದ್ರ, ಅಸ್ತಿತ್ವ(ರಿ.) ಮಂಗಳೂರು ಹಾಗೂ ಅರೆಹೊಳೆ ಪ್ರತಿಷ್ಠಾನ ಜಂಟಿಯಾಗಿ ಪುರಸ್ಕೃತರಿಗೆ ನೀಡುತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.