ಕುಂಬ್ಡಾಜೆ ಗ್ರಾ.ಪಂ. ಕಚೇರಿಗೆ ಬಿಜೆಪಿ ಮಾರ್ಚ್‌


Team Udayavani, Jul 5, 2019, 4:00 PM IST

bd

ಬದಿಯಡ್ಕ: ಕುಂಬ್ಡಾಜೆ ಗ್ರಾ.ಪಂ.ನ ಯುಡಿಎಫ್‌ ಆಡಳಿತ ಸಂಪೂರ್ಣ ನಿಷ್ಕ್ರಿಯವಾಗಿದ್ದು ಅಭಿವೃದ್ಧಿ ವಿಚಾರದಲ್ಲಿ ಬೇಜವಬ್ದಾರಿತನದ ನಿಲುವನ್ನು ತೋರುತ್ತಿರುವ ಆಡಳಿತ ವರ್ಗ ಸಾಧಾರಣ ಜನರ ಸಮಸ್ಯೆಗಳಿಗೆ ಸ್ಪಂಧಿಸದಿರುವುದು ಖಂಡನಾರ್ಹವಾಗಿದೆ ಎಂದು ಬಿಜೆಪಿ ದೇಶೀಯ ಸಮಿತಿ ಸದಸ್ಯರಾದ ಎಂ. ಸಂಜೀವ ಶೆಟ್ಟಿ ಆರೊಪಿಸಿದರು.

ಗ್ರಾ.ಪಂ. ಕಚೇರಿ ಸಮೀಪವಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡವನ್ನು ಆದಷ್ಟು ಬೇಗ ಜನೋಪಯೋಗಕ್ಕೆ ಬಿಟ್ಟು ಕೊಡುವಲ್ಲಿ ಮುತುವರ್ಜಿ ವಹಿಸುವಲ್ಲಿ ಯುಡಿಎಫ್‌ ಆಡಳಿತ ಮುಂದೆ ಬರಬೇಕೆಂದು ಅವರು ಹೇಳಿದರು. ಕುಂಬ್ಡಾಜೆ ಗ್ರಾ.ಪಂ.ನ ಯುಡಿಎಫ್‌ ಆಡಳಿತ ಬೇಜವಬ್ದಾರಿತನದ ನಿಲುವಿಗೆದುರಾಗಿ ಬಿಜೆಪಿ ಕುಂಬ್ಡಾಜೆ ಪಂಚಾಯತು ಸಮಿತಿಯ ನೇತೃತ್ವದಲ್ಲಿ ಕುಂಬ್ಡಾಜೆಗ್ರಾ.ಪಂ. ಕಚೇರಿಗೆ ನಡೆದ ಮಾರ್ಚ್‌ನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಿಜೆಪಿ ಕುಂಬ್ಡಾಜೆ ಪಂಚಾಯತು ಸಮಿತಿ ಅಧ್ಯಕ್ಷರಾದ ಬಿ.ರಾಜೇಶ್‌ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಆಡಳಿತದಲ್ಲಿರುವ ಯುಡಿಎಫ್‌ ಆಡಳಿತಕ್ಕೆ ಜನರ ಬಗ್ಗೆ ಯಾವುದೇ ಕಾಲಜಿ ಇಲ್ಲ. ಹಲವಾರು ವರ್ಷಗಳಿಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಹಾಗೂ ಅದರ ಸಬ್‌ಸೆಂಟರ್‌ಗಳ ಕಟ್ಟಡಗಳು ಪೊದೆ ಕಾಡುಗಳಿಂದ ತುಂಬಿದ್ದರೂ ಅದನ್ನು ಜನೋಪಯೋಗಕ್ಕೆ ಬಿಟ್ಟುಕೊಡಲು ಆಡಳಿತ ವರ್ಗ ಮುಂದೆ ಬರದಿರುವುದು ಜನರ ಬಗ್ಗೆ ಅವರಿಗಿರುವ ಬೇಜಬ್ದಾರಿಯನ್ನು ಎತ್ತಿ ತೋರಿಸುತ್ತಿದೆಯೆಂದೂ ಆರೋಪಿಸಿದರು.

ಎಂಡೋಸಲ್ಫಾನ್‌ ಮಕ್ಕಳಿಗಾಗಿ ನಿರ್ಮಿಸಿರುವ ಬಡ್ಸ್‌ ಶಾಲೆಯ ಕಾರ್ಯಚಟುವಟಿಕೆಯನ್ನು ಇದುವರೆಗೂ ಪ್ರಾರಂಭಿಸಿಲ್ಲ. ಪಿಎಚ್‌ಸಿ ಕಟ್ಟಡವನ್ನು ಜುಲೈ 20 ರ ಮುಂಚಿತವಾಗಿ ಜನೋಪಯೋಗಕ್ಕೆ ಬಿಟ್ಟು ಕೊಡದಿದ್ದಲ್ಲಿ ಅದರ ಉದ್ಘಾಟನೆಯನ್ನು ಬಿಜೆಪಿಯೇ ನೆರವೇರಿಸಲಿದೆಯೆಂದು ಅವರು ಮುನ್ನೆಚ್ಚರಿಕೆ ನೀಡಿದರು.

ಬಿಜೆಪಿ ಕಾಸರಗೋಡು ಮಂಡಲದ ಜಿಲ್ಲಾಧ್ಯಕ್ಷ ಅಡ್ವ.ಕೆ.ಶ್ರೀಕಾಂತ್‌ ಮಾತನಾಡಿ ಎಂಡೋಸಲ್ಫಾನ್‌ ಬಾಧಿತ ಕುಂಬ್ಡಾಜೆಗೆ ಸರಕಾರದಿಂದ ಹಲವಾರು ಯೋಜನೆಗಳು ಬರುತ್ತಿದೆ ಮಾತ್ರವಲ್ಲ ಕೇಂದ್ರ ಸರಕಾರದ ಭವನ ಪದ್ಧತಿಯಂತಹ ಹಲವಾರು ಯೋಜನೆಗಳು ಲಭಿಸುತ್ತಿದ್ದರೂ ಅದನ್ನು ಕಾರ್ಯಗತಗೊಳಿಸಲು ಇಲ್ಲಿನ ಯುಡಿಎಫ್‌ ಆಡಳಿತ ವಿಫಲವಾಗಿದೆ. ಯುಡಿಎಫ್‌ ಆಡಳಿತ ಸಂಪೂರ್ಣ ಸ್ಥಂಭನಾವಸ್ಥೆಯಲ್ಲಿದ್ದು ಭವನ ಪದ್ಧತಿಯಲ್ಲಿ ಅವ್ಯವಹಾರವನ್ನು ನಡೆಸಿ ಜನ ಸಾಮಾನ್ಯರನ್ನು ವಂಚಿಸಿರುವುದು ಸಂಬಂಧಪಟ್ಟವರು ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದೂ ಆಗ್ರಹಿಸಿದರು.

ಬಿಜೆಪಿ ಕಾಸರಗೋಡು ಮಂಡಲಾಧ್ಯಕ್ಷರಾದ ಸುಧಾಮ ಗೋಸಾಡ ಮಾತನಾಡಿ ಕುಂಬ್ಡಾಜೆ ಗ್ರಾ.ಪಂ.ನಲ್ಲಿ ಉದ್ಯೋಗಸ್ಥರು ಸರಿಯಾದ ಸಮಯಕ್ಕೆ ಕಚೇರಿಗೆ ಆಗಮಿಸದೇ ವಿವಿಧ ಆವಶ್ಯಕತೆಗಳಿಗೆ ಕಚೇರಿಗೆ ಆಗಮಿಸುವ ಜನಸಾಮಾನ್ಯರು ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿರುವ ಅವರು ಸಂಬಂಧಪಟ್ಟವರು ಇದರ ಬಗ್ಗೆ ಗಮನಹರಿಸಬೇಕೆಂದು ಆಗ್ರಹಿಸಿದರು.

ಮಾರ್ಚ್‌ನ ನೇತಾರರಾದ ಹರೀಶ್‌ ಗೋಸಾಡ, ಪ್ರಭಾಕರ ರೈ, ಹರೀಶ್‌ ಕುಣಿಕುಳ್ಳಾಯ, ವಾಸುದೇವ ಭಟ್‌, ರವೀಂದ್ರ ರೈ ಗೋಸಾಡ, ಶಸಿಧರ ಡಿ, ಕೊರಗಪ್ಪ, ಯಶೋಧಾ ಎನ್‌, ಶೈಲಜಾ ಭಟ್‌, ನಳಿನಿ, ಶಾಂತಾ ಕುಮಾರಿ, ನರಸಿಂಹ ಭಟ್‌ , ಸುಂದರ ಮವ್ವಾರು, ಸಂತೋಷ ರೈ, ಕೃಷ್ಣ ರೈ, ಚಂದ್ರಶೇಖರನ್‌.ಬಿ. ಮೊದಲಾದವರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!

Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!

Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!

Exam

VAO ಹುದ್ದೆ: ಅಂತಿಮ ಕೀ ಉತ್ತರ ಪ್ರಕಟ

highcourt

ವಾಲ್ಮೀಕಿ ನಿಗಮ ಅಕ್ರಮ ತನಿಖಾ ವರದಿ ಸಲ್ಲಿಸಲು ಸಿಬಿಐಗೆ ಹೈಕೋರ್ಟ್‌ ಸೂಚನೆ

1-koo

Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.