ಮನೆಗೆ ಬರುವ ಸೇಲ್ಸ್‌ಮನ್‌ಗಳ ಬಗೆಗೆ ನಿಗಾ ಇರಲಿ: ಸಂದೀಪ್ ಪಾಟೀಲ್
Team Udayavani, Jul 6, 2019, 5:00 AM IST
ಮಹಾನಗರ: ವಿವಿಧ ವಸ್ತುಗಳ ಮಾರಾಟದ ನೆಪದಲ್ಲಿ ಮನೆ ಮನೆಗೆ ಭೇಟಿ ನೀಡುವ ಸೇಲ್ಸ್‌ಮನ್‌ನವರ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇದ್ದು, ಅವರ ಚಲನ ವಲನಗಳ ಬಗ್ಗೆ ನಿಗಾ ಇರಿಸಬೇಕು; ಸಂಶಯ ಬಂದರೆ ಸಮೀಪದ ಪೊಲೀಸ್ ಠಾಣೆಗೆ ಅಥವಾ ಕಂಟ್ರೋಲ್ ರೂಮ್‌ಗೆ ಮಾಹಿತಿ ನೀಡಬೇಕು ಎಂದು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸಲಹೆ ನೀಡಿದರು.
ತಮ್ಮ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಿ ಅವರು ಮಾತನಾಡಿದರು. ಸುರತ್ಕಲ್ ಸಮೀಪದ ತಡಂಬೈಲ್ ಪರಿಸರದಲ್ಲಿ ಸೇಲ್ಸ್‌ಮನ್ ಎಂದು ಹೇಳಿಕೊಂಡು ಕೆಲವರು ಮನೆ ಮನೆಗೆ ಭೇಟಿ ನೀಡುತ್ತಿರುವುದಲ್ಲದೆ ಮನೆಯ ಸುತ್ತ ಸುಳಿದಾಡುತ್ತಾರೆ. ಮನೆಯಲ್ಲಿ ಮಹಿಳೆಯರು
ಮಾತ್ರ ಇದ್ದರೆ ಅವರಲ್ಲಿ ಮಾತನಾಡಿ ಫೋನ್ ನಂಬರ್ ನೀಡುವಂತೆ ಒತ್ತಾಯಿಸುತ್ತಾರೆ ಎಂದು ನಾಗರಿಕ ರೊಬ್ಬರು ದೂರಿದರು. ಇದಕ್ಕೆ ಸ್ಪಂದಿಸಿದ ಆಯುಕ್ತರು ಈ ಬಗ್ಗೆ ಪರಿಶೀಲಿಸಲು ಸ್ಥಳೀಯ ಪೊಲೀಸರಿಗೆ ಸೂಚಿಸ ಲಾಗುವುದು ಎಂದರು.
ರಾ.ಹೆ. 66ರ ಜಪ್ಪಿನಮೊಗರು ಬಸ್ ತಂಗುದಾಣದಲ್ಲಿ ಕಾಸರಗೋಡು- ಮಂಗಳೂರು ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ನಿಲುಗಡೆ ಸೌಲಭ್ಯ ಒದಗಿಸಿದ್ದರೂ ಬಸ್‌ಗಳನ್ನು ನಿಲ್ಲಿಸುತ್ತಿಲ್ಲ ಎಂದು ನಾಗರಿಕರೊಬ್ಬರು ದೂರಿದರು. ಈ ಬಗ್ಗೆ ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಕಮಿಷನರ್ ತಿಳಿಸಿದರು.
ಶಾಲಾ ವಾಹನ ಓವರ್ ಲೋಡ್
ಕೆಲವು ಶಾಲಾ ವಾಹನಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಅಧಿಕ ಮಕ್ಕಳನ್ನು ಸಾಗಿಸುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೋಟೆಕಾರಿನ ನಾಗರಿಕರೊಬ್ಬರಿಂದ ಕೇಳಿ ಬಂತು. ಉತ್ತರಿಸಿದ ಆಯುಕ್ತರು ಶಾಲಾ ವಾಹನಗಳ ಬಗ್ಗೆ ಈಗಾಗಲೇ ಕಾರ್ಯಾಚರಣೆ ಆರಂಭಿಸಿದ್ದು, ಅದು ಮುಂದುವರಿಯಲಿದೆ ಎಂದರು.
ಟಿಂಟ್ ವಾಹನಗಳ ಸಂಖ್ಯೆ ಮತ್ತೆ ಹೆಚ್ಚಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಿ ಎಂಬ ಆಗ್ರಹಕ್ಕೆ ಉತ್ತರಿಸಿದ ಸಂದೀಪ್ ಪಾಟೀಲ್, ಈಗಾಗಲೇ ಕ್ರಮ ಕೈಗೊಳ್ಳಲಾಗುತ್ತಿದೆ; ಟಿಂಟ್ ವಾಹನ ಪತ್ತೆಯಾದರೆ ಸಾರ್ವಜನಿಕರು ಕೂಡಲೇ ಫೋಟೋ ತೆಗೆದು 9480805300ಗೆ ವಾಟ್ಸಪ್ ಮಾಡಬಹುದು ಎಂದರು. ಟೋಯಿಂಗ್ ವಾಹನದಲ್ಲೇ ಕುಳಿತು ಕೊಳ್ಳುತ್ತಾರ ಟೋಯಿಂಗ್ ಸಿಬಂದಿ ಟೋಯಿಂಗ್ ಮಾಡಿದ ವಾಹನದ ಮೇಲೆಯೇ ಕುಳಿತುಕೊಂಡು ಹೋಗುತ್ತಾರೆ ಎಂಬ ದೂರು ಕೇಳಿ ಬಂತು.
ಇದಕ್ಕೆ ಉತ್ತರಿಸಿದ ಆಯುಕ್ತರು ಟೋಯಿಂಗ್ ಮಾಡುವವರ ಸಭೆ ಕರೆದು ಸೂಚನೆ ನೀಡಲಾಗಿದೆ. ವಾಹನವನ್ನು ಟೋಯಿಂಗ್ ಮಾಡುವ ಮೊದಲು ಅನೌನ್ಸ್ ಮಾಡಿ, ವಾಹನದ ಮಾಲಕರು ಸ್ಥಳದಲ್ಲಿದ್ದರೆ ಸ್ಪಾಟ್ ಫೈನ್ ಹಾಕುವಂತೆ, ಇಲ್ಲದಿದ್ದರೆ ಮಾತ್ರ ವಾಹನವನ್ನು ಟೋಯಿಂಗ್ ಮಾಡಿ ಜಾಗರೂಕತೆಯಿಂದ ಕೊಂಡೊಯ್ಯಲು ಸೂಚಿಸಲಾಗಿದೆ ಎಂದರು.
ಪುತ್ತೂರು ಕಡೆಯಿಂದ ನಗರಕ್ಕೆ ಬರುವ ಕೆಎಸ್ಸಾರ್ಟಿಸಿ ಬಸ್‌ಗಳು ವಿಪ ರೀತ ಹೊಗೆ ಉಗುಳಿಕೊಂಡು ವಾಯು ಮಾಲಿನ್ಯ ಮಾಡುತ್ತಿದ್ದು, ಅದರ ವಿರುದ್ಧ ಕ್ರಮ ಕೈಗೊಳ್ಳಿ ಎಂಬ ಆಗ್ರಹ ಕೇಳಿ ಬಂತು. ಈ ಬಗ್ಗೆ ಪರಿಶೀಲಿಸಿ ಕ್ರಮ ಜರಗಿಸುವಂತೆ ಟ್ರಾಫಿಕ್ ಎಸಿಪಿಗೆ ಸೂಚಿಸಿದರು. ಗಾಂಧಿನಗರ ವ್ಯಾಯಾಮಶಾಲೆ ಪಕ್ಕ ರಾತ್ರಿ ಕಾರನ್ನು ರಸ್ತೆ ಬದಿಯೇ ಪಾರ್ಕ್ ಮಾಡುತ್ತಾರೆ ಎಂಬ ದೂರು ಕೇಳಿ ಬಂತು. ಇದು 119ನೇ ಫೋನ್ ಇನ್ ಕಾರ್ಯಕ್ರಮವಾಗಿದ್ದು, ಒಟ್ಟು 27 ಕರೆಗಳು ಬಂದವು. ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜ ವರ್ಮ ಬಲ್ಲಾಳ್, ಡಿಸಿಪಿಗಳಾದ ಹನು ಮಂತರಾಯ, ಲಕ್ಷ್ಮೀ ಗಣೇಶ್, ಎಸಿಪಿ ಮಂಜು ನಾಥ ಶೆಟ್ಟಿ, ಟ್ರಾಫಿಕ್ ಇನ್‌ಸ್ಪೆಕ್ಟರ್ ಗಳಾದ ಅಮಾನುಲ್ಲಾ, ಗುರುದತ್ತ ಕಾಮತ್, ಅನಂತ್ ಮುಡೇìಶ್ವರ, ಸಬ್ ಇನ್‌ಪೆಕ್ಟರ್ ಪೂವಪ್ಪ ಎಚ್.ಎಂ., ಎಎಸ್‌ಐ ಪಿ. ಯೋಗೇಶ್ವರನ್, ಹೆಡ್ ಕಾನ್ಸ್ ಟೆಬಲ್ ಪುರುಷೋತ್ತಮ ಉಪಸ್ಥಿತರಿದ್ದರು.
ನೀರುಮಾರ್ಗಕ್ಕೆ ರಾತ್ರಿ ಬಸ್ಸಿಲ್ಲ
ಮಂಗಳೂರಿನಿಂದ ನೀರುಮಾರ್ಗಕ್ಕೆ ಹೋಗುವ ಬಸ್‌ಗಳಿಗೆ ರಾತ್ರಿ 9.30ರ ತನಕ ಪರ್ಮಿಟ್ ಇದ್ದರೂ ಸಂಜೆ 7.45ಕ್ಕೆ ಪ್ರಯಾಣ ಮೊಟಕುಗೊಳಿಸುತ್ತಿವೆ. ಇದರಿಂದ ರಾತ್ರಿ ವೇಳೆ ಮನೆಗೆ ಹೋಗುವ ಕಾರ್ಮಿಕರು, ಉದ್ಯೋಗಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ರವಿವಾರ ಟ್ರಿಪ್ ಕಟ್ ಮಾಡುತ್ತಾರೆ ಎಂದು ಓರ್ವ ನಾಗರಿಕರು ದೂರಿದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತರು ಕೂಡಲೇ ಪರಿಶೀಲಿಸಿ ಸಂಬಂಧಪಟ್ಟ ಬಸ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಸಿಪಿ ಮಂಜುನಾಥ್ ಶೆಟ್ಟಿ ಅವರಿಗೆ ಸೂಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.