ಭಾರತ್ ಮಾಲಾಕ್ಕೆ 80,250 ಕೋಟಿ ರೂ.
ದೇಶಾದ್ಯಂತ 1.25 ಲಕ್ಷ ಕಿ.ಮೀ. ಗ್ರಾಮೀಣ ರಸ್ತೆ ನಿರ್ಮಾಣ ;ಗಂಗಾನದಿಯತ್ತ ಕೇಂದ್ರದ ಚಿತ್ತ
Team Udayavani, Jul 6, 2019, 5:48 AM IST
ಭಾರತದ ಮೂಲಸೌಕರ್ಯವನ್ನು ಸರ್ವಾಂಗೀಣವಾಗಿ ಹೆಚ್ಚಿಸುವ ಮಹತ್ವಾಕಾಂಕ್ಷೆಯನ್ನು ನೂತನ ವಿತ್ತ ಸಚಿವರು ವ್ಯಕ್ತಪಡಿಸಿದ್ದಾರೆ. ದೇಶಾದ್ಯಂತ ರಸ್ತೆ ಸಂಪರ್ಕ ವನ್ನು ಉತ್ತಮಗೊಳಿಸುವುದಕ್ಕೆ ಭಾರತ್ ಮಾಲಾ,ಜಲಸಂಪರ್ಕವನ್ನು ಅಭಿವೃದಿಟಛಿಪಡಿಸುವುದಕ್ಕೆ ಸಾಗರಮಾಲಾಕ್ಕೆ ಸಾವಿರಾರು ಕೋಟಿ ರೂ. ಹಣ ಮೀಸಲಿಟ್ಟಿದ್ದಾರೆ. ಉಡಾನ್ ಮೂಲಕ ವಿಮಾನಯಾನ, ಮೆಟ್ರೊ ರೈಲು, ಉಪನಗರ ಟ್ರೈನುಗಳ ಮೂಲಕ ನಗರಪ್ರದೇಶಗಳ ಸಂಚಾರ ದಟ್ಟಣೆ ಕುಗ್ಗಿಸುವ ಮಾತನ್ನಾಡಿದ್ದಾರೆ.
ದೇಶದ ಗ್ರಾಮೀಣ ಭಾಗದಲ್ಲಿ ಗ್ರಾಮ ಸಡಕ್ ಯೋಜನೆಯಡಿ 1.25 ಲಕ್ಷ ಕಿ.ಮೀ. ರಸ್ತೆ ನಿರ್ಮಿಸುವ ಕಾಮಗಾರಿಯನ್ನು ತೀವ್ರ ಗೊಳಿಸಲಾಗುವುದು. ಇದಕ್ಕೆ ಆಯವ್ಯಯದಲ್ಲಿ 80,250 ಕೋಟಿ ರೂ. ಮೀಸಲಿಡಲಾಗಿದೆ.
ಭಾರತ್ ಮಾಲಾ-1ರಡಿ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಿದ ನಂತರ, ಭಾರತ್ ಮಾಲಾ-2ರಲ್ಲಿ ರಾಜ್ಯಗಳಿಗೆ ರಸ್ತೆ ನಿರ್ಮಿಸಲು ಸಹಾಯ ಮಾಡುವ ಭರವಸೆಯನ್ನು ಕೇಂದ್ರ ನೀಡಿದೆ.
ಸಾಗರಮಾಲಾ: ದೇಶೀಯವಾಗಿ ಜಲಸಾರಿಗೆಯನ್ನು ಅಭಿವೃದ್ದಿಪಡಿಸಿ, ರಸ್ತೆ ಮತ್ತು ರೈಲಿನ ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶ ಇಟ್ಟುಕೊಳ್ಳಲಾಗಿದೆ. ಅದಕ್ಕಾಗಿ ಹಡಗುಗಳ ಸಾಮರ್ಥ್ಯವನ್ನು ವೃದ್ದಿಸಲಾಗುತ್ತದೆ.
ಜಲಮಾರ್ಗ ಬಡವರಿಗೆ ಅತಿ ಕಡಿಮೆದರದ ಯಾನವಾಗಿರುವುದರಿಂದ, ಅದನ್ನು ವಿಕಾಸ ಮಾಡಲು ಈಗಾಗಲೇ ಜಲಮಾರ್ಗ್ ವಿಕಾಸ್ ಯೋಜನೆ ಶುರುವಾಗಿದೆ. ಹಡಗಿನ ಮೂಲಕ ಸರಕನ್ನು ಒಯ್ಯುವ ಗಂಗಾನದಿಯ ಸಾಮರ್ಥ್ಯವನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ನಾಲ್ಕು ಪಟ್ಟು ಹೆಚ್ಚಿಸುವ ವಿಶ್ವಾಸ ಕೇಂದ್ರಕ್ಕಿದೆ.ಗಂಗಾನದಿಯ ಸರಕು ಸಾಮರ್ಥ್ಯ ಹೆಚ್ಚಿಸಲು ವಾರಾಣಸಿಯಲ್ಲಿ ಈಗಾಗಲೇ ಬಹೂಪಯೋಗಿ ಹಡಗು ನಿಲ್ದಾಣ ಆರಂಭವಾಗಿದೆ. ಇಂತಹದ್ದೇ ನಿಲ್ದಾಣ ಸಾಹಿಬ್‌ಗಂಜ್ ಮತ್ತು ಹಲ್ದಿಯಾದಲ್ಲೂ 2020ರಲ್ಲಿ ಮುಗಿಯಲಿದೆ.
ಒಂದು ದೇಶ ಒಂದು ಸಾರಿಗೆ ಕಾರ್ಡ್
ದೇಶವನ್ನು ಒಂದಾಗಿ ಬೆಸೆಯುವ ಹಲವು ಕ್ರಮಗಳನ್ನು ಘೋಷಿಸಿರುವ ಕೇಂದ್ರ ಸರ್ಕಾರ, ಈ ಹಾದಿಯಲ್ಲಿ ಇನ್ನೊಂದು ಮಹತ್ವದ ಹೆಜ್ಜೆಯಿಟ್ಟಿದೆ. ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (ಎನ್‌ಸಿಎಂಸಿ) ಅನ್ನು ಪ್ರಧಾನಿ ಮೋದಿ ಇದೇ ವರ್ಷ ಮಾರ್ಚ್‌ನಲ್ಲಿ ಬಿಡುಗಡೆ ಮಾಡಿದ್ದಾರೆ. ಇದರ ಮೂಲಕ ದೇಶಾದ್ಯಂತ ಹಲವಾರು ಸಾರಿಗೆ ಖರ್ಚುಗಳನ್ನು ಪಾವತಿಸಬಹುದು. ವಿವಿಧ ಮೆಟ್ರೋ ನಿಲ್ದಾಣಗಳಲ್ಲಿ ಇದನ್ನು ಬಳಸಬಹುದು, ದೇಶಾದ್ಯಂತ ರಸ್ತೆಗಳಲ್ಲಿ ಟೋಲ್ ಶುಲ್ಕಗಳನ್ನು ಕಟ್ಟಬಹುದು. ಈ ಕಾರ್ಡ್, ರುಪೇ ಕಾರ್ಡ್ ಮೂಲಕ ಚಲಾವಣೆಗೊಳ್ಳುತ್ತದೆ. ಇದನ್ನು ಬಳಸಿ ಜನರು ಬಸ್ಸಿಗೆ ಹಣ, ವಾಹನ ನಿಲುಗಡೆ ದರ ಪಾವತಿ ಮಾಡಬಹುದು. ಅಂಗಡಿಗಳಲ್ಲಿ ಖರೀದಿ ಮಾಡಬಹುದು. ಹಣವನ್ನು ಹೊರತೆಗೆಯಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ
Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
Supreme Court: ಮೀಸಲಿಗಾಗಿ ಆಗುವ ಮತಾಂತರ ಸಂವಿಧಾನಕ್ಕೆ ಮೋಸ
Lokasabha: ಕರ್ನಾಟಕದ 869 ಸೇರಿ 58,929 ವಕ್ಫ್ ಆಸ್ತಿಗಳ ಅತಿಕ್ರಮ: ಕಿರಣ್ ರಿಜಿಜು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ
Rashmika Mandanna; ಪುಷ್ಟ-3 ಸುಳಿವು ನೀಡಿದ ನಟಿ ರಶ್ಮಿಕಾ ಮಂದಣ್ಣ
Deepika Das: ನಟಿ ದೀಪಿಕಾ ದಾಸ್ ಕುಟುಂಬಕ್ಕೆ ಬೆದರಿಕೆ ಕರೆ; ಯುವಕನ ವಿರುದ್ಧ ದೂರು
Pakistan: ಇಮ್ರಾನ್ ಬಿಡುಗಡೆಗೆ ಬೆಂಬಲಿಗರ ಪ್ರತಿಭಟನೆ: ಹಿಂಸಾಚಾರ, ಸಾವಿರಾರು ಜನರ ಬಂಧನ
Madikeri: ಲಾರಿ ಡಿಕ್ಕಿಯಾಗಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.