ದೇಹದಾನದಿಂದ ಸಾವಿನಲ್ಲಿ ಸಾರ್ಥಕತೆ ಕಂಡ ವೈದ್ಯೆ!
Team Udayavani, Jul 6, 2019, 10:05 AM IST
ಬಾದಾಮಿ: ದೇಹ ಹಾಗೂ ಚರ್ಮದಾನ ಮಾಡಿದ ಡಾ| ಉಷಾ ಗಣಪತಿ ಭಟ್ ಅವರ ಪ್ರಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಲಾಯಿತು.
ಬಾದಾಮಿ: ಬೈಲಹೊಂಗಲ ಪಟ್ಟಣದ ಮುರಗೋಡ ಬಸವನಗರದ ನಿವಾಸಿ ಡಾ| ಉಷಾ ಗಣಪತಿ ಭಟ್ ಅವರು ದೇಹ ಹಾಗೂ ಚರ್ಮವನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಇವರು ಪಟ್ಟಣದಲ್ಲಿ ಪ್ರಪ್ರಥಮ ಚರ್ಮದಾನ ಮಾಡಿದ ವೈದ್ಯರಾಗಿದ್ದಾರೆ.
ವಿಶೇಷವೆಂದರೆ ಡಾ| ಮಹಾಂತೇಶ ರಾಮಣ್ಣವರ ತಮ್ಮ ತಂದೆಯ ಮೃತದೇಹ ಛೇದಿಸಿದ ಘಟನೆಯಿಂದ ಪ್ರೇರಣೆಗೊಂಡು ದೇಹಕ್ಕೆ ಕೊಡುವ ಧಾರ್ಮಿಕ ಸಂಸ್ಕಾರಕ್ಕಿಂತಲೂ ದೇಹದಾನದಿಂದ ಮಾನವ ಕೋಟಿಗೆ ಆಗುವ ಸಂಶೋಧನೆಯ ಲಾಭ ಅತೀ ಶ್ರೇಷ್ಠ ಎಂಬುದು ಮೃತರ ದೃಢಸಂಕಲ್ಪವಾಗಿತ್ತು.
ಅವರ ಮೃತ ದೇಹವನ್ನು ಬೈಲಹೊಂಗಲದ ಡಾ| ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ಹಾಗೂ ಎಸ್ಜಿವಿ ಆಯುರ್ವೇದಿಕ್ ಮೆಡಿಕಲ್ ಕಾಲೇಜ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಇವರ ವತಿಯಿಂದ ವೀರ ಪುಲಕೇಶಿ ರೂರಲ್ ಆಯುರ್ವೇದ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರಕ್ಕೆ ದಾನವಾಗಿ ನೀಡಲಾಗಿದೆ.
ಪಾರ್ಥಿವ ಶರೀರಕ್ಕೆ ಮಾಲಾರ್ಪಣೆ ಮಾಡಿದ ವೈದ್ಯ ವಿದ್ಯಾರ್ಥಿಗಳು ಧನ್ವಂತರಿ ಸ್ಥವನದೊಂದಿಗೆ ಪುಷ್ಪಾರ್ಚನೆ ಮಾಡಿ ಅಂತಿಮ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಡಾ| ರಾಮಣ್ಣವರ ಫೌಂಡೇಶನ್ ಅಧ್ಯಕ್ಷ ಡಾ| ಸುಶೀಲಾದೇವಿ ರಾಮಣ್ಣವರ, ಪ್ರಾಂಶುಪಾಲ ಡಾ| ಬಸವರಾಜ ಮುಲ್ಕಿಪಾಟೀಲ, ಎಲ್ಲ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.