ದಿ ಲಾಸ್ಟ್‌ ಮ್ಯಾನ್‌

ದೇಹದಾನ ಜಾಗೃತಿಗೊಬ್ಬರು ಡಾಕ್ಟರ್‌

Team Udayavani, Jul 6, 2019, 10:40 AM IST

27BGV01-C-copy-copy

ಅವರು ತಂದೆಯ ಶವವನ್ನೇ ಛೇದಿಸಿ, ವೈದ್ಯ ವಿದ್ಯಾರ್ಥಿಗಳಿಗೆ ಪಾಠ ಮಾಡಿದ ಡಾಕ್ಟರ್‌… ಹೆಸರು ಮಹಾಂತೇಶ ರಾಮಣ್ಣ. ಅಪ್ಪನ ಪಾರ್ಥಿವ ಶರೀರ ಕೊಯ್ದು, ಪಾಠ ಕೊಟ್ಟ ಮಾತ್ರಕ್ಕೆ ಅವರ ಕರ್ತವ್ಯ ಕೊನೆ ಯಾ ಗಲಿಲ್ಲ. ಊರೂರು ಸುತ್ತಿ ದರು. ದೇಹದಾನ ಬಗ್ಗೆ ಹಬ್ಬಿದ್ದ ಮೂಢ ನಂಬಿಕೆಯನ್ನು ನಿರಂತರವಾಗಿ ತೊಲಗಿಸುತ್ತಾ, ಸಾವಿರಾರು ಮಂದಿಯಲ್ಲಿ ಈ ಕುರಿತು ಜಾಗೃತಿ ಮೂಡಿ ಸುತ್ತಲೇ ಬಂದಿದ್ದಾರೆ…

ಒಬ್ಬ ಮನುಷ್ಯ ಮತ್ತೂಬ್ಬ ಮನು ಷ್ಯನ ಮೇಲೆ ಪ್ರೀತಿ ಹರಿಸಿದರೆ, ಅಲ್ಲೊಂದು ಮಾನವೀಯ ದೀಪ ಬೆಳಗುತ್ತದಂತೆ. ಜೀವ ಇರುವಾಗ ರಕ್ತದಾನ. ಜೀವ ಹೋಗುವಾಗ ಅಂಗಾಂಗ ದಾನ. ಜೀವ ಹೋದಾಗ ದೇಹದಾನಗಳೂ ಅಂಥ ಉಪಕಾರದ ನಾನಾ ಪಾತ್ರಗಳು. ಒಂದಲ್ಲಾ ಒಂದು ದಿನ ಮನುಷ್ಯ, ಈ ಭೂಮಿಯಿಂದ ಹೊರಡಬೇಕು. ಹಾಗೆ ಸತ್ತ ಮೇಲೆ ದೇಹ, ಮಣ್ಣು ಸೇರಿದರೆ, ಬಂತೇನು ಪ್ರಯೋ ಜ ನ?- ಹೀಗೆ ಯೋಚಿಸಿದವರೆಲ್ಲರೂ ದೇಹದಾನದ ಭಕ್ತರು! ಹಿಂದೆ ದೇಹದಾನವೆಂದರೆ, ಜನರಿಗೇನೋ ಅಳುಕು, ಧಾರ್ಮಿಕ ಕಟ್ಟಳೆಯ ಭಯ, ಮೋಕ್ಷ ಸಿಗದ ಕಲ್ಪನೆ. ದೇಹದಾನದ ಬಗ್ಗೆ ಯೋಚಿಸುವುದೇ ತಪ್ಪೆ ನ್ನುವಂಥ ಕಾಲ ಅದು.

ಆದರೆ, ಕಾಲದ ಪೊರೆ ಕಳಚಿದಂತೆ, ಮನುಷ್ಯತನ್ನ ಸಾವಿಗೆ ಸಾರ್ಥ ಕತೆ ತಂದು ಕೊಡಲು ಹೊರಡುತ್ತಿದ್ದಾನೆ. ದೇಹದಾನಿಗಳ ಸಂಖ್ಯೆ ಹೆಚ್ಚಾಗುತ್ತಿರುವಂತೆ, ವೈದ್ಯಕೀಯ ವಿದ್ಯಾರ್ಥಿಗಳ ಸಂಶೋಧನೆಗೆ ಮೃತ ದೇಹಗಳ ಕೊರತೆ ಎದುರಿಸುತ್ತಿದ್ದ ದೊಡ್ಡ ದೊಡ್ಡ ಆಸ್ಪತ್ರೆಗಳು ನಿರಾಳವಾಗಿವೆ.

ಪ್ರಪಂಚದಲ್ಲಿ ಬದುಕಿದ್ದಾಗ ಸಮಾಜ ಸೇವೆ ಮಾಡುವಂಥ ಅನೇಕ ಮಹನೀಯರಿದ್ದಾರೆ. ಆದರೆ, ಸತ್ತ ಮೇಲೆ ಸಮಾಜ ಸೇವೆ ಮಾಡುವ ಜನ ತುಂಬಾ ಅಪರೂಪ. ಅಂಥ ಅಪರೂಪಗಳಲ್ಲಿ ಬೈಲಹೊಂಗಲದ ಖ್ಯಾತ ದಂತ ವೈದ್ಯರಾಗಿದ್ದ ಡಾ. ಬಸವಣ್ಣೆಪ್ಪ ರಾಮಣ್ಣವರ ಸ್ಮರಣೀಯವಾಗಿ ಆರಂಭಿ ಸಿ ರುವ ಡಾ. ರಾಮಣ್ಣವರ ಪ್ರತಿಷ್ಠಾನ. ಈ ಸಂಸ್ಥೆಯ ವತಿಯಿಂದ ಕೈಗೊಂಡ ಆದರ್ಶಮಯ ಸಾಮಾಜಿಕ ಸೇವೆಗಳಿಂದ ಪ್ರೇರಣೆಗೊಂಡು ಬೆ„ಲಹೊಂಗಲ ಹಾಗೂ ಸುತ್ತಮುತ್ತಲಿನ 300ಕ್ಕೂ ಹೆಚ್ಚು ಜನರು ನೇತ್ರ ಹಾಗೂ ದೇಹದಾನ ಮಾಡಲು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ!

ತಂದೆಯ ಶವ ಚ್ಛೇದಿಸಿದ ಮೇಲೆ…
ಶವ ಎಂದರೆ ಬೆಚ್ಚಿ ಬೀಳುವವರೇ ಹೆಚ್ಚು. ಅಂಥದ್ದರಲ್ಲಿ ವೈದ್ಯ ಲೋಕದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ, ಸ್ವತಃ ತಂದೆಯ ಶವವನ್ನೇ ಛೇದಿಸಿ ವೈದ್ಯ ವಿದ್ಯಾರ್ಥಿಗಳಿಗೆ ಪಾಠ ಮಾಡಿದ ವೈದ್ಯ ಮಹಾಂತೇಶ ರಾಮಣ್ಣವರ ಈ ಪ್ರತಿಷ್ಠಾನದ ರೂವಾರಿ. ಕೆ.ಎಲ್‌.ಇ. ವಿಶ್ವವಿದ್ಯಾಲಯದ ಬಿ.ಎಂ.ಕೆ. ಆಯುರ್ವೇದ ಮೆಡಿಕಲ್‌ ಕಾಲೇಜಿನ ಶರೀರ ರಚನಾ ವಿಭಾಗದ ಮುಖ್ಯಸ್ಥ ಇವರು. ಇವರ ಸಾಹ ಸ, ಉತ್ತರ ಕರ್ನಾಟಕ ಭಾಗ ದ ಲ್ಲಿ ದೇಹದಾನದ ಬಗ್ಗೆ ಹೊಸ ವ್ಯಾಖ್ಯಾನ ಬರೆದಿರುವುದಂತೂ ಸುಳ್ಳಲ್ಲ.

2000 ದಾಟಿದ ದೇಹದಾನ ವಾಗ್ಧಾನ
ದೇಹದಾನಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ದೇಹದಾನಿಗಳ ಸಂಖ್ಯೆ 2000 ದಾಟಿದೆ. ಕೆ.ಎಲ್‌.ಇ. ವಿಶ್ವವಿದ್ಯಾಲಯದ ಜೆ.ಎನ್‌.ಎಂ.ಸಿ.ಯ ಅಂಗ ರಚನೆ ವಿಭಾಗದಲ್ಲಿ 1300ಕ್ಕೂ ಹೆಚ್ಚು ಜನ ದೇಹದಾನಕ್ಕೆ ಉಯಿಲು ಬರೆದುಕೊಟ್ಟಿದ್ದಾರೆ. ಕೆ.ಎಲ್‌.ಇ. ಸಂಸ್ಥೆಯ ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದಲ್ಲಿ 266, ಸರಕಾರಿ ವೈದ್ಯಕೀಯ ಸಂಸ್ಥೆಯಲ್ಲಿ (ಬಿಮ್ಸ್‌) 200ಕ್ಕೂ ಹೆಚ್ಚು ಜನ, ಒಟ್ಟಾ ರೆ 1000ಕ್ಕೂ ಹೆಚ್ಚು ಜನರು ದೇಹದಾನಕ್ಕೆ ನೋಂದಣಿ ಮಾಡಿರುವುದು ವಿಶೇಷ. ರಾಮಣ್ಣವರ ಟ್ರಸ್ಟ್‌ನಿಂದ 1000 ಜನ ದೇಹದಾನಕ್ಕೆ ಅಸ್ತು ಎಂದಿ ದ್ದಾ ರೆ. ಅದರಲ್ಲಿ ಈಗಾಗಲೇ 200 ದೇಹಗಳು, ಅವರ ಕುಟುಂಬಸ್ಥರ ಒಪ್ಪಿಗೆಯ ಮೇರೆಗೆ ಹಸ್ತಾಂತರವಾಗಿ, ವಿವಿಧ ವೈದ್ಯಕೀಯ ಕಾಲೇಜುಗಳ ಅಧ್ಯಯನಕ್ಕೆ ನೆರವಾಗಿವೆ.

“ಇದುವರೆಗೆ ಸ್ವೀಕರಿಸಲಾದ ದೇಹಗಳನ್ನು ಬೆಂಗಳೂರು, ಹುಬ್ಬಳ್ಳಿ. ಬಳ್ಳಾರಿ, ಹೊಸಪೇಟೆ, ಕೊಪ್ಪಳ, ತೇರದಾಳ, ಬದಾಮಿ, ಹಾರೂಗೇರಿ, ಸಿದ್ದಾ ಪುರ ಹಾಗೂ ಚೆನ್ನೈನ ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಕಳಿಸಲಾಗಿದೆ’ ಎನ್ನುತ್ತಾರೆ ಡಾ. ಮಹಾಂತೇಶ ರಾಮಣ್ಣವರ. ದೇಹದಾನದಲ್ಲಿ ಆಸಕ್ತಿ ಇದ್ದವರು ತಮ್ಮನ್ನು ಮೊ. ಸಂಖ್ಯೆ: 9242496497 ಇದಕ್ಕೆ ಸಂಪರ್ಕಿಸಬಹುದು ಎಂಬುದು ಅವರ ಕಳಕಳಿಯ ಮನವಿ.

ದೇಹದಾನಿಗಳ ಗ್ರಾಮ, ಶೇಗುಣಸಿ!
ಮಾನವೀಯ ಮೌಲ್ಯಗಳ ಸಾಕಾರಕ್ಕಾಗಿ ಮಿಡಿಯುವ ಒಂದು ಸಂಘಟನೆ, ಅಥಣಿ ತಾಲೂಕಿನ ಶೇಗುಣಸಿಯ ರಾಷ್ಟ್ರೀಯ ಬಸವ ದಳ. ಡಾ. ರಾಮಣ್ಣವರ ಪ್ರತಿಷ್ಠಾನದ ಕಾರ್ಯದಿಂದ ಪ್ರೇರಣೆಗೊಂಡು ಗ್ರಾಮಸ್ಥರಲ್ಲಿ ನೇತ್ರದಾನ ಹಾಗೂ ದೇಹದಾನಕ್ಕೆ ಮುಂದಾಗುವಂತೆ ತಿಳುವಳಿಕೆ ಮೂಡಿಸುತ್ತಿದೆ. ಇದರ ಪರಿಣಾಮವಾಗಿ 5000 ಜನಸಂಖ್ಯೆಯುಳ್ಳ ಗ್ರಾಮದಲ್ಲಿ ಈಗ 130 ಜನರು ನೇತ್ರ ಹಾಗೂ ದೇಹದಾನ ಮಾಡುವ ವಾಗ್ಧಾನ ಮಾಡಿದ್ದಾರೆ. ಈ ಮೂಲಕ ಶೇಗುಣಸಿ ದೇಹದಾನಿಗಳ ಗ್ರಾಮ ಎಂಬ ಹೆಸರು ಮಾಡಿದೆ.

ಒಂದು ಗ್ರಾಮದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ದೇಹದಾನ ಮಾಡಲು ವಾಗ್ಧಾನ ಮಾಡಿದ್ದು, ದೇಶ ದ ಇತಿಹಾಸದಲ್ಲಿ ಇದೇ ಮೊದಲು. ಮುಖ್ಯವಾಗಿ, ವಿವಿಧ ಮಠಾಧೀಶರು ದೇಹದಾನಕ್ಕೆ ಮುಂದೆ ಬಂದಿದ್ದು, ದೇಹದಾನದ ಜಾಗೃತಿ ಕಾರ್ಯಕ್ರಮಕ್ಕೆ ಹೊಸ ಪ್ರೇರಣೆ ನೀಡಿದೆ. ಬೆಳಗಾವಿಯ ಕಾರಂಜಿಮಠದ ಗುರುಸಿದ್ಧ ಸ್ವಾಮಿಗಳು, ಬಸವರಾಜ ಪಟ ದ್ದೇವರು ದೇಹದಾನ ಮಾಡಲು ಒಪ್ಪಿಗೆ ಪತ್ರ ನೀಡಿದ್ದಾರೆ.

ದೇಹದಾನದ ಸಂದೇಶ
ಡಾ. ರಾಮಣ್ಣವರ ಫೌಂಡೇಶನ್‌, ಆರೋಗ್ಯ ಶಿಬಿರ, ದೇಹ ಮತ್ತು ದೇಹದ ಇತರ ಅಂಗಾಂಗಗಳ ದಾನದ ಕುರಿತು ಅರಿವು ಮೂಡಿಸುವ ಕಾರ್ಯಗಳ ಲ್ಲದೇ, ಎಲ್ಲ ಧರ್ಮಗಳ ಪ್ರಮುಖರು ಹಾಗೂ ಮಠಾಧೀಶರನ್ನು ಭೇಟಿ ಯಾ ಗಿ, ಜನರಲ್ಲಿರುವ ಮೂ ಢನಂಬಿಕೆ ತೊಲಗಿಸಲು ಪ್ರಯತ್ನಿಸುತ್ತಿದ್ದಾರೆ. ಮಠಾಧೀಶರ ಪ್ರವಚನದಲ್ಲೂ ದೇಹದಾನದ ಕುರಿತು ಸಂದೇಶಗಳು ಬಿತ್ತರಗೊಳ್ಳುತ್ತಿರುವುದು ಇನ್ನೊಂದು ವಿಶೇಷ.

ದೇಹ ದಾ ನಕ್ಕೆ ಕರು ನಾಡಿನ ಉದ್ದ ಗಲ ಜನರ ಸ್ಪಂದನೆ ನನಗೆ ಬೆರಗು ಮೂಡಿ ಸಿತು. ಅದ ರ ಲ್ಲೂ ಬೆಳಗಾವಿ ಜಿಲ್ಲೆಯಲ್ಲಿ ನಿರೀಕ್ಷೆಗಿಂತ ಹೆಚ್ಚು ಸ್ಪಂದನೆ ಸಿಗುತ್ತಿದೆ. ಧಾರ್ಮಿಕ ಕಟ್ಟಳೆ, ಕೆಲವರನ್ನು ದೇಹದಾನ ಮಾಡದಂತೆ ಕಟ್ಟಿಹಾಕುತ್ತಿದೆ. ಧರ್ಮ ಬಿಟ್ಟು ದೇಹದಾನ ಇಲ್ಲ. ಈ ಬಗ್ಗೆ ಅರಿವು ಮೂಡಿಸುವ ಕೆಲಸ ಈಗ ನಡೆದಿದೆ.
– ಡಾ. ಮಹಾಂತೇಶ ರಾಮಣ್ಣ

ದೇಹದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿರುವುದರಿಂದ ಈಗ ದೊಡ್ಡ ದೊಡ್ಡ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಮಹಾವಿದ್ಯಾಲಯಗಳು, ಶವ ಗಳ ಕಾಯುವಿಕೆಯಿಂದ ಹೊರಬಂದಿವೆ. ದೇಹದಾನವು ವೈದ್ಯ ಕೀಯ ಸಂಶೋಧನೆಗಳಿಗೆ ಪ್ರೇರಣೆ ನೀಡುತ್ತದೆ.
– ಡಾ.ಎಸ್‌.ಟಿ. ಕಳಸದ, ಬಿಮ್ಸ್‌ ನಿರ್ದೇಶಕ

ದೇಹವು ಮಣ್ಣಲ್ಲಿ ಸೇರುವ ಬದಲು ಇನ್ನೊಬ್ಬರಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ, ದೇಹದಾನ ಮಾಡುವ ವಾಗ್ಧಾನ ಮಾಡಿದ್ದೇವೆ.
– ಮಹಾಂತೇಶ ಸಿದ್ನಾಳ, ರಾಷ್ಟಿÅàಯ ಬಸವದಳ ಸದಸ್ಯ

 ಕೇಶವ ಆದಿ

ಟಾಪ್ ನ್ಯೂಸ್

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

suicide

Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು

accident

Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.