ಕಾಂತಿವರ್ಧಕ ತಯಾರಿಕೆ ಘಟಕದ ಮೇಲೆ ದಾಳಿ
Team Udayavani, Jul 6, 2019, 10:38 AM IST
ಬೆಳಗಾವಿ: ಔಷಧ ನಿಯಂತ್ರಣಾಕಾರಿಗಳ ತಂಡ ಖಚಿತ ಮಾಹಿತಿ ಆಧಾರದ ಮೇಲೆ ತಾಲೂಕಿನ ಕಾಕತಿ ಗ್ರಾಮದ ಲಕ್ಷ್ಮೀ ನಗರದಲ್ಲಿನ ಎರಡು ಪರವಾನಗಿರಹಿತ ಕಾಂತಿವರ್ಧಕ ತಯಾರಿಕಾ ಘಟಕ ಹಾಗೂ ಬೆಳಗಾವಿ ನಗರದ ಎರಡು ಕಾಂತಿವರ್ಧಕ ಮಾರಾಟಗಾರರ ಮೇಲೆ ದಾಳಿ ನಡೆಸಿ ಅಪಾರ ಮೌಲ್ಯದ ಕಾಂತಿವರ್ಧಕ ವಸ್ತುಗಳನ್ನು ವಶಪಡಿಸಿಕೊಂಡಿದೆ.
ಕಾಕತಿಯ 6ನೇ ಅಡ್ಡ ರಸ್ತೆಯ ಫಜಲುಲ್ಲಾ ಫಾರೂಕಿ ಎಂಬವರ ಮನೆಯಲ್ಲಿ ಅನಧಿಕೃತವಾಗಿ ತಯಾರಿಸಿದ್ದ ಫಾರೂಖೀ ಅರಬಿ ಕ್ರೀಮ್ ಹಾಗೂ ಯಂತ್ರೋಪಕರಣ, ಪ್ಯಾಕಿಂಗ್ ಮಟೀರಿಯಲ್ಗಳು, ಲೇಬಲ್ಗಳು, ಪ್ಲಾಸ್ಟಿಕ್ ಡಬ್ಬಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾಕತಿಯ 3ನೇ ಅಡ್ಡ ರಸ್ತೆಯ ಜಹೀದಾಬಾನು ಬೇಪಾರಿ ಅವರ ಮನೆಯಲ್ಲೂ ಅನಧಿಕೃತವಾಗಿ ಜಹಿದಾಸ್ ಒರಿಜಿನಲ್ ಅರೆಬಿಕ್ ಕ್ರೀಮ್‌ಗಳನ್ನು ತಯಾರಿಸಿರುವುದು ಹಾಗೂ ಆಲೋಪಥಿ ಔಷಧಗಳು, ಯಂತ್ರೋಪಕರಣಗಳು, ಪ್ಯಾಕಿಂಗ್ ಮಟೀರಿಯಲ್ಗಳು, ಲೇಬಲ್ಗಳು, ಪ್ಲಾಸ್ಟಿಕ್ ಡಬ್ಬಗಳು ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಂಟಿಬಯೋಟಿಕ್, ಸ್ಟಿರಾಯ್ಡ ಔಷಧಗಳ ಕಲಬೆರಕೆಯೊಂದಿಗೆ ತಯಾರಿಸಿ ಮಾರಾಟ ಮಾಡುತ್ತಿದ್ದ ಹಾನಿಕಾರಕವಾಗುವಂತಹ ಕಾಂತಿವರ್ಧಕಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೆಳಗಾವಿಯ ದರ್ಬಾರ್ ಗಲ್ಲಿಯ ಬೈಟುಜಾರಾ ಕಾಂಪ್ಲೆಕ್ಸ್‌ನ ಫಾರೂಕಿ ಅರಬಿ ಕ್ರೀಮ್ ಶಾಪ್ ಹಾಗೂ ಕೋನವಾಳ ಗಲ್ಲಿಯ ರಂಗರೇಜ ಜನರಲ್ ಸೋrರ್‌ನಲ್ಲಿ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ಫಾರೂಖೀ ಅರಬಿ ಕ್ರೀಮ್ ಹಾಗೂ ಜಹಿದಾಸ್ ಒರಿಜಿನಲ್ ಅರೆಬಿಕ್ ಕ್ರೀಮ್‌ಗಳನ್ನು ವಿಶ್ಲೇಷಣೆಗೆ ಪಡೆಯಲಾಗಿದೆ.
ನಾಲ್ಕೂ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಕಾಂತಿವರ್ಧಕ, ಔಷಧ ಹಾಗೂ ಇತರೆ ಸಾಮಗ್ರಿಗಳನ್ನು ಅಧಿಕಾರಿಗಳ ಸ್ವಾಧೀನದಲ್ಲಿಟ್ಟುಕೊಳ್ಳಲು ಬೆಳಗಾವಿಯ 2ನೇ ಹಾಗೂ 4ನೇ ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ. ಫಾರೂಖೀ ಅರಬಿ ಕ್ರೀಮ್ ಹಾಗೂ ಜಹಿದಾಸ್ ಒರಿಜಿನಲ್ ಅರೆಬಿಕ್ ಕ್ರೀಮ್‌ಗಳನ್ನು ಫಜಲುಲ್ಲಾ ಫಾರೂಕಿ ಹಾಗೂ ಜಾಹೀದಾಬಾನು ಬೇಪಾರಿ ಆಲೋಪಥಿಕ್ ಔಷಧಗಳನ್ನು ಬೆರೆಸಿ ಕ್ರೀಮ್‌ಗಳನ್ನು ತಯಾರಿಸಿರುವ ಹಾಗೂ ಕ್ರೀಮ್‌ಗಳನ್ನು ಜೋಳದ ಹಿಟ್ಟು, ಕಡಲೆ ಹಿಟ್ಟು, ಅರಿಷಿನ ಪುಡಿಗಳನ್ನು ಬೆರೆಸಿ ತಯಾರಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಲೈಂಗಿಕ ಆಸಕ್ತಿ ಉತ್ತೇಜಿಸುವ ಮಾತ್ರೆಗಳ ವಶ: ಇಲ್ಲಿಯ ಆಜಾದ್ ನಗರ, ಕರ್ನಾಟಕ ಚೌಕ್ ರವಿವಾರ ಪೇಟೆಯ ಅಮರ್ ಪ್ಯಾಲೇಸ್ ಲಾಡ್ಜ್ ನಲ್ಲಿ ದಾಸ್ತಾನು ಮಾಡಿಟ್ಟಿದ್ದ ಲೈಂಗಿಕ ಆಸಕ್ತಿ ಉತ್ತೇಜಿಸುವ ಮಾತ್ರೆಗಳನ್ನು ವಶಪಡಿಸಿಕೊಂಡು ಹುಬ್ಬಳ್ಳಿ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಹುಬ್ಬಳ್ಳಿ ಮೂಲದ ಕೃಷ್ಣಮೂರ್ತಿ ಧರಿಗಬವಡರ ಎಂಬಾತನನ್ನು ಬಂಧಿಸಲಾಗಿದೆ. ಈತ ಬೆಳಗಾವಿ ಸಮೃದ್ಧಿ ಫಾರ್ಮಾ ಹಾಗೂ ಶ್ರೇಯಾ ಮೆಡಿಕಲ್ ಹೆಸರಿನ ನಕಲಿ ಬಿಲ್ಗಳನ್ನು ಉಪಯೋಗಿಸಿ ಅನಧಿಕೃತ ಔಷಧ ಮಾರಾಟದಲ್ಲಿ ತೊಡಗಿದ್ದನು. ಕಾಳಸಂತೆಯಲ್ಲಿ ಇದನ್ನು ಮಾರಾಟ ಮಾಡುತ್ತಿದ್ದನು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ
Belagavi: ಯುವಕನ ಮೇಲೆ ಗುಂಡಿನ ದಾಳಿ… ಸ್ಥಳದಲ್ಲಿ ಬಿಗುವಿನ ವಾತಾವರಣ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.