“ಮಿಲಿಟರಿ’ಹೋಟೆಲ್!
ಹಂಟರ್ ಕ್ಯಾಂಪ್‌ನ ದೇಶಭಕ್ತಿಯ ರುಚಿ
Team Udayavani, Jul 6, 2019, 4:07 PM IST
ಹಸಿವನ್ನು ಮಣಿ ಸು ವುದೂ ಒಂದು ಹೋರಾ ಟ ವೇ. ಅದ ಕ್ಕಾಗಿ ಯುದ್ಧ ವನ್ನೋ, ಕಾಳ ಗ ವನ್ನೋ ಮಾಡ ಬೇ ಕಿಲ್ಲ. ಆಹಾರ ಸೇವಿ ಸು ವ ವರು ಆ ಕ್ಷಣ ದಲ್ಲಿ ಸೈನಿಕರಂತೆ ಜೋಶ್ ಹೊಂದಿ ದ್ದರೆ ಸಾಕು… ಈ ಆಶ ಯ ದಲ್ಲಿ ಎದ್ದು ನಿಂತ ವಿಶಿಷ್ಟ ಹೋಟೆಲ್ ಜೆ.ಪಿ. ನಗರದಲ್ಲಿದೆ. ಒಮ್ಮೆ ನೀವು ಇದರೊಳಗೆ ಕಾಲಿಟ್ಟರೆ, ಅಕ್ಷರಶಃ ಸೈನಿಕರಾಗಿ ಬಿಡುತ್ತೀರಿ. ಹಾಗೆ, ಆಚೆ ಈಚೆ ನೋಡಿ ದರೆ, ಇಲ್ಲಿ ಬಾರ್ಡರ್ ಕಾಣಿಸುತ್ತ ದೆ. “ಓಹ್ ಕಾರ್ಗಿಲ್‌ಗೆ ಬಂದಿºಟ್ವಾ?’ ಅಂತ ನಮ್ಮೊಳಗೇ ಒಂದು ಸಂಶಯ ಹುಟ್ಟು ತ್ತದೆ.
“ಹಂಟರ್ ಕ್ಯಾಂಪ್’! ಇದು ಸೈನಿಕರ ಕ್ಯಾಂಪ್ ಅನ್ನು ಕಣ್ಮುಂದೆ ಕಟ್ಟಿ ಕೊ ಡುವ ಹೋಟೆಲ್. ಇದರೊಳಗೆ ಪ್ರವೇಶಿಸುತ್ತಿದ್ದಂತೆಯೇ, ಅಲ್ಲಿನ ಕಮ್ಯಾಂಡೊ ಬಟ್ಟೆ ಧರಿಸಿದ ಸಿಬ್ಬಂದಿ, “ಜೈ ಹಿಂದ್’ ಎಂದು ಸ್ವಾಗತಿ ಸುತ್ತಾರೆ. ಒಳಾವರಣ ನೋಡಿ ದರೆ, ಗಡಿ ಯಲ್ಲೇ ನಿಂತ ಅನು ಭವ. ಅಲ್ಲಿ ಸರಪಳಿ ಇದೆ. ತಂತಿ ಬೇಲಿ ಯಿದೆ. ಮರಳು ಮೂಟೆಗಳು, ಸೈನಿಕರ ಬಟ್ಟೆಯ ಬಣ್ಣದಿಂದ ಕೂಡಿದ ಕುರ್ಚಿ ಮತ್ತು ದಿಂಬುಗಳು ಆರ್ಮಿ ಕ್ಯಾಂಪ್‌ನಲ್ಲಿ ಇದ್ದೇವೆಂಬ ಭಾವನೆ ಮೂಡಿಸುತ್ತವೆ. ಸೈನಿಕರು ಬಳಸುವ ಗ್ಲೌಸ್, ಶೂ, ಹ್ಯಾಟ್, ದೂರದರ್ಶಕ, ಬ್ಯಾಗ್, ಗನ್, ಬುಲೆಟ್, ಬುಲೆಟ್ ಪ್ರೂಫ್ ಜಾಕೆಟ್, ಬಾಂಬ್, ವೈನ್ಸ್, ಟೀ ಕಪ್, ಪ್ರಥಮ ಚಿಕಿತ್ಸೆ ಬ್ಯಾಗ್, ಪೆಟ್ರೋಲ್ ಡಬ್ಬಿ, ಬಟ್ಟೆಗಳು ಹಾಗೂ ಅವರು ಬಳಸುವ ಯುದ್ಧ ವಿಮಾನ ಸೇರಿದಂತೆ ಹಲವು ವಸ್ತುಗಳ ಪ್ರತಿಕೃತಿಗಳು ಇಲ್ಲಿವೆ. ಅಂದ ಹಾ ಗೆ, ಈ ಹೋಟೆಲ್ ಶುರುವಾಗಿ 8 ತಿಂಗಳಾಯಿತಷ್ಟೇ.
ಇಲ್ಲೇನು ಸ್ಪೆಷೆಲ್?
ಹೋಟೆಲ್‌ನಲ್ಲಿ ಎಲ್ಲವೂ ತಾಜಾ ಮತ್ತು ರುಚಿ ರುಚಿಯ ತಿನಿಸುಗಳು. ಅದ ರಲ್ಲೂ ಶೊರ್ಬಾ, ಸೂಪ್ ವೆರೈಟಿ, ತಂದೂರಿ ಸ್ಪೆಷೆಲ್‌ಗಳ ರುಚಿ ಪ್ರಿಯ ವಾ ಗು ತ್ತದೆ. ಉತ್ತರ ಭಾರತ ಶೈಲಿಯ ಹಾಗೂ ಚೈನೀಸ್ ಮಾದರಿಯ ಖಾದ್ಯ ಗ ಳಿಗೆ ತುಂಬಾ ಬೇಡಿಕೆ ಇದೆ. ಸೈನಿ ಕ ರಿಗೆ ಹಾಗೂ ನಿವೃತ್ತ ಸೈನಿಕರಿಗೆ ಇಲ್ಲಿ ವಿಶೇಷ ರಿಯಾಯಿತಿ ಇರುತ್ತದೆ. ಅನೇಕ ಸೈನಿಕರು ಹಾಗೂ ಕರ್ನಲ್‌ಗಳು ಇಲ್ಲಿಗೆ ಬಂದು, ಹೋಟೆ ಲ್‌ನ ದೇಶಾ ಭಿ ಮಾ ನ ವನ್ನು ಪ್ರಶಂಸಿಸಿದ್ದಾರೆ.
ಸೈನಿ ಕನಿಂದ ಚಾಲ ನೆ
ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದ ವೀರ ಯೋಧ ನವೀನ್ ನಾಗಪ್ಪ ಅವರಿಂದ ಈ ಹೋಟೆಲ್‌ನ ಉದ್ಘಾಟನೆ ನಡೆದಿತ್ತು. “ಜನರಲ್ಲಿ ಸೈನಿಕರ ಬಗ್ಗೆ ಗೌರವ ಮೂಡಿಸುವುದೇ ನಮ್ಮ ಉದ್ದೇಶವಾಗಿದೆ. ದೇಶವನ್ನು ಹಗಲಿರುಳು ಕಾಯುತ್ತಿರುವ ಸೈನಿಕರೇ ನಿಜವಾದ ಹೀರೋಗಳು. ಜನರು ಅವರನ್ನು ಮರೆಯಬಾರದು. ಅದನ್ನು ಗುರಿಯಾಗಿಟ್ಟುಕೊಂಡು ಈ ಹೋಟೆಲ್ ಆರಂಭಿಸಿದ್ದೇವೆ’ ಎನ್ನು ತ್ತಾರೆ ಹೋಟೆ ಲ್ ನ ಚೇತನ್ ಪಾಟೀಲ್ ಮತ್ತು ಹೇಮಲತಾ.
ಸೈನಿಕರು ಹುತಾತ್ಮರಾದರೆ ಅವರಿಗೆ ನಮನ ಸಲ್ಲಿಸುವುದು ಇಲ್ಲಿನ ಪದ್ಧತಿ. ಇತ್ತೀಚೆಗೆ ನಡೆದ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಒಂದು ವಾರ ಕ್ಯಾಂಡಲ್ ಹಚ್ಚುವುದರ ಮೂಲಕ ನಮನ ಸಲ್ಲಿಸಲಾಗಿತ್ತು. ಹೋಟೆಲ್‌ಗೆ ಬರುತ್ತಿದ್ದ ಗ್ರಾಹಕರಿಗೂ ಕ್ಯಾಂಡಲ್ ಹಚ್ಚಿಯೇ ಊಟ ಮಾಡುವಂತೆ ಸೂಚಿಸಲಾಗಿತ್ತು.
ಎರಡು ಮಹಡಿಯ ಈ ಹೋಟೆಲ್ ಆರ್ಮಿ ಕ್ಯಾಂಪ್, ಹಂಟರ್ ಕ್ಯಾಂಪ್ ಹಾಗೂ ಬಂಕರ್‌ಗಳನ್ನು ಹೊಂದಿದೆ. ಹೋಟೆಲಿನಲ್ಲಿ 18 ನೌಕರರು ಇದ್ದಾರೆ.
ಬಂಕರ್‌ನೊಳಗೆ ಕುಳಿತ ಅನುಭವ
“ಹಂಟರ್ ಕ್ಯಾಂಪ್’ನ ನೆಲಮಹಡಿ ಬಂಕರ್‌ನ ಮಾದರಿಯಲ್ಲಿದೆ. ಅಲ್ಲಿನ ಒಳಗೋಡೆಗಳು ಮಣ್ಣಿನಿಂದ ಅಲಂಕರಿಸಲ್ಪಟ್ಟಿವೆ. ಬಂಕರ್‌ನೊಳಗೆ ಇಳಿಯುವುದಕ್ಕೆ ಕಿಂಡಿ ಜಾಗವಿದೆ. ಯೋಧರಿಗೆ ಆಕ್ಸಿಜನ್ ಹಾಗೂ ನೀರು ಒದಗಿಸಲು ಅಳವಡಿಸುವ ಪೈಪ್‌ಲೈನ್, ಟೈರ್ ಮತ್ತು ಮರದಿಂದ ಮಾಡಿರುವ ಕುರ್ಚಿಗಳು ಸೇರಿದಂತೆ ಹಲವು ವಸ್ತುಗಳನ್ನು ಇಲ್ಲಿಡಲಾ ಗಿದೆ. ಹಾಗಾಗಿ, ಇಲ್ಲಿ ಊಟಕ್ಕೆ ಬಂದ ಗ್ರಾಹಕರಿಗೆ, ಸೇನೆಯ ಬಂಕರ್‌ನಲ್ಲಿ ಕುಳಿತ ಅನುಭವವಾಗುತ್ತ ದೆ.
ಸೈನಿಕರ ಮೇಲಿನ ಗೌರವದಿಂದ ಈ ಹೋಟೆಲ್ ನಡೆಸುತ್ತಿರುವುದು ನಿಜಕ್ಕೂ ಖುಷಿಯ ಸಂಗತಿ. ಇಲ್ಲಿ ಊಟ ಚೆನ್ನಾಗಿದೆ. ವಿಭಿನ್ನ ಪ್ರಯತ್ನದ ಮೂಲಕ ಜನರಲ್ಲಿ ದೇಶಾಭಿಮಾನವನ್ನು ಬೆಳೆಸಬೇಕು.
ನಿರಲ್, ನಿವೃತ್ತ ಎಂಇಜಿ
ಉಮೇಶ್ ರೈತನಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.