ತುಂಟಾಟದ ಪೊಲೀಸ್‌

ಹರೀಶ್‌ರಾಜ್‌ ಮತ್ತೆ ಬಂದ್ರು

Team Udayavani, Jul 7, 2019, 3:01 AM IST

kiladi-police

ನಟ ಹರೀಶ್‌ ರಾಜ್‌ ಮತ್ತೆ ಸುದ್ದಿಯಲ್ಲಿದ್ದಾರೆ. ಹೌದು, ಸದ್ದಿಲ್ಲದೆಯೇ ಅವರೊಂದು ಚಿತ್ರ ಮಾಡಿ ಮುಗಿಸಿದ್ದಾರೆ. ಹಾಗಂತ, ಅವರೆಲ್ಲೋ ಕಾಣೆಯಾಗಿದ್ದರು ಅಂದುಕೊಳ್ಳುವಂತಿಲ್ಲ. ತಮಿಳು, ಮಲಯಾಳಂ ಚಿತ್ರಗಳಲ್ಲಿ ನಟಿಸುವ ಮೂಲಕ ಬಿಝಿಯಾಗಿದ್ದರು. ಈ ಹಿಂದೆ “ಶ್ರೀ ಸತ್ಯನಾರಾಯಣ’ ಚಿತ್ರದಲ್ಲಿ ಹದಿನಾರು ಪಾತ್ರಗಳಲ್ಲಿ ನಟಿಸಿ, ಗಿನ್ನೆಸ್‌ ದಾಖಲೆಗೆ ಅರ್ಹರಾಗಿದ್ದರು.

ಈಗ ನಿರ್ದೇಶನ ಮತ್ತು ನಿರ್ಮಾಣ ಮಾಡುವ ಮೂಲಕ ಕಾಣಿಸಿಕೊಂಡಿದ್ದಾರೆ. ಹೌದು, ಅವರೀಗ “ಕಿಲಾಡಿ ಪೊಲೀಸ್‌’ ಚಿತ್ರ ಮಾಡಿದ್ದಾರೆ. ವಿಶೇಷವೆಂದರೆ, ಅವರು ಚಿತ್ರದ ಎರಡು ಗೀತೆಗಳನ್ನು ರಚಿಸಿದ್ದಾರೆ. “ಕಿಲಾಡಿ ಪೊಲೀಸ್‌ ‘ ಎಂದಾಕ್ಷಣ, ಕಳ್ಳ-ಪೊಲೀಸ್‌ ಆಟ ಇದ್ದೇ ಇರುತ್ತೆ ಎಂಬುದು ಸಹಜ ಮಾತು. ಇದೂ ಅಂಥದ್ದೊಂದು ಕಥೆ ಹೊಂದಿರುವ ಚಿತ್ರ.

ಆ ಬಗ್ಗೆ ಹೇಳುವುದಾದರೆ, “ಪೊಲೀಸ್‌ ಕ್ವಾರ್ಟಸ್‌ನಲ್ಲಿ ನಡೆಯುವ ಕಥೆಯಲ್ಲಿ ತಂದೆ ಮಗನ ಬಾಂಧವ್ಯ ಇದೆ. ಅಪ್ಪ ಪೇದೆ ಆಗಿದ್ದಾಗ ಅವರ ಕೆಲಸವನ್ನು ಹೀಯಾಳಿಸುತ್ತಲೇ, ಸೋಮಾರಿತನ ಮೈಗೂಡಿಸಿಕೊಂಡಿರುವ ಮಗ, ಮುಂದೊಂದು ದಿನ ತಾನೂ ಪೊಲೀಸ್‌ ಇನ್ಸ್‌ಪೆಕ್ಟರ್‌ ಆದಾಗ, ಪೇದೆ ಕೆಲಸ ಎಷ್ಟು ಕಷ್ಟ ಎಂಬ ಅರಿವಾಗುತ್ತದೆ.

ಆ ಬಳಿಕ ಅವ ಕಾನೂನನ್ನು ಬಳಸಿಕೊಂಡು, ಕೆಲ ವಿಷಯಗಳಲ್ಲಿ ಹೋರಾಡುತ್ತಾನೆ ಎಂಬುದು ಸಿನಿಮಾದ ಒನ್‌ಲೈನ್‌. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದ್ದು, ಚಿತ್ರಕ್ಕೆ ಕೊಡಗಿನ ಸಾನ್ವಿ ಪೊನ್ನಪ್ಪ ನಾಯಕಿಯಾಗಿದ್ದಾರೆ. ಅನಂತವೇಲು, ಶೋಭರಾಜ್‌, ರಮೇಶ್‌ಪಂಡಿತ್‌, ಸುಚೇಂದ್ರಪ್ರಸಾದ್‌, ಶ್ರೀನಿವಾಸಮೂರ್ತಿ, ಪದ್ಮಾವಾಸಂತಿ, ಮುನಿ, ಮೋಹನ್‌ಜುನೇಜ, ಗಿರಿ ಮುಂತಾದವರು ನಟಿಸಿದ್ದಾರೆ.

ಚಿತ್ರಕ್ಕೆ ಸಂತೋಷ್‌ ನಾಯಕ್‌, ವಿ.ಮನೋಹರ್‌ ಗೀತೆ ಬರೆದಿದ್ದಾರೆ. ಎಲ್ವಿನ್‌ ಜೋಶ್ವ ಸಂಗೀತವಿದೆ. ಹಿರಿಯ ಛಾಯಾಗ್ರಾಹಕ ಜಿ.ಜೆ.ಕೃಷ್ಣ ಪುತ್ರ ಜೆ.ಕೆ.ದೀಪಕ್‌ಕುಮಾರ್‌ ಛಾಯಾಗ್ರಾಹಕರಾಗಿದ್ದಾರೆ. ಸುರೇಶ್‌ ಜೀವನ್‌ ಸಂಕಲನ ಮಾಡಿದ್ದಾರೆ. ಮುರಳಿ ನೃತ್ಯ ನಿರ್ದೇಶಿಸಿದ್ದಾರೆ. ಶರವಣ ಪ್ರಭು ಸಂಭಾಷಣೆ ಇದೆ. ಡಿಫ‌ರೆಂಟ್‌ ಡ್ಯಾನಿ ಸಾಹಸವಿದೆ. ಆಡಿಯೋ ಬಿಡುಗಡೆಗೆ ಚಿತ್ರ ಸಜ್ಜಾಗಿದ್ದು, ಆಗಸ್ಟ್‌ನಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಟಾಪ್ ನ್ಯೂಸ್

14-

Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ

13-ed

Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.

12-mumbai

Mumbai ದೋಣಿ ದುರಂತ: ಮತ್ತೂಂದು ಮೃತದೇಹ ಪತ್ತೆ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

11-missile

Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ

10-sc-1

Coconut Oil Controversy: 20 ವರ್ಷಗಳ ಕೊಬ್ಬರಿ ಎಣ್ಣೆ ವಿವಾದಕ್ಕೆ ಸುಪ್ರೀಂ ಬ್ರೇಕ್‌

ಭದ್ರಾವತಿಯ ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಫೋಟ: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ

ಭದ್ರಾವತಿಯ ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Shiva Rajkumar: ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

14-

Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ

13-ed

Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.

12-mumbai

Mumbai ದೋಣಿ ದುರಂತ: ಮತ್ತೂಂದು ಮೃತದೇಹ ಪತ್ತೆ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

11-missile

Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.