ಮಳೆಕೊಯ್ಲು ಅಳವಡಿಸಿ ಮಾದರಿಯಾಗುತ್ತಿದ್ದಾರೆ ಹಲವರು

ಉದಯವಾಣಿಯ 'ಮನೆ ಮನೆಗೆ ಮಳೆಕೊಯ್ಲು' ಅಭಿಯಾನದ ಪರಿಣಾಮ

Team Udayavani, Jul 7, 2019, 5:00 AM IST

m-18

ಮಹಾನಗರ: ಜಲಸಂರಕ್ಷಣೆಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಉದಯವಾಣಿ ‘ಮನೆ ಮನೆಗೆ ಮಳೆಕೊಯ್ಲು’ ಅಭಿಯಾನ ಹಮ್ಮಿಕೊಂಡಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಉಳ್ಳಾಲ ಬಂಡಿಕೊಟ್ಯದ ಸುಧಾಕರ್‌ ಉಳ್ಳಾಲ ಅವರು ‘ಉದಯವಾಣಿ’ ನಡೆಸಿದ ‘ಮನೆಮನೆಗೆ ಮಳೆಕೊಯ್ಲು’ ಅಭಿಯಾನ ಮತ್ತು ಕಾರ್ಯಾಗಾರದಿಂದ ಪ್ರೇರಿತರಾಗಿ ತಮ್ಮ ಮನೆಯಲ್ಲಿ ಮಳೆಕೊಯ್ಲು ಅಳವಡಿಸಿದ್ದಾರೆ.

ಸುಧಾಕರ್‌ ಅವರ ಮನೆಯಲ್ಲಿ ನೀರಿಗೆ ಸಮಸ್ಯೆ ಇಲ್ಲದಿದ್ದರೂ ಬೇಸಗೆಯಲ್ಲಿ ನೀರಿನಲ್ಲಿ ಸ್ವಲ್ಪ ಪ್ರಮಾಣದ ಕಬ್ಬಿಣದ ಅಂಶವೂ ಬರುವುದರಿಂದ ತೊಂದರೆಯಾಗುತ್ತಿತ್ತು. ಅದನ್ನು ಮನಗಂಡು ಉದಯವಾಣಿಯ ಮನೆಮನೆಗೆ ಮಳೆಕೊಯ್ಲು ಶಿಬಿರದಲ್ಲಿ ಭಾಗವಹಿಸಿದರು. ಶಿಬಿರದಲ್ಲಿ ದೊರೆತ ಪ್ರೇರಣೆ ಹಾಗೂ ಮಾಹಿತಿಯಿಂದಾಗಿ ಸರಳವಾಗಿ ಮಳೆಕೊಯ್ಲು ಅಳವಡಿಸಿರುವುದಾಗಿ ಅವರು ತಿಳಿಸಿದ್ದಾರೆ.

ಬಾವಿಯ ಪಕ್ಕದಲ್ಲಿ ಪ್ಲಾಸ್ಟಿಕ್‌ ಡ್ರಮ್‌ ಇಟ್ಟು ದೊಡ್ಡ ಹಾಗೂ ಸಣ್ಣ ಗಾತ್ರದ ಜಲ್ಲಿ, ಮರಳನ್ನು ಹಾಕಲಾಗಿದೆ. ಬಳಿಕ ಸರಳವಾದ ಫಿಲ್ಟರ್‌ ವ್ಯವಸ್ಥೆ ಮಾಡಿದ್ದಾರೆ. ಮನೆಯ ಛಾವಣಿ ನೀರು ಫಿಲ್ಟರ್‌ ಆಗಿ ಬಾವಿಗೆ ಬೀಳುವಂತೆ ನೋಡಿಕೊಂಡಿದ್ದಾರೆ.

ಈ ವರ್ಷ ಮಳೆಗಾಲ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಮುಂದಿನ ವರ್ಷ ನೀರಿನ ಸಮಸ್ಯೆ ಉದ್ಭವಿಸುವ ಸಾಧ್ಯತೆ ಇದೆ. ನಮ್ಮ ಮನೆಯಲ್ಲಿ ಯಾವ ರೀತಿಯಲ್ಲಿ ‘ಮಳೆಕೊಯ್ಲು’ ನಿರ್ವಹಣೆ ಮಾಡಬಹುದೆಂದು ಕುಟುಂಬದವರೊಂದಿಗೆ ಚರ್ಚಿಸಿ ಈ ರೀತಿಯ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದೇವೆ ಎಂದು ಹೇಳುತ್ತಾರೆ ಅಲಂಕಾರು ಸತ್ಯನಾರಾಯಣ ಭಟ್.ತಮ್ಮ ಮನೆಯ, ದನದ ಕೊಟ್ಟಿಗೆಯ ಛಾವಣಿ ನೀರನ್ನು ಟ್ಯಾಂಕಿ, ಫಿಲ್ಟರ್‌ನ ಸಹಾಯದಿಂದ ಪೈಪ್‌ನ ಮೂಲಕ ನಮ್ಮ ಮನೆಯ ಅಂಗಳದಲ್ಲಿ ಇರುವ ನಿತ್ಯಉಪಯೋಗದ ಕೊಳವೆಬಾವಿಗೆ ಮರುಪೂರಣ ಮಾಡುತ್ತಿದ್ದೇವೆ. ಛಾವಣಿಯಿಂದ ಟ್ಯಾಂಕಿಗೆ ಬರುವ ನೀರಿನಲ್ಲಿರುವ ಕಸಕಡ್ಡಿ ತಡೆ ಹಿಡಿಯಲು ಕಬ್ಬಿಣದ ಮೆಶ್‌ ಅನ್ನು ಟ್ಯಾಂಕಿಗೆ ಅಳವಡಿಸಿದ್ದೇವೆ. ಮುಂದಿನ ವರ್ಷ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎನ್ನುವ ಭಾವನೆ ನಮ್ಮದು ಎಂದು ಅವರು ಪತ್ರಿಕೆಗೆ ತಿಳಿಸಿದ್ದಾರೆ.

ಬೋರ್‌ ವೆಲ್, ಬಾವಿಗೂ ಮಳೆಕೊಯ್ಲು

ಕಿನ್ನಿಗೋಳಿ ಪಕ್ಷಿಕೆರೆ ನಿವಾಸಿ ವಿನ್ಸೆಂಟ್ ಪತ್ರಾವೋ ಅವರು ತಮ್ಮ ಮನೆಯ ಟೆರೇಸ್‌ಗೆ ಬೀಳುವ ಮಳೆ ನೀರನ್ನು ಒಂಚೂರು ಪೋಲು ಮಾಡಲು ಅವಕಾಶ ನೀಡದೆ ಬಾವಿಗೆ ಹಾಗೂ ಬೋರ್‌ವೆಲ್ಗೆ ಅಳವಡಿಸಿದ್ದಾರೆ.

ನಮ್ಮ ಮನೆ 11 ಸೆಂಟ್ಸ್‌ ಜಾಗದಲ್ಲಿದ್ದು, ನೀರಿನ ಸಮಸ್ಯೆ ಅಷ್ಟಾಗಿ ಇಲ್ಲದಿದ್ದರೂ ಮುಂದಿನ ದಿನಗಳಲ್ಲಿ ನೀರಿನ ಅಭಾವ ಕಾಡುವ ಭಯವಿತ್ತು. ಆ ಹಿನ್ನಲೆಯಲ್ಲಿ ಮಳೆಕೊಯ್ಲು ಅಳವಡಿಸಿದ್ದೇವೆ. ಟೆರೇಸ್‌ನ ಎರಡು ಬದಿಗಳಲ್ಲೂ ಪೈಪ್‌ ಅಳವಡಿಸಿ ಅಲ್ಲಿಂದ ಮಳೆ ನೀರನ್ನು ನೇರವಾಗಿ ಅಂಗಳದ ಬದಿಯಲ್ಲಿರುವ ಟ್ಯಾಂಕ್‌ಗೆ ಬಿಡಲಾಗಿದೆ. ಟ್ಯಾಂಕ್‌ಗೆ ಹೊಗೆ, ಜಲ್ಲಿ ಹಾಕಿ ಫಿಲ್ಟರ್‌ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ಎರಡು ಪೈಪ್‌ಗ್ಳಲ್ಲಿ ನೀರು ಬೋರ್‌ವೆಲ್ ಹಾಗೂ ಬಾವಿಗೆ ಹೋಗುತ್ತದೆ. ವಾರಗಳ ಹಿಂದೆ ಮೊಳೆಕೊಯ್ಲು ಅಳವಡಿಸಲಾಗಿದ್ದು, ನೀರಿನ ಸಮಸ್ಯೆ ಮುಂದೆ ಬರಲ್ಲ ಅನ್ನುವ ವಿಶ್ವಾಸವಿದೆ ಎಂದು ಅವರು ಹೇಳುತ್ತಾರೆ.

ಜಲಮರುಪೂರಣ ಹೊಂಡ
ಮನೆಯಲ್ಲಿ ಬಾವಿ, ಬೋರ್‌ವೆಲ್ ಇಲ್ಲ ಆದರೆ ಪಕ್ಕದ ಮನೆಯಲ್ಲಿ ಬಾವಿ ಇದೆ ಅಲ್ಲಿನ ನೀರಿನ ಮಟ್ಟ ಏರಿಕೆಯಾಗಲಿ, ಅಂತರ್ಜಲ ಮಟ್ಟ ವೃದ್ಧಿಸಲಿ ಎಂಬ ಕಾರಣಕ್ಕೆ ಮನೆ ಸಮೀಪದಲ್ಲಿ ಜಲಮರುಪೂರಣ ಹೊಂಡ ಮಾಡಿದ್ದೇನೆ ಎಂದು ಹೇಳುತ್ತಾರೆ ಶಕ್ತಿನಗರದ ನೇಜಿನ ಗುರಿ ನಿವಾಸಿ ರಾಕೇಶ್‌ ಕುಮಾರ್‌.

ಮೊದಲಿಗೆ 5 ಅಡಿ ಅಗಲ 5 ಅಡಿ ಉದ್ದದ ಹೊಂಡ ತೆಗೆದೆ. ಅದರ ಮೇಲೆ ದೊಡ್ಡ ಗಾತ್ರದ ಹಾಗೂ ಸಣ್ಣ ಗಾತ್ರದ ಕಲ್ಲು ಗಳನ್ನು ಹಾಕಿದೆ. ಬಳಿಕ 6 ಬುಟ್ಟಿ ಜಲ್ಲಿ ಸುರಿದೆ. ಇದೀಗ ಮನೆಯ ಟೆರೇಸ್‌ ನಿಂದ ಬೀಳುವ ಮಳೆ ನೀರು ನೇರವಾಗಿ ಆ ಹೊಂಡಕ್ಕೆ ಹೋಗುವಂತೆ ಮಾಡಿದೆ. ನೀರು ಹೊಂಡದ ಒಳಗೆ ಹೋಗುವ ಸದ್ದು ಕೇಳುತ್ತದೆ. ನಮಗೆ ಅಥವಾ ಅಕ್ಕಪಕ್ಕದ ಜನರಿಗೆ ಪ್ರಯೋಜನವಾಗಲಿ ಎಂಬ ಆಸೆ ನಮ್ಮದು. ಮಳೆಕೊಯ್ಲು, ಜಲಮರುಪೂರಣ ಮಾಡದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಸಮಸ್ಯೆಯಾಗಲಿದೆ ಎಂಬುದು ಎಲ್ಲರಿಗೂ ಅರಿವಾಗಲಿ ಎಂದು ಅವರು ಪತ್ರಿಕೆಗೆ ತಿಳಿಸಿದ್ದಾರೆ.

ಮಳೆ ವಿಳಂಬವೇ ಮಳೆಕೊಯ್ಲು ಅಳವಡಿಸಲು ಪ್ರೇರಣೆ
ಈ ವರ್ಷ ಮಳೆಗಾಲ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಮುಂದಿನ ವರ್ಷ ನೀರಿನ ಸಮಸ್ಯೆ ಉದ್ಭವಿಸುವ ಸಾಧ್ಯತೆ ಇದೆ. ನಮ್ಮ ಮನೆಯಲ್ಲಿ ಯಾವ ರೀತಿಯಲ್ಲಿ ‘ಮಳೆಕೊಯ್ಲು’ ನಿರ್ವಹಣೆ ಮಾಡಬಹುದೆಂದು ಕುಟುಂಬದವರೊಂದಿಗೆ ಚರ್ಚಿಸಿ ಈ ರೀತಿಯ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದೇವೆ ಎಂದು ಹೇಳುತ್ತಾರೆ ಅಲಂಕಾರು ಸತ್ಯನಾರಾಯಣ ಭಟ್.ತಮ್ಮ ಮನೆಯ, ದನದ ಕೊಟ್ಟಿಗೆಯ ಛಾವಣಿ ನೀರನ್ನು ಟ್ಯಾಂಕಿ, ಫಿಲ್ಟರ್‌ನ ಸಹಾಯದಿಂದ ಪೈಪ್‌ನ ಮೂಲಕ ನಮ್ಮ ಮನೆಯ ಅಂಗಳದಲ್ಲಿ ಇರುವ ನಿತ್ಯಉಪಯೋಗದ ಕೊಳವೆಬಾವಿಗೆ ಮರುಪೂರಣ ಮಾಡುತ್ತಿದ್ದೇವೆ. ಛಾವಣಿಯಿಂದ ಟ್ಯಾಂಕಿಗೆ ಬರುವ ನೀರಿನಲ್ಲಿರುವ ಕಸಕಡ್ಡಿ ತಡೆ ಹಿಡಿಯಲು ಕಬ್ಬಿಣದ ಮೆಶ್‌ ಅನ್ನು ಟ್ಯಾಂಕಿಗೆ ಅಳವಡಿಸಿದ್ದೇವೆ. ಮುಂದಿನ ವರ್ಷ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎನ್ನುವ ಭಾವನೆ ನಮ್ಮದು ಎಂದು ಅವರು ಪತ್ರಿಕೆಗೆ ತಿಳಿಸಿದ್ದಾರೆ.

ಟಾಪ್ ನ್ಯೂಸ್

1-shaba

Sabarimala: ತಂಗಅಂಗಿ ಶೋಭಾಯಾತ್ರೆ ಆರಂಭ

Mang-Airport

Mangaluru Airport; 20 ಲಕ್ಷ ರೂ.ಗಳ ಚಿನ್ನಾಭರಣವಿದ್ದ ಬ್ಯಾಗ್‌ ವಾರಸುದಾರರಿಗೆ ಹಸ್ತಾಂತರ

Mandya_SAHITYA

ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-tanker

Mangaluru; ಟ್ಯಾಂಕರ್‌ ವ್ಯವಹಾರ: ನಕಲಿ ದಾಖಲೆ ಸೃಷ್ಟಿಸಿ ವಂಚನೆ

1-KDP

Dakshina Kannada; ಜಿಲ್ಲಾ ಕೆಡಿಪಿ ಸಭೆ: ಕರಾವಳಿ ನಿರ್ಲಕ್ಷ್ಯ ಆರೋಪಿಸಿ ಬಿಜೆಪಿ ಸಭಾತ್ಯಾಗ

police

Bajpe; ದನಗಳನ್ನು ಕಳವು ಮಾಡಿ ವ*ಧೆ: ಇಬ್ಬರ ಬಂಧನ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mandya_SAHITYA

Priority: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ವಂಚಿತ ಯಕ್ಷಗಾನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-shaba

Sabarimala: ತಂಗಅಂಗಿ ಶೋಭಾಯಾತ್ರೆ ಆರಂಭ

Mang-Airport

Mangaluru Airport; 20 ಲಕ್ಷ ರೂ.ಗಳ ಚಿನ್ನಾಭರಣವಿದ್ದ ಬ್ಯಾಗ್‌ ವಾರಸುದಾರರಿಗೆ ಹಸ್ತಾಂತರ

1-tanker

Mangaluru; ಟ್ಯಾಂಕರ್‌ ವ್ಯವಹಾರ: ನಕಲಿ ದಾಖಲೆ ಸೃಷ್ಟಿಸಿ ವಂಚನೆ

Mandya_SAHITYA

ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.