ಹೀಗಾದರೆ ಭಾರತ ಫೈನಲ್ ತಲುಪಬಹುದು ! ಇಲ್ಲಿದೆ ಸೆಮಿ ಫೈನಲ್ ಲೆಕ್ಕಾಚಾರ
ಸೆಮಿ ಫೈನಲ್ ಲೆಕ್ಕಾಚಾರ ಉಲ್ಟಾಪಲ್ಟಾ: ಯಾರಿಗೆ ಯಾರು? ಇಲ್ಲಿದೆ ಫುಲ್ ಡಿಟೈಲ್ಸ್
Team Udayavani, Jul 7, 2019, 10:14 AM IST
ಲಂಡನ್: ಸುಮಾರು 45 ಲೀಗ್ ಪಂದ್ಯಗಳನ್ನು ಮುಗಿಸಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ ಈಗ ಕೊನೆಯ ಘಟ್ಟಕ್ಕೆ ತಲುಪಿದೆ. ಇನ್ನು ಉಳಿದಿರುವುದು ಕೇವಲ ಮೂರು ಪಂದ್ಯಗಳು. ಮೂರು ಕೂಡಾ ನಾಕೌಟ್ ಪಂದ್ಯಗಳು. ಗೆದ್ದವರಿಗೆ ಗೆಲುವಿನ ಖುಷಿ, ಸೋತವರಿಗೆ ಮನೆಗೆ ಟಿಕೆಟ್.
ಹತ್ತು ತಂಡಗಳು ಪ್ರತಿನಿಧಿಸಿದ್ದ ಈ ಕೂಟದಲ್ಲಿ ಉಳಿದಿರುವುದು ನಾಲ್ಕು ತಂಡಗಳು ಮಾತ್ರ. ಅಗ್ರ ಶ್ರೇಯಾಂಕಿತ ಭಾರತ, ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ , ಆತಿಥೇಯ ಇಂಗ್ಲೆಂಡ್ ಮತ್ತು ಕಳೆದ ಕೂಟದ ಫೈನಲಿಸ್ಟ್ ನ್ಯೂಜಿಲ್ಯಾಂಡ್. ಇವುಗಳಲ್ಲಿ ಯಾರಿಗೆ ವಿಶ್ವಕಪ್ ವಿಜಯಲಕ್ಷ್ಮಿ ಒಲಿಯುತ್ತಾಳೆ ಎಂಬುದನ್ನು ಕಾದು ನೊಡಬೇಕಷ್ಟೇ.
ಹೇಗಿದೆ ಸೆಮಿ ಲೆಕ್ಕಾಚಾರ
ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ತಂಡ ಮತ್ತು ನಾಲ್ಕನೇ ಸ್ಥಾನ ಪಡೆದ ತಂಡಗಳು ಮೊದಲ ಸೆಮಿಯಲ್ಲಿ ಆಡಿದರೆ, ಎರಡು ಮತ್ತು ಮೂರನೇ ಸ್ಥಾನ ಪಡೆದ ತಂಡಗಳು ಎರಡನೇ ಉಪಾಂತ್ಯ ಪಂದ್ಯದಲ್ಲಿ ಸೆಣಸಾಡಲಿವೆ.
ಮೊದಲ ಸೆಮಿ ಫೈನಲ್
15 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿರುವ ಭಾರತ ಮತ್ತು 11 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲ್ಯಾಂಡ್ ಮೊದಲ ಸೆಮಿ ಫೈನಲ್ ನಲ್ಲಿ ಸೆಣಸಾಡಲಿದೆ. ಜುಲೈ 9ರಂದು ಅಂದರೆ ಮಂಗಳವಾರ ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾನ್ ಫೋರ್ಡ್ ಅಂಗಳದಲ್ಲಿ ಸೆಣಸಾಡಲಿವೆ.
ಭಾರತ ಮತ್ತು ಕಿವೀಸ್ ವಿರುದ್ಧದ ಲೀಗ್ ಪಂದ್ಯ ಮಳೆಯಿಂದ ರದ್ದಾಗಿತ್ತು. ಆದರೆ ಅದಕ್ಕೂ ಮೊದಲು ನಡೆದಿದ್ದ ಅಭ್ಯಾಸ ಪಂದ್ಯದಲ್ಲಿ ವಿಲಿಯಮ್ಸನ್ ಪಡೆ ಅಧಿಕಾರಯುತವಾಗಿ ಗೆದ್ದಿತ್ತು. ಈ ಗೆಲುವಿನಿಂದ ಬ್ಯಾಕ್ ಕ್ಯಾಪ್ಸ್ ಪಡೆಗೆ ಆತ್ಮವಿಶ್ವಾಸ ಹೆಚ್ಚಿದ್ದರೂ, ಲೀಗ್ ಕೊನೆಯ ಮೂರು ಪಂದ್ಯಗಳ ಸೋಲು ಅವರನ್ನು ಚಿಂತೆಗೀಡು ಮಾಡಿರುವುದಂತೂ ಸುಳ್ಳಲ್ಲ.
ಆದರೆ ವಿರಾಟ್ ಪಡೆಯ ಆತ್ಮವಿಶ್ವಾಸ ಮಾತ್ರ ಉತ್ತುಂಗದಲ್ಲಿದೆ. ಲೀಗ್ ಹಂತದಲ್ಲಿ ಆಡಿರುವ 9 ಪಂದ್ಯಗಳಲ್ಲಿ ಸೋತಿರುವುದು ಒಂದನ್ನು ಮಾತ್ರ. ಆರಂಭಿಕರಿಬ್ಬರ ಅದ್ಭುತ ಫಾರ್ಮ್, ಬೌಲರ್ ಬುಮ್ರಾ ಉತ್ತಮ ಲಯದಲ್ಲಿರುವುದು ಭಾರತಕ್ಕೆ ಪ್ಲಸ್ ಪಾಯಿಂಟ್. ಆದರೆ ಮಿಡಲ್ ಆರ್ಡರ್ ಮಾತ್ರ ಇನ್ನು ಕೂಡಾ ಸರಿಯಾಗಿ ನೆಲೆ ಕಂಡುಕೊಳ್ಳದೇ ಇರುವುದು ನಾಯಕ ವಿರಾಟ್ ಯೋಚಿಸುವಂತೆ ಮಾಡಿದೆ.
ಎರಡನೇ ಸೆಮಿ ಫೈನಲ್
14 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿರುವ ಆಸೀಸ್ ಮತ್ತು 12 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿರುವ ಆತಿಥೇಯ ಇಂಗ್ಲೆಂಡ್ ಎರಡನೇ ಸೆಮಿ ಫೈನಲ್ ನಲ್ಲಿ ಮುಖಾಮುಖಿಯಾಗಲಿದೆ. ಈ ಪಂದ್ಯ ಜುಲೈ 11ರಂದು ಶುಕ್ರವಾರ ಎಡ್ಜ್ ಬಾಸ್ಟನ್ ನಲ್ಲಿ ನಡೆಯಲಿದೆ.
ಹಾಲಿ ಚಾಂಪಿಯನ್ ಆಸೀಸ್ ಗೆ ಮತ್ತೊಂದು ವಿಶ್ವಕಪ್ ಎತ್ತುವ ತವಕ. ಡೇವಿಡ್ ವಾರ್ನರ್ ಮತ್ತು ಸ್ಮಿತ್ ಪುನರಾಗಮನದಿಂದ ಕಾಂಗರೂಗಳ ಆತ್ಮವಿಶ್ವಾಸಕ್ಕೆ ಬೂಸ್ಟ್ ಸಿಕ್ಕಿರುವುದುದಂತು ಸುಳ್ಳಲ್ಲ. ನಾಯಕ ಫಿಂಚ್ ಮತ್ತು ವಾರ್ನರ್ ಇಬ್ಬರೂ ಈ ಕೂಟದಲ್ಲಿ 500 ರನ್ ಗಡಿ ದಾಟಿದ್ದಾರೆ. ಮಿಚೆಲ್ ಸ್ಟಾರ್ಕ್ ಈ ಕೂಟದ ಅತ್ಯಂತ ಯಶಸ್ವಿ ಬೌಲರ್. ಇದು ಆಸೀಸ್ ಪ್ಲಸ್ ಪಾಯಿಂಟ್. ಆದರೆ ಸ್ಮಿತ್ ಇನ್ನು ಕೂಡಾ ತಮ್ಮ ನೈಜ ಆಟ ತೋರಿಸದೇ ಇರುವುದು ಮತ್ತು ಕಳೆದ ಪಂದ್ಯದಲ್ಲಿ ಉಸ್ಮಾನ್ ಖ್ವಾಜಾ ಗಾಯಗೊಂಡಿರುವುದು ಆಸಿಸ್ ಗೆ ಚಿಂತೆಯ ವಿಷಯವಾಗಿದೆ
ಮತ್ತೊಂದು ಕಡೆ ಆತಿಥೇಯ ಇಂಗ್ಲೆಂಡ್ ಈ ಕೂಟದ ಫೇವರೇಟ್ ತಂಡ. ಗಾಯದಿಂದ ಮರಳಿರುವ ಜೇಸನ್ ರಾಯ್ ಉತ್ತಮ ಬ್ಯಾಟಿಂಗ್ ಪ್ರದರ್ಶನ, ಸಂಕಷ್ಟದ ಸಮಯದಲ್ಲಿ ಯಾರಾದರು ಒಬ್ಬರು ತಂಡದ ಕೈ ಹಿಡಿದಿರುವುದು ಆಂಗ್ಲರಿಗೆ ಕಪ್ ಎತ್ತುವ ವಿಶ್ವಾಸ ಹೆಚ್ಚಿಸಿದೆ. ಲೀಗ್ ಹಂತದಲ್ಲಿ ಮೂರು ಪಂದ್ಯಗಳಲ್ಲಿ ಮುಗ್ಗರಿಸಿರುವುದು, ಕಷ್ಟಪಟ್ಟು ಸೆಮಿ ಟಿಕೆಟ್ ಪಡೆದಿರುವುದು ಇಂಗ್ಲೆಂಡ್ ಮೈನಸ್ ಪಾಯಿಂಟ್.
ಫೈನಲ್ ಪಂದ್ಯ ಜುಲೈ 14ರಂದು ಕ್ರಿಕೆಟ್ ಕಾಶಿ ಲಾರ್ಡ್ ನಲ್ಲಿ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.