ನಿವೃತ್ತ ಯೋಧರ ವಜಾಕ್ಕೆ ಖಂಡನೆ
ಇಎಸ್‌ಐ ಆಸ್ಪತ್ರೆಗೆ ಮರು ನೇಮಕ ಮಾಡಿಕೊಳ್ಳದಿದ್ದರೆ ಉಗ್ರ ಹೋರಾಟ: ಎಚ್ಚರಿಕೆ
Team Udayavani, Jul 7, 2019, 11:50 AM IST
ಕಲಬುರಗಿ: ಇಎಸ್‌ಐ ಆಸ್ಪತ್ರೆಯಲ್ಲಿ ಸೇವಾ ನಿವೃತ್ತ ಯೋಧರನ್ನು ಸೇವೆಯಿಂದ ವಜಾಗೊಳಿಸಿರುವುದನ್ನು ಖಂಡಿಸಿ ಇಎಸ್‌ಐ ಆಸ್ಪತ್ರೆ ದಿನಗೂಲಿ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಕಲಬುರಗಿ: ಇಎಸ್‌ಐ ಆಸ್ಪತ್ರೆಯಲ್ಲಿ ನಿವೃತ್ತ ಅರ್ಧ ಸೈನಿಕ ಬಲ(ಪ್ಯಾರಾಮಿಲಿಟರಿ)ದ ಯೋಧರನ್ನು ಸುರಕ್ಷಾ ಸೇವೆಯಿಂದ ತೆಗೆದು ಹಾಕಿರುವುದನ್ನು ಖಂಡಿಸಿ ಇಎಸ್‌ಐ ಆಸ್ಪತ್ರೆ ದಿನಗೂಲಿ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಇಎಸ್‌ಐಸಿ ಆಸ್ಪತ್ರೆಯಲ್ಲಿ ನಿವೃತ್ತ ಸೈನಿಕ ಮತ್ತು ಅರೆ ಸೈನಿಕ ಯೋಧರು ಕಳೆದ ಮೂರು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದು, ಈ ವರೆಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡಿದ್ದಾರೆ. ಸುಮಾರು 80 ಜನ ಅರೆ ಸೇನಾ ಪಡೆಯ ನಿವೃತ್ತ ಸೈನಿಕರು ಹಾಗೂ ಡಿಫೆನ್ಸ್ ವತಿಯಿಂದ ಕೇವಲ 17 ಜನ ಭದ್ರತಾ ಸೇವೆಯನ್ನು ಮೇ 15ರ ವರೆಗೆ ಸಲ್ಲಿಸಿದ್ದಾರೆ. ಮೇ 16 ರಂದು ನೂತನವಾಗಿ ಬಂದ ಭದ್ರತಾ ಏಜೆನ್ಸಿ ವೇಣುಗೋಪಾಲರು ನಿಮಗೆ ಮೂರು ತಿಂಗಳ ಸಮಯ ನೀಡುವೆ. ಅಷ್ಟರಲ್ಲಿ ಸಂಸದರಿಂದ ಪತ್ರ ತಂದುಕೊಟ್ಟರೇ ಸೇವೆ ಮುಂದುವರಿಯುತ್ತದೆ ಎಂದು ಹೇಳಿದ್ದಾರಾದರೂ ಕೆಲವೇ ದಿನಗಳಲ್ಲಿ ಇವರ ಸೇವೆಯನ್ನು ವಜಾಗೊಳಿಸಿದ್ದಾರೆ ಎಂದರು.
ಪುಣೆ, ಅಹ್ಮದನಗರ, ಲಾತೂರ, ಉಸ್ಮಾನಾಬಾದ ಮುಂತಾದ ಕಡೆಯಿಂದ ಭದ್ರತಾ ಸಿಬ್ಬಂದಿಗಳನ್ನು ಕರೆಸಿದ್ದಾರೆ. ಸುಮಾರು 80 ಜನ ಭದ್ರತಾ ಸಿಬ್ಬಂದಿಗಳಿಗೆ ಯಾವುದೇ ಮುನ್ಸೂಚನೆಯಿಲ್ಲದೇ ಕೆಲಸದಿಂದ ವಜಾಗೊಳಿಸಿದ್ದಾರೆ. ಕೂಡಲೇ ವಜಾಗೊಳಿಸಿದವರನ್ನು ಮರುನೇಮಕ ಮಾಡಿಕೊಳ್ಳಬೇಕು. ಇಲ್ಲದಿದ್ದರೇ ಇಎಸ್‌ಐ ಆಸ್ಪತ್ರೆ ದಿನಗೂಲಿ ಸಿಬ್ಬಂದಿ ಉಗ್ರ ಹೋರಾಟ ಮಾಡಬೇಕಾಗುವುದು ಎಂದು ಎಚ್ಚರಿಸಿದರು.
ಸಂಘದ ಅಧ್ಯಕ್ಷ ಭಗವಾನ ಭುವಿ, ದಿಗಂಬರ ಕಾಂಬಳೆ, ಗೋಪಾಲರಾವ್, ಈಶ್ವರಪ್ಪ, ಬಸಪ್ಪ ಎಸ್.ಎಚ್., ರಾಮು ಪವಾರ, ಲಕ್ಷ್ಮೀಕಾಂತ, ಶ್ರಾವಣಕುಮಾರ ಹಾಗೂ ಕೆಲಸದಿಂದ ವಜಾಗೊಂಡ ಸಿಬ್ಬಂದಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.