ಹೆಚ್ಚುತ್ತಿದೆ ಕಾಯಿಲೆ: ಚಿಕಿತ್ಸೆಗೆ ವೈದ್ಯರಿಲ್ಲ !

ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳಲ್ಲಿ ಹುದ್ದೆಗಳೆಲ್ಲ ಖಾಲಿ ಖಾಲಿ

Team Udayavani, Jul 7, 2019, 11:56 AM IST

doc

ಮಂಗಳೂರು: ಜನಾರೋಗ್ಯ ಕಾಪಾಡಬೇಕಾದ ದ.ಕ., ಉಡುಪಿಯ ಸರಕಾರಿ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳಲ್ಲೇ ವೈದ್ಯರಿಲ್ಲದಂತಾಗಿದೆ. ಮೂರ್‍ನಾಲ್ಕು ವರ್ಷಗಳಿಂದ ಬಹುತೇಕ ಹುದ್ದೆಗಳು ಖಾಲಿ ಇವೆ.

ಬಡವರ ಮನೆ ಬಾಗಿಲಿಗೆ ಆರೋಗ್ಯ ಎಂದು ಬಾಯಿ ಮಾತಿನಲ್ಲಿ ಹೇಳುತ್ತಿರುವ ಸರಕಾರ, ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತಿ ತಳೆಯುತ್ತಿಲ್ಲ. ಆದ ಕಾರಣ, ಅಧಿಕಾರಿಗಳಿಂದ ಹಿಡಿದು ಅಡುಗೆ ಸಿಬಂದಿಯವರೆಗಿನ ಹುದ್ದೆಗಳು ವೆನ್‌ಲಾಕ್‌, ಲೇಡಿಗೋ ಶನ್‌ ಆಸ್ಪತ್ರೆ ಮತ್ತು ಐದು ತಾಲೂಕು ಆಸ್ಪತ್ರೆಗಳಲ್ಲಿ ಖಾಲಿ ಇವೆ. ಇದರಿಂದ ಇರುವ ಕೆಲವೇ ವೈದ್ಯರು, ಸಿಬಂದಿ ವಾರದ ರಜೆಯನ್ನೂ ತೆಗೆದು ಕೊಳ್ಳದಂತಾಗಿದೆ.

ವೆನ್‌ಲಾಕ್‌ ಆಸ್ಪತ್ರೆಯಲ್ಲಿ 3 ವರ್ಷಗಳಿಂದ ಶೇ. 50ರಷ್ಟು ಹುದ್ದೆ ಖಾಲಿ ಇವೆ. 1 ಶುಶ್ರೂಷಕ ಅಧೀಕ್ಷಕ, 2 ಹಿರಿಯ ಕಚೇರಿ ಸಿಬಂದಿ, 2 ದರ್ಜೆ-2, 15 ದಾದಿ ಹುದ್ದೆ ಖಾಲಿ ಇವೆ. 152 ಮಂದಿ ಕಿರಿಯ ದಾದಿ ಹುದ್ದೆಯ ಪೈಕಿ 112 ಮಾತ್ರ ಭರ್ತಿಯಾಗಿವೆ. 9 ಪ್ರ.ದ. ಸಹಾಯಕರ ಹುದ್ದೆ ಇದ್ದು, ಇಬ್ಬರು ಮಾತ್ರ ಇದ್ದಾರೆ. 5 ಮ್ಯಾನೇಜರ್‌ ಹುದ್ದೆ ಇದ್ದು, ಓರ್ವ ಮಾತ್ರ ಇದ್ದಾರೆ. 19 ಮಂದಿಯ ಬದಲು 2 ದ್ವಿ.ದ. ಸಹಾಯಕರಿದ್ದಾರೆ. ಸಿಟಿ ಸ್ಕ್ಯಾನರ್‌, ರೇಡಿಯೋಲಾಜಿಸ್ಟ್‌, ಟೆಕ್ನೀಶಿಯನ್‌ ಸಹಿತ ಎಲ್ಲ ಹುದ್ದೆಗಳು ತೆರವಾಗಿವೆ ಎನ್ನುತ್ತಾರೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ| ರಾಜೇಶ್ವರಿ ದೇವಿ.

ಲೇಡಿಗೋಶನ್‌ ಆಸ್ಪತ್ರೆಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡದ್ದಕ್ಕೆ ಗಂಭೀರ ಸಮಸ್ಯೆ ಉಂಟಾಗಿಲ್ಲ. ಅರಿವಳಿಕೆ ತಜ್ಞರು 5 ತಿಂಗಳ ಹಿಂದೆ ವರ್ಗಾವಣೆಯಾಗಿದ್ದು, ಹೊಸ ನೇಮಕವಾಗಬೇಕಿದೆ ಎನ್ನುತ್ತಾರೆ ವೈದ್ಯಕೀಯ ಅಧೀಕ್ಷಕಿ ಡಾ| ಸವಿತಾ.

ಸುಳ್ಯ: ಮೂವರು ವೈದ್ಯರಿಲ್ಲ
ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ 11 ವೈದ್ಯರ ಬದಲು 9 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. 7 ಮಂದಿ ಕ್ಲರ್ಕ್‌ ಗಳ ಪೈಕಿ ಒಬ್ಬರಿದ್ದಾರೆ. 31ಡಿ ದರ್ಜೆ ನೌಕರರ ಪೈಕಿ ಓರ್ವ ಮಾತ್ರ ಇದ್ದು, ಹೊರಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಿಸಲಾಗಿದೆ. ಎಕ್ಸ್‌ರೇ, ಲ್ಯಾಬ್‌ ಟೆಕ್ನೀಶಿಯನ್‌, ಫಾರ್ಮಸಿಸ್ಟ್‌ಗಳಿಲ್ಲ.

ಪುತ್ತೂರು ಕಥೆಯೇ ಬೇರೆ !
ಪುತ್ತೂರು ಸರಕಾರಿ ಆಸ್ಪತ್ರೆಯ 15 ಹುದ್ದೆಗಳ ಪೈಕಿ 8 ಖಾಲಿ ಇವೆ. ವೈದ್ಯಾಧಿಕಾರಿ ಹುದ್ದೆಯೂ ತೆರವಾ ಗಿದ್ದು, ಡಾ| ಆಶಾ ಪುತ್ತೂರಾಯ ಪ್ರಭಾರ ಹೊಣೆಯಲ್ಲಿದ್ದಾರೆ. ಹಿರಿಯ ವೈದ್ಯಾಧಿಕಾರಿ, ಫಿಸಿಶಿಯನ್‌, ಸ್ತ್ರೀರೋಗ ತಜ್ಞ, ಜನರಲ್‌ ಸರ್ಜನ್‌, ರೇಡಿಯಾಲಾಜಿಸ್ಟ್‌, ಜನರಲ್‌ ಡ್ನೂಟಿ ಮೆಡಿಕಲ್‌ ಆಫೀಸರ್‌-2 ಸೇರಿದಂತೆ ಇತರ ಹುದ್ದೆಗಳೂ ಖಾಲಿಯೇ.

ಬೆಳ್ತಂಗಡಿ: ಹಲವು ಹುದ್ದೆ ಖಾಲಿ
ಬೆಳ್ತಂಗಡಿ ತಾ. ಆಸ್ಪತ್ರೆಯಲ್ಲೂ ಮುಖ್ಯ ವೈದ್ಯಾಧಿಕಾರಿ ಇಲ್ಲ. ನೇತ್ರ ತಜ್ಞೆ ಡಾ| ವಿದ್ಯಾವತಿ ಪ್ರಭಾರ ವಹಿಸಿ ಕೊಂಡಿದ್ದಾರೆ. ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಹುದ್ದೆ ಖಾಲಿ ಇದ್ದು, ಗುತ್ತಿಗೆ ಆಧಾರದಲ್ಲಿ ಓರ್ವರನ್ನು ನೇಮಿಸಿಕೊಳ್ಳಲಾಗಿದೆ. ಹಿರಿಯ ವೈದ್ಯಾಧಿಕಾರಿ, ಶುಶ್ರೂಷಕ ಅಧೀಕ್ಷಕರು ದರ್ಜೆ-2, ಹಿರಿಯ ಪ್ರಯೋಗಶಾಲಾ ತಂತ್ರಜ್ಞ, ಹಿರಿಯ ಮತ್ತು ಕಿರಿಯ ಫಾರ್ಮಸಿಸ್ಟ್‌, ದ್ವಿತೀಯ ದರ್ಜೆ ಸಹಾಯಕರು, ಕ್ಲರ್ಕ್‌ ಸೇರಿದಂತೆ ಇತರ ಹುದ್ದೆಗೆ ನೇಮಕವಾಗಿಲ್ಲ.

ಬಂಟ್ವಾಳ: 82ರಲ್ಲಿ 44 ಖಾಲಿ
ಬಂಟ್ವಾಳದಲ್ಲಿ 82 ಹುದ್ದೆಗಳ ಪೈಕಿ 38 ಮಂದಿ ಇದ್ದಾರೆ. 30 ಇರಬೇಕಾದ ಗ್ರೂಪ್‌ ಡಿ ನೌಕರರ ಜಾಗದಲ್ಲಿ ಕೇವಲ 2 ಮಂದಿ ಇದ್ದಾರೆ. ಒಟ್ಟು 44 ಹುದ್ದೆಗಳಿಗೆ ನೇಮಕಾತಿ ನಡೆಯಬೇಕಿದೆ.

ಮಂಗಳೂರು: ಶೇ. 20 ಕೊರತೆ
ಮಂಗಳೂರು ತಾಲೂಕಿನ ವಿವಿಧ ಪ್ರಾ. ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಮತ್ತು ಸಿಬಂದಿ ಸಾಕಷ್ಟಿಲ್ಲ. ಕುಂಪದವು ಗ್ರಾ.ಪ್ರಾ. ಆ. ಕೇಂದ್ರ ಮತ್ತುಸುರತ್ಕಲ್‌ ಪ್ರಾ.ಆ. ಕೇಂದ್ರದ ವೈದ್ಯರು ಇತ್ತೀಚೆಗೆ ವರ್ಗಾವಣೆಯಾಗಿದ್ದಾರೆ. 15ದಿನ ಗಳಲ್ಲಿ ವೈದ್ಯರ ನಿಯೋಜನೆ ಆಗ ಲಿದ್ದು, ಉಳಿದಂತೆ ಕೆಲವು ಪ್ರಾ.ಆ. ಕೇಂದ್ರ ಗಳಲ್ಲಿ ಶೇ. 20ರಷ್ಟು ಸಿಬಂದಿ ಕೊರತೆ ಇದೆ ಎಂಬುದು ತಾ. ವೈದ್ಯಾಧಿಕಾರಿ ಡಾ| ನವೀನ್‌ ಕುಮಾರ್‌.

ಉಡುಪಿಯಲ್ಲೂ ಖಾಲಿ
ಉಡುಪಿ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ಮಂಜೂರಾದ 129 ಹುದ್ದೆಗಳ ಪೈಕಿ 50 ಹುದ್ದೆ ಖಾಲಿ ಇವೆ. ಹಿರಿಯ ಶುಶ್ರೂಷಕರು, ವೈದ್ಯಕೀಯ ಅಧಿಕಾರಿ ಹುದ್ದೆಯೂ ಇಲ್ಲಿ ಭರ್ತಿಯಾಗಿಲ್ಲ. ಕುಂದಾಪುರ ತಾ. ಆಸ್ಪತ್ರೆಯಲ್ಲಿ ಒಟ್ಟು ಮಂಜೂರಾದ 88 ಹುದ್ದೆಗಳ ಪೈಕಿ 34 ಖಾಲಿ ಇದೆ ಎಂದು ಆಸ್ಪತ್ರೆ ಸಿಬಂದಿ ತಿಳಿಸಿದ್ದಾರೆ.

ದಿನಕ್ಕೆ 500 ರೋಗಿಗಳು
ವೆನ್‌ಲಾಕ್‌ ಆಸ್ಪತ್ರೆಯಲ್ಲಿ ದಿನಕ್ಕೆ ಕನಿಷ್ಠ 2 ಸಾವಿರ ಮಂದಿ ಹೊರರೋಗಿಗಳು ಬರುತ್ತಾರೆ. ತಾಲೂಕು ಆಸ್ಪತ್ರೆಗಳಿಗೂ ಪ್ರತಿದಿನ ಕನಿಷ್ಠ 400-500 ರೋಗಿಗಳು ಆಗಮಿಸುತ್ತಾರೆ. 50ರಷ್ಟು ಮಂದಿ ಒಳರೋಗಿಗಳಾಗಿ ದಾಖಲಾಗುತ್ತಾರೆ.

ಖಾಲಿ ಹುದ್ದೆ ವಿವರವನ್ನು ಮೇಲಧಿಕಾರಿಗಳಿಗೆ ಕಳುಹಿಸಲಾ ಗಿದೆ. ಗ್ರೂಪ್‌ ಡಿ ಹುದ್ದೆಗಳ ಭರ್ತಿಗೆ ಆದೇಶವಾಗಿದೆ. ಕೆಲವು ಹುದ್ದೆಗಳನ್ನು ಕಾಂಟ್ರಾಕ್ಟ್ ಆಧಾರದಲ್ಲಿ ಭರ್ತಿ ಮಾಡಲಾಗುತ್ತಿದೆ.
-ಡಾ| ಎಂ. ರಾಮಕೃಷ್ಣ ರಾವ್‌ ದ.ಕ. ಜಿಲ್ಲಾ ಆರೋಗ್ಯಾಧಿಕಾರಿ

ಉಡುಪಿ ಜಿಲ್ಲೆಯ ಆಸ್ಪತ್ರೆಗಳಲ್ಲಿ ಕೆಲವು ಹುದ್ದೆಗಳು ಖಾಲಿ ಇವೆ. ವೈದ್ಯರ ನೇಮಕಕ್ಕೆ ಕೌನ್ಸೆಲಿಂಗ್‌ ಪ್ರಕ್ರಿಯೆಗಳೂ ನಡೆಯುತ್ತಿದ್ದು, ಬಳಿಕ ವೈದ್ಯರ ನೇಮಕ ಆಗಬಹುದು.
-ಡಾ| ರಾಮ ರಾವ್‌ ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ

ಧನ್ಯಾ ಬಾಳೆಕಜೆ

ಟಾಪ್ ನ್ಯೂಸ್

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

Shimoga; Deport Zameer Ahmed: ​​MLA Channabasappa

Shimoga; ಜಮೀರ್‌ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

8-bng

Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ

ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

8-bng

Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ

ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.