ಎರಡು ಪಶು ಆಸ್ಪತ್ರೆ ಮಂಜೂರು: ಶಾಸಕ
ಕಾಲುಬಾಯಿ ಜ್ವರ ಲಸಿಕೆ ಹಾಕಿಸಲು ನಾರಾಯಣಸ್ವಾಮಿ ರೈತರಿಗೆ ಸಲಹೆ
Team Udayavani, Jul 7, 2019, 12:29 PM IST
ಬಂಗಾರಪೇಟೆ ತಾಲೂಕಿನ ಬೋಡಗುರ್ಕಿ ಗ್ರಾಮದಲ್ಲಿ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಭೂಮಿ ಪೂಜೆ ನೆರವೇರಿಸಿದರು.
ಬಂಗಾರಪೇಟೆ: ತಾಲೂಕು ಸತತ ಬರ ದಿಂದ ತತ್ತರಿಸಿದ್ದು, ರೈತರು ಹೈನೋ ದ್ಯಮ ಉಳಿಸಿಕೊಳ್ಳಲು ಹಸುಗಳಿಗೆ ಕಾಲುಬಾಯಿ ಜ್ವರ ಬರದಂತೆ ಎಚ್ಚರ ವಹಿಸಬೇಕು. ಇದಕ್ಕಾಗಿ ಪ್ರತಿ ಹೋಬಳಿ ಮಟ್ಟದಲ್ಲಿ ಎರಡು ಪಶು ಆಸ್ಪತ್ರೆ ಮಂಜೂರಾಗಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.
ತಾಲೂಕು ಪಶುಪಾಲನಾ ಇಲಾಖೆ ಯಿಂದ ತಾಲೂಕಿನ ಬೋಡಗುರ್ಕಿ ಗ್ರಾಮದಲ್ಲಿ ನಿರ್ಮಿಸಲಿರುವ 35 ಲಕ್ಷ ರೂ. ವೆಚ್ಚದ ಆಸ್ಪತ್ರೆ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ತಾಲೂಕಿನ ಎಲ್ಲಾ ಪಶು ಆಸ್ಪತ್ರೆ ಗಳಲ್ಲಿ ಸ್ವಂತ ಕಟ್ಟಡ ನಿರ್ಮಾಣ ಮಾಡ ಲಾಗುತ್ತಿದೆ. ಬೋಡಗುರ್ಕಿ ಗ್ರಾಮದ ವ್ಯಾಪ್ತಿಯಲ್ಲಿ ಸಾಕಷ್ಟು ಗ್ರಾಮಗಳು ಬರಲಿದ್ದು, ರೈತರು, ಜಾನುವಾರುಗಳ ಆರೋಗ್ಯ ಕಾಪಾಡಲು ಮುಂದಾಗ ಬೇಕಾಗಿದೆ ಎಂದರು.
ಸೂಕ್ತ ಲಸಿಕೆ ಏಕೈಕ ಮಾರ್ಗ: ತಾಲೂಕು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರಾಮು ಮಾತನಾಡಿ, ಪ್ರಸ್ತುತ ಗಾಳಿ ವಾತಾವರಣ ಹೆಚ್ಚಾಗಿರು ವುದರಿಂದ ಹಸು, ಎಮ್ಮೆ ಹಾಗೂ ಹಂದಿಗಳಿಗೆ ಹೆಚ್ಚಾಗಿ ಕಾಲುಬಾಯಿ ಜ್ವರ ಬರುತ್ತದೆ. ಒಮ್ಮೆ ಕಾಯಿಲೆ ಬಂದಲ್ಲಿ ಜಾನುವಾರುಗಳು ಮುಂದಿನ ಬೆಳವಣಿಗೆಗೆ ಹಾಗೂ ಗರ್ಭ ಕಟ್ಟುವುದಕ್ಕೆ ಕಷ್ಟವಾಗುತ್ತದೆ. ಈ ಕಾಯಿಲೆಯನ್ನು ವಾಸಿ ಮಾಡಲು ಸೂಕ್ತ ಲಸಿಕೆ ಹಾಕುವುದೇ ಏಕೈಕ ಮಾರ್ಗವಾಗಿದೆ ಎಂದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿಚ್ಚಹಳ್ಳಿ ಗೋವಿಂದರಾಜ್, ಜಿಪಂ ಸದಸ್ಯ ಶಾಹಿದ್, ಕಾಮಸಮುದ್ರ ಗ್ರಾಪಂ ಆದಿ ನಾರಾಯಣ ಕುಟ್ಟಿ, ಬೋಡಗುರ್ಕಿ ವಿಎಸ್‌ಎಸ್‌ಎನ್ ಅಧ್ಯಕ್ಷ ಲಕ್ಷ್ಮಿನಾರಾ ಯಣ, ಕಾಮಸಮುದ್ರ ಎಸ್ಸೈ ರವಿ ಕುಮಾರ್, ರಂಗಾಚಾರಿ, ಅಮರೇಶ್, ಲಕ್ಷ್ಮಮ್ಮ, ವೆಂಕಟೇಶ್ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.