ಸಿದ್ಧಾಂತ್-ಸಾನ್ವಿ, ಅರ್ನವ್-ಆಯುಷಿಗೆ ವಿಜಯಮಾಲೆ
Team Udayavani, Jul 7, 2019, 2:11 PM IST
ಧಾರವಾಡ: ಕಾಸ್ಮಸ್ ಕ್ಲಬ್ ಆವರಣದಲ್ಲಿ ನಡೆದ ರಾಜ್ಯಮಟ್ಟದ ರ್ಯಾಕಿಂಗ್ ಟಿಟಿ ಪಂದ್ಯಾವಳಿಯಲ್ಲಿ ವಿಜೇತ ಆಟಗಾರರು.
ಧಾರವಾಡ: ಇಲ್ಲಿನ ಕಾಸ್ಮಸ್ ಕ್ಲಬ್ ಆವರಣದಲ್ಲಿ ನಡೆದಿರುವ ರಾಜ್ಯಮಟ್ಟದ ರ್‍ಯಾಂಕಿಂಗ್ ಟೇಬಲ್ ಟೆನಿಸ್ ಪಂದ್ಯಾವಳಿಯ 3ನೇ ದಿನವಾದ ಶನಿವಾರದ ಪಂದ್ಯಗಳು ಗಮನ ಸೆಳೆದವು.
ಕೆಡೆಟ್ ಬಾಯ್ಸ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಸಿದ್ಧಾಂತ್ ವಾಸನ್ 3-2 ಅಂಕಗಳಿಂದ ತೇಶಬ್ ಅವರನ್ನು ಮಣಿಸಿದರೆ ಇದಕ್ಕೂ ಮುನ್ನ ನಡೆದ ಮೊದಲ ಸೆಮಿಸ್‌ನಲ್ಲಿ ತೇಶಬ್ ಕೆ. ಆಯುಶ್‌ನನ್ನು 3-2 ರಿಂದ, 2ನೇ ಸೆಮಿಸ್‌ನಲ್ಲಿ ಸಿದ್ಧಾಂತ್ ವಾಸನ್ ಅವರು ಶೇಶಾಂತ್ ರಾಮಸ್ವಾಮಿ ಅವರನ್ನು 3-0 ಅಂಕಗಳಿಂದ ಮಣಿಸಿ ಫೈನಲ್ ಪ್ರವೇಶ ಮಾಡಿದ್ದರು.
ಮಿನಿ ಕೆಡೆಟ್ ಗಲ್ಸ್ರ್ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಆಯುಷಿ ಬಾಲಕೃಷ್ಣಾ ಘೋಡ್ಸೆ, ಸುಮೇಧಾ ಭಟ್ ಅವರನ್ನು 3-1 ಅಂಕಗಳಿಂದ ಮಣಿಸಿದರು. ಇದಕ್ಕೂ ಮುನ್ನ ನಡೆದ ಮೊದಲ ಸೆಮಿಸ್‌ನಲ್ಲಿ ಆಯುಷಿ, ಕೈರಾ ಬಾಳಿಗಾ ಅವರನ್ನು 3-2ರಿಂದ, 2ನೇ ಸೆಮಿಸ್‌ನಲ್ಲಿ ಸುಮೇಧಾ, ಸ್ಮತಿ ಸುದರ್ಶನ ಅವರನ್ನು 3-1 ಅಂಕಗಳಿಂದ ಸೋಲಿಸಿದರು.
ಮಿನಿ ಕೆಡೆಟ್ ಬಾಯ್ಸ ಸಿಂಗಲ್ಸ್ನ ಫೈನಲ್ ಪಂದ್ಯದಲ್ಲಿ ಅರ್ನವ್ ಎನ್., ಅಥರ್ವ ನವರಂಗೆ ಅವರನ್ನು 3-2 ಅಂಕಗಳಿಂದ ಸೋಲಿಸಿದರೆ ಫೈನಲ್ಗೆ ಪ್ರವೇಶಿಸಲು ನಡೆದ ಮೊದಲ ಸೆಮಿಸ್‌ನಲ್ಲಿ ಅಥರ್ವ, ಸಿದ್ಧನಾಥ ಧಾರಿವಾಲ್ ಅವರನ್ನು 3-0 ಹಾಗೂ 2ನೇ ಸೆಮಿಸ್‌ನಲ್ಲಿ ಅರ್ನವ್, ವೇದಾಂತ ವಶಿಷ್ಟ ಅವರನ್ನು 3-0 ಅಂಕಗಳಿಂದ ಮಣಿಸಿದರು.
ಕೆಡೆಟ್ ಗಲ್ಸ್ರ್ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಸಾನ್ವಿ ವಿಶಾಲ ಮಾಂಡೇಕರ ಅವರು ರುತು ಪಂಡಿತ ಅವರನ್ನು 3-0 ಅಂಕಗಳಿಂದ ಸೋಲಿಸಿದರು. ಮೊದಲ ಸೆಮಿಸ್‌ನಲ್ಲಿ ಸಾನ್ವಿ, ಪ್ರಣವಿ ಎಚ್. ಅವರನ್ನು 3-2ರಿಂದ, ರುತು ಅವರು ನೀತಿ ಅಗರವಾಲ್ ಅವರನ್ನು 3-2ರಿಂದ ಸೋಲಿಸಿದ್ದರು. ಜೂನಿಯರ್ಸ್ ಆಟಗಳು ಬಾಕಿ ಇದ್ದು, ರವಿವಾರ ಪಂದ್ಯಾವಳಿಗೆ ತೆರೆ ಬೀಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.