ಹಳ್ಳಿಗಳಲ್ಲಿ ಯೋಜನೆ ಮಾಹಿತಿ ತಿಳಿಸಿ: ಡಾ| ಅವಿನಾಶ


Team Udayavani, Jul 7, 2019, 2:58 PM IST

07-July-36

ಚಿಂಚೋಳಿ: ಹೂವಿನಬಾವಿ ಗ್ರಾಮದಲ್ಲಿ ನಡೆದ ಜನಸ್ಪಂದನಾ ಸಭೆಯಲ್ಲಿ ಗ್ರಾಮಸ್ಥರು ಅಧಿಕಾರಿಗಳಿಗೆ ಸಮಸ್ಯೆ ಹೇಳುತ್ತಿದ್ದಾಗ ಗೊಂದಲಮಯ ವಾತಾವರಣ ಉಂಟಾದಾಗ ತಹಶೀಲ್ದಾರ್‌ ಪಂಡಿತ ಬಿರಾದಾರ, ಕೃಷಿ ಅಧಿಕಾರಿ ಅನೀಲಕುಮಾರ ರಾಠೊಡ ಸಮಾಧಾನ ಪಡಿಸಿದರು.

ಚಿಂಚೋಳಿ: ರಾಜ್ಯ ಮತ್ತು ಕೇಂದ್ರ ಸರಕಾರಗಳ ಅಭಿವೃದ್ಧಿ ಯೋಜನೆಗಳ ಮಾಹಿತಿಯನ್ನು ಗ್ರಾಮೀಣ ಪ್ರದೇಶದ ಜನರಿಗೆ ತಿಳಿಸುವ ಮೂಲಕ ಅವುಗಳ ಪ್ರಗತಿಗಾಗಿ ಅಧಿಕಾರಿಗಳು ಕೆಲಸ ಮಾಡಬೇಕೆಂದು ಶಾಸಕ ಡಾ| ಅವಿನಾಶ ಜಾಧವ ಹೇಳಿದರು.

ತಾಲೂಕಿನ ಹೂವಿನಬಾವಿ ಗ್ರಾಮದ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಶನಿವಾರ ನಡೆದ ಜನಸ್ಪಂದನಾ ಸಭೆಯಲ್ಲಿ ಭಾಗವಹಿಸಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿದ ನಂತರ ಗ್ರಾಮಸ್ಥರನ್ನುದ್ದೇಶಿಸಿ ಅವರು ಮಾತನಾಡಿದರು. ಹಳ್ಳಿಯ ಜನರಿಗೆ ರಾಜ್ಯ ಮತ್ತು ಕೇಂದ್ರ ಸರಕಾರ ಯೋಜನೆಗಳ ಮಾಹಿತಿ ಇರುವುದಿಲ್ಲ. ಈ ಕುರಿತು ಅವರಿಗೆ ಮಾಹಿತಿ ನೀಡಿದರೆ ಅನುಕೂಲವಾಗುತ್ತದೆ. ಶಿಕ್ಷಣ, ಕೃಷಿ, ಜಿಪಂ, ತಾಪಂ,ಪಶು ಸಂಗೋಪನೆ, ಗ್ರಾಪಂ, ತೋಟಗಾರಿಕೆ ಇಲಾಖೆಗಳಿಂದ ರೈತರಿಗಾಗಿ ಮತ್ತು ಸಾರ್ವಜನಿಕರಿಗೆ ಸಾಕಷ್ಟು ಯೋಜನೆಗಳಿವೆ. ಅವುಗಳ ಕುರಿತು ಮಾಹಿತಿ ನೀಡಬೇಕೆಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು

ನಮ್ಮ ತಂದೆ ಡಾ| ಉಮೇಶ ಜಾಧವ ಕಲಬುರಗಿ ಸಂಸದರಾಗಿದ್ದಾರೆ. ನಾನು ಶಾಸಕ ಆಗಿರುವುದರಿಂದ ತಾಲೂಕಿನ ಅಭಿವೃದ್ಧಿಗೋಸ್ಕರ ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳನ್ನು ತರಲಾಗುತ್ತಿದೆ. ನಿಮ್ಮ ಗ್ರಾಮದ ಏನಾದರೂ ಸಮಸ್ಯೆಗಳಿದ್ದರೆ ತಿಳಿಸಿ ಎಂದರು.

ಯಲಕಪಳ್ಳಿ ಗ್ರಾಮದ ಹತ್ತಿರ ಎರಡು ಕಂಕರ (ಕಲ್ಲು ಒಡೆಯುವ) ಯಂತ್ರಗಳಿವೆ. ಅಲ್ಲಿ ನ್ಪೋಟಕ ವಸ್ತುಗಳನ್ನು ಬಳಸಿ ಬ್ಲಾಸ್ಟಿಂಗ್‌ ಮಾಡಲಾಗುತ್ತಿದೆ. ಇದರಿಂದ ಗ್ರಾಮದ ಅನೇಕ ಮನೆಗಳು ಬಿರುಕು ಬಿಟ್ಟಿವೆ. ಭಾರಿ ಶಬ್ದ ಉಂಟಾದ ಸಂದರ್ಭದಲ್ಲಿ ಭೂಮಿ ನಡುಗಿ ಮನೆಗಳು ಮೇಲೆ ಬೀಳುತ್ತವೆ ಎನ್ನುವ ಭಯ ಜನರಲ್ಲಿದೆ. ಆ ಕಂಕರ (ಕಲ್ಲು ಒಡೆಯುವ) ಘಟಕಗಳನ್ನು ಮುಚ್ಚಿಸಬೇಕು. ಇಲ್ಲವೇ ನಮ್ಮ ಗ್ರಾಮವನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ತಹಶೀಲ್ದಾರ್‌ಗೆ ಒತ್ತಾಯಿಸಿದರು.

ಈ ಬಗ್ಗೆ ಈಗಾಗಲೇ ಕಂಕರ ಮಾಲೀಕರಿಗೆ ಸೂಚಿಸಲಾಗಿದೆ. ಅದರ ಪರವಾನಗಿ ರದ್ದು ಪಡಿಸುವಂತೆ ಜಿಲ್ಲಾಧಿಕಾರಿಗೆ ನಿಮ್ಮ ಮನವಿ ಮೇರೆಗೆ ಪತ್ರ ಬರೆದು ಗಮನಕ್ಕೆ ತರುತ್ತೇನೆಂದು ಭರವಸೆ ನೀಡಿದರು

ರುಸ್ತಂಪುರ ಗ್ರಾಮದ ಶ್ರೀಕಾಂತ ಮಾತನಾಡಿ, ನಮ್ಮ ಗ್ರಾಮದಲ್ಲಿ ಬೀದಿ ದೀಪಗಳಿಲ್ಲ. ಹೀಗಾಗಿ ಜನರು ರಾತ್ರಿ ತಿರುಗಾಡಲು ಭಯಪಡಬೇಕಾಗಿದೆ. ಅಲ್ಲದೇ ಕುಡಿಯಲು ನೀರು ಸಿಗುತ್ತಿಲ್ಲ. ವಿದ್ಯಾರ್ಥಿಗಳಿಗೆ ಬಸ್ಸಿನ ಅನುಕೂಲವಿಲ್ಲ, ಶಿಕ್ಷಕರ ಕೊರತೆ ಇದೆ ಎಂದು ಶಾಸಕರ ಗಮನಕ್ಕೆ ತಂದರು.

ಸುಲೇಪೇಟ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಿನನಿತ್ಯ ನೂರಾರು ರೋಗಿಗಳು ಬರುತ್ತಾರೆ. ಆದರೆ ಔಷಧಿ ಮಾತ್ರ ಹೊರಗೆ ಬರೆದುಕೊಡಲಾಗುತ್ತಿದೆ ಎಂದು ಟಿಹೆಚ್ಒ ಅವರಿಗೆ ತಿಳಿಸಿದಾಗ, ಸ್ಥಳದಲ್ಲಿಯೇ ಇದ್ದ ಡಾ| ವಿಜಯಕುಮಾರ ಜಾಪಟ್ಟಿ ಮಾತನಾಡಿ ಸುಲೇಪೇಟ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿತ್ಯ 200ರಿಂದ 300 ಹೊರ ರೋಗಿಗಳು ಬರುತ್ತಾರೆ. ಅವರಿಗೆ ಮಾತ್ರೆ ಮತ್ತು ಔಷಧ ನೀಡಲಾಗುತ್ತಿದೆ. ಆದರೆ ಪ್ರಾಥಮಿಕ ಆರೋಗ್ಯ ಕೇಂದ್ರ ಆಗಿರುವುದರಿಂದ ಹೆಚ್ಚಿನ ಔಷಧ, ಮಾತ್ರೆಗಳು ಸರಬರಾಜು ಆಗುತ್ತಿಲ್ಲ. ಕೇವಲ ಒಬ್ಬ ವೈದ್ಯರು ಕರ್ತವ್ಯ ನಿರ್ವಹಿಸಬೇಕಿದೆ ಎಂದು ತಿಳಿಸಿದರು.

ತಾಪಂ ಅಧಿಕಾರಿ ಮಹಮ್ಮದ ಮೈನೋದ್ದೀನ ಪಟಿಕರ, ಡಾ| ಮಹ್ಮದ ಗಫಾರ ಅಹೆಮದ್‌, ಕೃಷಿ ಅಧಿಕಾರಿ ಅನೀಲಕುಮಾರ ರಾಠೊಡ, ಡಾ| ಧನರಾಜ ಬೊಮ್ಮ, ಎಇಇ ಮಹ್ಮದ ಹುಸೇನ, ಸಮಾಜ ಕಲ್ಯಾಣಾಧಿಕಾರಿ ಪ್ರಭುಲಿಂಗ ಬುಳ್ಳ, ಎಇಇ ಪರಮೇಶ್ವರ ಬಿರಾದಾರ, ಶಾಂತವೀರ ಮಠ, ಶರಣಬಸಪ್ಪ ಪಾಟೀಲ, ಅಜೀಮ ಪಟೇಲ್ ಹಾಗೂ ಇನ್ನಿತರ ಅಧಿಕಾರಿಗಳು ತಮ್ಮ ಇಲಾಖೆಗಳ ಮಾಹಿತಿ ತಿಳಿಸಿದರು. ತಹಶೀಲ್ದಾರ್‌ ಪಂಡಿತ ಬಿರಾದಾರ ಸ್ವಾಗತಿಸಿದರು, ಪಿಡಿಒ ಪವನ ಮೇತ್ರಿ ವಂದಿಸಿದರು.

ಟಾಪ್ ನ್ಯೂಸ್

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

R Ashok (2)

ಚಂದ್ರಶೇಖರ ಶ್ರೀ ವಿರುದ್ಧ ಕೇಸ್‌; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: 6 acres of sugarcane crop caught fire after being struck by an electric wire

Kalaburagi: ವಿದ್ಯುತ್​ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ

ಜಮೀನು ವ್ಯಾಜ್ಯ: ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

1-kims

Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Untitled-1

Missing case: ಎರಡು ಪ್ರತ್ಯೇಕ ನಾಪತ್ತೆ ಪ್ರಕರಣ; ದೂರು ದಾಖಲು

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

de

Guttigar: ಮಾವಿನಕಟ್ಟೆ; ಮರದಿಂದ ಬಿದ್ದು ವ್ಯಕ್ತಿ ಸಾವು

9

Kaup: ಬೀಚ್‌ನಲ್ಲಿನ್ನು ಪ್ಯಾರಾ ಮೋಟರಿಂಗ್‌

8(1

Udupi: ಸ್ಥಾಪಕರು ಜೀವನ ಪಾಠ ಮಾಡಿದ್ದ ಎಂಜಿಎಂ ಕಾಲೇಜಿಗೆ ಅಮೃತೋತ್ಸವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.