ಆಂಗ್ಲ ಮಾಧ್ಯಮ ಹೌಸ್‌ಫುಲ್
•20 ಶಾಲೆಗಳಲ್ಲಿ ಆಂಗ್ಲಮಾಧ್ಯಮ•15 ಶಾಲೆಗಳಲ್ಲಿ ಎಲ್ಲ ಸೀಟ್ ಭರ್ತಿ
Team Udayavani, Jul 8, 2019, 11:01 AM IST
ಸಾಂದರ್ಭಿಕ ಚಿತ್ರ
ಕೊಪ್ಪಳ: ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಸರ್ಕಾರ ಆರಂಭಿಸಿರುವ 20 ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೌಸ್‌ಫುಲ್ ಆಗಿದೆ. ರಾಜ್ಯ ಸರ್ಕಾರ ಪ್ರಸಕ್ತ ವರ್ಷ ಬಡ ಮಕ್ಕಳಿಗೂ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಬೇಕೆಂದು ಪ್ರಾಯೋಗಿಕವಾಗಿ ಎಲ್ಕೆಜಿ ಹಾಗೂ 1ನೇ ತರಗತಿ ಆರಂಭಿಸಿದೆ. ಆರಂಭದಲ್ಲೇ ಇದಕ್ಕೆ ಭರ್ಜರಿ ಸ್ಪಂದನೆ ಸಿಕ್ಕಿದೆ.
ಸಾಹಿತಿಗಳ ಹಾಗೂ ಕನ್ನಡಾಭಿಮಾನಿಗಳ ವಿರೋಧದ ಮಧ್ಯೆಯೂ ಸರ್ಕಾರ ಆಂಗ್ಲ ಮಾಧ್ಯಮ ಆರಂಭಿಸಿದ್ದು, ಇಂಗ್ಲಿಷ್ ಬೋಧಿಸುವ ಶಿಕ್ಷಕರಿಗೆ ಈಗಾಗಲೇ ತರಬೇತಿಯನ್ನೂ ನೀಡಲಾಗಿದೆ.
ಜಿಲ್ಲೆಯ 20 ಶಾಲೆಗಳಲ್ಲಿ ತಲಾ ಒಂದು ಶಾಲೆಗೆ 30 ವಿದ್ಯಾರ್ಥಿಗಳ ಪ್ರವೇಶಾತಿ ಪಡೆಯಲು ಸರ್ಕಾರ ಸೂಚನೆ ನೀಡಿತ್ತು. ಅದರಂತೆ ಜಿಲ್ಲೆಯಲ್ಲಿನ 15 ಶಾಲೆಗಳಲ್ಲೂ 30 ಸೀಟ್‌ಗಳು ಭರ್ತಿಯಾಗಿವೆ. ಉಳಿದ 5 ಶಾಲೆಗಳಲ್ಲಿ 91 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ.
ಹೆಚ್ಚುವರಿ ಬೇಡಿಕೆ: ಜಿಲ್ಲೆಯ ಇಂದರಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 30 ವಿದ್ಯಾರ್ಥಿಗಳಿಗೆ ಪ್ರವೇಶಾತಿ ದೊರೆತಿದ್ದು, ಹೆಚ್ಚುವರಿ 30 ವಿದ್ಯಾರ್ಥಿಗಳ ಪಾಲಕರು ತಮ್ಮ ಮಕ್ಕಳಿಗೆ ಆಂಗ್ಲ ಮಾಧ್ಯಮ ಕಲಿಸಲು ಶಿಕ್ಷಕರಿಗೆ ಬೇಡಿಕೆಯನ್ನಿಟ್ಟಿದ್ದಾರೆ. ಇನ್ನು ಎಲ್. ಹೊಸಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹನುಮಸಾಗರ ಸರ್ಕಾರಿ ಹಿರಿಯ ಬಾಲಕರ ಪ್ರಾಥಮಿಕ ಶಾಲೆ, ತಾವರಗೇರಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮಕ್ಕೆ ಪ್ರವೇಶಕ್ಕೆ ಅನುಮತಿ ನೀಡುವಂತೆ ಕೋರಿದ್ದಾರೆ. ಜಿಲ್ಲೆಯ 20 ಶಾಲೆಗಳಲ್ಲಿ ನಾಲ್ಕು ಶಾಲೆಗಳಲ್ಲಿ ಹೆಚ್ಚುವರಿ ಪ್ರವೇಶದ ಬೇಡಿಕೆಯಿದ್ದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.
ಇಂಗ್ಲಿಷ್ ಮೊರೆ ಹೋದ ಪಾಲಕರು: ಕಲಿಕೆಯಲ್ಲಿ ಆಂಗ್ಲ ಭಾಷೆಯ ಬಗ್ಗೆ ಸಾಹಿತಿಗಳು ಸೇರಿದಂತೆ ಕನ್ನಡಪರ ಹೋರಾಟಗಾರರು, ಕನ್ನಡಾಭಿಮಾನಿಗಳು ವಿರೋಧಿಸಿದ್ದು, ಈ ಮಧ್ಯೆಯೂ ಪಾಲಕರು ಮಕ್ಕಳ ಶಿಕ್ಷಣದ ಹಕ್ಕು ನಮಗೆ ಬಿಟ್ಟಿದ್ದು, ನಾವು ಯಾವ ಭಾಷೆ ಆಯ್ಕೆ ಮಾಡಿಕೊಳ್ಳಬೇಕೆನ್ನುವುದು ನಮ್ಮ ತೀರ್ಮಾನ ಎಂದು ನಿರ್ಧರಿಸಿ ಕನ್ನಡದ ಜತೆಯಲ್ಲೇ ಆಂಗ್ಲ ಮಾಧ್ಯಮಕ್ಕೆ ಪ್ರವೇಶಾತಿ ಮಾಡಿಸಲಾಗಿದೆ. ಮುಂದಿನ ವರ್ಷ ಸರ್ಕಾರ ಆಂಗ್ಲ ಬೋಧನೆ ಪಡೆದ ವಿದ್ಯಾರ್ಥಿಗೆ 2ನೇ ತರಗತಿ ಆರಂಭಿಸಿದರೆ ಮಾತ್ರ ಮಕ್ಕಳಿಗೆ ಅನುಕೂಲವಾಗಲಿದೆ. ಕಾಟಾಚಾರಕ್ಕೆ ಆರಂಭಿಸಿದರೆ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಲಿದೆ ಎನ್ನುವ ಮಾತುಗಳು ಪಾಲಕರಿಂದ ಕೇಳಿ ಬಂದಿವೆ.
•ದತ್ತು ಕಮ್ಮಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kushtagi: ಬಸ್ ಸೇವೆ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Jaipur: ಬರೋಬ್ಬರಿ 3,676 ಕಿ.ಮೀ. ಹಾರಿದ ಕೊಕ್ಕರೆ: ದಾಖಲೆ
Kasaragod: 300 ಪವನ್ ಚಿನ್ನ, 1 ಕೋಟಿ ರೂ. ಕಳವು ಕರ್ನಾಟಕ, ತಮಿಳುನಾಡಿಗೆ ತನಿಖೆ ವಿಸ್ತರಣೆ
Fraud Case: ಹೂಡಿಕೆ ನೆಪ: ಮಹಿಳೆಯಿಂದ 56.64 ಲಕ್ಷ ರೂ. ವಂಚನೆ
Puttur: ಕೊಕ್ಕೊ ಧಾರಣೆ ತುಸು ಚೇತರಿಕೆ; ಸಿಂಗಲ್ ಚೋಲ್‌ಗೆ ಬೇಡಿಕೆ
IPL Auction: ಗುಜರಾತ್ ಟೈಟಾನ್ಸ್ ಪಾಲಾದ ಸಿರಾಜ್; ಆರ್‌ಸಿಬಿಗೆ ಹೃದಯಸ್ಪರ್ಶಿ ಸಂದೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.