ಸಸಿಹಿತ್ಲು, ಮರವಂತೆ: ಮೂವರು ಸಮುದ್ರಪಾಲು

Team Udayavani, Jul 8, 2019, 11:57 AM IST

sasihitlu

ಸಸಿಹಿತ್ಲು/ಉಪ್ಪುಂದ: ಸಸಿಹಿತ್ಲು ಬಳಿಯ ಅಗ್ಗಿದ ಕಳಿಯದಲ್ಲಿ ಈಜಲೆಂದು ಸಮುದ್ರಕ್ಕಿಳಿದ ಇಬ್ಬರು ಸಮುದ್ರ ಪಾಲಾದರೆ, ಮರವಂತೆ ಸಮುದ್ರ ತೀರದಲ್ಲಿದ್ದ ವ್ಯಕ್ತಿಯೋರ್ವ ಅಲೆಗಳ ಹೊಡೆತಕ್ಕೆ ಸಿಲುಕಿ ಮೃತಪಟ್ಟ ಘಟನೆ ರವಿವಾರ ಸಂಭವಿಸಿದೆ.

ಬಜಪೆಯ ಸಿದ್ಧಾರ್ಥ ನಗರದ ಸುಜಿತ್‌ (32), ಕಾವೂರು ನಿವಾಸಿ ಗುರುಪ್ರಸಾದ್‌ (28) ಅಗ್ಗಿದಕಳಿಯದಲ್ಲಿ ನಾಪತ್ತೆಯಾದವರು. ಬಜಪೆಯ ಸೃಜನ್‌ ಹಾಗೂ ಕಾರ್ತಿಕ್‌ ಅವರನ್ನು ಸ್ಥಳೀಯರು ಹಾಗೂ ಅವರೊಂದಿಗೆ ಇದ್ದ ಇತರರು ರಕ್ಷಿಸಿದ್ದಾರೆ. ಸೃಜನ್‌ ತೀವ್ರ ಅಸ್ವಸ್ಥನಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಸಿಹಿತ್ಲಿನ ಅಗ್ಗಿದಕಳಿಯದ ಬಾಕಿಮಾರು ಗದ್ದೆಯಲ್ಲಿ ಸ್ಥಳೀಯ ಸಂಸ್ಥೆಯೊಂದು ನಡೆಸುತ್ತಿದ್ದ ಗ್ರಾಮದ ಗೌಜಿ ಉತ್ಸವದ ಕೆಸರು ಗದ್ದೆ ಕ್ರೀಡೋತ್ಸವದಲ್ಲಿ ಭಾಗಿಯಾಗಲು ಬಜಪೆ ಯುವ ಟೈಗರ್‌ ತಂಡದ 7 ಮಂದಿ ಆಗಮಿಸಿದ್ದರು. ಸ್ಪರ್ಧೆಯ ಮೊದಲ ಸುತ್ತಿನಲ್ಲಿಯೇ ಪರಾಜಯಗೊಂಡಿದ್ದರಿಂದ ತಂಡದ ನಾಲ್ವರು ಸದಸ್ಯರು ಕಡಲ ತಡಿಗೆ ಬಂದು ಈಜಾಡಲಾರಂಭಿಸಿದ್ದರು. ಸ್ಥಳೀಯರ ಎಚ್ಚರಿಕೆ ಲೆಕ್ಕಿಸದೆ ನೀರಾಟ ಮುಂದುವರಿಸಿದಾಗ ಅಲೆಗಳಲ್ಲಿ ಸಿಲುಕಿಕೊಂ ಡರು. ಸ್ಥಳೀಯರು ಇಬ್ಬರನ್ನು ರಕ್ಷಿಸು ವಲ್ಲಿ ಯಶಸ್ವಿಯಾದರೂ ಇನ್ನಿಬ್ಬರು ತೆರೆಗಳಲ್ಲಿ ಮರೆಯಾದರು. ಸ್ಥಳದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದು ಸುರತ್ಕಲ್‌ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮರವಂತೆ: ಅಲೆಗೆ  ಸಿಲುಕಿ ವ್ಯಕ್ತಿ ಸಾವು
ಉಪ್ಪುಂದ: ಮರವಂತೆ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದ ಸಮೀಪ ಸಮುದ್ರ ದಡದಲ್ಲಿ ನಿಂತಿದ್ದ ವ್ಯಕ್ತಿಯೋರ್ವರು ಅಲೆಗಳ ರಭಸಕ್ಕೆ ಕೊಚ್ಚಿ ಹೋಗಿ ಮೃತಪಟ್ಟ ಘಟನೆ ರವಿವಾರ ಮಧ್ಯಾಹ್ನ ಸಂಭವಿಸಿದೆ.
ಮಾರಣಕಟ್ಟೆಯ ಚಿತ್ತೂರು ನಿವಾಸಿ ಚೇತನ್‌ ಶೆಟ್ಟಿ (43) ಮೃತಪಟ್ಟ ವ್ಯಕ್ತಿ. ಅವರು ಪತ್ನಿ ಮತ್ತು 5 ವರ್ಷದ ಮಗುವನ್ನು ಅಗಲಿದ್ದಾರೆ.

ಈ ಸಂದರ್ಭ ಪರಿಸರದಲ್ಲಿ ಹಲವರು ಇದ್ದರೂ ಸ್ಥಳದಲ್ಲಿ ಆಳ ಇರುವುದರಿಂದ ರಕ್ಷಿಸಲು ಸಾಧ್ಯವಾಗಲಿಲ್ಲ. ಸ್ವಲ್ಪ ಸಮಯದ ಬಳಿಕ ಅದೇ ಸ್ಥಳದಲ್ಲಿ ಶವ ಕಂಡುಬಂದಿತು. ಪೊಲೀಸರು ಸಾರ್ವಜನಿಕರ ಸಹಕಾರದಿಂದ ಮೇಲೆತ್ತಲು ಪ್ರಯತ್ನಿಸಿ ಆಗಲೂ ವಿಫ‌ಲರಾದರು. ಸಮುದ್ರದ ಆರ್ಭಟ ಹೆಚ್ಚಾಗಿದ್ದರಿಂದ ನೀರಿಗಿಳಿಯುವ ಸಾಹಸವನ್ನು ಯಾರೂ ಮಾಡಲಿಲ್ಲ. ಸಂಜೆ 4 ಗಂಟೆ ಸುಮಾರಿಗೆ ಮೃತ ದೇಹ ಕಲ್ಲುಗಳೆಡೆಯಲ್ಲಿ ಸಿಲುಕಿಕೊಂಡಿದ್ದು ಶವವನ್ನು ಮೇಲೆತ್ತಲಾಯಿತು. ದೇಹ ಕಲ್ಲಿಗೆ ಬಡಿದ ಕಾರಣ ಮುಖದ ಒಂದು ಭಾಗ ಜಜ್ಜಿ ಹೋಗಿದೆ.

ಶವವನ್ನು ಕುಂದಾಪುರ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲವರು ಇದನ್ನು ವಿಡಿಯೋ ಮಾಡಿದ್ದು ವ್ಯಕ್ತಿ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ವಿಡಿಯೋ ವೈರಲ್‌ ಆಗಿದೆ.

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10(1

Mannagudda: ಗುಜರಿ ಕಾರುಗಳ ಪಾರ್ಕಿಂಗ್‌; ಸಾರ್ವಜನಿಕರಿಗೆ ಸಮಸ್ಯೆ

9(1

Mangaluru: ರಸ್ತೆ, ಸರ್ಕಲ್‌ಗೆ ಸ್ಥಳೀಯ ನಾಮಕರಣ ಪ್ರಸ್ತಾವ

6

Mangaluru; ಕೆಲರೈ- ವಾಮಂಜೂರು ಸಂಪರ್ಕ ರಸ್ತೆ ಅವ್ಯವಸ್ಥೆ

5

Mangaluru: ವೆನ್ಲಾಕ್‌ನಲ್ಲಿ  ದೊರೆಯಲಿದೆ ಕಿಮೋಥೆರಪಿ

4(1

Ullal: ತೊಕ್ಕೊಟ್ಟು ಜಂಕ್ಷನ್‌ – ಭಟ್ನಗರ ರಸ್ತೆಯಲ್ಲಿ ಉಲ್ಟಾ ಸಂಚಾರ!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.