ಪುಟ್ಟರಾಜರ ಕಂಚಿನ ಮೂರ್ತಿ ಲೋಕಾರ್ಪಣೆ
•ಡೊಳ್ಳು-ಭಜನೆ-ಜಾಂಜ್ ಮೇಳ- ನಂದಿಕೋಲಿನೊಂದಿಗೆ ಅದ್ಧೂರಿ ಮೆರವಣಿಗೆ
Team Udayavani, Jul 9, 2019, 8:47 AM IST
ಗದಗ: ಬೆಳವಣಿಕಿ ಗ್ರಾಮದಲ್ಲಿ ಲಿಂ| ಡಾ| ಪುಟ್ಟರಾಜ ಕವಿ ಗವಾಯಿಗಳ ಕಂಚಿನ ಮೂರ್ತಿ ಲೋಕಾರ್ಪಣೆ ಮಾಡಲಾಯಿತು.
ಗದಗ: ಜಿಲ್ಲೆಯ ಬೆಳವಣಿಕಿ ಗ್ರಾಮದಲ್ಲಿ ನೂತನವಾಗಿ ಸ್ಥಾಪಿಸಲಾದ ಲಿಂ| ಡಾ| ಪುಟ್ಟರಾಜ ಕವಿ ಗವಾಯಿಗಳ ಕಂಚಿನ ಮೂರ್ತಿಯನ್ನು ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ಲೋಕಾರ್ಪಣೆ ಮಾಡಿದರು.
ಇದಕ್ಕೂ ಮುನ್ನ ಲಿಂ| ಪಂಡಿತ ಪುಟ್ಟರಾಜ ಕವಿಗಳ ಕಂಚಿನ ಪ್ರತಿಮೆಗೆ ರುದ್ರಾಭೀಷೇಕ, ಹೋಮ ಹವನ ಹಾಗೂ ವಿಶೇಷ ಪೂಜೆ ಸಲ್ಲಿಸಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಡೊಳ್ಳು, ಭಜನೆ, ಜಾಂಜ್ ಮೇಳ, ನಂದಿಕೋಲು ಸೇರಿದಂತೆ ಸಕಲ ಮಂಗಳವಾದ್ಯಗಳೊಂದಿಗೆ ಅದ್ದೂರಿ ಮೆರವಣಿಗೆ ನಡೆಸಲಾಯಿತು.
ಸಾನ್ನಿಧ್ಯ ವಹಿಸಿದ್ದ ತೋರಗಲ್ಲ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪುಟ್ಟರಾಜ ಕವಿ ಗವಾಯಿಗಳು ಮಹಾ ಮಾನವರಾಗಿ ಬೆಳೆದವರು. ಲಿಂ| ಪುಟ್ಟರಾಜರಿಗೆ ಬೆಳವಣಿಕಿ ಗ್ರಾಮ ತವರು ಮನೆ ಇದ್ದಂತೆ. ಬರಗಾಲದಲ್ಲೂ ಗ್ರಾಮದ ಜನರ ಭಕ್ತಿಗೆ ಬರವಿಲ್ಲ. ಸುಮಾರು 8.50 ಲಕ್ಷ ರೂ. ವೆಚ್ಚದಲ್ಲಿ ಮೂರ್ತಿ ಮಾಡಿಸಿ ಸಮಾಜಕ್ಕೆ ಅರ್ಪಿಸಿದ್ದು ಗ್ರಾಮಸ್ಥರ ಭಕ್ತಿಯ ಪ್ರತೀಕವಾಗಿದೆ. ಪ್ರತೀಯೊಬ್ಬರೂ ಒಗ್ಗಟ್ಟಿನಿಂದ ಧರ್ಮ ಬೆಳೆಸುವ ಕಾಯಕದಲ್ಲಿ ತೊಡಗಬೇಕು ಎಂದು ಸಲಹೆ ನೀಡಿದರು.
ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ಮಾತನಾಡಿ, ಪೂಜ್ಯರ ಮೂರ್ತಿಯನ್ನು ನಿರ್ಮಿಸಿ ಸುತ್ತಮುತ್ತಲಿನ ಗ್ರಾಮಗಳಿಗೆ ಆದರ್ಶರಾಗಿದ್ದಾರೆ ಎಂದು ಹೇಳಿದರು.
ವೀರೇಶ್ವರ ಪುಣ್ಯಾಶ್ರಮದ ವ್ಯವಸ್ಥಾಪಕ ಬಸವರಾಜ ಹಿಡಕಿಮಠ ಮಾತನಾಡಿದರು.
ಇದೇ ವೇಳೆ ಗ್ರಾಮಸ್ಥರಿಂದ ಕಲ್ಲಜ್ಜನವರಿಗೆ 1246ನೇ ತುಲಾಭಾರ ನೆರವೇರಿಸಲಾಯಿತು.
ಸೋಮಶೇಖರ ಚರೇದ, ಶರಣ್ಯನವರು ಹಿರೇಮಠ, ಸದಾಶಿವಯ್ಯ ಬಳಗಾನೂರಮಠ, ರಾಜು ಹಿರೇಮಠ, ರುದ್ರಯ್ಯ ಸಾಲಿಮಠ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.