ಕಾಲೇಜಿಗೆ ಪೊಲೀಸರ ದಾಳಿ: ಮೊಬೈಲ್ ವಶಕ್ಕೆ
Team Udayavani, Jul 9, 2019, 10:51 AM IST
ಉಪ್ಪಿನಂಗಡಿ : ಪುತ್ತೂರು ಖಾಸಗಿ ಕಾಲೇಜಿನ ವಿದ್ಯಾರ್ಥಿಗಳ ಮೊಬೈಲ್ ದುರ್ಬಳಕೆಯ ಅವಾಂತರದ ಹಿನ್ನೆಲೆಯಲ್ಲಿ ಕಲಿಕಾ ಅವಧಿಯಲ್ಲಿ ವಿದ್ಯಾರ್ಥಿ ಸಮೂಹ ಮೊಬೈಲ್ ಬಳಸಬಾರದೆಂಬ ನಿಯಮಾವಳಿಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಿಸಲು ಸೂಚಿಸಲಾಗಿದೆ. ಅದರಂತೆ ಉಪ್ಪಿನಂಗಡಿ ಪೊಲೀಸರು ಸೋಮವಾರ ಸ್ಥಳೀಯ ಕಾಲೇಜು ಗಳಿಗೆ ದಾಳಿ ನಡೆಸಿ 24 ಮೊಬೈಲ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಉಪ್ಪಿನಂಗಡಿ ಎಸ್‌ಐ ನಂದ ಕುಮಾರ್ ನೇತೃತ್ವದ ಪೊಲೀಸ್ ತಂಡ ಉಪ್ಪಿನಂಗಡಿಯ ಪ್ರಥಮ ದರ್ಜೆ ಕಾಲೇಜು ಹಾಗೂ ಪದವಿಪೂರ್ವ ಕಾಲೇಜಿಗೆ ದಾಳಿ ನಡೆಸಿ ಪರಿಶೀಲನೆ ನಡೆಸಿತು.
ಈ ಸಂದರ್ಭ ವಿದ್ಯಾರ್ಥಿ ಗಳು ಅಕ್ರಮವಾಗಿ ತಂದಿರಿಸಿದ್ದ 24 ಮೊಬೈಲ್‌ಗಳು ಪತ್ತೆಯಾದವು. ವಿದ್ಯಾರ್ಥಿಗಳು ಕಾಲೇಜಿಗೆ ಹೋಗುವ ಮುನ್ನ ಅಂಗಡಿಗಳಲ್ಲಿ ಮೊಬೈಲ್ ಇರಿಸುವ ಸುಳಿವು ಪಡೆದುಕೊಂಡ ಪೊಲೀಸರು ಶಂಕಿತ ಅಂಗಡಿಗಳಿಗೂ ದಾಳಿ ನಡೆಸಿ ತಪಾಸಣೆ ನಡೆಸಿದರು.
ಚೆಲ್ಲಾಟವಾಡದಿರಿ
ದಾಳಿಯ ಬಳಿಕ ವಿದ್ಯಾರ್ಥಿ ಸಮೂಹಕ್ಕೆ ಅರಿವು ಮೂಡಿಸಿದ ಎಸ್‌ಐ ಅವರು, ಸಂಭಾವ್ಯ ಅಪಾಯದ ಅರಿವಿಲ್ಲದೆ ಮನಸ್ಸಿಗೆ ತೋಚಿದಂತೆ ಮೊಬೈಲ್ ಬಳಕೆ, ಗಾಂಜಾದಂತಹ ಅಮಲು ಪದಾರ್ಥಗಳ ಬಳಕೆಯಿಂದ ವಿದ್ಯಾರ್ಥಿಗಳನ್ನು ಸೆಳೆಯುವ ತಂಡದಿಂದ ಸಂಭವಿಸಬಹುದಾದ ಅಪಾಯ, ಅಶ್ಲೀಲ ದೃಶ್ಯಾವಳಿಗಳ ಪ್ರಸಾರದ ದುಷ್ಪರಿಣಾಮ ಮೊದಲಾ ದವುಗಳನ್ನು ವಿವರಿಸಿ ಸುಂದರ ಭವಿಷ್ಯವನ್ನು ಹಾಳುಗೆಡವುವ ಯಾವುದೇ ತಪ್ಪು ಕಾರ್ಯಗಳನ್ನು ಮಾಡದಿರಿ ಎಂದು ವಿನಂತಿಸಿದರು.
ಯಾಮಾರಿಸುವ ಯತ್ನ
ವಶಪಡಿಸಿಕೊಂಡಿರುವ ಮೊಬೈಲ್‌ಗಳನ್ನು ಹಿಂದಿರುಗಿಸಬೇಕಾದರೆ ಪೋಷಕರೊಂದಿಗೆ ಠಾಣೆಗೆ ಬನ್ನಿ ಎಂದು ವಿದ್ಯಾರ್ಥಿಗಳಿಗೆ ಪೊಲೀಸರು ಸೂಚಿಸಿದ್ದರು ಕೆಲವೊಂದು ವಿದ್ಯಾರ್ಥಿ ಗಳು ಪೋಷಕರನ್ನು ಕರೆದುಕೊಂಡು ಬಂದರೆ ಮತ್ತೆ ಕೆಲವರು ಇದರಿಂದ ಮತ್ತಷ್ಟು ಸಮಸ್ಯೆ ಎದುರಾದೀತೆಂದು ಭಾವಿಸಿ ದಾರಿಯಲ್ಲಿ ಸಿಕ್ಕ ಪರಿಚಿತರನ್ನೇ ಪೋಷಕರೆಂದು ಬಿಂಬಿಸಿ ಠಾಣೆಗೆ ಕರೆದುಕೊಂಡು ಬಂದಿದ್ದರು. ವಿದ್ಯಾರ್ಥಿಗಳ ಈ ತಂತ್ರವನ್ನು ಮೊದಲೇ ಅರಿತಿದ್ದ ಪೊಲೀಸರು ತಂದೆ ಅಥವಾ ತಾಯಿ ಎಂದು ದೃಢೀಕರಿಸುವ ದಾಖಲೆಯೊಂದಿಗೆ ಹೆತ್ತವರು ಬಾರದೇ ಹೋದರೆ ಯಾವ ಕಾರಣಕ್ಕೂ ಮೊಬೈಲ್ ಹಿಂದಿರುಗಿ ಸುವುದಿಲ್ಲ ಎಂದರು. ಇದರಿಂದ ಪೊಲೀಸರನ್ನು ಯಾಮಾರಿ ಸಲು ಬಂದ ವಿದ್ಯಾರ್ಥಿಗಳು ಮರಳಿ ಹೋಗಿ ಹೆತ್ತವರನ್ನು ಕರೆದುಕೊಂಡು ಬರಬೇಕಾಯಿತು.
ಸಹಾಯಕ ಆಯುಕ್ತರ ಸೂಚನೆ
ಮಕ್ಕಳ ಮೊಬೈಲ್ ಇಡಲು ಶಾಲಾ ಕಾಲೇಜುಗಳಲ್ಲಿ ವ್ಯವಸ್ಥೆ ಮಾಡಬೇಕು. ವಿದ್ಯಾರ್ಥಿ-ವಿದ್ಯಾರ್ಥಿನಿಯರು ವಿದ್ಯಾಸಂಸ್ಥೆಗಳ ಸಮೀಪದಲ್ಲಿರುವ ಅಂಗಡಿಗಳಲ್ಲಿ ಮೊಬೈಲ್‌ಗಳನ್ನು ಇಟ್ಟರೆ ಅದನ್ನು ವಶಕ್ಕೆ ಪಡೆದು ಅಂಗಡಿ ಮಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪುತ್ತೂರು ಸಹಾಯಕ ಆಯುಕ್ತ ಎಚ್.ಕೆ. ಕೃಷ್ಣಮೂರ್ತಿ ಅವರು ಇತ್ತೀಚೆಗೆ ಪೊಲೀಸರಿಗೆ ಸೂಚಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ
Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್?
Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?
Assembly Election: ಮಹಾರಾಷ್ಟ್ರಕ್ಕೆ ಫಡ್ನವೀಸ್ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ
BJP: ಇಂದು ಅಶೋಕ್ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್ ಕಮಿಟಿ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.