ಮಳವೂರು ಕುಡಿಯುವ ನೀರು ಮಲಿನಗೊಳ್ಳುವ ಭೀತಿ
ತೋಕೂರು: ಶೌಚ, ಕಾರ್ಖಾನೆಗಳ ನೀರು ನೇರ ನದಿಗೆ
Team Udayavani, Jul 9, 2019, 11:25 AM IST
ಸುರತ್ಕಲ್ : ಬೈಕಂಪಾಡಿ ಬಳಿಯ ತೋಕೂರು ಬೃಹತ್ ರಾಜ ಕಾಲುವೆ, ನದಿ ಕಿನಾರೆಗೆ ಒಳಚರಂಡಿ ನೀರನ್ನು ನೇರವಾಗಿ ಬಿಡಲಾಗುತ್ತಿದ್ದು, ಇದರಿಂದ ಮಳವೂರು ಕುಡಿಯುವ ನೀರಿನ ವ್ಯವಸ್ಥೆಯೇ ಮಲೀನವಾಗುವ ಭೀತಿ ಎದುರಾಗಿದೆ.
ನದಿ ಮತ್ತು ರಾಜಕಾಲುವೆಗಳಿಗೆ ಅಕ್ಕಪಕ್ಕ ಇರುವ ನೂರಾರು ಮನೆಗಳು ಶೌಚ ನೀರನ್ನು ನೇರವಾಗಿ ಬಿಡುವುದರಿಂದ ಇಲ್ಲಿ ಹರಿಯುತ್ತಿರುವ ನೀರು ಸಂಪೂರ್ಣ ಕಪ್ಪು ಬಣ್ಣಕ್ಕೆ ತಿರುಗಿದೆ. ದುರ್ವಾಸನೆಯಿಂದ ಪಾದಚಾರಿಗಳು ಮೂಗುಮುಚ್ಚಿ ನಡೆಯು ವಂತಾಗಿದೆ. ಮನೆಯಲ್ಲಿ ಫ್ಯಾನ್ ಬಳಸಿದರೆ ದುರ್ವಾಸನೆಯ ಗಾಳಿ ಬೀಸುತ್ತದೆ. ಊಟಕ್ಕೆ ಕುಳಿತಕ್ಕೆ ವಾಂತಿ ಬರುವಷ್ಟು ಕೆಟ್ಟ ಗಾಳಿ ಈ ಪ್ರದೇಶದಲ್ಲಿ ತುಂಬಿದೆ. ದೂರದ ಬೈಕಂಪಾಡಿಯಿಂದ ಕೈಗಾರಿಕಾ ಪ್ರದೇಶ, ಎಸ್‌ಇಝಡ್ ಕಾಲನಿ, ತೋಕೂರು ಜೋಕಟ್ಟೆ ಆಗಿ ಈ ನೀರು ನೇರವಾಗಿ ಫಲ್ಗುಣಿ ಒಡಲನ್ನು ಸೇರಿ ಮಳವೂರು ಕುಡಿಯುವ ನೀರಿನ ಕೇಂದ್ರಕ್ಕೆ ಸಾಗುತ್ತದೆ.
ಸಂಸ್ಕರಣಾ ಘಟಕಗಳು ನಿಷ್ಕ್ರಿಯ
ಇಲ್ಲಿ ಸರಿಯಾದ ಮಲೀನ ನೀರು ಸಂಸ್ಕರಣ ಘಟಕಗಳಿಲ್ಲ. ಇರುವ ಸಂಸ್ಕ ರಣಾ ಘಟಕಗಳು ಒಂದು ವರ್ಷದಿಂದ ನಿಷ್ಕ್ರಿಯವಾಗಿವೆ. ಈ ಬಾರಿ ಮಳೆಯ ಕೊರತೆಯೂ ಇದೆ. ಇದೀಗ ಈ ರಾಜಕಾಲುವೆಯಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆ ನೀರು ಹರಿಯುತ್ತಿದ್ದರೂ ಮಲೀನ ನೀರು ಹೆಚ್ಚು ಹರಿಯುತ್ತಿದೆ. ರೈಲ್ವೇ ಕಾಮಗಾರಿ ಸಂದರ್ಭ ಹಾಕಲಾದ ಮಣ್ಣು ಕಾಲುವೆಯ ಸಹಜ ಹರಿವಿಗೆ ತಡೆ ಒಡ್ಡಿದೆ. ಇದರಿಂದ ನಿಂತ ನೀರು ಮತ್ತಷ್ಟು ದುರ್ವಾ ಸನೆ ಬೀರಿ ವಾತಾವರಣವನ್ನು ಕೆಡಿಸಿದೆ.
ಆರೋಗ್ಯದ ಮೇಲೂ ಪರಿಣಾಮ
ನಾನಾ ಬಡಾವಣೆಗಳಿಂದ ಒಳಚರಂಡಿ ಗಳ ಮೂಲಕ ಹರಿದುಬರುವ ಕೊಳಕು ನೀರು ನದಿಗೆ ಸೇರ್ಪಡೆಯಾಗುತ್ತಿದ್ದರಿಂದ ನದಿ ನೀರು ಕಲುಷಿತವಾಗುತ್ತಿದೆ. ಇದು ಮೀನು ಸಂತತಿ, ಜಲಚರ ಗಳ ಜೀವಕ್ಕೆ ಮಾರಕವಾಗಿದೆ. ಅಲ್ಲದೇ,ನದಿ ತೀರದ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ ಎಂದು ಪರಿಸರ ಹೋರಾಟಗಾರ ಶಶಿಧರ್ ಶೆಟ್ಟಿ ಕಳವಳ ವ್ಯಕ್ತಪಡಿಸಿದ್ದಾರೆ.
ತ್ಯಾಜ್ಯ ನೀರು ಸೇರಿ ಕಲುಷಿತ
ಹಲವು ಕಾರ್ಖಾನೆಗಳ ತ್ಯಾಜ್ಯ ನೀರು ಸೇರಿ ತೋಕೂರು ಹಳ್ಳದ ನೀರು ಸಂಪೂರ್ಣವಾಗಿ ಕಲುಷಿತಗೊಂಡು ಕೊಳೆತು ನಾರುತ್ತಿದೆ. ಇದು ಅಲ್ಲಿಂದ ಅರ್ಧ ಕಿ.ಮೀ. ದೂರದವರೆಗೆ ಹರಿದು ಫಲ್ಗುಣಿಯನ್ನು ಸೇರುತ್ತದೆ. ಈಗಾಗಲೇ ಈ ಬಗ್ಗೆ ಪರಿಸರ ಮಾಲಿನ್ಯ ಇಲಾಖೆಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಭಾಗದಲ್ಲಿ ಮೀನುಗಾರಿಕೆ, ಕೃಷಿ ಚಟುವಟಿಕೆಗಳು ಪೂರ್ಣವಾಗಿ ಸಂಕಷ್ಟದಲ್ಲಿವೆ. ತೋಕೂರು, ಅತ್ರಬೈಲು, ಮೇಲುಕೊಪ್ಪಲ, ಕೂಳೂರು ಭಾಗದ ಜನತೆಗೆ ನದಿ ನೀರು ಉಪಯೋಗಕ್ಕೆ ಬಾರದಂತಾಗಿದೆ. ಆದರೆ ಯಾರೂ ಇತ್ತ ಗಮನ ಹರಿಸುತ್ತಿಲ್ಲ.
ದುರಸ್ತಿಗೆ ಸೂಚಿಸಲಾಗಿದೆ
ವಿಶೇಷ ಆರ್ಥಿಕ ವಲಯ ದಲ್ಲಿರುವ ಕಾಲನಿಯ ತ್ಯಾಜ್ಯ ನೀರು ಸಂಸ್ಕರಣಾ ವ್ಯವಸ್ಥೆ ನಿಷ್ಕ್ರಿಯ ಆಗಿದೆ.ಹೀಗಾಗಿ ಅವರಿಗೆ ನೋಟಿಸ್ ನೀಡಿ ಕೂಡಲೇ ದುರಸ್ತಿ ಪಡಿಸಲು ಸೂಚಿಸಲಾಗಿದೆ. ಹಲವು ಬರಿ ಇಲ್ಲಿನ ನೀರನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ. ಡ್ರೈನೇಜ್ ನೀರು ನೇರವಾಗಿ ಬಿಡುವುದ ರಿಂದ ಈ ಸಮಸ್ಯೆ ಆಗುತ್ತಿದೆ.
– ರಾಜಶೇಖರ ಪುರಾಣಿಕ್, ಮುಖ್ಯಾಧಿಕಾರಿ,ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ
ಲಕ್ಷ್ಮೀ ನಾರಾಯಣ ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ
Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು
Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್
Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ
Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.