ಅಲಲಾ ಐಲಾ…
Team Udayavani, Jul 10, 2019, 5:00 AM IST
ಹುಡುಗಿಯರನ್ನು ಕುದುರೆಗೆ ಹೋಲಿಸುವುದನ್ನು ಕೇಳಿರುತ್ತೀರಿ. ಕಲಿತ್ತ ಹುಡುಗಿ ಕುದುರೆ ನಡಿಗಿ… ಅಂತ ಜನಪದ ಹಾಡೇ ಇದೆಯಲ್ಲ. ಆ ಮಾತನ್ನು ಸತ್ಯ ಮಾಡುವಂಥ ಹುಡುಗಿಯೊಬ್ಬಳು ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದ್ದಾಳೆ. ಥೇಟ್ ಕುದುರೆಯಂತೆಯೇ ನಾಲ್ಕು ಕಾಲಿನಲ್ಲಿ ಓಡಬಲ್ಲ ಈಕೆ, ಕುದುರೆಯಂತೆಯೇ ಸಲೀಸಾಗಿ ಜಂಪ್ ಕೂಡಾ ಮಾಡಬಲ್ಲಳು.
ಈಕೆಯ ಹೆಸರು ಐಲಾ ಕಿರ್‌ಸ್ಟೀನ್. ನಾರ್ವೆ ದೇಶದ ಈ ಯುವತಿಯ ಕಾಲ್-ಕೈ ಚಳಕವನ್ನು ನೋಡಿದ ಜನರು ಅಲಲಾ ಐಲಾ ಅಂತ ಅಚ್ಚರಿಪಡುತ್ತಿದ್ದಾರೆ. ನಾಲ್ಕು ವರ್ಷದ ಹುಡುಗಿಯಿದ್ದಾಗಿನಿಂದಲೂ ಐಲಾಗೆ ಪ್ರಾಣಿಗಳೆಂದರೆ ಬಲು ಪ್ರೀತಿ. ಅದರಲ್ಲೂ ನಾಯಿಗಳೆಂದರೆ ಬಲು ಅಚ್ಚುಮೆಚ್ಚು. ಆಗೆಲ್ಲಾ ಐಲಾ, ನಾನೂ ನಾಯಿಯಾಗಬೇಕು ಅಂತ ಹುಚ್ಚು ಕನಸು ಕಾಣುತ್ತಿದ್ದಳಂತೆ. ಆಮೇಲೆ, ಕುದುರೆಗಳ ಮೇಲೆ ಮೋಹ ಬೆಳೆಯಿತು. ನಾನೂ ಕುದುರೆಯಾಗಬೇಕು ಅಂದುಕೊಂಡ ಈಕೆ ಹುಚ್ಚು ಸಾಹಸಕ್ಕೆ ಇಳಿದುಬಿಟ್ಟಳು. ಅದೇನೆಂದರೆ, ನಾಲ್ಕು ಕಾಲಿನಲ್ಲಿ ಓಡುವುದು, ನೆಗೆಯುವುದು. ಅದನ್ನವಳು ಎಷ್ಟು ಚೆನ್ನಾಗಿ ಕರಗತ ಮಾಡಿಕೊಂಡಿದ್ದಾಳೆಂದರೆ, ಕುದುರೆಗೂ, ಇವಳಿಗೂ ರೇಸ್ ಇಡಬಹುದೇನೋ! ನಾಲ್ಕು ಕಾಲಿನಲ್ಲಿ ಓಡುತ್ತೋಡುತ್ತಾ ಬಂದು, ಮರದ ಬೆಂಚೊಂದನ್ನು ಸಲೀಸಾಗಿ ಹಾರುತ್ತಿರುವ ಆಕೆಯ ವಿಡಿಯೋವನ್ನು ಲಕ್ಷಾಂತರ ಮಂದಿ ನೋಡಿದ್ದಾರೆ. ಅನಿರೀಕ್ಷಿತವಾಗಿ ಸಿಕ್ಕಿದ ಈ ಜನಪ್ರಿಯತೆಗೆ ಹೆದರಿದ ಐಲಾ, ತನ್ನ ಇನ್‌ಸ್ಟಾಗ್ರಾಂ ಅಕೌಂಟ್ ಅನ್ನು ಡಿಲೀಟ್ ಮಾಡುವ ಯೋಚನೆ ಮಾಡಿದ್ದಾಳಂತೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.