ಕಡವಂಚಿ ಗ್ರಾಮದ ಜಲಕ್ರಾಂತಿ!


Team Udayavani, Jul 10, 2019, 5:00 AM IST

s-14

ಸ್ನಾನಕ್ಕೆ ಅರ್ಧ ಬಕೆಟ್‌ ನೀರು ಸಿಕ್ಕರೆ ಅದೇ ಪುಣ್ಯ ಎಂಬಂಥ ಪರಿಸ್ಥಿತಿ ಇತ್ತು,
ಈಗ ಈ ಊರು ನೀರಿನ ವಿಷಯದಲ್ಲಿ ಜಗತ್ತಿಗೇ ಮಾದರಿಯಾಗಿ ನಿಂತಿದೆ.

ನಾನು ಕಡವಂಚಿಯ ಜಲ ರಕ್ಷಣೆಯ ಕಥೆ ಕೇಳಿ ಚಕಿತಗೊಂಡಿದ್ದೇನೆ. ಕರ್ನಾಟಕದ ಮುಖ್ಯಮಂತ್ರಿಯವರೇ ಕಡವಂಚಿ ಕಥೆಯನ್ನು ಕರ್ನಾಟಕದ ಹಳ್ಳಿಗಳಲ್ಲಿ ಹೇಳುತ್ತಿದ್ದಾರೆ. ಕರ್ನಾಟಕದ ಅಧಿಕಾರಿಗಳು ಕಡವಂಚಿಗೆ ಭೇಟಿ ನೀಡಿ ಪೂರ್ಣ ಅಧ್ಯಯನ ಮಾಡಿ ವರದಿ ತಯಾರಿಸಿದ್ದಾರೆ. ಸುಂದರವಾದ ವಿಡಿಯೋ ಕಿರುಚಿತ್ರ ಸಿದ್ಧಪಡಿಸಿದ್ದಾರೆ. ಕೃಷಿ ಇಲಾಖೆಯ ವತಿಯಿಂದ ಹಳ್ಳಿ ಹಳ್ಳಿಗಳಲ್ಲಿ ಈ ಕಿರುಚಿತ್ರದ ಪ್ರದರ್ಶನ ಮಾಡಲು ಕರ್ನಾಟಕ ಸರಕಾರ ವ್ಯವಸ್ಥೆ ಮಾಡಿದೆ. ತುಂಬ ಆಸಕ್ತಿಯಿಂದ ಈ ಜಲಕ್ರಾಂತಿ ನೋಡಲು ಬಂದಿರುವೆ ಎಂದು ನಾನು ಬಂದ ಉದ್ದೇಶವನ್ನು ವಿಠೊಬಾಗೆ ವಿವರಿಸಿದೆ.

ನಾನು ಮಹಾರಾಷ್ಟ್ರದ ಮರಾಠವಾಡ ವಿಭಾಗದ ಜಲನಾ ಜಿಲ್ಲೆಯ ಕಡವಂಚಿ ಗ್ರಾಮ ತಲುಪಿದಾಗ ಬೆಳಗಿನ ಸೊಬಗು ಆರಂಭವಾಗಿತ್ತು. ರಸ್ತೆ ಬದಿಯ ಸಣ್ಣ ಹೊಟೇಲ್‌ನ‌ ಯುವಕನೊಬ್ಬ ನನ್ನ ಗುರುತು ಹಿಡಿದು ಹೊರಬಂದು ಪ್ರೀತಿಯಿಂದ ಮಾತನಾಡಿಸತೊಡಗಿದ. ಈ ದೂರದ ಊರಿನಲ್ಲಿ ಪರಚಿತನೊಬ್ಬ ಆಕಸ್ಮಿಕವಾಗಿ ಸಿಕ್ಕದ್ದಕ್ಕೆ ಬಹಳ ಸಂತೋಷವಾಯಿತು. ಈತನ ಹೆಸರು ವಿಠೊಬಾ ಕಾಂಬಳೆ. ಬಹಳ ಹಿಂದೆ ಕಬ್ಬು ಕಟಾವು ತಂಡದೊಂದಿಗೆ ಮುಧೋಳಕ್ಕೆ ಬರುತ್ತಿದ್ದ. ವಿಠೊಬಾ ಉತ್ಸಾಹಿ, ಪ್ರಾಮಾಣಿಕ ಯುವಕ. ತಾನೀಗ ಕಡವಂಚಿಯಲ್ಲಿಯೇ ಉಳಿದು ಕೃಷಿ ಮತ್ತು ಸಣ್ಣ ಹೋಟೆಲ್‌ ನಡೆಸುತ್ತಿರುವುದಾಗಿ ವಿವರಿಸಿದ.

“”ನಾನು ಕಡವಂಚಿಯ ಜಲ ರಕ್ಷಣೆಯ ಕಥೆ ಕೇಳಿ ಚಕಿತಗೊಂಡಿದ್ದೇನೆ. ಕರ್ನಾಟಕದ ಮುಖ್ಯಮಂತ್ರಿಯವರೇ ಕಡವಂಚಿ ಕಥೆಯನ್ನು ಕರ್ನಾಟಕದ ಹಳ್ಳಿಗಳಲ್ಲಿ ಹೇಳುತ್ತಿದ್ದಾರೆ. ಕರ್ನಾಟಕದ ಅಧಿಕಾರಿಗಳು ಕಡವಂಚಿಗೆ ಭೇಟಿ ನೀಡಿ ಪೂರ್ಣ ಅಧ್ಯಯನ ಮಾಡಿ ವರದಿ ತಯಾರಿಸಿದ್ದಾರೆ. ಸುಂದರವಾದ ವಿಡಿಯೋ ಕಿರುಚಿತ್ರ ಸಿದ್ಧಪಡಿಸಿದ್ದಾರೆ. ಕೃಷಿ ಇಲಾಖೆಯ ವತಿಯಿಂದ ಹಳ್ಳಿ ಹಳ್ಳಿಗಳಲ್ಲಿ ಈ ಕಿರುಚಿತ್ರದ ಪ್ರದರ್ಶನ ಮಾಡಲು ಕರ್ನಾಟಕ ಸರಕಾರ ವ್ಯವಸ್ಥೆ ಮಾಡಿದೆ. ತುಂಬ ಆಸಕ್ತಿಯಿಂದ ಖುದ್ದು ಈ ಜಲ ಕ್ರಾಂತಿ ನೋಡಲು ಬಂದಿರುವೆ,” ಎಂದು ನಾನು ಬಂದ ಉದ್ದೇಶವನ್ನು ವಿಠೊಬಾಗೆ ವಿವರಿಸಿದೆ.

ವಿಠೊಬಾ ಕಾಂಬಳೆ ನನ್ನ ಮಾತು ಕೇಳಿ ಸಂತೋಷದಿಂದ ನಕ್ಕ, ಅವನ ಉತ್ಸಾಹ ಇನ್ನಷ್ಟು ಹೆಚ್ಚಿತು. “”ಕರ್ನಾಟಕದ ರೈತರಿಗೆ ಕಡವಂಚಿ ತೀರ್ಥಕ್ಷೇತ್ರವಾಗಿದೆ. ದಿನಾಲು ಕರ್ನಾಟಕದಿಂದ 50-60 ರೈತರು ಬಂದು ಇಲ್ಲಿನ ನೀರಿನ ಪವಾಡ ನೋಡಿ ಹೋಗುತ್ತಾರೆ” ಎಂದು ವಿಠೊಬಾ ಹೆಮ್ಮೆಯಿಂದ ಹೇಳಿದ. ಅವನ ಮಾತಿನಲ್ಲಿ ತನ್ನ ಊರಿನ ಬಗ್ಗೆ ಇರುವ ಅಭಿಮಾನ ಕಾಣುತ್ತಿತ್ತು.

ವಿಠೊಬಾನ ಹೋಟೆಲಿನಲ್ಲಿ ಕುಳಿತು ಉಪಹಾರ ಮಾಡಿದೆ. ಉಪ್ಪಿಟ್ಟು, ಇಡ್ಲಿ ತುಂಬಾ ರುಚಿಯಾಗಿತ್ತು. ಆತ ಕುಡಿಯಲು ಕೊಟ್ಟ ನೀರಿನ ಬಗ್ಗೆ ಕೇಳಿದೆ. “ಇದು ಫಿಲ್ಟರ್‌ ನೀರಲ್ಲ, ಆದರೂ ಅದಕ್ಕಿಂತಲೂ ಶುದ್ಧವಾಗಿದೆ. ಇದು ನೇರವಾಗಿ ಮಳೆಯಿಂದ ಸಂಗ್ರಹಿಸಿದ ನೀರು. ಮಳೆಯ ನೀರು ಕುಡಿದರೆ ನೂರು ವರ್ಷ ಮುಪ್ಪು ಬರುವುದಿಲ್ಲ. ಮುಖದ ಮೇಲೆ ವೃದ್ಧಾಪ್ಯದ ಗೆರೆಗಳು ಮೂಡುವುದಿಲ್ಲ’ ಎಂದು ಆರೋಗ್ಯದ ಕುರಿತು ದೊಡ್ಡ ಉಪನ್ಯಾಸವನ್ನೇ ನೀಡಿದ.

ಈ ಊರ ಜನರು ಮಳೆ ನೀರು ಸಂಗ್ರಹದಲ್ಲಿ ಪರಿಣತಿ ಪಡೆದಿದ್ದಾರೆ. ಮಳೆ ಶುರು ಆದ ಮೇಲೆ ಸ್ವಲ್ಪವೇ ನೀರು ಹೋಗಲು ಬಿಟ್ಟು ಉಳಿದ ನೀರನ್ನು ಟ್ಯಾಂಕರ್‌ಗಳಲ್ಲಿ ಚೆನ್ನಾಗಿ ಸಂಗ್ರಹಿಸುತ್ತಾರೆ. ಧೂಳು ಕಸ ಕಡ್ಡಿ ಬೀಳದಂತೆ ಎಚ್ಚರಿಕೆಯಿಂದ ಕಾಪಾಡುತ್ತಾರೆ. ಈ ನೀರು ಅವರಿಗೆ ಕುಡಿಯುವುದಕ್ಕೆ ಉಪಯೋಗವಾಗುತ್ತದೆ.

ವಿಠೊಬಾನನ್ನು ಜೊತೆಗೆ ಕರೆದುಕೊಂಡು ಕಡವಂಚಿಯ ರೈತರ ಸಾಧನೆ ನೋಡಲು ಹೊರಟೆ. ರಸ್ತೆಗಳು ತುಂಬಾ ಚೆ‌ನ್ನಾಗಿದ್ದವು. ಕಡವಂಚಿ ಒಂದು ಸಣ್ಣ ಹಳ್ಳಿ. ಜನಸಂಖ್ಯೆ ಆಸುಪಾಸು 3,000. ಇಲ್ಲಿ ಗ್ರಾಮಸ್ಥರು ತಮ್ಮ ಜಮೀನಿನಲ್ಲಿ 650 ಕೆರೆಗಳನ್ನು ನಿರ್ಮಿಸಿರುವುದು ಒಂದು ದೊಡ್ಡ ದಾಖಲೆ ಮಾತ್ರವಲ್ಲ, ಇಡೀ ರಾಷ್ಟ್ರಕ್ಕೇ ಮಾದರಿ! ಪ್ರತಿವರ್ಷ ಈ ಉರಿನ ರೈತರು 900 ಕೋಟಿ ರೂ ದ್ರಾಕ್ಷಿಯನ್ನು ವಿದೇಶಕ್ಕೆ ರಫ್ತು¤ ಮಾಡುತ್ತಾರೆ. ಎಲ್ಲ ಮನೆಗಳ ಮುಂದೆ ಕಾರು, ಮೋಟರ್‌ ಸೈಕಲ್‌ಗ‌ಳ ಭರಾಟೆಯಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಪ್ರತಿಯೊಬ್ಬರ ಮುಖದ ಮೇಲೆ ಸಂತೃಪ್ತಿಯ ಕಳೆಯಿದೆ. ಈ ಊರಿನಿಂದ ಸುಮಾರು 30 ಯುವಕರು ಮಾತ್ರ ಉದ್ಯೋಗಕ್ಕಾಗಿ ಬೇರೆ ಕಡೆಗೆ ಹೋಗಿದ್ದಾರೆ. ತಮ್ಮ ಪ್ರೀತಿಯ ನೆಮ್ಮದಿಯ ಹುಟ್ಟೂರು ಬಿಟ್ಟು ಹೋಗಲು ಬಹಳ ಜನ ಸಿದ್ಧರಿಲ್ಲ. ಇಲ್ಲಿಯೇ ದುಡಿದು ಬದುಕುವ ಛಲ ಎಲ್ಲರಲ್ಲೂ ತುಂಬಿದೆ. ಇಲ್ಲಿಯ ರೈತರು ಬ್ಯಾಂಕ್‌ ಸಾಲ ಬಾಕಿ ಉಳಿಸಿಕೊಂಡಿಲ್ಲ. ಸಾಲದ ಬಾಧೆಗೆ ಆತ್ಮಹತ್ಯೆಗಳು ನಡೆದಿಲ್ಲ. ಸರಕಾರದ ಸಹಾಯ ಸಬ್ಸಿಡಿಗಳ ಬಗ್ಗೆ ಇಲ್ಲಿಯ ಜನ ತಲೆ ಕೆಡಿಸಿಕೊಂಡಿಲ್ಲ. ದುಡಿದು ಪಡೆದು ಉಣ್ಣುವ ಛಲ ಇವರಲ್ಲಿದೆ. ಇದರಿಂದ ಇವರು ಹೆಮ್ಮೆ ಮತ್ತು ಆತ್ಮ ಗೌರವದಿಂದ ಬದುಕುತ್ತಿದ್ದಾರೆ.

ಸುರೇಶ್‌ ಕ್ಷೀರಸಾಗರ, ನಮಗೆ ಮೊದಲು ಎದುರಾದ ಪ್ರಗತಿಪರ ರೈತ. ಇವರು 50 ಎಕರೆ ಭೂಮಿ ಹೊಂದಿದ್ದಾರೆ. ನಾಲ್ಕು ಕೆರೆ, ಒಂದು ಬಾವಿ ಇವರ ಜಮೀನಿನ ವ್ಯಾಪ್ತಿಯಲ್ಲಿವೆ. ಅವರ ಭೂಮಿಯಲ್ಲಿ ಬಿದ್ದ ಒಂದೂ ಹನಿ ನೀರೂ ವ್ಯರ್ಥವಾಗಿ ಬೇರೆ‌ಡೆ ಹರಿದು ಹೋಗುವುದಿಲ್ಲ. ನೀರು ಕೆರೆಗಳಲ್ಲಿ ಸಂಗ್ರಹವಾಗುತ್ತದೆ. ಇಲ್ಲವೇ ಭೂಮಿಯಲ್ಲಿಯೇ ಇಂಗುತ್ತದೆ. ಈ ಗ್ರಾಮದ ರೈತರೆಲ್ಲ ಇದೇ ಮಾದರಿ ಅನುಸರಿಸುತ್ತಿದ್ದಾರೆ.

ಸುರೇಶ್‌ ಅವರ ಸಮೀಪದ ಸಂಬಂಧಿ ಪ್ರಕಾಶ ಕ್ಷೀರಸಾಗರ ಈ ಊರ ಸರಪಂಚರಾಗಿದ್ದಾರೆ. ಅವರು ಸಮೀಪದ ಹಳ್ಳಿಗೆ ತಮ್ಮ ಸಂಬಂಧಿಕರ ಸಮಾರಂಭವೊಂದಕ್ಕೆ ಹೋಗಿದ್ದರು. ನಾನು ಕಡವಂಚಿಗೆ ಬಂದಿರುವುದು ತಿಳಿದು ಅವರು ಬೇಗನೆ ಮರಳಿ ಬಂದರು. ಊರಿನ ಜನರ ಐಕ್ಯತೆ, ಕೃಷಿ ಪ್ರೀತಿಯ ಬಗ್ಗೆ ವಿವರಿಸಿದರು. ತಮ್ಮ ತೋಟಕ್ಕೆ ಭೇಟಿ ನೀಡಲು ಬಹಳ ಆಗ್ರಹಪಡಿಸಿದರು. ಸಣ್ಣ ಸಣ್ಣ ಹಿಡುವಳಿದಾರರ ಹೊಲಗಳಿಗೆ ಹೋಗ ಬಯಸಿರುವುದಾಗಿ ತಿಳಿಸಿದೆ. ಅವರ ಸಂತೋಷದಿಂದ ಒಪ್ಪಿ ಅರ್ಧ-ಮುಕ್ಕಾಲು ಎಕರೆ ಭೂಮಿ ಹೊಂದಿದವರ ಹೊಲಗಳಿಗೆ ಕರೆದುಕೊಂಡು ಹೋದರು. ಇಲ್ಲಿ ಬಡವ-ಶ್ರೀಮಂತ, ಮೇಲು-ಕೀಳು ಎಂಬುದು ಕಾಣುವುದೇ ಇಲ್ಲ, ಎಲ್ಲರೂ ಭೂಮಿಯ ಮಕ್ಕಳ ಹಾಗೇ ನಡೆದುಕೊಳ್ಳುತ್ತಾರೆ. ಸಾಮೂಹಿಕ ಕೃಷಿಗೆ ಸಮಾಜದಲ್ಲಿ ಸಾಮರಸ್ಯ ಬೆಳೆಸುವ ದೊಡ್ಡ ಶಕ್ತಿ ಇದೆ ಎಂಬುದು ಈ ಗ್ರಾಮವನ್ನು ನೋಡಿದಾಗ ಸ್ಪಷ್ಟವಾಗುತ್ತದೆ.

ಮೊದಲು ಕಡವಂಚಿ, ಸದಾ ಬರದ ದವಡೆಗೆ ತುತ್ತಾಗುತ್ತಿದ್ದ ಊರು. ಸ್ನಾನಕ್ಕೆ ಅರ್ಧ ಬಕೆಟ್‌ ನೀರು ಸಿಕ್ಕರೆ ಅದೇ ಪುಣ್ಯ ಎಂಬಂಥ ಪರಿಸ್ಥಿತಿ ಇತ್ತು. ಈಗ ಕಡವಂಚಿ ನೀರಿನ ವಿಷಯದಲ್ಲಿ ಜಗತ್ತಿಗೆ ಮಾದರಿಯಾಗಿ ನಿಂತಿದೆ.

ಸುಮಾರು 5 ವರ್ಷಗಳ ಹಿಂದೆ ಸ್ಥಳಿಯ ಶಿವಮಂದಿರದಲ್ಲಿ ರೈತರ ಸಭೆ ನಡೆಸಿದರು. ಸಭೆಯಲ್ಲಿ ಸುರೇಶ್‌ ಕ್ಷೀರಸಾಗರ ಒಬ್ಬರೇ ಮಾತನಾಡಿದರು. “ನಮ್ಮ ಊರ ವ್ಯಾಪ್ತಿಯಲ್ಲಿ ಬಿದ್ದ ಮಳೆ ನೀರು ನಮಗೇ ಬಳಕೆಯಾಗಬೇಕು. ಮಳೆ ನೀರನ್ನು ಸರಿಯಾಗಿ ರಕ್ಷಿಸಿದರೆ ಈ ನೀರು ನಮ್ಮನ್ನು ಕಾಪಾಡುತ್ತದೆ’. ಇದು ಅವರು ಹೇಳಿದ ತತ್ವ. ಗ್ರಾಮ ದೇವತೆಯ ಹೆಸರಿನಲ್ಲಿ ಊರಿನವರೆಲ್ಲರೂ ಸೇರಿ ಮಳೆ ನೀರು ರಕ್ಷಿಸುವ ಪ್ರತಿಜ್ಞೆ ಮಾಡಿದರು.

ಗ್ರಾಮದ ಹಿರಿಯರಾದ ಮಹಾಲೇಯವರು ತಾವು ಅನೇಕ ಕಡೆ ಸುತ್ತಾಡಿ ಕಂಡುಕೊಂಡ ಸತ್ಯವನ್ನು ಸಭೆಯಲ್ಲಿ ಬಿಚ್ಚಿಟ್ಟರು-“ಕೇವಲ 3 ವರ್ಷ ಮಳೆ ನೀರು ಸಂಗ್ರಹದ ನಿಯಮ ಕಟ್ಟುನಿಟ್ಟಾಗಿ ಪಾಲಿಸಿದರೆ ನಾವು ಎದ್ದು ನಿಲ್ಲುತ್ತೇವೆ. ಆತ್ಮಗೌರವದಿಂದ ಬದುಕುತ್ತೇವೆ. ಈ ಕೆಲಸಕ್ಕೆ ಸರಕಾರದ ನೆರವು ಪಡೆಯುವುದು ಬೇಡ. ನಾವೇ ಸಾಮೂಹಿಕವಾಗಿ ಕೆಲಸ ಮಾಡಿ ಸಣ್ಣ ಸಣ್ಣ ಕೆರೆಗಳನ್ನು ಕಟ್ಟೋಣ. ಒಂದು ಕೆರೆಯಿಂದ ಇನ್ನೊಂದು ಕೆರೆಗೆ ನೀರು ಹರಿಸಬೇಕು” ಎಂಬುದು ಅವರ ಸಲಹೆಯಾಗಿತ್ತು.

ಸುರೇಶ್‌ ಅವರು ತಮ್ಮ ಖರ್ಚಿನಲ್ಲಿಯೇ ಗ್ರಾಮದ ಪ್ರಮುಖರನ್ನು ಅಣ್ಣಾ ಹಜಾರೆ ಹಾಗೂ ನೀರಿನ ಕ್ರಾಂತಿಯ ಗುರು ರಾಜೇಂದ್ರ ಸಿಂಗ್‌ ಅವರ ಬಳಿ ಕರೆದುಕೊಂಡು ಹೋದರು. “ಇದು ಒಳ್ಳೆಯ ಚಿಂತನೆಯಾಗಿದೆ, ಗಟ್ಟಿಯಾಗಿ ಕಾರ್ಯರೂಪಕ್ಕೆ ತನ್ನಿ’ ಎಂದು ಹಜಾರೆ ಮತ್ತು ಸಿಂಗ್‌ ಗ್ರಾಮಸ್ಥರಿಗೆ ಪ್ರೋತ್ಸಾಹ ನೀಡಿದರು. ಆರಂಭದಲ್ಲಿ ಕೆಲವರು ಅಪಸ್ವರ ಎತ್ತಿದರಂತೆ. ಇದೆಲ್ಲ ಆಗುವ ಮಾತಲ್ಲ ಎಂದೂ ಅಪಪ್ರಚಾರ ಮಾಡಿದರಂತೆ. ಒಳ್ಳೆಯ ಕೆಲಸಗಳನ್ನು ಮಾಡುವಾಗ ಕೆಲವು ಆತಂಕಗಳು ಬರುತ್ತವೆ, ಗಟ್ಟಿಯಾಗಿ ಮುನ್ನಡೆದವರು ಗೆಲ್ಲುತ್ತಾರೆ ಎಂಬಂತೆ ಟೀಕೆ ಟಿಪ್ಪಣಿಗಳಿಗೆ ಎದೆಗುಂದದೆ ಗ್ರಾಮಸ್ಥರೆಲ್ಲ ಒಕ್ಕಟ್ಟಿನಿಂದ ಕೆರೆ ನಿರ್ಮಾಣ ಕೆಲಸದಲ್ಲಿ ನಿರತರಾದರು.

ನಾನು ಕಾಳಿ ನದಿಯನ್ನು ಮಲಪ್ರಭಾ, ಘಟಪ್ರಬಾ ನದಿಗಳಿಗೆ ಜೋಡಿಸುವ ಸಲಹೆ ಮಾಡಿದಾಗ ಕೆಲವರು ಟೀಕೆ ಮಾಡಿದರು. ಇನ್ನೂ ಕೆಲವರು ಪ್ರತಿಭಟನೆ ಮಾಡಿದರು. ಇದೆಲ್ಲ ಕೈಗೂಡುವ ಯೋಜನೆ ಅಲ್ಲ ಎಂದು ಹಲವರು ನಕ್ಕರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆಲ್ಲಾ ಸಾಮಾನ್ಯ. ಮಹಾತ್ಮ ಗಾಂಧೀಜಿ ಒಂದು ಹಿಡಿ ಉಪ್ಪು ತಯಾರಿಸಲು 280 ಮೈಲು ದಂಡಿ ಯಾತ್ರೆ ಮಾಡಿದರು. ಒಂದು ಚಮಚ ಉಪ್ಪಿಗಾಗಿ ಗಾಂಧೀಜಿ 280 ಮೈಲು ನಡೆದು ಹೋದದ್ದನ್ನು ಗೇಲಿ ಮಾಡಿ ನಕ್ಕವರು ಇತಿಹಾಸದ ಕಸದ ಬುಟ್ಟಿಯಲ್ಲಿ ಸೇರಿದ್ದಾರೆ. ನಮ್ಮ ನೆಲದ ಸಮುದ್ರದ ನೀರಿನಲ್ಲಿಯ ಉಪ್ಪು ನನ್ನದು ಎಂದು ಹಕ್ಕು ಪ್ರತಿಪಾದಿಸಿದ ಜನ ಸದಾ ಜಗತ್ತಿನ ಇತಿಹಾಸದಲ್ಲಿ ಉಳಿಯುತ್ತಾರೆ. ಈ ಮಾತುಗಳೆಲ್ಲಾ ಆ ಘಳಿಗೆಯಲ್ಲಿ ನನ್ನ ಮನದಲ್ಲಿ ಸುಳಿದು ಹೋದವು.

“ನಿಮ್ಮ ಗುರಿ ಸ್ಪಷ್ಟವಾಗಿರಲಿ, ಉದ್ದೇಶ ಜನಪರವಾಗಿರಲಿ, ಇಲ್ಲಿ ಸೋಲವುದು ಸಾಧ್ಯವೇ ಇಲ್ಲ’ ಎಂದು ಗಾಂಧೀಜಿ ಹೇಳಿದ ಮಾತನ್ನೇ ಸುರೇಶ್‌ ತಮ್ಮ ಊರಿನ ಜನರಿಗೆ ಹೇಳಿ ಹುರಿದುಂಬಿಸಿದರು.

ಗ್ರಾಮಸ್ಥರೆಲ್ಲ ಒಗ್ಗಟ್ಟಿನಿಂದ ಜಲರಕ್ಷಣೆಯನ್ನು ಒಂದು ಯಜ್ಞದಂತೆ ಮಾಡತೊಡಗಿದರು. ಎಲ್ಲ ರೈತರು ಪ್ರತಿ ಸೋಮವಾರ ಸಭೆ ಸೇರತೊಡಗಿದರು. ಸಭೆ ಆರಂಭಕ್ಕೂ ಮೊದಲು ಎಲ್ಲರೂ ಸೇರಿ ಪ್ರಾರ್ಥನೆ ಮಾಡುತ್ತಿದ್ದರು. ಈ ಪ್ರಾರ್ಥನೆ ಅವರ ಆತ್ಮ ವಿಶ್ವಾಸವನ್ನು ಹೆಚ್ಚಿಸತೊಡಗಿತು.

ಮಹಿಳೆಯರ ಸಹಯೋಗ
ಕಡವಂಚಿ ಗ್ರಾಮದ ಕೆರೆ-ಕಟ್ಟೆಗಳ ನಿರ್ಮಾಣದಲ್ಲಿ ಮಹಿಳೆಯರು ತೋರಿದ ಸಹಕಾರ ಸಹನೆ ಮತ್ತು ಧೈರ್ಯ ತುಂಬಾ ದೊಡ್ಡದು. ಪ್ರತಿದಿನ ಮಹಿಳೆಯರು ಕೂಡ ಕೆರೆಗಳ ನಿರ್ಮಾಣದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದರು. ಪುರುಷರಿಗಿಂತ ಅವರೇ ಹೆಚ್ಚು ದುಡಿದರು ಎಂದರೂ ತಪ್ಪಾಗದು. ನೀರಿನ ಮಹತ್ವ ಪುರುಷರಿಗಿಂತ ಮಹಿಳೆಯರಿಗೆ ಚೆನ್ನಾಗಿ ಗೊತ್ತು.

ಕೆರೆಗಳಿಗೆ ಧಾರ್ಮಿಕ ಚೌಕಟ್ಟು
ರಾಜೇಂದ್ರ ಸಿಂಗ್‌ ಅವರ ಸಲಹೆಯ ಪ್ರಕಾರ ಕೆರೆಗಳನ್ನು ದೇವ ಮಂದಿರದಂತೆ ಆರಾಧಿಸುವ ಸಂಸ್ಕೃತಿಯನ್ನು ಕಡವಂಚಿಯ ಗ್ರಾಮದವರು ಬೆಳೆಸಿಕೊಂಡು ಬಂದಿದ್ದಾರೆ. ಹುಣ್ಣಿಮೆ ಅಮವಾಸ್ಯೆಯಂದು ಕೆರೆಗಳಿಗೆ ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ಹೆಣ್ಣು ಮಕ್ಕಳು ಪತಿಯ ಮನೆಗೆ ಮೊದಲ ಬಾರಿ ಹೋಗುವಾಗ, ಚೊಚ್ಚಲ ಮಗು ಹಡೆದು ಗಂಡನ ಮನೆಗೆ ಹೋಗುವಾಗ ತಮ್ಮ ಹೊಲದಲ್ಲಿನ ಕೆರೆಗಳಿಗೆ ನಮಸ್ಕರಿಸಿ ಹೋಗುವ ಉತ್ತಮ ಸಂಪ್ರದಾಯವನ್ನು ಬೆಳೆಸಿಕೊಂಡಿದ್ದಾರೆ. ಈ ಸಂಸ್ಕ ೃತಿ ಕ್ರಮೇಣ ದೇಶದ ತುಂಬ ಬೆಳೆಯಬೇಕು, ಅಂದಾಗ ಕೆರೆ ಕಟ್ಟೆಗಳು ಚೆನ್ನಾಗಿ ಉಳಿಯುತ್ತವೆ. ಕೆರೆಗಳ ರಕ್ಷಣೆಯಿಂದ‌ ಅಂತರ್ಜಲ ಮಟ್ಟ ಹೆಚ್ಚುವುದಲ್ಲದೇ ಎಂಥ ಬರದ ದಿನಗಳಲ್ಲಿಯೂ ನೆಮ್ಮದಿಯಿಂದ ಬದುಕಬಹುದೆಂಬುದಕ್ಕೆ ಕಡವಂಚಿ ಸಾಕ್ಷಿಯಾಗಿದೆ.

ಮಹಾರಾಷ್ಟ್ರ ರಾಜ್ಯದಲ್ಲಿ ಕಡವಂಚಿ ಗ್ರಾಮದ ಮಾದರಿ ಅನುಸರಿಸುವ ಕ್ರಿಯೆ ಎಲ್ಲೆಡೆ ಜೋರಾಗಿ ಆರಂಭವಾಗಿದೆ. ಈ ನಿಟ್ಟಿನಲ್ಲಿ ಕನ್ನಡಿಗರು ಕೂಡಾ ಬೇಗನೆ ಸಿದ್ಧವಾಗುವುದು ಅವಶ್ಯವಾಗಿದೆ. ಜಗತ್ತಿನ ಬಹಳಷ್ಟು ಭಾಷೆಗಳಿಗೆ ಅನುವಾದಗೊಂಡ ಪ್ರಸಿದ್ಧ ಕತೆಯೊಂದರಲ್ಲಿ ವಿಶೇಷ ದೃಶ್ಯವಿದೆ. “ವಿಪರೀತ ಬರದ ಊರಿನ ಚಿತ್ರಣವದು. ಜನರು ನೀರಿಲ್ಲದೆ ಸಾಯುತ್ತಾರೆ. ಹೆಣಗಳು ಉರುಳಿ ಬೀಳುತ್ತವೆ. ಮರಗಳು ಒಣಗಿ ಬಾಡುತ್ತವೆ. ಹುಲ್ಲಿನ ಬಣವೆಗಳು ಸುಟ್ಟು ಉರಿಯುತ್ತವೆ. ಆದರೂ ಎಲ್ಲೋ ಒಂದು ಮನೆಯಲ್ಲಿ ಹೆಣ್ಣೊಬ್ಬಳು ಮಗುವಿಗೆ ಜನ್ನ ನೀಡುತ್ತಾಳೆ. ತಕ್ಷಣ ಸೂಲಗಿತ್ತಿಯು ಹೊಕ್ಕಳ ಹುರಿಯನ್ನು ಕಡಿದು ಗುಲಾಬಿ ಬಣ್ಣದ ಮಗುವನ್ನು ಹೊರಕ್ಕೆ ತಂದು ಉರಿ ಉರಿಯುವ ಸೂರ್ಯನಿಗೆ ತೋರಿಸುತ್ತಾಳೆ. ಮನುಷ್ಯ ಜನಾಂಗದ ಅದಮ್ಯ ಚೇತನಕ್ಕೆ ಸೂರ್ಯ ನಾಚಿಕೊಂಡು ಅಂಗೈಯ್ಯಗಲದ ಮೋಡದಲ್ಲಿ ಮರೆಯಾಗುತ್ತಾನೆ.’

ಮನುಷ್ಯನ ಅದಮ್ಯ ಚೇತನ ಎಂಥಾ ಬರದ ಕಠಿಣತೆಯನ್ನೂ ಗೆಲ್ಲಬಹುದು ಎಂಬುದಕ್ಕೆ ಈ ಕಥೆ ಒಂದು ಉದಾಹರಣೆ. ಕಡವಂಚಿ ಗ್ರಾಮ ಇದಕ್ಕೆ ಒಂದು ರೂಪಕವಾಗಿ ನಿಂತಿದೆ.

(ಲೇಖಕರು ಉದ್ಯಮಿ, ಉತ್ತರ ಕರ್ನಾಟಕ
ಸಮಗ್ರ ನೀರಾವರಿ ಹೋರಾಟ ಸಮಿತಿಯ ಸಂಚಾಲಕರು)

ಸಂಗಮೇಶ ಆರ್‌ ನಿರಾಣಿ

ಟಾಪ್ ನ್ಯೂಸ್

Congress is taking revenge by forming SIT: Araga Jnanendra

Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ

Maharashtra Election: Election officials checked Amit Shah’s bag

Maharashtra Election: ಅಮಿತ್‌ ಶಾ ಅವರ ಬ್ಯಾಗ್‌ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು

Anmol Buffalo: The price of this Buffalo weighing 1500 kg is Rs 23 crore!

Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!

13-BBK-11

BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು

ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಲ್ಕರ್ ಹತ್ಯೆ ಆರೋಪಿ: ಮೂಲಗಳು

Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

raghav

Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್‌ ನಿಂದ ಸುಳ್ಳು ಆರೋಪ: ರಾಘವೇಂದ್ರ

9

Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ

Congress is taking revenge by forming SIT: Araga Jnanendra

Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ

Organ Donation: ಸಾವಿನ ನಂತರವೂ ನೆರವಾದ ಜೀವ

Organ Donation: ಸಾವಿನ ನಂತರವೂ ನೆರವಾದ ಜೀವ

Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ

Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.