ಜನಸ್ನೇಹಿಯಾಗುವತ್ತ ಮಂಗಳೂರು ಪೊಲೀಸರ ಹೆಜ್ಜೆ
Team Udayavani, Jul 10, 2019, 5:00 AM IST
ಮಹಾನಗರ: ಡ್ರಗ್ಸ್- ಗಾಂಜಾ, ಕ್ರಿಕೆಟ್ ಬೆಟ್ಟಿಂಗ್ ಸಹಿತ ನಗರದಲ್ಲಿ ನಡೆಯುತ್ತಿರುವ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕುವ ಸಲುವಾಗಿ ಇದೀಗ ಸಾಮಾಜಿಕ ಜಾಲ ತಾಣವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಸದ್ಬಳಕೆ ಮಾಡಿಕೊಳ್ಳುವುದಕ್ಕೆ ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತೀರ್ಮಾನಿಸಿದ್ದಾರೆ.
ಪೊಲೀಸರು ಸಾರ್ವಜನಿಕರ ಸ್ನೇಹಿ ಯಾಗುವ ನಿಟ್ಟಿನಲ್ಲಿ ನಗರ ವ್ಯಾಪ್ತಿಯಲ್ಲಿ ಮಾಹಿತಿ, ಮಾರ್ಗದರ್ಶನ ನೀಡುವ ಸಲುವಾಗಿ ಅಳವಡಿಸಿದ್ದ ಡಿಜಿಟಲ್ ಡಿಸ್ಪ್ಲೇಗಳಲ್ಲಿ ಇದೀಗ ‘ಯಾವುದೇ ರೀತಿಯ ದೂರುಗಳಿದ್ದರೆ, ಅಪರಾಧ ನಡೆ ಯುತ್ತಿದ್ದರೆ [email protected]ಮೈಲ್ ಮಾಡಿ, 9480802300 ಮೊಬೈಲ್ ಸಂಖ್ಯೆಗೆ ವಾಟ್ಸಪ್ ಮಾಡಿ’ ಎಂಬ ಸಂದೇಶ ಬರುತ್ತಿದೆ.
ಪೊಲೀಸ್ ಆಯುಕ್ತರು ಸಕ್ರಿಯ
ವಾಟ್ಸಪ್ ಸಂಖ್ಯೆ ಸಹಿತ ಮೈಲ್ ವಿಳಾಸವನ್ನು ನಗರದ ಡಿಜಿಟಲ್ ಡಿಸ್ಪ್ಲೇಗಳಲ್ಲಿ ಅಳವಡಿಸುತ್ತಿದ್ದಂತೆ ಸಾರ್ವಜನಿಕರಿಂದಲೂ ಈಗ ಉತ್ತಮ ಸ್ಪಂದನೆ ಸಿಕ್ಕಿದೆ. ಸಾಮಾಜಿಕ ಜಾಲತಾಣ ಗಳಲ್ಲಿ ಪೊಲೀಸ್ ಆಯುಕ್ತರು ಸಕ್ರಿಯ ರಾಗುತ್ತಿದ್ದಂತೆ, ಸಾರ್ವಜನಿಕ ರಿಂದಲೂ ನೂರಾರು ದೂರುಗಳು ಬರುತ್ತಿದ್ದು, ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಮುಖ್ಯವಾಗಿ, ಸೋಮವಾರ ಸಾರ್ವಜನಿ ಕರೊಬ್ಬರು ಪೊಲೀಸರ ಅಧಿಕೃತ ಸಾಮಾ ಜಿಕ ಜಾಲ ತಾಣಕ್ಕೆ ನೀಡಿದ್ದ ಮಾಹಿತಿಯ ಪ್ರಕಾರ ಸುರ ತ್ಕಲ್ ಬಳಿಯ ಹೊಟೇಲ್ಗೆ ದಾಳಿ ನಡೆಸಿದ್ದ ಪೊಲೀಸರು 500 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದರು. ಅಲ್ಲದೆ, ಗಾಂಜಾ ಸೇವಿಸುತ್ತಿದ್ದ ಮೂವರನ್ನು ಬಂಧಿಸಿ ನಾಲ್ಕು ಮಂದಿಯನ್ನು ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣ ಭೇದಿಸಲು ಪೊಲೀಸರಿಗೆ ನೆರವಾಗಿದ್ದು, ಸಾಮಾಜಿಕ ಜಾಲತಾಣ.
ಸ್ಥಳೀಯಾಡಳಿತ ಸಕ್ರಿಯವಾಗಿಲ್ಲ
ಇಂದಿನ ತಂತ್ರಜ್ಞಾನ ವ್ಯವಸ್ಥೆಗೆ ತಕ್ಕಂತೆ ಮಹಾನಗರ ಪಾಲಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿಲ್ಲ. ‘ಮಂಗಳೂರು ಸಿಟಿ ಕಾರ್ಪೊರೇಷನ್’ ಎಂಬ ಫೇಸ್ಬುಕ್ ಪೇಜ್ ಇದ್ದರೂ ಅದರಲ್ಲಿ ಅನಗತ್ಯ ವಿಷಯಗಳು ಶೇರ್ ಆಗುತ್ತಿವೆ. ಇನ್ನು, ಜಿಲ್ಲಾಧಿಕಾರಿ ಕಚೇರಿಯ ಅಧಿಕೃತ ಸಾಮಾಜಿಕ ಜಾಲ ತಾಣಗಳಿಲ್ಲ. ಫೇಸ್ಬುಕ್ನಲ್ಲಿ ಡಿಸಿ ಕಚೇರಿ ಪೇಜ್ ಇದ್ದರೂ ಅವುಗಳಲ್ಲಿ ಯಾವುದೇ ಪೋಸ್ಟ್ ಗಳನ್ನು ಹಾಕಲಾಗಿಲ್ಲ. ಇನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧಿಕೃತ ಫೇಸ್ಬುಕ್ ಜಾಲ ತಾಣವಿದ್ದು, ಮಾಹಿತಿ ಪೋಸ್ಟ್ ಮಾಡಲಾಗುತ್ತಿದೆ.
ಕುಂದು-ಕೊರತೆಗಳಿಗೆ ಸ್ಪಂದನೆ
ಈಗ ಪ್ರಧಾನಿ, ರಾಷ್ಟ್ರಪತಿ ಕಾರ್ಯಾಲಯದಿಂದ ಹಿಡಿದು ಗ್ರಾಮ ಪಂಚಾಯತ್ವರೆಗೆ ಎಲ್ಲ ಕಡೆಯು ಅಧಿಕೃತ ಟ್ವಿಟರ್ ಖಾತೆ ತೆರೆದು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ.
– ಮಹಮ್ಮದ್ ನಜೀರ್, ಪಾಲಿಕೆ ಆಯುಕ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.