ಜಿಲ್ಲೆಯಲ್ಲಿಲ್ಲ ಸರಕಾರಿ ವೃದ್ಧಾಶ್ರಮ; ಬೇಕಿದೆ ಮಾರ್ಗದರ್ಶನ
Team Udayavani, Jul 10, 2019, 5:49 AM IST
ಉಡುಪಿ: ಜಿಲ್ಲೆಗೆ ವಲಸೆ ಬರುವ ಅಸಹಾಯಕರ ಸಂಖ್ಯೆ ಹೆಚ್ಚಳವಾಗುತ್ತಿದೆ. ಹಿರಿಯ ನಾಗರಿಕರು, ಮಕ್ಕಳು, ಅಸಹಾಯಕ ಮಹಿಳೆಯರಿಗೆ ಸೌಲಭ್ಯ ಕಲ್ಪಿಸುವುದೇ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಸಾಂತ್ವನ ಕೇಂದ್ರದಲ್ಲಿ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಸಾಂತ್ವನ ನೀಡುವ ಕೆಲಸ ಮಾಡಲಾಗುತ್ತಿದೆ.
ಅನಾಥಾಶ್ರಮ/ವೃದ್ಧಾಶ್ರಮ, ಮಹಿಳಾ ನಿಲಯ, ಪುನರ್ವಸತಿ ಕೇಂದ್ರ, ಮಕ್ಕಳ ರಕ್ಷಣಾ ಘಟಕಗಳಲ್ಲಿ ಬಹುತೇಕ ಮಂದಿ ಆಶ್ರಯ ಪಡೆದಿದ್ದಾರೆ. ಅನಾರೋಗ್ಯ, ಮನೆಯಲ್ಲಿ ಮುನಿಸು, ಉದ್ಯೋಗ ಹುಡುಕಾಟ ಇನ್ನಿತರ ಕಾರಣಗಳಿಂದ ರಸ್ತೆ ಬದಿ, ಅಂಗಡಿ ಬಾಗಿಲುಗಳಲ್ಲಿ ಮಲಗಿ ದಿನ ದೂಡುತ್ತಾರೆ. ಸಾಂಕ್ರಾಮಿಕ ಕಾಯಿಲೆಯಿಂದಲೋ, ಮಾನಸಿಕ ಅಸ್ವಸ್ಥತೆಯಿಂದಲೋ ಬಳಲಿ ಸಾರ್ವಜನಿಕ ಸ್ಥಳಗಳಲ್ಲಿ ಅಸುನೀಗುತ್ತಾರೆ. ಇನ್ನು ಕೆಲವರು ಇಲಾಖೆ, ಸಾರ್ವಜನಿಕರಿಂದ ಆಸ್ಪತ್ರೆಗೆ ದಾಖಲಿಸಲ್ಪಟ್ಟು, ಚಿಕಿತ್ಸೆಗೆ ಸ್ಪಂದಿಸದೆ ಮೃತಪಡುತ್ತಾರೆ.
ಮಹಿಳೆಯರ ಸಂಖ್ಯೆ ಹೆಚ್ಚಳ
ಕೆಲವರ ಬಳಿ ಸಮರ್ಪಕ ವಿಳಾಸವೂ ಇರುವುದಿಲ್ಲ. ಹಿರಿಯರ ನಾಗರಿಕರ ಪೈಕಿ ನಗರದಲ್ಲಿ 2017ರಲ್ಲಿ 43, 2018ರಲ್ಲಿ 42, 2019ರಲ್ಲಿ 16 ಮಂದಿ ಪತ್ತೆಯಾಗಿದ್ದಾರೆ. ಇನ್ನು ಅನಾಥ ಮಕ್ಕಳ ಪ್ರಮಾಣ ಕೂಡ ಹೆಚ್ಚಳವಾಗುತ್ತಾ ಇದೆ. 2017ರಲ್ಲಿ 50, 2018ರಲ್ಲಿ 30, 2019ರಲ್ಲಿ 10 ಮಕ್ಕಳು ಪತ್ತೆಯಾಗಿದ್ದಾರೆ. ಅಸಹಾಯಕ ಮಹಿಳೆಯರ ಪೈಕಿ 2017ರಲ್ಲಿ 20, 2018ರಲ್ಲಿ 5, 2019ರಲ್ಲಿ 20 ಮಹಿಳೆಯರು ಪತ್ತೆಯಾಗಿದ್ದಾರೆ.
ಅನ್ಯ ಜಿಲ್ಲೆ/ರಾಜ್ಯದವರೇ ಅಧಿಕ
ಉಡುಪಿ ಜಿಲ್ಲೆಯಲ್ಲಿ ಪತ್ತೆಯಾಗುವ ಅಸಹಾಯಕರಲ್ಲಿ ಶೇ.80ರಷ್ಟು ಮಂದಿ ಹೊರಜಿಲ್ಲೆ/ರಾಜ್ಯದವರೇ ಅಧಿಕ ಎಂಬುವುದು ಗಮನಿಸಬೇಕಾದ ಅಂಶ. ಕೌಟುಂಬಿಕ ಸಮಸ್ಯೆ, ಪ್ರೇಮ ವೈಫಲ್ಯ ಸಹಿತ ಹಲವಾರು ಮಂದಿ ಮನನೊಂದು ವಲಸೆ ಬರುತ್ತಿದ್ದಾರೆ. ಮಹಿಳೆಯರಿಗೆ ಸಹಾಯವಾಣಿಯ ಮುಖಾಂತರ, ಮಕ್ಕಳಿಗೆ ಚೈಲ್ಡ್ ಲೈನ್ ಮೂಲಕ, ಹಿರಿಯ ನಾಗರಿಕರಿಗೆ ಕೌನ್ಸೆಲಿಂಗ್ ನಡೆಸುವ ಮೂಲಕ ಸಮಸ್ಯೆ ಪರಿಹಾರಕ್ಕೆ ಯತ್ನಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
MUST WATCH
ಹೊಸ ಸೇರ್ಪಡೆ
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.